For Quick Alerts
ALLOW NOTIFICATIONS  
For Daily Alerts

ಕಪ್ಪಗಿನ ಕುತ್ತಿಗೆ ಬಿಳಿಯಾಗಿಸಲು ಇಲ್ಲಿದೆ ಸುಲಭೋಪಾಯಗಳು

By Hemanth
|

ಮುಖವು ಬಿಳಿಯಾಗಿ ಕಾಂತಿಯಿಂದ ಹೊಳೆಯುತ್ತಲಿರುವಾಗ ಕುತ್ತಿಗೆ ಮಾತ್ರ ಕಪ್ಪಾಗಿದ್ದರೆ ಆ ನಿಮ್ಮ ಸೌಂದರ್ಯವು ಇದ್ದೂ ಇಲ್ಲದಂತೆ ಆಗುವುದು. ಮುಖದ ಕಾಂತಿ ಹಾಗೂ ಸೌಂದರ್ಯಕ್ಕಾಗಿ ನೀವು ಪಟ್ಟಿರುವಂತಹ ಶ್ರಮವನ್ನು ಕುತ್ತಿಗೆಯತ್ತಲೂ ತಿರುಗಿಸಬೇಕು. ಇಲ್ಲವೆಂದಾದರೆ ನಿಮ್ಮ ಸೌಂದರ್ಯವು ತುಂಬಾ ಕೆಟ್ಟಂತೆ ಕಾಣುವುದು. ಕುತ್ತಿಗೆ ಬಗ್ಗೆ ಹೆಚ್ಚಿನ ಜನರು ಮಲತಾಯಿ ಧೋರಣೆ ಅನುಸರಿಸುವರು. ಇದರಿಂದಾಗಿ ಕುತ್ತಿಗೆ ಕಪ್ಪಾಗಿ ಸಂಪೂರ್ಣ ಸೌಂದರ್ಯ ಕೆಡಿಸುವುದು. ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದು ಪ್ರತಿಯೊಬ್ಬ ಮಹಿಳೆಯ ಆದ್ಯತೆಯಾಗಬೇಕು. ಇದಕ್ಕೆ ಯಾವುದಾದರೂ ಖಾಯಂ ಪರಿಹಾರವಿದೆಯಾ ಎಂದು ನೀವು ಕೇಳಬಹುದು.

ಈ ಸಮಸ್ಯೆಗೆ ಪರಿಹಾರವಿದೆ ಎಂದರೆ ಆಗ ನಿಮಗೆ ಅಚ್ಚರಿಯಾಗಬಹುದು. ಸುಲಭ ಹಾಗೂ ತುಂಬಾ ಪರಿಣಾಮಕಾರಿಯಾಗಿ ನೀವು ಇದನ್ನು ಬಳಸಬಹುದು. ಕುತ್ತಿಗೆ ಸುತ್ತಲಿನ ಕಪ್ಪು ಕಲೆಗಳ ನಿವಾರಣೆ ಮಾಡಲು ಆಲೂಗಡ್ಡೆಯು ತುಂಬಾ ಪರಿಣಾಮಕಾರಿಯಾಗಿದೆ. ಆಲೂಗಡ್ಡೆಯಿಂದ ಕುತ್ತಿಗೆಯ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

beauty tips in kannada

ಬೇಕಾಗುವ ಸಾಮಗ್ರಿಗಳು

1 ಆಲೂಗಡ್ಡೆ
1 ಹತ್ತಿ ಉಂಡೆ
ಒಣ ಟೆವೆಲ್, ಟಿಶ್ಯು

ತಯಾರಿಸುವ ವಿಧಾನ

*ಒಂದು ಸಣ್ಣ ಗಾತ್ರದ ಆಲೂಗಡ್ಡೆ ತೆಗೆದುಕೊಳ್ಳಿ.
*ಇದರ ಸಿಪ್ಪೆ ತೆಗೆದು ಎರಡು ತುಂಡು ಮಾಡಿ.
*ಒಂದು ತುಂಡನ್ನು ತುರಿದು ಬದಿಗಿಟ್ಟುಕೊಳ್ಳಿ.
*ಇನ್ನೊಂದು ಭಾಗವನ್ನು ಕೂಡ ತುರಿದುಕೊಳ್ಳಿ.
* ಒಂದು ಸಣ್ಣ ಪಾತ್ರೆಗೆ ಬಟಾಟೆಯ ರಸ ತೆಗೆಯಿರಿ.
*ಈ ಆಲೂಗಡ್ಡೆ ರಸವು ತಯಾರಾಗಿದೆ ಮತ್ತು ಅದನ್ನು ಕುತ್ತಿಗೆಗೆ ಹಚ್ಚಿಕೊಳ್ಳಿ.

