For Quick Alerts
ALLOW NOTIFICATIONS  
For Daily Alerts

ಅಂದದ ಪಾದಕ್ಕೆ, ಬೇಕಿದೆ ಚೆಂದದ ಆರೈಕೆ...

By Manu
|

ದೇಹದ ಸೌಂದರ್ಯ ವಿಷಯದಲ್ಲಿ ಪ್ರತಿಯೊಂದು ಅಂಗವೂ ಅತ್ಯಂತ ಪ್ರಮುಖವಾದುದು. ಉಗುರುನಿಂದ ಹಿಡಿದು ಪಾದದ ಹಿಮ್ಮಡಿಯವರೆಗೂ ನೀವು ಹೆಚ್ಚು ಅಸ್ಥೆಯನ್ನು ತೋರಿಸಬೇಕಾಗುತ್ತದೆ. ಬರಿಯ ಮುಖದ ಸೌಂದರ್ಯ ಮತ್ತು ಕೇಶ ಸೌಂದರ್ಯಕ್ಕೆ ಮಾತ್ರವೇ ಪ್ರಾಮುಖ್ಯತೆಯನ್ನು ನೀಡದೇ ದೇಹದ ಇತರ ಅಂಗಾಂಗಳಿಗೂ ಸೂಕ್ತ ಆರೈಕೆಯನ್ನು ಮಾಡಬೇಕು. ಅದಕ್ಕಾಗಿ ಬ್ಯೂಟಿ ಪಾರ್ಲರ್‎ಗಳಿಗೆಯೇ ನೀವು ನಿತ್ಯ ಹೋಗಬೇಕೆಂದಿಲ್ಲ ಕೆಲವೊಂದು ಮನೆಯಲ್ಲೇ ಸಿದ್ಧಪಡಿಸಬಹುದಾದ ಸೌಂದರ್ಯ ಉತ್ಪನ್ನಗಳಿಂದ ಕೂಡ ನಿಮ್ಮನ್ನು ನೀವು ಸುಂದರಿಯನ್ನಾಗಿಸಬಹುದು.

ನಿಮ್ಮ ದೇಹದ ಯಾವ ಭಾಗಕ್ಕೆ ನೀವು ಆರೈಕೆಯನ್ನು ನೀಡಬೇಕು ಎಂಬ ವಿಷಯ ಬಂದಾಗ ಪಾದಗಳ ಕಡೆಗೇ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದೇ ನಾವು ತಿಳಿಸುತ್ತೇವೆ. ನಿಮಗಾಗಿ ದುಡಿಯುವ ಉಪಕಾರಿ ಪಾದಗಳ ನಿರ್ಲಕ್ಷ್ಯವನ್ನು ನೀವು ಮಾಡಿದರೆ ಅದೂ ಕೂಡ ನಿಮ್ಮನ್ನು ಅಲಕ್ಷಿಸಿಬಿಡುತ್ತದೆ. ಕೈ ಮತ್ತು ಕೈ ಉಗುರುಗಳ ಅಂದ ಚೆಂದದಂತೆಯೇ ಕಾಲುಗಳು ಮತ್ತು ಕಾಲ್ಬೆರಳುಗಳ ಉಗುರುಗಳ ಸೌಂದರ್ಯ ಹಾಗೂ ಸ್ವಚ್ಛತೆಗೂ ಗಮನ ನೀಡಬೇಕು. ಬೇಸಿಗೆಯಲ್ಲಿ ಪಾದಗಳ ಆರೈಕೆ ಹೀಗಿರಲಿ

ಕಾಲುಗಳ ಪಾದ ಹೆಚ್ಚಿನ ಸಮಸ್ಯೆಗಳಿಗೆ ಒಳಗಾಗಿರುತ್ತವೆ. ದುರ್ಗಂಧ ಹೊರಸೂಸುವುದು, ಪಾದಗಳ ಬಿರುಕು, ಕಾಲ್ಬೆರಳುಗಳ ಉಗುರಿನೊಂದಿಗೆ ಬೆಳೆದ ಮಾಂಸ, ಹಾನಿಗೊಂಡ ಮೂಳೆಗಳು ಹೀಗೆ ಪಾದಗಳ ಸಮಸ್ಯೆಗಳು ಸೂಕ್ತ ಆರೈಕೆ ಕಾಣದೇ ಹೋದಲ್ಲಿ ನಿಮ್ಮನ್ನೇ ತಿಂಡುಬಿಡಬಹುದು. ಹಾಗೆಂದು ಪಾದಗಳ ಸೂಕ್ತ ಕಾಳಜಿಗಾಗಿ ನೀವು ಹೆಚ್ಚು ದುಡ್ಡು ವ್ಯಯಿಸಬೇಕಾಗಿಲ್ಲ ಪಾರ್ಲರ್‎ಗಳಲ್ಲಿ ಮಾಡುವ ಅದುವೇ ಸೌಂದರ್ಯ ವಿಧಾನಗಳನ್ನು ನಿಮ್ಮ ಮನೆಗಳಲ್ಲೇ ನಿಮಗೆ ಅನುಸರಿಸಬಹುದಾಗಿದೆ. ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಸಲಹೆಗಳನ್ನು ತಿಳಿಸಿಕೊಡಲು ನಾವು ಸಿದ್ಧ.....

