For Quick Alerts
ALLOW NOTIFICATIONS  
For Daily Alerts

ಪಾದಗಳ ಅಡಿಭಾಗದಲ್ಲಿ ಚರ್ಮದ ಸಿಪ್ಪೆ ಸುಲಿಯುವಿಕೆ ಸಮಸ್ಯೆಗೆ ಮನೆಮದ್ದುಗಳು

By Deepu
|

ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಕಂಡುಕೊಳ್ಳಲು ನೀವು ಸುಂದರವಾಗಿದ್ದು ಉತ್ತಮ ವೇಷಭೂಷಣಗಳನ್ನು ಮಾಡಿದರೆ ಮಾತ್ರ ಸಾಲದು ನಿಮ್ಮ ದೇಹದ ಸ್ವಚ್ಛತೆಯ ಕಡೆಗೂ ನೀವು ಗಮನ ಹರಿಸಬೇಕಾಗುತ್ತದೆ. ನೀವು ಎಷ್ಟೇ ಸುಂದರವಾಗಿದ್ದು ದೈಹಿಕ ಸ್ವಚ್ಛತೆಯ ಕಡೆಗೆ ನೀವು ಗಮನ ನೀಡುತ್ತಿಲ್ಲ ಎಂದಾದಲ್ಲಿ ನೀವು ನಗೆಪಾಟಲಿಗೆ ಈಡಾಗುವುದು ಖಂಡಿತ. ಅದರಲ್ಲೂ ಮಳೆಗಾಲದಲ್ಲಿ ನಿಮ್ಮ ದೈಹಿಕ ಸ್ವಾಸ್ಥ್ಯಕ್ಕೆ ನೀವು ಹೆಚ್ಚು ಗಮನ ನೀಡಬೇಕಾಗುತ್ತದೆ. ನಿಮ್ಮ ಮುಖ ಮತ್ತು ಕೂದಲಿನ ಅಂದಕ್ಕೆ ನೀವು ಹೇಗೆ ಗಮನ ನೀಡುತ್ತೀರೋ ಅಂತೆಯೇ ನಿಮ್ಮ ಪಾದದ ಕಡೆಗೂ ನೀವು ಆರೈಕೆಯನ್ನು ಮಾಡಬೇಕು.

ನಿಮ್ಮ ಪಾದಗಳು ತುಂಬಾ ಒಣಗಿದಾಗ ಪಾದದ ಅಡಿಭಾಗದಲ್ಲಿ ಸಿಪ್ಪೆಸುಲಿಯುವ ಚರ್ಮ ಕಾಣಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಈ ರೀತಿಯ ಸಮಸ್ಯೆಯಿಂದಾಗಿ ಅಲ್ಲಿ ಸಿಪ್ಪೆಸುಲಿದಿರುವ ಭಾಗದಲ್ಲಿ ಕೊಳಕು ಸೇರಿಕೊಂಡಾ ನೋಡಲೂ ಅಸಹ್ಯವಾಗಿರುತ್ತದೆ ಮತ್ತು ನೋವನ್ನು ಉಂಟುಮಾಡುವ ಸಂಭವ ಕೂಡ ಹೆಚ್ಚು. ಮಾಯಿಶ್ಚರೈಸರ್ ಮತ್ತು ಉತ್ತಮ ಹೈಡ್ರೇಶನ್ ಇಲ್ಲದಿರುವಿಕೆಯಿಂದಾಗಿ ನಿಮ್ಮ ಪಾದಗಳಲ್ಲಿ ಇಂತಹ ಸಮಸ್ಯೆ ಉಂಟಾಗುತ್ತಿರುತ್ತದೆ. ಮೃತಕೋಶಗಳು ಪಾದಗಳ ತಳದಲ್ಲಿ ಸೇರಿಕೊಂಡಾಗ ಕೂಡ ನಿಮ್ಮ ಪಾದಗಳಲ್ಲಿ ಬಿರುಕು ಸರ್ವೇ ಸಾಮಾನ್ಯವಾಗಿಬಿಡುತ್ತದೆ.

