For Quick Alerts
ALLOW NOTIFICATIONS  
For Daily Alerts

ಉಗುರಿನಲ್ಲಾಗುವ ಬಿಳಿ ಚುಕ್ಕಿಯನ್ನು ನಿವಾರಿಸಿಕೊಳ್ಳುವುದು ಹೇಗೆ?

By Sushma Charhra
|

ಕಳೆಗುಂದಿದ ಮತ್ತು ಬಣ್ಣ ಕಳೆದುಕೊಂಡು ಉಗುರುಗಳು ಯಾವಾಗಲೂ ನಿಮ್ಮ ಕೈಯಿಯ ಸೌಂದರ್ಯಕ್ಕೆ ಒಂದು ಕಪ್ಪು ಚುಕ್ಕಿಯೇ ಸರಿ. ಇದು ವ್ಯಕ್ತಿಯ ಮೊದಲ ನೋಟದ ಅನಿಸಿಕೆಯನ್ನು ಹಾಳು ಮಾಡಬಹುದು ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿಬಿಡಬಹುದು.ಇದಲ್ಲದೆ, ಅದೆಷ್ಟೋ ಜನರು ಉಗುರಿನಲ್ಲಿ ಬಿಳಿ ಕಲೆಗಳಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಬಹುಶ್ಯಃ ಲ್ಯುಕೋನಿಚಿಯಾ ಕಾರಣದಿಂದಲೂ ಕೂಡ ಆಗಿರಬಹುದು. ಇದು ಹೆಚ್ಚಾಗಿ ಕೈ ಉಗುರಿನಲ್ಲಿ ಅಥವಾ ಕಾಲಿನ ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತೆ.

ಇದು ಚುಕ್ಕಿಗಳು ಸಣ್ಣದೂ ಆಗಿರಬಹುದು ಅಥವಾ ದೊಡ್ಡದೂ ಆಗಿರಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬೇರೆಬೇರೆಯಾಗಿರುತ್ತದೆ. ನಿಮ್ಮ ಉಗುರಿನಲ್ಲಿ ಈ ರೀತಿ ಬಿಳಿ ಕಲೆಗಳಾಗಲು ಹಲವಾರು ಕಾರಣಗಳಿರುತ್ತದೆ. ಶಿಲೀಂದ್ರಗಳ ಸೋಂಕು, ಕೆಲವು ಉತ್ಪನ್ನಗಳ ಬಳಕೆಯಿಂದಾಗುವ ಅಲರ್ಜಿ, ಕ್ಯಾಲ್ಸಿಯಂನ ಕೊರತೆ, ಉಗುರಿಗೆ ಆಗಿರುವ ಯಾವುದಾದರೂ ಗಾಯಗಳು ಇತ್ಯಾದಿ.... ಇವುಗಳು ಕೆಲವು ಕಾರಣಗಳಾಗಿದ್ದು , ಇದನ್ನು ನೀವು ನಿಮ್ಮಲ್ಲೇ ಗುರುತಿಸಿಕೊಳ್ಳಬಹುದಾಗಿದೆ.

fingernails in kannada

ಈ ಬಿಳಿಯ ಕಲೆಗಳನ್ನು ಇತ್ತೀಚೆಗೆ ಹೆಚ್ಚಿನವರಲ್ಲಿ ಸಾಮಾನ್ಯವಾಗಿ ಗಮನಿಸುತ್ತೀವಿ ಮತ್ತು ಇದನ್ನು ಯಾವುದೇ ಔಷಧಗಳ ಮೊರೆ ಹೋಗದೆ ಮನೆಯಲ್ಲಿರೋ ಪದಾರ್ಥಗಳನ್ನೇ ಬಳಸಿ ನಿವಾರಿಸಿಕೊಳ್ಳಬಹುದಾಗಿದೆ. ಹಾಗಾಗಿ,ಇಲ್ಲಿ ನಾವು ನೈಸರ್ಗಿಕವಾಗಿ ಮನೆಯಲ್ಲಿ ಹೇಗೆ ಸುಲಭದಲ್ಲಿ ಉಗುರಿನಲ್ಲಿ ಆಗುವ ಬಿಳಿಯ ಕಲೆಗಳನ್ನು ಮತ್ತು ಸೋಂಕನ್ನು ನಿವಾರಿಸಿಕೊಳ್ಳಬಹುದು ಎಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದೇವೆ. ಅವುಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