ಅಡುಗೆ ಸೋಡಾ

ಅಡುಗೆ ಸೋಡಾ

ನಾಲ್ಕು ದೊಡ್ಡಚಮಚ ಅಡುಗೆ ಸೋಡಾಪುಡಿಯನ್ನು ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿರುವ ಉಗುರುಬೆಚ್ಚನೆಯ ನೀರಿಗೆ ಹಾಕಿ ಕಲಕಿ. ಈ ನೀರಿನಲ್ಲಿ ಪಾದಗಳನ್ನು ಮುಳುಗಿಸಿ. ಈ ನೀರಿಗೆ ಕೆಲವು ಹನಿ ಶಾಂಪೂ ಸೇರಿಸಿ ಪಾದಗಳನ್ನು ಒಂದಕ್ಕೊಂದು ಉಜ್ಜಿಕೊಳ್ಳುತ್ತಾ ನೊರೆ ಬರಿಸಿ. ಸುಮಾರು ಹದಿನೈದು ನಿಮಿಷದ ಬಳಿಕ ಹೊರತೆಗೆದು ತಣ್ಣೀರಿನಿಂದ ತೊಳೆದುಕೊಳ್ಳಿ.

ಲಿಂಬೆ ಹಣ್ಣು

ಲಿಂಬೆ ಹಣ್ಣು

ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ.ಲಿಂಬೆ ಹಣ್ಣೊಂದನ್ನು ಅಡ್ಡಲಾಗಿ ಕತ್ತರಿಸಿ ಅದರ ಮೇಲೆ ಕೊಂಚ ಉಪ್ಪನ್ನು ಸವರಿ. ಈ ಲಿಂಬೆಹಣ್ಣಿನಿಂದ ಪಾದಗಳ ಕೆಳಭಾಗವನ್ನು ಹಿಂಡುತ್ತಾ ಸವರಿ. ಬಲಪಾದಕ್ಕೆ ಅರ್ಧ ಲಿಂಬೆ, ಎಡಗಾಲಿಗೆ ಅರ್ಧ ಲಿಂಬೆ ಉಪಯೋಗಿಸಿ. ತದನಂತರ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಅನುಕ್ರಮವಾಗಿ ಎಡ ಮತ್ತು ಬಲ ಪಾದಗಳನ್ನು ಲಿಂಬೆಯಿಂದ ಉಜ್ಜುತ್ತಾ ಬನ್ನಿ.ಬಳಿಕ ಕೊಂಚ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕಾಲಿಡಿ. ಸುಮಾರು ಐದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಒರಟಾಗಿದ್ದ ಮತ್ತು ಚರ್ಮದ ಸತ್ತ ಜೀವಕೋಶಗಳು ಸಡಿಲಗೊಂಡು ಕಾಲನ್ನು ಉಜ್ಜಿಕೊಂಡಾಗ ನಿವಾರಣೆಯಾಗುತ್ತದೆ. ಉಜ್ಜಿಕೊಳ್ಳಲು ಒರಟು ಕಲ್ಲು ಅಥವಾ ಇದಕ್ಕಾಗಿಯೇ ಇರುವ ಉಪಕರಣವನ್ನು ಉಪಯೋಗಿಸಬಹುದು.

ಎಕ್ಸ್‎ಫೋಲಿಯೇಟ್ ಮತ್ತು ಮಾಯಿಶ್ಚರೈಸರ್

ಎಕ್ಸ್‎ಫೋಲಿಯೇಟ್ ಮತ್ತು ಮಾಯಿಶ್ಚರೈಸರ್

ನಿಮ್ಮ ಮುಖ ಮತ್ತು ಕೈಗಳ ಆರೈಕೆ ಮಾಡಿದಂತೆಯೇ ಕಾಲುಗಳಿಗೂ ಮಾಡಿ. ತ್ವಚೆಯನ್ನು ನಿತ್ಯವೂ ಎಕ್ಸ್‎ಫೋಲಿಯೇಟ್ ಮಾಡಿ ಇದರಿಂದ ಕೊಳೆ ಸೇರಿಕೊಳ್ಳುವುದಿಲ್ಲ. ಅವುಗಳನ್ನು ನಿತ್ಯವೂ ಮಾಯಿಶ್ಚರೈಸ್ ಮಾಡಿ ಇದರಿಂದ ತ್ವಚೆ ಮೃದುವಾಗಿ ಕಾಂತಿಯುಕ್ತವಾಗಿರುತ್ತದೆ.