ಪಾದಗಳ ಈ ಸಮಸ್ಯೆಗೆ ನೀವು ಮನೆಯಲ್ಲೇ ಕೆಲವೊಂದು ಪರಿಹಾರಗಳನ್ನು ಮಾಡಬಹುದಾಗಿದ್ದು ಇದರಿಂದ ಪಾದಗಳ ತಳ ಮೃದುವಾಗುತ್ತದೆ ಮತ್ತು ಒರಟಾಗಿರುವುದಿಲ್ಲ. ಪಾದಗಳಲ್ಲಿ ಇರುವ ಈ ಸಮಸ್ಯೆ ನಿಮ್ಮ ದೇಹದ ಇತರ ಭಾಗಗಳನ್ನು ಹರಡುವ ಸಾಧ್ಯತೆ ಇರುವುದರಿಂದ ಸೂಕ್ತ ರೀತಿಯ ಕಾಳಜಿಯನ್ನು ನೀವು ಮಾಡಬೇಕಾಗುತ್ತದೆ. ಒಣಗುತ್ತಿರುವ ಪಾದಕ್ಕೆ ನೀವು ಉತ್ತಮ ಆರೈಕೆಯನ್ನು ಮಾಡಲು ಮನೆಯಲ್ಲೇ ಇರುವ ಕೆಲವೊಂದು ವಸ್ತುಗಳನ್ನು ಬಳಸಿಕೊಳ್ಳಬಹುದಾಗಿದೆ.
* ಅಲೊವೇರಾ
*ಓಟ್‌ಮೀಲ್
* ಲಿಂಬೆ
* ಗ್ಲಿಸರಿನ್
* ಬಾಳೆಹಣ್ಣು

 ಅಲೊವೇರಾ

ಅಲೊವೇರಾ

ಅಲೊವೇರಾ ಅಥವಾ ಲೋಳೆಸರ ಒಂದು ಬಹುಪಯೋಗಿ ಸಸ್ಯವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಒಂದು ಅತ್ಯುತ್ತಮ ಮನೆ ಔಷಧಿಯ ಮೂಲವೆಂದು ಅನುಮೋದಿಸಲ್ಪಟ್ಟಿದೆ. ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಉಪಯುಕ್ತವಾಗಿದ್ದು, ಈ ಕಾರಣದಿಂದಾಗಿ ಇದು ಅನೇಕ ಸಾವಯವ ದ್ರಾವಣಗಳ ತಯಾರಕರ ಪಾಲಿಗೆ ಒಂದು ವರದಾನದಂತಿದೆ. ಅಷ್ಟೇ ಅಲ್ಲದೆ ಅಲೊವೇರಾ ಹೀಲಿಂಗ್ ಗುಣವನ್ನು ಹೊಂದಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಇನ್‌ಫ್ಲಾಮೇಟರಿ ಗುಣಗಳು ನಿಮ್ಮ ಪಾದದ ಬಿರುಕನ್ನು ಹೋಗಲಾಡಿಸಿ ಸೂಕ್ತ ಆರೈಕೆಯನ್ನು ಮಾಡುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಅಲೊವೇರಾ ಜೆಲ್ ಮತ್ತು ವಿಟಮಿನ್ ಇ ಎಣ್ಣೆಯನ್ನು ತೆಗೆದುಕೊಳ್ಳಿ. ಇದನ್ನು ಮಿಶ್ರ ಮಾಡಿಕೊಂಡು ಬಿರುಕಿರುವ ಸ್ಥಳಕ್ಕೆ ಹಚ್ಚಿ. ನಂತರ ಸ್ವಲ್ಪ ಹೊತ್ತಿನ ಬಳಿಕ ಅದನ್ನು ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ 2-3 ಬಾರಿ ಇದನ್ನು ಮಾಡಿ. ಇದಕ್ಕೆ ಬದಲಾಗಿ ಅಲೊವೇರಾ ಜೆಲ್ ಅನ್ನು ನೀವು ಹಿಮ್ಮಡಿಯ ಮೇಲೆ ಹಚ್ಚಬಹುದು. ಮರುದಿನ ನಿಮ್ಮ ಪಾದಗಳನ್ನು ತೊಳೆದುಕೊಳ್ಳಿ.