ಹಚ್ಚಿಕೊಳ್ಳುವುದು ಹೇಗೆ

*ಹತ್ತಿ ಉಂಡೆ ತೆಗೆದುಕೊಳ್ಳಿ.
*ಇದನ್ನು ಬಟಾಟೆ ರಸದಲ್ಲಿ ಮುಳುಗಿಸಿ ಮತ್ತು ಕುತ್ತಿಗೆ ಮತ್ತು ಕಪ್ಪು ಕಲೆಗಳು ಇರುವಂತಹ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ.
*15 ನಿಮಿಷ ಕಾಲ ಅದನ್ನು ಭಾದಿತ ಜಾಗಕ್ಕೆ ಉಜ್ಜಿಕೊಳ್ಳಿ.
*15 ನಿಮಿಷ ಕಾಲ ಒಣಗಲು ಬಿಡಿ.
* ಈಗ ಒಣ ಬಟ್ಟೆಯಿಂದ ಒರೆಸಿಕೊಳ್ಳಿ ಅಥವಾ ಕುತ್ತಿಗೆ ತೊಳೆಯಿರಿ.
*ನಿರೀಕ್ಷಿತ ಫಲಿತಾಂಶ ಸಿಗಬೇಕಾದರೆ ನೀವು ತಿಂಗಳ ಕಾಲ ಇದನ್ನು ಮುಂದುವರಿಸಿ.

ಸೂಚನೆ

ಮನೆಮದ್ದುಗಳು ಹಾಗೂ ಪ್ಯಾಕ್‌ಗಳು ಫಲಿತಾಂಶ ನೀಡುವುದು ಸ್ವಲ್ಪ ನಿಧಾನ. ಆದರೆ ಇದು ತುಂಬಾ ಪರಿಣಾಮಕಾರಿ ಮತ್ತು ಶೇ.100ರಷ್ಟು ಫಲಿತಾಂಶ ನೀಡುವುದು ಎಂದು ನೆನಪಿಟ್ಟುಕೊಳ್ಳಿ.
ಕುತ್ತಿಗೆಯ ಕಪ್ಪು ಕಲೆಗಳ ನಿವಾರಣೆ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದೆ ತಾನೇ? ಹಾಗಾದರೆ ಇದರ ಕೆಲವೊಂದು ಲಾಭಗಳು ಏನು ಎಂದು ತಿಳಿಯುವ. ಆಲೂಗಡ್ಡೆ ಬಳಸಲು ಕಾರಣವೇನು? ಮತ್ತು ಇದರ ಲಾಭಗಳು ಏನು ಎಂದು ತಿಳಿಯಿರಿ.

ಚರ್ಮಕ್ಕೆ ಆಲೂಗಡ್ಡೆಯ ಲಾಭಗಳು.

• ಇದು ಕಪ್ಪು ಕಲೆ, ಕಣ್ಣಿನ ಸುತ್ತಲಿನ ಕಪ್ಪು ವೃತ್ತ ಮತ್ತು ನೆರಿಗೆ ನಿವಾರಣೆ ಮಾಡುವುದು.
• ಸುಟ್ಟಗಾಯ ನಿವಾರಿಸುವುದು
• ಇದು ಚರ್ಮದ ಬಣ್ಣ ಬಿಳಿಯಾಗಿಸುವುದು
• ಒಣ ಚರ್ಮಕ್ಕೆ ಇದು ಪರಿಣಾಮಕಾರಿ.
• ಇದು ಸತ್ತ ಚರ್ಮದ ಕೋಶ ಕಿತ್ತುಹಾಕುವುದು.

ಕುತ್ತಿಗೆ ಸುತ್ತಲು ಇರುವಂತಹ ಕಪ್ಪು ಕಲೆಗಳ ನಿವಾರಣೆ ಮಾಡಲು ನೀವು ಈಗ ಈ ಮನೆಮದ್ದನ್ನು ಬಳಸಲು ತಯಾರಾಗಿ ನಿಂತಿರಬಹುದು. ಕುತ್ತಿಗೆಯಲ್ಲಿರುವ ಕಪ್ಪು ಕಲೆಗಳಿಗೆ ಮಾತ್ರ ಇದು ಪರಿಣಾಮಕಾರಿ. ಮೊಣಕೈ ಮತ್ತು ಮೊಣಕಾಲು ಕಪ್ಪಾಗಿದ್ದರೂ ಇದನ್ನು ಬಳಸಬಹುದು.
ಇನ್ನು ತಡವೇಕೇ? ನೀವು ಇದನ್ನು ಇಂದೇ ಬಳಸಿ ಮತ್ತು ನಮಗೆ ನಿಮ್ಮ ಅನುಭವದ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿಕೊಡಿ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಬೇರೆಯವರೊಂದಿಗೆ ಶೇರ್ ಮಾಡಿ.

