For Quick Alerts
ALLOW NOTIFICATIONS  
For Daily Alerts

ಸುಂದರ ತುಟಿಗಳಿಗೆ ಇಲ್ಲಿದೆ ನೋಡಿ, ನೈಸರ್ಗಿಕ ಲಿಪ್ ಬಾಮ್

By Hemanth
|

ಮನುಷ್ಯನ ದೇಹದ ಸೌಂದರ್ಯ ಕಂಡುಬರುವುದು ಮುಖದಲ್ಲಿ. ಮುಖದ ಮೇಲಿನ ಪ್ರತಿಯೊಂದು ಅಂಗವು ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣುಗಳು, ಮೂಗು, ಹಣೆ ಹೀಗೆ ಪ್ರತಿಯೊಂದು ಸರಿಯಾಗಿದ್ದರೆ ಮಾತ್ರ ಸೌಂದರ್ಯ ಕಂಡುಬರುವುದು. ಇಲ್ಲವಾದಲ್ಲಿ ಮುಖವು ವಿಕಾರವಾಗಿ ಕಾಣಿಸುವುದು. ಅದರಲ್ಲೂ ತುಟಿಗಳು ಮುಖದ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೃದು ಹಾಗೂ ಸುಂದರ ತುಟಿಗಳು ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಮಹಿಳೆಯರ ಸೌಂದರ್ಯವು ತುಟಿಗಳಲ್ಲೇ ಅಡಗಿರುವುದು. ತುಟಿಗಳು ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಉತ್ಪನ್ನಗಳು ಸಿಗುವುದು. ಆದರೆ ಅತಿಯಾಗಿ ಇಂತಹ ಉತ್ಪನಗಳನ್ನು ಬಳಸುವುದರಿಂದ ತುಟಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

Lip Balms

ತುಟಿಗಳು ತಮ್ಮ ಸೌಂದರ್ಯವನ್ನು ಕಳೆದುಕೊಂಡರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ. ಇಂತಹ ಸಂದರ್ಭದಲ್ಲಿ ಕೆಲವೊಂದು ಕಾಸ್ಮೆಟಿಕ್ ಗಳ ಬಳಕೆ ನಿಲ್ಲಿಸಬೇಕು. ಇದರ ಬದಲು ನೈಸರ್ಗಿಕವಾಗಿ ತಯಾರಿಸುವಂತಹ ಕೆಲವೊಂದು ಮಲಾಮ್ ಗಳನ್ನು ಬಳಸಿದರೆ ಆರೋಗ್ಯಕ್ಕೂ ಹಾನಿಯಾಗದು ಮತ್ತು ಸೌಂದರ್ಯವು ಕೆಡುವುದಿಲ್ಲ.ತುಟಿಯ ಮಲಾಮ್ ತಯಾರಿಸುವ ವಿಧಾನಗಳು

1. ಒಂದು ಚಮಚ ಹಾಲಿನಕೆನೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಗ್ಲಿಸರಿನ್ ಹಾಕಿ. ಹತ್ತು ನಿಮಿಷ ಕಾಲ ಇದನ್ನು ತುಟಿಯಲ್ಲಿ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.


ತುಟಿಯ ಸೌಂದರ್ಯಕ್ಕೆ, ಸಿಹಿ-ಸಿಹಿ ಲಿಪ್ ಬಾಮ್!

2. ಗುಲಾಬಿ ದಳಗಳನ್ನು ಜಜ್ಜಿಕೊಂಡು ಅದಕ್ಕೆ ಒಂದು ಚಮಚ ಹಾಲು ಹಾಕಿ. ದಿನದಲ್ಲಿ ಮೂರು ಸಲ ಇದರಿಂದ ತುಟಿಗಳನ್ನು ತೊಳೆಯಿರಿ. ಇದು ತುಟಿಗೆ ಒಳ್ಳೆಯ ಬಣ್ಣ ನೀಡುವುದು.

3. ಮಲಗುವ ಮೊದಲು ತುಟಿಗಳಿಗೆ ಜೇನುತುಪ್ಪ ಹಚ್ಚಿಕೊಳ್ಳಿ ಮತ್ತು ಹಾಗೆ ಬಿಡಿ. ಇದು ತುಟಿಗಳಿಗೆ ಗುಲಾಬಿ ಬಣ್ಣ ನೀಡುವುದು ಮಾತ್ರವಲ್ಲದೆ ಅವುಗಳನ್ನು ಮೆದುವಾಗಿಸುವುದು.


