For Quick Alerts
ALLOW NOTIFICATIONS  
For Daily Alerts

ತ್ವಚೆಯ ಮತ್ತು ಕೂದಲಿನ ಸಮಸ್ಯೆಗೆ ಬಾಳೆಹಣ್ಣಿನಿಂದ ಪರಿಹಾರ

|

ಆರೋಗ್ಯದ ವಿಷಯದಲ್ಲಿ ಬಾಳೆಹಣ್ಣನ್ನು ಸೋಲಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಬಾಳೆಹಣ್ಣು ತುಂಬಾ ರುಚಿಕರ, ಕಡಿಮೆ ಬೆಳಯಲ್ಲಿ ವರ್ಷಪೂರ್ತಿ ದೊರೆಯುವ ಹಣ್ಣು ಇದು. ಕೇವಲ ಬಾಳೆಹಣ್ಣು ಮಾತ್ರವಲ್ಲ, ಬಾಳೆಹೂವು, ಬಾಳೆದಿಂಡು, ಬಾಳೆಎಲೆ, ಬಾಳೆ ಸಿಪ್ಪೆ ಹೀಗೆ ಎಲ್ಲವೂ ಉಪಯೋಗಕರ. ಹೌದು, ಬಾಳೆಹಣ್ಣಿನಲ್ಲಿರುವ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಫೈಬರ್ ಸಮ್ಮಿಳಿತವಾಗಿದ್ದು ತ್ವರಿತವಾದ ಶಕ್ತಿಯನ್ನು ನಮಗೆ ಒದಗಿಸುತ್ತದೆ. 90 - ನಿಮಿಷದ ನಮ್ಮ ದಿನದ ಕಾರ್ಯಾಚರಣೆಗೆ 2 ಬಾಳೆಹಣ್ಣು ನಮಗೆ ಶಕ್ತಿಯನ್ನು ಒದಗಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಕೇವಲ ಬಾಳೆ ಹಣ್ಣಿನಲ್ಲಿ ಮಾತ್ರವಲ್ಲದೆ ಅದರ ತಿರುಳಿನಲ್ಲಿ ವಿಟಮಿನ್ ಬಿ-6, ಬಿ- 12, ಮ್ಯಗ್ನೀಶಿಯಂ ಮತ್ತು ಪೊಟಾಶಿಯಂಗಳು ಅಧಿಕವಾಗಿರುತ್ತದೆ. ಅದರಲ್ಲೂ ಬಾಳೆಹಣ್ಣಿನ ತಿರುಳು ಕಪ್ಪು ಬಣ್ಣಕ್ಕೆ ತಿರುಗಿದಾಗ ಅದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ.

prepare banana hair pack in kannada

ಹೀಗೆ ದೇಹಕ್ಕೆ ಬೇಕಾಗಿರುವ ಆರೋಗ್ಯಯುತ ಅಂಶಗಳನ್ನು ಬಾಳೆಹಣ್ಣು ಹೊಂದಿದ್ದು ಇದರಿಂದ ನಿಮ್ಮ ತ್ವಚೆ ಮತ್ತು ಕೂದಲಿಗೆ ಉತ್ತಮ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ. ಹೌದಯ ತ್ವಚೆಯಲ್ಲಿರುವ ನೆರಿಗೆಗಳನ್ನು ಇದು ನಿವಾರಿಸುತ್ತದೆ ಮತ್ತು ಯುವಿ ಕಿರಣಗಳನ್ನು ತಡೆಗಟ್ಟುತ್ತದೆ ಇದು ಹೈಡ್ರೇಟಿಂಗ್ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ತ್ವಚೆಯೊಂದಿಗೆ ಕೂದಲಿನ ಬುಡಕ್ಕೂ ಉತ್ತಮ ಮಾಯಿಶ್ಚರೈಸರ್ ಎಂದೆನಿಸಿದೆ.