. ನಿಂಬೆರಸ + ಆಲಿವ್ ಆಯಿಲ್

ನಿಂಬೆಯ ರಸದಲ್ಲಿರುವ ವಿಟಮಿನ್ ಸಿ ಅಂಶವು ಉಗುರಿನಲ್ಲಾದ ಬಣ್ಣದ ಬದಲಾವಣೆ ಮತ್ತು ಬಿಳಿ ಚುಕ್ಕಿಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ವರ್ತಿಸುವ ತಾಕತ್ತನ್ನು ಹೊಂದಿದೆ.
ಆಲಿವ್ ಎಣ್ಣೆಯು ಉಗುರನ್ನು ಪೋಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

ಬೇಕಾಗುವ ಪದಾರ್ಥಗಳು :
. 2 ಟೇಬಲ್ ಸ್ಪೂನ್ ನಿಂಬೆ ರಸ
. ಆಲಿವ್ ಆಯಿಲ್

ಮಾಡುವ ವಿಧಾನ ಹೇಗೆ?
1. ಒಂದು ಬೌಲ್ ತೆಗೆದುಕೊಳ್ಳಿ ,ಅದಕ್ಕೆ 2-3 ಟೇಬಲ್ ಸ್ಪೂನ್ ತಾಜಾವಾಗಿ ರಸ ತೆಗೆದ ನಿಂಬೆಹಣ್ಣಿನ ರಸವನ್ನು ಸೇರಿಸಿ.
2. ನಿಂಬೆ ಹಣ್ಣಿನ ರಸಕ್ಕೆ ಕೆಲವು ಹನಿ ಆಲಿವ್ ಆಯಿಲ್ ಸೇರಿಸಿ ಮತ್ತು ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ.
3 . ಇದನ್ನು ನಿಮ್ಮ ಉಗುರಿಗೆ ಹಚ್ಚಿಕೊಳ್ಳಿ ಮತ್ತು 25 ರಿಂದ 30 ನಿಮಿಷ ಹಾಗೆಯೇ ಬಿಡಿ ಮತ್ತು ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ
ಇದನ್ನು ನೀವು ಪ್ರತಿದಿನವೂ ಪದೇ ಪದೇ ಪುನರಾವರ್ತಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು..

. ಕೊಬ್ಬರಿ ಎಣ್ಣೆ

ಉರಿಯೂತವನ್ನು ತಗ್ಗಿಸುವ ಮತ್ತು ಶಿಲೀಂದ್ರಗಳನ್ನು ತೊಲಗಿಸುವ ಗುಣಗಳಿರುವ ಕೊಬ್ಬರಿ ಎಣ್ಣೆಯು ನಿಮಗೆ ನಿಮ್ಮ ಉಗುರಿನಲ್ಲಿ ಶಿಲೀಂದ್ರಗಳಿಂದಾಗಿರುವ ಸಮಸ್ಯೆಯನ್ನು ನಿವಾರಿಸುವಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಬೇಕಾಗುವ ಪದಾರ್ಥ :
. ಕೊಬ್ಬರಿ ಎಣ್ಣೆ

ಮಾಡುವ ವಿಧಾನ ಹೇಗೆ?
1. ನೈಸರ್ಗಿಕವಾಗಿ ದೊರೆಯುವ ಕೊಬ್ಬರಿ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ಉಗುರಿಗೆ ಹಚ್ಚಿಕೊಳ್ಳಿ0. ವೃತ್ತಾಕಾರದಲ್ಲಿ ಕೆಲವು ನಿಮಿಷ ಹಾಗೆಯೇ ಮಸಾಜ್ ಮಾಡಿ.. ರಾತ್ರಿಯೆಲ್ಲಾ ನಿಮ್ಮ ಕೈಗಳಲ್ಲಿ ಕೊಬ್ಬರಿ ಎಣ್ಣೆ ಹಾಗೆಯೇ ಇರಲಿ.
3. ಮಾರನೇ ದಿನ ಬೆಳಿಗ್ಗೆ, ಸಾಮಾನ್ಯ ನೀರಿನಲ್ಲಿ ಕೈಗಳನ್ನು ತೊಳೆದುಕೊಳ್ಳಿ.