ಕುತ್ತಿಗೆಯ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇನ್ನಷ್ಟು ಸಲಹೆಗಳು

ಲಿಂಬೆ ಮತ್ತು ರೋಸ್ ವಾಟರ್ ಒಂದು ಚಮಚದಷ್ಟು ಲಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಹತ್ತಿಯ ಉಂಡೆಯಿಂದ ಕುತ್ತಿಗೆಯ ಕಪ್ಪು ವರ್ತುಲದ ಭಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ ಮರುದಿನ ಇದನ್ನು ತೊಳೆದುಕೊಳ್ಳಿ.

ಲಿಂಬೆ ಮತ್ತು ಜೇನು

ತ್ವಚೆಯ ಹಲವಾರು ಸಮಸ್ಯೆಗಳಿಗೆ ಇವುಗಳು ಉತ್ತಮ ಪರಿಹಾರವನ್ನು ನೀಡುತ್ತವೆ. ತಾಜಾ ಲಿಂಬೆ ರಸ ಮತ್ತು ನೈಸರ್ಗಿಕ ಜೇನು ನಿಮ್ಮ ಬಳಿ ಇದ್ದರೆ ಆಯಿತು. ಲಿಂಬೆ ರಸಕ್ಕೆ ಹನಿಗಳಷ್ಟು ಜೇನನ್ನು ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. 20-25 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ಕುತ್ತಿಗೆಯ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇದು ಸಹಕಾರಿ.

ಲಿಂಬೆ ಮತ್ತು ಟೊಮೇಟೊ

ಲಿಂಬೆ ರಸಕ್ಕೆ ಟೊಮೇಟೊ ರಸವನ್ನು ಸೇರಿಸಿಕೊಳ್ಳಿ. ಕಪ್ಪಾಗಿರು ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ ನಂತರ 30-35 ನಿಮಿಷಗಳ ಕಾಲ ಹಾಗೆಯೇ ಬಿಡಿ. ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಿ.

ಲಿಂಬೆಯ ಮ್ಯಾಜಿಕ್

ಲಿಂಬೆಯು ನಿಮ್ಮ ತ್ವಚೆಯನ್ನು ಬೇಗನೇ ಒಣಗಿಸುತ್ತದೆ ಎಂಬುದು ನಿಮ್ಮ ಮನದಲ್ಲಿರಲಿ ಆದ್ದರಿಂದ ಇಲ್ಲಿ ನಾವು ನೀಡಿರುವ ನೈಸರ್ಗಿಕ ಉತ್ಪನ್ನಗಳೊಂದಿಗೆ ಲಿಂಬೆಯನ್ನು ಬೆರೆಸಿಕೊಂಡು ಇವುಗಳನ್ನು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಕಪ್ಪು ಕಲೆಗಳ ನಿವಾರಣೆಯೊಂದಿಗೆ ಕಾಂತಿಯುಕ್ತ ಕುತ್ತಿಗೆಯ ತ್ವಚೆಯನ್ನು ನೀವು ಪಡೆದುಕೊಳ್ಳುತ್ತೀರಿ.

ಲಿಂಬೆ, ಆಲೀವ್ ಆಯಿಲ್

ಮತ್ತು ಜೇನು ನಿಮ್ಮ ಕುತ್ತಿಗೆಯ ಭಾಗವನ್ನು ಈ ಮೂರು ಸಾಮಾಗ್ರಿಗಳು ಮಾಯಿಶ್ಚರೈಸ್ ಮಾಡುವುದು ಮಾತ್ರವಲ್ಲದೆ ಮೃತ ಕೋಶಗಳ ನಿವಾರಣೆಯನ್ನು ಮಾಡುತ್ತದೆ. ಒಂದು ಚಮಚ ಜೇನಿಗೆ ಆಲೀವ್ ಆಯಿಲ್ ಮತ್ತು 2 ಚಮಚ ಲಿಂಬೆ ರಸವನ್ನು ಸೇರಿಸಿಕೊಳ್ಳಿ. 25-30 ನಿಮಷಗಳ ಕಾಲ ಕುತ್ತಿಗೆಯನ್ನು ಇದನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ.

English summary

Get Rid Of Dark Neck Instantly With Potato

Dark neck or dark patches or spots on the neck area seem to be a tough problem most women often deal with. So, how do we get rid of it permanently? You must be wondering if there is at all any permanent solution to this problem, isn't it? Well, you would be happy to know that there is a solution to this problem. An easy-to-do, quick, effective and a cheap solution. Curious to know what? Well, one of the easiest solutions to getting rid of dark neck is potato.
X
Desktop Bottom Promotion