ತ್ವಚೆಯ ಮತ್ತು ಕೂದಲಿನ ಸಮಸ್ಯೆಗೆ ಬಾಳೆಹಣ್ಣಿನಿಂದ ಪರಿಹಾರಗಳು

ಇಂದಿನ ಲೇಖನದಲ್ಲಿ ನಿಮ್ಮ ಕೂದಲು ಮತ್ತು ತ್ವಚೆಗೆ ಅಗತ್ಯಕಾರಿಯಾಗಿರುವ ಫೇಸ್ ಮತ್ತು ಹೇರ್ ಮಾಸ್ಕ್‌ಗಳ ವಿವರಗಳನ್ನು ನೀಡುತ್ತಿದ್ದು ಮುಖದ ಸುಕ್ಕು, ಮೊಡವೆ, ಸೀಳು ಕೂದಲು, ಒರಟು ಕೂದಲು ಮತ್ತು ಇನ್ನಷ್ಟು ಸಮಸ್ಯೆಗಳನ್ನು ನಿವಾರಿಸಲಿದೆ.

ತ್ವಚೆಯು ಹೊಳೆಯಲು

ತ್ವಚೆಯು ಹೊಳೆಯಲು

ಈ ಫೇಸ್ ಮಾಸ್ಕ್ ಮುಖದ ಕಪ್ಪು ಕಲೆಗಳನ್ನು ನಿವಾರಿಸಿ ನೆರಿಗೆಯನ್ನು ದೂರಮಾಡುತ್ತದೆ ಮತ್ತು ಮಂಕಾದ ತ್ವಚೆಯನ್ನು ಹೊಳಪಿನದ್ದಾಗಿಸುತ್ತದೆ. ವಾರಕ್ಕೊಮ್ಮೆ ಈ ಫೇಸ್ ಮಾಸ್ಕ್ ಅನ್ನು ಬಳಸಿಕೊಂಡು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಿ.

ಸಾಮಾಗ್ರಿಗಳು

ಬಾಳೆಹಣ್ಣು

*ಚಮಚ ಜೇನು

ಬಳಸುವ ವಿಧಾನ

*. ಬಾಳೆಹಣ್ಣಿನ ಸಿಪ್ಪೆ ಸುಲಿದು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ.

*. ಬ್ಲೆಂಡರ್‌ನಲ್ಲಿ ಪೇಸ್ಟ್ ಮಾಡಿ. ಇದಕ್ಕೆ 1 ಚಮಚ ಜೇನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.

*ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಂಡು 15 ನಿಮಿಷ ಕಾಯಿರಿ

* 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಮೊಡವೆಗಳ ನಿವಾರಣೆಗೆ

ಮೊಡವೆಗಳ ನಿವಾರಣೆಗೆ

ಮೊಡವೆಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ನೀವು ಮೊಡವೆ ಅಥವಾ ಕಪ್ಪು ಕಲೆಗಳಿಂದ ಸಮಸ್ಯೆ ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಬಾಳೆಹಣ್ಣಿನ ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿ ನೋಡಿ.

ಸಾಮಾಗ್ರಿಗಳು

*1 ಬಾಳೆಹಣ್ಣು

*1 ಚಮಚ ಜೇನು

*1 ಚಮಚ ಲಿಂಬೆ ರಸ

ಬಳಸುವ ವಿಧಾನ

* ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ನಂತರ ಅದನ್ನು ಪೇಸ್ಟ್ ಮಾಡಿಕೊಳ್ಳಿ.

*ಇದಕ್ಕೆ 1 ಚಮಚ ಜೇನು ಮತ್ತು ಲಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ.

*ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಹಾಗೆಯೇ ಬಿಡಿ.

*20 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಶುಷ್ಕ ತ್ವಚೆಗೆ

ಶುಷ್ಕ ತ್ವಚೆಗೆ

ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುವಲ್ಲಿ ಬಾಳೆಹಣ್ಣು ಸಹಕಾರಿಯಾಗಿದೆ. ನೀವು ನಿತ್ಯವೂ ಬಳಸುವುದರಿಂದ ನಿಮಗೆ ಮೃದುವಾದ ಕಾಂತಿಯುಕ್ತ ಮಾಯಿಶ್ಚರೈಸ್‌ಯುಕ್ತ ತ್ವಚೆ ದೊರೆಯುತ್ತದೆ.

ಸಾಮಾಗ್ರಿಗಳು

*1/2 ಬಾಳೆಹಣ್ಣು

*1 ಚಮಚ ಓಟ್‌ಮೀಲ್

*1 ಚಮಚ ಜೇನು

*1 ಚಮಚ ಮೊಟ್ಟೆಯ ಹಳದಿ ಭಾಗ

ಬಳಸುವ ವಿಧಾನ:

* ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಓಟ್‌ಮೀಲ್ ಹುಡಿಯನ್ನು ಸೇರಿಸಿ. ಬಾಳೆಹಣ್ಣಿನೊಂದಿಗೆ ಮಿಶ್ರ ಮಾಡಿ.