ಕೆಂದುಟಿಯ ಚೆಲುವು ಬೇಕೆಂದರೆ ಹೀಗೆ ಮಾಡಿ

4. ಆಲಿವ್ ತೈಲ, ಆಲಿವ್ ಬೆಣ್ಣೆ, ಜೇನಿನ ಮೇಣ, ಕೋಕಾ ಬೆಣ್ಣೆ, ಐದು ಹನಿ ರೋಸ್ಮೆರಿ ಎಣ್ಣೆ, ಐದು ಹನಿ ವಿಟಮಿನ್ ಈ ಮತ್ತು ಒಂದು ಚಮಚ ದ್ರಾಕ್ಷಿ ಎಣ್ಣೆ ಹಾಕಿಕೊಂಡು ಪ್ಯಾಕ್ ತಯಾರಿಸಿ. ಇದನ್ನು ಪ್ರತಿದಿನ ತುಟಿಗಳಿಗೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು.

5. ಒಂದು ಚಮಚ ಜೇನಿನ ಮೇಣ ಮತ್ತು ಐದು ಹನಿ ಸಾರಭೂತ ತೈಲವನ್ನು ಪೆಟ್ರೋಲಿಯಂ ಜೆಲ್ ಗೆ ಹಾಕಿಕೊಳ್ಳಿ. ನೀವು ಹೊರಗಡೆ ಹೋಗುವಾಗ ಇದನ್ನು ತುಟಿಗಳಿಗೆ ಹಚ್ಚಿಕೊಳ್ಳಬಹುದು.

6. ಜೇನು, ಲಿಂಬೆರಸ ಮತ್ತು ವಿಟಮಿನ್ ಇಯ ಪ್ಯಾಕ್ ಮಾಡಿಕೊಳ್ಳಿ. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಒಣಗಲು ಬಿಡಿ. ತಣ್ಣೀರಿನಿಂದ ತೊಳೆಯಿರಿ. ಇದು ತುಟಿಗಳಿಗೆ ಬಣ್ಣ ನೀಡುವುದು ಮಾತ್ರವಲ್ಲದೆ ಅದನ್ನು ಮೃದುಗೊಳಿಸುವುದು.

7. ಎರಡು ಚಮಚ ಚೆಂಡು ಹೂವಿನ ಎಣ್ಣೆ, ನಾಲ್ಕು ಚಮಚ ಬಾದಾಮಿ ಎಣ್ಣೆ, ಎರಡು ಚಮಚ ಅಪ್ರಿಕಾಟ್ ಕೆರ್ನಲ್ ತೈಲ, ಜೇನಿನ ಮೇಣ, ಎರಡು ವಿಟಮಿನ್ ಮಾತ್ರೆ ಮತ್ತು ಎರಡು ಹನಿ ಲಿಂಬೆ. ಈ ಮಿಶ್ರಣವನ್ನು ವಾರದಲ್ಲಿ ಮೂರು ಸಲ ತುಟಿಗಳಿಗೆ ಹಚ್ಚಿಕೊಳ್ಳಿ. ನೈಸರ್ಗಿಕವಾಗಿ ತಯಾರಿಸುವ ಈ ಮಲಾಮ್‌ಗಳು ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ತುಟಿಗಳಿಗೆ ಉಂಟಾಗುವ ಸೋಂಕನ್ನು ಇದು ನಿವಾರಣೆ ಮಾಡುವುದು. ತುಟಿಗಳ ಮೇಕಪ್ ತೆಗೆದ ಬಳಿಕ ಇದನ್ನು ಬಳಸಬೇಕು. ತುಟಿಗಳನ್ನು ಸರಿಯಾಗಿ ತೊಳೆದ ಬಳಿಕ ಈ ಮಲಾಮ್‌ಗಳನ್ನು ಹಚ್ಚಿಕೊಳ್ಳಿ.

English summary

Nourishing Homemade Lip Balms for Soft Pink Lips Naturally

Soft, supple and pink lips adds volume to your smile and beauty. To make your lips look beautiful, the market is flooded with cosmetics to shape, enhance and colour your lips. Constant, use of these cosmetics, can lead to lip discoloration, patches on lips, lip borders etc and nothing can be more depressing than bad lips. If you can't avoid using cosmetics on your lips, you can surely use some natural lip balms, to keep them healthy and beautiful.
X
Desktop Bottom Promotion