. ಬಿಳಿ ವಿನೆಗರ್

ಉಗುರುಗಳನ್ನು ಹಾಳು ಮಾಡುವ ಗುಣಲಕ್ಷಣಗಳನ್ನು ತೆಗೆದು ಹಾಕುವಲ್ಲಿ ಬಿಳಿಯ ವಿನೆಗರ್ ಸಹಾಯಕ. ಇದು ಬಿಳಿಯ ಕಲೆಗಳು ಮತ್ತು ಉಗುರಿನಲ್ಲಿ ಆಗುವ ತೇಪೆಯಂತ ಭಾಗವನ್ನು ಸರಿಪಡಿಸಲು ನೆರವು ನೀಡುತ್ತದೆ.

ಬೇಕಾಗುವ ಪದಾರ್ಥಗಳು :

  • ½ ಕಪ್ ನಷ್ಟು ಬಿಳಿ ವಿನೆಗರ್
  • ¼th ಕಪ್ ನಷ್ಟು ಹದವಾಗಿ ಬೆಚ್ಚಗಿರುವ ನೀರು

ಮಾಡುವ ವಿಧಾನ ಹೇಗೆ?
1. ½ ಕಪ್ ನಷ್ಟು ಬಿಳಿ ವಿನೆಗರ್ ನ್ನು ¼th ಕಪ್ ನಷ್ಟು ಹದವಾಗಿ ಬೆಚ್ಚಗಿರುವ ನೀರಿನಲ್ಲಿ ಕರಗಿಸಿ
2. ಈ ದ್ರವದಲ್ಲಿ ನಿಮ್ಮ ಕೈಗಳನ್ನು ಇಟ್ಟುಕೊಳ್ಳಿ ಸುಮಾರು 15-20 ನಿಮಿಷ ಕೈಗಳನ್ನು ಹಾಗೆಯೇ ಇಟ್ಟುಕೊಳ್ಳಿ
2. ವಾರಕ್ಕೆ ಮೂರು ಬಾರಿ ಈ ಔಷಧವನ್ನು ಪುನಃ ಪುನಃ ಮಾಡಿ. ಆಗ ನಿಮಗೆ ಬೇಗನೆಯ ಮತ್ತು ಅತ್ಯುತ್ತಮವಾದ ಫಲಿತಾಂಶ ದೊರೆಯಲಿದೆ

. ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾದಲ್ಲಿ ಆಲ್ಕಲಿನ್ ಗುಣಗಳಿರುತ್ತದೆ ಮತ್ತು ಇದು ನಿಮ್ಮ ಉಗುರಿನಲ್ಲಿರುವ ಬಿಳಿಯ ಕಲೆಗಳನ್ನು ಮತ್ತು ಕೊಳೆಯನ್ನು ತೆಗೆಯಲು ನೆರವು ನೀಡುತ್ತದೆ

ಬೇಕಾಗುವ ಪದಾರ್ಥಗಳು :
½ ಕಪ್ ಬೇಕಿಂಗ್ ಸೋಡಾ
¼th ಕಪ್ ನಷ್ಟು ನೀರು
¼th ಕಪ್ ನಷ್ಟು ವಿನೆಗರ್

ಮಾಡುವ ವಿಧಾನ ಹೇಗೆ?
1. ಒಂದು ಬೌಲ್ ನಲ್ಲಿ ¼th ಕಪ್ ನಷ್ಟು ಬೇಕಿಂಗ್ ಸೋಡಾ ತೆಗೆದುಕೊಳ್ಳಿ
2. ಅದಕ್ಕೆ ¼th ವಿನೆಗರ್ ನ್ನು ಸೇರಿಸಿ
3. ಈಗ, ಇದನ್ನು ¼th ಕಪ್ ನಷ್ಟು ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಎಲ್ಲವನ್ನೂ ಮಿಕ್ಸ್ ಮಾಡಿ.
4. ನಿಮ್ಮ ಉಗುರುಗಳಿಗೆ ಈ ದ್ರವವನ್ನು ಹಚ್ಚಿಕೊಳ್ಳಿ.. ಸುಮಾರು 15 ರಿಂದ 20 ನಿಮಿಷ ಹಾಗೆಯೇ ಇರಲಿ.
ಒಂದು ವಾರ ದಿನಂಪ್ರತಿ ಇದನ್ನು ಒಮ್ಮೆಯಾದರೂ ಮಾಡಿ. ಫಲಿತಾಂಶವನ್ನು ನೀವೇ ಗಮನಿಸಿಕೊಳ್ಳಬಹುದು.