ಓಟ್‌ಮೀಲ್

ಓಟ್‌ಮೀಲ್

ಓಟ್‌ಮೀಲ್‌ನಲ್ಲಿ ಸಪೊನಿನ್ಸ್ ಅಂಶವಿದ್ದು ಇದು ಒಣ ಕೋಶಗಳನ್ನು ಪೋಷಿಸುತ್ತದೆ ಮತ್ತು ಮೃದುವಾದ ರಚನೆಯನ್ನು ತ್ವಚೆಗೆ ಪೂರೈಕೆ ಮಾಡುತ್ತದೆ. ಅಂತೆಯೇ ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ಚಚೆಯನ್ನು ರಕ್ಷಿಸುತ್ತದೆ. ಅಲ್ಲದೆ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವುದರ ಜೊತೆಗೆ ಓಟ್‌ಮೀಲ್ ಮೃತಕೋಶವನ್ನು ನಿವಾರಿಸುತ್ತದೆ. 2 ಚಮಚದಷ್ಟು ಓಟ್‌ಮೀಲ್ ಅನ್ನು ಬ್ಲೆಂಡ್ ಮಾಡಿ. ಇದಕ್ಕೆ ಕೆಲವು ಹನಿಗಳಷ್ಟು ರೋಸ್ ವಾಟರ್ ಸೇರಿಸಿಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಒಡೆದಿರುವ ಹಿಮ್ಮಡಿಗೆ ಇದನ್ನು ಹಚ್ಚಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳಿ.

ಲಿಂಬೆ

ಲಿಂಬೆ

ಬೀಜವಿರದಿದ್ದರೆ ಲಿಂಬೆ ಸಂಜೀವಿನಿಯಾಗುತ್ತಿತ್ತು,ತೊಟ್ಟಿಲ್ಲದಿದ್ದರೆ ಬದನೆ ಹಾಲಾಹಲವಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವು ವ್ಯಾಧಿಗಳನ್ನು ಗುಣಪಡಿಸಲು ಶಕ್ತವಿರುವ ಲಿಂಬೆಯ ಬೀಜಗಳು ಮಾತ್ರ ವಿಷಕಾರಿಯಾಗಿವೆ. ಆದ್ದರಿಂದ ಲಿಂಬೆರಸವನ್ನು ಹಿಂಡಿದಾಗ ಬೀಜಗಳು ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ಆದರೆ ಲಿಂಬೆಯಲ್ಲಿರುವ ವಿಟಮಿನ್ ಇ ಅಂಶವು ಮೃತಕೋಶಗಳನ್ನು ನಿವಾರಿಸಿ ಹಿಮ್ಮಡಿಯನ್ನು ಮೃದು ವಾಗಿಸುತ್ತದೆ. ಲಿಂಬೆಯನ್ನು ನಿಮ್ಮ ಪಾದಗಳಿಗೆ ಎರಡು ರೀತಿಯಲ್ಲಿ ಬಳಸಬಹುದಾಗಿದೆ. ಒಂದು ಟಬ್‌ಗೆ ಬಿಸಿ ನೀರನ್ನು ಹಾಕಿ ಮತ್ತು ಆ ನೀರಿಗೆ ಲಿಂಬೆ ರಸವನ್ನು ಹಿಂಡಿ ನಿಮ್ಮ ಕಾಲುಗಳನ್ನು ಆ ನೀರಿನಲ್ಲಿ ಇರಿಸಿ. ನಂತರ 10-15 ನಿಮಿಷ ಬಿಟ್ಟು ಪಾದಗಳನ್ನು ಬ್ರಶ್‌ನ ಸಹಾಯದಿಂದ ಸ್ಕ್ರಬ್ ಮಾಡಿಕೊಳ್ಳಿ. ಒಣಗಿದ ನಂತರ ಪಾದಗಳಿಗೆ ಮಾಯಿಶ್ಚರೈಸರ್ ಹಚ್ಚಿ. 2-3 ಲಿಂಬೆ ರಸಕ್ಕೆ 1 ಚಮಚ ಪೆಟ್ರೋಲಿಯಮ್ ಜೆಲ್ಲಿಯನ್ನು ಸೇರಿಸಿ. ಇದನ್ನು ಮಿಶ್ರ ಮಾಡಿಕೊಂಡು ನಿಮ್ಮ ಪಾದಗಳಿಗೆ ಹಚ್ಚಿ. ಪ್ರತೀ ದಿನ ಮಲಗುವ ಮುನ್ನ ಈ ವಿಧಾನವನ್ನು ಅನುಸರಿಸಿ ನಂತರ ಸಾಕ್ಸ್‌ನಿಂದ ಪಾದಗಳನ್ನು ಮುಚ್ಚಿ ನೀವು ಯಾವುದೇ ಗಾಯವನ್ನು ಹೊಂದಿದ್ದರೆ ಈ ವಿಧಾನವನ್ನು ಅನುಸರಿಸಬೇಡಿ.