* ನಂತರ 1 ಚಮಚ ಜೇನು ಮತ್ತು 1 ಮೊಟ್ಟೆಯ ಹಳದಿಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರ ಮಾಡಿ.

* ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು 15 ನಿಮಿಷ ಕಾಯಿರಿ

* ತರುವಾಯ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಕಣ್ಣುಗಳ ಆರೈಕೆಗೆ

ಕಣ್ಣುಗಳ ಆರೈಕೆಗೆ

ಕಣ್ಣುಗಳ ಕೆಳಗಿನ ಭಾಗ ಊದಿಕೊಂಡಿದ್ದು ತುಂಬಿದ ಚೀಲದಂತೆ ಆಗಿದ್ದರೆ ಹೀಗೆ ಮಾಡಿ: ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಗಳನ್ನು ಜಜ್ಜಿ ಲೇಪನ ತಯಾರಿಸಿ ಕಣ್ಣುಗಳ ಕೆಳಭಾಗದಲ್ಲಿ ದಪ್ಪನಾಗಿ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೊಂದು ಬಾರಿ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಚೀಲ ಇಲ್ಲವಾಗುತ್ತದೆ.

ಮುಖದಲ್ಲಿ ನೆರಿಗೆಗಳ ಸಮಸ್ಯೆ ಇದ್ದರೆ

ಮುಖದಲ್ಲಿ ನೆರಿಗೆಗಳ ಸಮಸ್ಯೆ ಇದ್ದರೆ

ಒಂದು ವೇಳೆ ನೆರಿಗೆಗಳು ನಿಧಾನವಾಗಿ ಆವರಿಸುತ್ತಿದ್ದು ವೃದ್ದಾಪ್ಯದ ಸೂಚನೆ ನೀಡುತ್ತಿದ್ದರೆ ಕಳಿತ ಬಾಳೆಹಣ್ಣಿಗೆ ಮೊರೆಹೋಗುವುದು ಉಚಿತ. ಏಕೆಂದರೆ ಕಳಿತ ಬಾಳೆಹಣ್ಣನ್ನು ಕಿವುಚಿ ನೇರವಾಗಿ ಹಚ್ಚಿ ಕೊಂಚ ಕಾಲ ನಯವಾಗಿ ಮಸಾಜ್ ಮಾಡಿದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಟವೆಲ್ ಒಂದನ್ನು ಮುಖಕ್ಕೆ ಒತ್ತಿ ಒಣಗಿಸುವ ಮೂಲಕ ಚರ್ಮಕ್ಕೆ ಸೆಳೆತ ದೊರೆತು ನೆರಿಗೆಗಳನ್ನು ದೂರವಾಗಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳುವುದು ಉತ್ತಮ.

ಎಣ್ಣೆಚರ್ಮದ ಜಿಡ್ಡು ನಿವಾರಿಸಲು

ಎಣ್ಣೆಚರ್ಮದ ಜಿಡ್ಡು ನಿವಾರಿಸಲು

ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಮೂರು ದೊಡ್ಡಚಮಚ ಲಿಂಬೆರಸವನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಮುಖಲೇಪದಿಂದ ಚರ್ಮದಲ್ಲಿರುವ ಹೆಚ್ಚಿನ ಎಣ್ಣೆಯನ್ನು ನಿವಾರಿಸುತ್ತದೆ. ಆದರೆ ಇದು ಅಗತ್ಯವಿದ್ದಷ್ಟು ಎಣ್ಣೆಯನ್ನು ಅಲ್ಲಿಯೇ ಬಿಡುವ ಕಾರಣ ಚರ್ಮ ಒಣಗದಿರುವಂತೆ ನೋಡಿಕೊಳ್ಳುವುದು ಈ ಮುಖಲೇಪದ ವೈಶಿಷ್ಟ್ಯವಾಗಿದೆ.

