For Quick Alerts
ALLOW NOTIFICATIONS  
For Daily Alerts

ಹುಬ್ಬು ದಪ್ಪಗೆ ಮಾಡಲು ಕೆಲವು ಸರಳ ಮನೆಮದ್ದುಗಳು

By Hemanth
|

ಮಹಿಳೆಯ ಸೌಂದರ್ಯ ಕಾಣುವುದು ಆಕೆಯ ಕಣ್ಣಿನಲ್ಲಿ ಎನ್ನುವ ಮಾತಿದೆ. ಕಣ್ಸನ್ನೆಯಲ್ಲೇ ಎದುರಿನವರ ಹೃದಯದ ಮೇಲೆ ದಾಳಿ ಮಾಡುವಂತಹ ಸಾಮರ್ಥ್ಯವು ಆ ಕಣ್ಣುಗಳಿಗೆ ಇದೆ. ಅದರಲ್ಲೂ ಕಣ್ಣ ಹುಬ್ಬುಗಳು ಸಂಪೂರ್ಣ ಮುಖದ ಸೌಂದರ್ಯದಲ್ಲಿ ಪ್ರತೀಕವಾಗಿದೆ. ಉದ್ದಗಿನ ಹಾಗೂ ದಪ್ಪ ಹುಬ್ಬುಗಳು ಬೇಕೆಂದು ಪ್ರತಿಯೊಬ್ಬ ಮಹಿಳೆಯು ಬಯಸುವಳು. ಕೆಲವರು ತಮ್ಮ ಹುಬ್ಬುಗಳು ಸರಿಯಾಗಿಲ್ಲದ ಪರಿಣಾಮ ಆತ್ಮವಿಶ್ವಾಸ ಕಳೆದುಕೊಳ್ಳುವರು.

ಆದರೆ ಇಂದಿನ ದಿನಗಳಲ್ಲಿ ತೆಳು ಹುಬ್ಬುಗಳ ಟ್ರೆಂಡ್ ಆರಂಭವಾಗಿದೆ. ಇದಕ್ಕಾಗಿ ಹುಬ್ಬನ್ನು ಕೀಳುವುದು ಮತ್ತು ವ್ಯಾಕ್ಸಿಂಗ್ ಮಾಡುವ ಸಂಪ್ರದಾಯ ಬೆಳೆದಿದೆ. ಇದರ ಪರಿಣಾಮವಾಗಿ ಹುಬ್ಬಗಳ ಕೂದಲು ಉದುರಿ ಮತ್ತಷ್ಟು ತೆಳು ಆಗುವುದು. ಇದಕ್ಕೆ ಕೆಲವೊಂದು ರೀತಿಯ ವೈದ್ಯಕೀಯ ಚಿಕಿತ್ಸೆಗಳು ಇವೆ. ಆದರೆ ಇದರ ಅಡ್ಡಪರಿಣಾಮಗಳು ಇವೆ. ತೆಳು ಹುಬ್ಬಿನ ಸಮಸ್ಯೆ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಇರಲಿದೆ. ಈ ನೈಸರ್ಗಿಕದತ್ತ ಮನೆಮದ್ದುಗಳು ಹುಬ್ಬನ್ನು ದಪ್ಪವಾಗಿ ಬೆಳೆಸಲು ನೆರವಾಗುವುದು. ಇದು ಯಾವುದು ಎಂದು ನೀವು ತಿಳಿದುಕೊಳ್ಳಿ...

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆ ಹಚ್ಚಿಕೊಂಡರೆ ಹುಬ್ಬಿನ ಕೂದಲು ದಪ್ಪವಾಗಿ ಬೆಳೆಯುವುದು. ತೆಂಗಿನೆಣ್ಣೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುವುದು. ಇದು ಹುಬ್ಬುಗಳ ಬೆಳವಣಿಗೆಗೆ ನೆರವಾಗುವುದು. ಇದು ಕೂದಲಿನ ಕೋಶಗಳನ್ನು ಆರೋಗ್ಯವಾಗಿಡಲು ನೆರವಾಗುವುದು. ತೆಂಗಿನೆಣ್ಣೆಯಲ್ಲಿ ಇರುವ ವಿಟಮಿನ್ ಇ ಹುಬ್ಬುಗಳು ಆರೋಗ್ಯವಾಗಿ ಬೆಳೆಯಲು ನೆರವಾಗುವುದು.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿ ರಸವು ಕೂದಲುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಅಡುಗೆಯಲ್ಲಿ ಬಳಸುವಂತಹ ಸಾಮಾನ್ಯ ಸಾಮಗ್ರಿಯು ಹುಬ್ಬುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಈರುಳ್ಳಿ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ತುಂಡುಗಳನ್ನಾಗಿ ಮಾಡಿ. ಇದನ್ನು ರುಬ್ಬಿಕೊಳ್ಳಿ. ಕೆಲವು ಹನಿ ನೀರು ಹಾಕಿ ಇದನ್ನು ತೆಳು ಮಾಡಿ. ಪ್ರತಿನಿತ್ಯ ಇದನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳೀ. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆಯು ಹುಬ್ಬುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಹುಬ್ಬುಗಳ ಕೂದಲು ವೇಗವಾಗಿ ಬೆಳೆಯಲು ನೆರವಾಗುವುದು. ಒಂದು ಮೊಟ್ಟೆಯಿಂದ ಅದರ ಲೋಳೆ ಬೇರ್ಪಡಿಸಿ. ಇದನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ, ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಹುಬ್ಬುಗಳ ಬೆಳವಣಿಗೆಗೆ ಮೆಂತ್ಯೆ ಕಾಳುಗಳು ತುಂಬಾ ಪ್ರಮುಖ ಪಾತ್ರ ವಹಿಸುವುದು. ಹುಬ್ಬುಗಳು ತುಂಬಾ ದಪ್ಪ ಮತ್ತು ಆರೋಗ್ಯವಾಗಿದ್ದಾಗ ಅದು ಆಕರ್ಷಕವಾಗಿ ಕಾಣಿಸುತ್ತದೆ. ಒಂದು ಹಿಡಿ ಮೆಂತೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಲು ಹಾಕಿ. ಬೆಳಗ್ಗೆ ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ.