 ಗ್ಲಿಸರಿನ್

ಗ್ಲಿಸರಿನ್

ಒಡೆದಿರುವ ಪಾದಕ್ಕೆ ಉತ್ತಮ ಪರಿಹಾರವಾಗಿದೆ ಗ್ಲಿಸರಿನ್. ಇದರ ಹೈಡ್ರೇಟ್ ಮಾಡುವ ಗುಣ ತ್ವಚೆಯ ಮಾಯಿಶ್ಚರೈಸರ್ ಅನ್ನು ನಿಯಂತ್ರಿಸುತ್ತದೆ. 1 ಚಮಚ ಗ್ಲಿಸರಿನ್‌ಗೆ 1 ಚಮಚ ರೋಸ್ ವಾಟರ್ ಮತ್ತು 3 ಚಮಚ ಉಪ್ಪನ್ನು ಸೇರಿಸಿ. ಇವುಗಳನ್ನು ಮಿಶ್ರ ಮಾಡಿಕೊಂಡು ಬಿರುಕಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಪಾದಗಳನ್ನು ತೊಳೆದುಕೊಳ್ಳಿ. ದಿನಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ. 1 ಚಮಚ ಗ್ಲಿಸರಿನ್‌ಗೆ 1 ಚಮಚ ರೋಸ್ ವಾಟರ್ ಅನ್ನು ಸೇರಿಸಿಕೊಂಡು ನಿಮ್ಮ ಪಾದಕ್ಕೆ ಹಚ್ಚಬಹುದಾಗಿದೆ. ಕಾಲುಗಳನ್ನು 20 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಕಾಲುಗಳನ್ನು ತೊಳೆದುಕೊಳ್ಳಿ. ಪ್ರತೀ ದಿನ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ.

ಬಾಳೆಹಣ್ಣು

ಬಾಳೆಹಣ್ಣು

ಸಾಮಾನ್ಯವಾಗಿ ವರ್ಷದ ಎಲ್ಲಾ ದಿನಗಳಲ್ಲಿ, ಎಲ್ಲೆಡೆ ಯಥೇಚ್ಛವಾಗಿ ಮತ್ತು ಅತಿ ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಅಗ್ಗ ಎಂಬ ಕಾರಣಕ್ಕೆ ಹೆಚ್ಚಿನವರ ಅವಗಣನೆಗೆ ತುತ್ತಾಗಿರುವ ಈ ಹಣ್ಣು ಒಂದು ಅದ್ಭುತಗಳ ಆಗರವೇ ಆಗಿದೆ. ಈ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಮಾತ್ರವಲ್ಲ, ಇದು ಒಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಹೌದು ಬಾಳೆಹಣ್ಣಿನಲ್ಲಿರುವ ವಿಟಮಿನ್ ಎ, ಬಿ ಮತ್ತು ಸಿ ಅಂಶವನ್ನು ಹೊಂದಿದ್ದು ಇದು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ. ಬಾಳೆಹಣ್ಣನ್ನು ಪೇಸ್ಟ್ ಮಾಡಿಕೊಳ್ಳಿ. ಮತ್ತು ಬಿರುಕಿರುವ ಸ್ಥಳಕ್ಕೆ ಇದನ್ನು ಹಚ್ಚಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ನೀರಿನಿಂದ ಕಾಲುಗಳನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ.

English summary

Home Remedies To Treat Peeling Skin On Your Feet

Peeling skin on feet can not only cause itchiness on skin but also too much pain.These remedies to treat peeling skin on your feet.ಪಾದಗಳ ಸಿಪ್ಪೆ ಸುಲಿಯುವಿಕೆ ಸಮಸ್ಯೆ ಕೇವಲ ತುರಿಕೆಯನ್ನು ಉಂಟು ಮಾಡುವುದು ಮಾತ್ರವಲ್ಲದೆ, ತುಂಬಾನೇ ನೋವನ್ನು ಕೂಡ ಉಂಟು ಮಾಡುತ್ತದೆ. ಇಲ್ಲಿದೆ ನೋಡಿ ಪಾದಗಳ ಸಿಪ್ಪೆ ಸುಲಿಯುವಿಕೆ ಸಮಸ್ಯೆಗೆ ಮನೆಮದ್ದುಗಳು
Story first published: Thursday, July 26, 2018, 14:42 [IST]
X
Desktop Bottom Promotion