ಸೀಳು ಕೂದಲಿಗೆ

ಸೀಳು ಕೂದಲಿಗೆ

ಬಾಳೆಹಣ್ಣು ವಿಟಮಿನ್ ಎ, ಸಿ ಮತ್ತು ಇತರ ಮಿನರಲ್‌ಗಳನ್ನು ಒಳಗೊಂಡಿದೆ. ಇದು ಕೂದಲಿಗೆ ಮಾಯಿಶ್ಚರೈಸ್ ಮಾಡುತ್ತದೆ ಮತ್ತು ಕೂದಲನ್ನು ಬಲಶಾಲಿಯನ್ನಾಗಿಸುತ್ತದೆ. ಕೂದಲಿನ ತುದಿಯಲ್ಲಿರುವ ಸೀಳನ್ನು ಇದು ನಿವಾರಿಸುತ್ತದೆ.

ಸಾಮಾಗ್ರಿಗಳು:

*1 ಬಾಳೆಹಣ್ಣು

*2 ಚಮಚ ಮೊಸರು

*2 ಚಮಚ ರೋಸ್ ವಾಟರ್

ಬಳಸುವ ವಿಧಾನ

*ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಳ್ಳಿ ಮತ್ತು ದಪ್ಪನೆಯ ಪೇಸ್ಟ್ ಮಾಡಿ.

*ಇದಕ್ಕೆ ಮೊಸರು ಮತ್ತು ರೋಸ್ ವಾಟರ್ ಸೇರಿಸಿ ಮಿಶ್ರ ಮಾಡಿ.

*ನಿಮ್ಮ ಕೂದಲಿಗೆ ಇದನ್ನು ಹಚ್ಚಿ 1 ಗಂಟೆ ಕಾಯಿರಿ. ನಂತರ ತಣ್ಣೀರಿನಿಂದ ಕೂದಲು ತೊಳೆದುಕೊಳ್ಳಿ.

ಮಾಸ್ಕ್ ಹಚ್ಚಿದ ನಂತರ ಶವರ್ ಕ್ಯಾಪ್ ಹಾಕಲು ಮರೆಯದಿರಿ. ವಾರಕ್ಕೊಮ್ಮೆ ಈ ಮಾಸ್ಕ್ ಹಚ್ಚಿಕೊಳ್ಳಿ.

ಮೃದುವಾದ ಕೂದಲಿಗೆ

ಮೃದುವಾದ ಕೂದಲಿಗೆ

*ಹಣ್ಣಾದ ಬಾಳೆಹಣ್ಣನ್ನು 2 ಚಮಚ ಜೇನಿನೊಂದಿಗೆ ಮ್ಯಾಶ್ ಮಾಡಿಕೊಳ್ಳಿ

* ಇದನ್ನು ಮೃದುವಾಗಿ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಿ

* ಅರ್ಧ ಗಂಟೆಯ ನಂತರ ಶ್ಯಾಂಪೂ ಮಾಡಿ.

* ವಾರಕ್ಕೊಮ್ಮೆ ಬಾಳೆಹಣ್ಣಿನ ಮಾಸ್ಕ್ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಿ ಮತ್ತು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ಕೂದಲು ಉದುರುವ ಸಮಸ್ಯೆ ಇದ್ದರೆ

ಕೂದಲು ಉದುರುವ ಸಮಸ್ಯೆ ಇದ್ದರೆ

ಕೂದಲು ಉದುರುವುದನ್ನು ತಡೆಗಟ್ಟಲು ಬಾಳೆಹಣ್ಣಿನ ತಿರುಳು ಮತ್ತು ಮೊಸರನ್ನು ಸಮಪ್ರಮಾನದಲ್ಲಿ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ನಿಮ್ಮ ಕೂದಲು ತೀರಾ ಒಣಗಿದ್ದರೆ ಈ ಲೇಪನದೊಂದಿಗೆ ಕೊಂಚ ಜೇನನ್ನು ಬೆರೆಸಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು ಮಾತ್ರವಲ್ಲ, ಕೂದಲು ಸೊಂಪಾಗಿ ಮತ್ತು ಕಾಂತಿಯುಕ್ತವಾಗಿ ಬೆಳೆಯಲೂ ಸಹಾಯವಾಗುತ್ತದೆ.

ಬಾಳೆಹಣ್ಣು: ಆರೋಗ್ಯಕ್ಕೂ ಸೈ, ಕೂದಲಿನ ಸೌಂದರ್ಯಕ್ಕೂ ಜೈ

English summary

how-solve-your-beauty-problems-with-ripe-banana

Here are the effective banana face and hair masks that can help in resolving various skin and hair-related problems, such as combating wrinkles, removing pimples, split ends, frizzy hair and many more...
X
Desktop Bottom Promotion