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

ಪ್ರತಿಯೊಂದು ಮನೆಯಲ್ಲಿ ಪೆಟ್ರೋಲಿಯಂ ಜೆಲ್ಲಿ ಲಭ್ಯವಿರುವುದು. ಇದು ಹುಬ್ಬುಗಳ ಬೆಳವಣಿಗೆಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಪ್ರತಿದಿನ ಮಲಗುವ ಮೊದಲು ಪೆಟ್ರೋಲಿಯಂ ಜೆಲ್ಲಿಯನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ. ಮರುದಿನ ಸಾಮಾನ್ಯ ನೀರಿನಿಂದ ತೊಳೆಯಿರಿ. ಪ್ರತಿನಿತ್ಯ ಇದನ್ನು ಬಳಸಿದರೆ ವೇಗ ಹಾಗೂ ಉತ್ತಮ ಫಲಿತಾಂಶ ಸಿಗುವುದು.

ಅಲೋವೆರಾ

ಅಲೋವೆರಾ

ಹುಬ್ಬುಗಳ ಬೆಳವಣಿಗೆಗೆ ಅಲೋವೆರಾ ಮತ್ತೊಂದು ಮನೆಮದ್ದು. ಅಲೋವೆರಾವು ಹಲವಾರು ರೀತಿಯಿಂದ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುವುದು. ಇದು ಹುಬ್ಬುಗಳು ದಪ್ಪ ಹಾಗೂ ಆರೋಗ್ಯವಾಗುವಂತೆ ಮಾಡುವುದು. ಅಲೋವೆರಾದ ಎಲೆಯನ್ನು ಕತ್ತರಿಸಿಕೊಳ್ಳಿ ಮತ್ತು ಇದರ ಲೋಳೆ ತೆಗೆಯಿರಿ. ಇದನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಜೆಲ್ ನ್ನು ಬಳಸಿದರೂ ಫಲಿತಾಂಶ ಸಿಗುವುದು.

ಹಾಲು

ಹಾಲು

ಹಾಲಿನಲ್ಲಿ ಇರುವಂತಹ ಪ್ರೋಟೀನ್ ಕೂದಲಿನ ಬೆಳವಣಿಗೆಗೆ ನೆರವಾಗುವುದು. ಹುಬ್ಬುಗಳ ಕೂದಲು ಬೆಳೆಯಲು ಇದರಲ್ಲಿರುವ ಕ್ಯಾಲ್ಸಿಯಂ ನೆರವಾಗುವುದು. ಒಂದು ಹತ್ತಿ ಉಂಡೆಯನ್ನು ಹಾಲಿನಲ್ಲಿ ಅದ್ದಿಕೊಂಡು ಅದನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಹೀಗೆ ಮಾಡಿ ಮತ್ತು ದೊಡ್ಡ ಮಟ್ಟದ ಫಲಿತಾಂಶ ಕಂಡುಬರುವುದು.

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆಯಿಂದ ಹುಬ್ಬಿಗೆ 2-3 ನಿಮಿಷ ಮಸಾಜ್ ಮಾಡಿ ಅರ್ಧ ಗಂಟೆಯ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಬೇಕು.

English summary

Natural Home Remedies To Grow Your Eyebrows Instantly

Sometimes, people end up having thin eyebrows, which indirectly affects their confidence to go in public. Some reasons of people having thin eyebrows are threading, over-plucking or even waxing. Though there are several medical treatments for hair loss, they can at times have side effects in the long run. It's always better to use home remedies to solve the problem of thin eyebrows.
X
Desktop Bottom Promotion