ಪಾದಗಳನ್ನು ನಿತ್ಯವೂ ತೊಳೆದುಕೊಳ್ಳುವುದು

ಪಾದಗಳನ್ನು ನಿತ್ಯವೂ ತೊಳೆದುಕೊಳ್ಳುವುದು

ಪಾದಗಳ ಆರೋಗ್ಯ ಹೆಚ್ಚು ಪ್ರಮುಖವಾದುದು. ಉಗುರು ಬೆಚ್ಚಗಿನ ನೀರು ಮತ್ತು ಮೃದು ಶಾಂಪೂ ಬಳಸಿ ದಿನಕ್ಕೆರಡು ಬಾರಿ ಕಾಲುಗಳನ್ನು ತೊಳೆದುಕೊಳ್ಳಿ. ಇದು ತ್ವಚೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದರೊಂದಿಗೆ ಪಾದಗಳನ್ನು ಸುಂದರವಾಗಿರಿಸುತ್ತದೆ. ಪಾದಗಳ ದುರ್ಗಂಧವನ್ನು ಹೋಗಲಾಡಿಸುತ್ತದೆ.

ಹೀಲ್ಸ್‎ಗಳಿಂದ ಬ್ರೇಕ್ ನೀಡಿ

ಹೀಲ್ಸ್‎ಗಳಿಂದ ಬ್ರೇಕ್ ನೀಡಿ

ಹೈ ಹೀಲ್ಸ್ ನೋಟದಲ್ಲಿ ಸುಂದರತೆಯನ್ನು ನೀಡುವಂತಿದ್ದರೂ, ಅವುಗಳನ್ನು ನಿತ್ಯವೂ ಧರಿಸುವುದು ಕಾಲುಗಳಿಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು. ಇದರಿಂದ ಬೆನ್ನು ನೋವು ನಿಮ್ಮನ್ನು ಕಾಡಬಹುದು.

ತೆಂಗಿನೆಣ್ಣೆಯ ಮಸಾಜ್

ತೆಂಗಿನೆಣ್ಣೆಯ ಮಸಾಜ್

ನಿಮ್ಮ ಪಾದಗಳನ್ನು ಹೈಡ್ರೇಟ್ ಮಾಡಲು ತೆಂಗಿನೆಣ್ಣೆಯನ್ನು ಬಳಸಿ. ಪ್ರತೀ ದಿನ ತೆಂಗಿನೆಣ್ಣೆಯನ್ನು ಬಳಸಿ ಪಾದಗಳನ್ನು ಮಸಾಜ್ ಮಾಡಿ. ಇದು ಪಾದಗಳನ್ನು ಮೃದುವಾಗಿರಿಸುವುದಲ್ಲದೆ ಹೈಡ್ರೇಟ್ ವನ್ನಾಗಿ ಮಾಡುತ್ತದೆ. ಮಲಗುವ ಮುಂಚೆ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಬೆಳಗ್ಗೆ ಸ್ನಾನದ ಸಮಯದಲ್ಲಿ ಪಾದಗಳನ್ನು ತೊಳೆದುಕೊಳ್ಳಿ.

ಬಾಳೆಹಣ್ಣಿನ ಪ್ಯಾಕ್

ಬಾಳೆಹಣ್ಣಿನ ಪ್ಯಾಕ್

ದೇಹದ ಚರ್ಮವನ್ನು ಹೈಡ್ರೇಟ್ ಮಾಡಲು ಬಾಳೆಹಣ್ಣು ಸಹಕಾರಿ. ಪಾದಗಳಿಗೆ ಅವುಗಳನ್ನು ಬಳಸುವುದು ಸೂಕ್ತವಾದುದು. ಬಾಳೆಹಣ್ಣನ್ನು ಚೆನ್ನಾಗಿ ಹಿಸುಕಿ ಪಾದಗಳಿಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ. ಒಣ ಚರ್ಮಕ್ಕೆ ಇದು ಹೆಚ್ಚು ಪರಿಣಾಮಕಾರಿಯಾದುದು.

English summary

Ways To Treat Your Feet Right

Therefore, in this article, we at Boldsky will be listing out some of ways to beautify your feet. Exfoliating and moisturising the feet hold a greater prominence in foot care. Likewise, there are a few essential steps one has to take in order to get beautiful feet. Read on to know more about it.
Story first published: Thursday, March 3, 2016, 10:07 [IST]
X
Desktop Bottom Promotion