. ಮೊಸರು

ಶಿಲೀಂದ್ರ ತೊಡಗಿಸುವ ಗುಣಗಳನ್ನು ಮೊಸರು ಹೊಂದಿರುತ್ತದೆ. ಹಾಗಾಗಿ ಇದು ಶೀಲೀಂದ್ರಗಳಿಂದ ಆಗುವ ಸೋಂಕು ಮತ್ತು ಗುರುಗಳಲ್ಲಿ ಆಗುವ ಬಿಳಿಯ ಕಲೆಗಳನ್ನು ನಿವಾರಿಸಲು ನೆರವು ನೀಡುತ್ತದೆ.

ಬೇಕಾಗುವ ಪದಾರ್ಥ :
1 ಕಪ್ ಮೊಸರು

ಮಾಡುವ ವಿಧಾನ ಹೇಗೆ?
1. ನೀವನು ಮಾಡಬೇಕಾಗಿರುವು ಇಷ್ಟೇ...ಯಾವುದೇ ಪರಿಮಳ ಮತ್ತು ಇತರೆ ವಸ್ತುಗಳ ಮಿಶ್ರಣವಿಲ್ಲದ ಮೊಸರಿನಲ್ಲಿ ನಿಮ್ಮ ಕೈಗಳನ್ನು ಇಟ್ಟುಕೊಳ್ಳಬೇಕು.
2.15-20 ನಿಮಿಷ ಇದನ್ನು ಮಾಡಿ ಮತ್ತು ಸಾಮಾನ್ಯ ನೀರಿನಲ್ಲಿ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
3. ಪ್ರತಿದಿನವೂ ಮಾಡಿ ಮತ್ತು ಉತ್ತಮ ಫಲಿತಾಂಶವನ್ನು ಪಡೆಯಿರಿ

. ಟೀ ಟ್ರೀ ಆಯಿಲ್

ಟ್ರೀ ಟ್ರೀ ಆಯಿಲ್ ನಲ್ಲಿ ಆಂಟಿಮೈಕ್ರೋಬಿಯಲ್ ಗುಣಗಳಿದ್ದು, ಇದು ನಿಮಗೆ ಕಲೆಗಳು ಮತ್ತು ಉಗುರಿನ ಬಿಳಿ ಚುಕ್ಕಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ..

ಬೇಕಾಗುವ ಪದಾರ್ಥ :
ಟೀ ಟ್ರೀ ಆಯಿಲ್

ಮಾಡುವ ವಿಧಾನ ಹೇಗೆ?
1. ಹತ್ತಿಯ ತುಂಡುಗಳನ್ನು ಬಳಸಿ ನಿಮ್ಮ ಉಗುರುಗಳಿಗೆ ಟೀ ಟ್ರೀ ಆಯಿಲ್ ನ್ನು ಹಚ್ಚಿಕೊಳ್ಳಿ.
2. ಕೆಲವು ನಿಮಿಷ ಹಾಗೆಯೇ ಇರಲು ಬಿಡಿ ಮತ್ತು ನಂತರ ಹದವಾಗಿ ಬೆಚ್ಚಗಿರುವ ನೀರಿನಿಂದ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ
3. ಕೆಲವು ತಿಂಗಳುಗಳ ವರೆಗೆ ಪ್ರತಿದಿನ ಎರಡು ಬಾರಿ ಇದನ್ನು ಮಾಡಿ. ನೀವು ಬದಲಾವಣೆ ಗಮನಿಸುವವರೆಗೆ ಇದನ್ನು ಪುನರಾವರ್ತಿಸುತ್ತಲೇ ಇರಿ.

English summary

How To Remove White Spots From Fingernails?

most of the people out there also suffer from white spots on the fingernails. This is due to a condition called leukonychia. They appear mostly on finger and toe nails. These spots can be small or large and can vary from person to person. There are several reasons for white spots to appear on your fingernails. A fungal infection, allergy due to usage of certain products, calcium deficiencies, nail injuries, etc., are some of the reasons that can be pointed out for this condition.
X
Desktop Bottom Promotion