For Quick Alerts
ALLOW NOTIFICATIONS  
For Daily Alerts

ಮನೆಯ ಸಾಧನ ಬಳಸಿ, ಉಗುರಿನಲ್ಲಿ ಚಿತ್ತಾರದ ಚುಕ್ಕಿ ಬಿಡಿಸಿ

By Su.Ra
|

ಈಗಿನ ಯುವತಿಯರಿಗೆ ಉಗುರಿನಲ್ಲಿ ಒಂದೇ ಬಣ್ಣದ ನೈಲ್ ಪಾಲಿಶ್ ಇರೋದಕ್ಕಿಂತ ಅದ್ರಲ್ಲಿ ಚಿತ್ತಾರ ಇದ್ರೇನೆ ಹೆಚ್ಚು ಇಷ್ಟ ಆಗುತ್ತೆ. ವೆರೈಟಿ ವೆರೈಟಿಯಾಗಿ ಚಿತ್ತಾರ ಬಿಡಿಸಿಕೊಳ್ಳೋದು ಕಲೆಯಾಗಿ ಮಾತ್ರವಲ್ಲ ಟ್ರೆಂಡ್, ಫ್ಯಾಷನ್ ಆಗಿ ಕೂಡ ಮಾರ್ಪಟ್ಟಿದೆ. ಹಾಗಾಗಿ ಹೆಚ್ಚಿನವ್ರು ನೈಲ್ ಆರ್ಟ್ ಅಂದ್ರೆ ಆಸೆ ಪಡ್ತಾರೆ. ಅಂತವರಲ್ಲಿ ನೀವೂ ಕೂಡ ಒಬ್ಬರಾಗಿದ್ದೀರಾ..ನೀವೂ ನೈಲ್‌ ಆರ್ಟ್‌ ಪ್ರಿಯರಾ?

ಯಾವಾಗ್ಲೂ ನೈಲ್‌ ಆರ್ಟ್‌ಗೋಸ್ಕರ ಪಾರ್ಲರ್ ಮೊರೆ ಹೋಗೋದು, ದುಡ್ಡು ಸುರಿಯೋದು ಮಾಡುತ್ತಾ ಇರುತ್ತೀರಾ .ಯಾವಾಗಲೂ ಹಾಗೆ ಮಾಡೋದು ಬೇಸರ ಅಲ್ವಾ? ಹಾಗಾಗಿ ಮನೆಯಲ್ಲೇ ಕೆಲವು ಸಾಧನಗಳನ್ನು ಬಳಸಿ, ನೈಲ್‌ ಆರ್ಟ್‌ನಲ್ಲಿ ಡಾಟ್‌ಗಳನ್ನು ಅಥವಾ ಚುಕ್ಕಿಗಳನ್ನು ಮಾಡಿಕೊಳ್ಳಬಹುದು..ಪ್ರಮುಖವಾಗಿ ನೈಲ್‌ ಆರ್ಟ್‌ನಲ್ಲಿ ಚುಕ್ಕಿಗಳಿಗೆ ವಿಶೇಷ ಮಹತ್ವ.. ಅಂತಹ ಚುಕ್ಕಿಗಳನ್ನು ಬಿಡಿಸಲು ನಿಮ್ಮ ಮನೆಯಲ್ಲಿರುವ ಕೆಲವು ಮೆಟಿರಿಯಲ್ ಗಳೇ ಸಾಕು.. ಯಾವುದು ಅವು ಅನ್ನೋ ಡೀಟೈಲ್ಸ್ ಇಲ್ಲಿದೆ ಮುಂದೆ ಓದಿ.

Super-easy nail art ideas, which should surprise you..

ಹೇರ್‌ ಪಿನ್‌ಗಳು
ನಾವು ಹೇಳ್ತಾ ಇರೋದು ಸಿಂಪಲ್‌ ಬ್ಲಾಕ್‌ ಕಲರಿನ ಹೇರ್‌ಪಿನ್‌ಗಳ ಬಗ್ಗೆ. ಅವುಗಳ ಕಾರ್ನರ್‌ನ್ನು ಬಳಸಿ ಅಟ್ರಾಕ್ಟೀವ್ ಆಗಿರುವ ನೈಲ್‌ ಆರ್ಟ್‌ಗಳನ್ನು ಮಾಡಿಕೊಳ್ಳಬಹುದು.. ನೈಲ್‌ ಆರ್ಟ್‌ನಲ್ಲಿ ಚುಕ್ಕಿಗಳನ್ನು ಬಿಡಿಸಲು ಇವು ಬೆಸ್ಟ್‌ ಟೂಲ್‌ಗಳಾಗಿವೆ.. ಅದ್ರಲ್ಲೂ ಸ್ವಲ್ಪ ದೊಡ್ಡದೊಡ್ಡ ಚುಕ್ಕಿಗಳನ್ನು ಬಿಡಿಸಿಕೊಳ್ಳಲು ಇವು ನೆರವಾಗುತ್ತೆ.

ಪೇಯಿಂಟ್‌ ಬ್ರಷ್‌ಗಳು
ಪೇಯಿಂಟ್‌ ಬ್ರಷ್‌ಗಳಿಂದ ಉಗುರಿನಲ್ಲಿ ದೊಡ್ಡದೊಡ್ಡ ಚುಕ್ಕಿಗಳನ್ನು ಬಿಡಿಸಲು ಸಹಾಯವಾಗುತ್ತೆ.ಅಷ್ಟೇ ಅಲ್ಲ ಮೇಕಪ್‌ ಬ್ರಷ್‌ಗಳನ್ನು ಕೂಡ ನೀವು ನೈಲ್‌ ಆರ್ಟ್ ಮಾಡಿಕೊಳ್ಳೋದಕ್ಕೆ ಬಳಕೆ ಮಾಡ್ಬಹುದು..

ಬಾಲ್‌ ಪೆನ್‌ಗಳು
ಬಾಲ್‌ ಪೆನ್‌ಗಳ ಟಿಪ್‌ನಿಂದ ನೀವು ಉಗುರಿನಲ್ಲಿ ಚುಕ್ಕಿಗಳನ್ನು ಬಿಡಿಸಿಕೊಳ್ಳಬಹುದು. ಕ್ಲೀನ್ ಆಗಿರುವ,ಮತ್ತು ಬೆಸ್ಟ್‌ ಆಗಿರುವ ಡಾಟ್‌ಗಳನ್ನು ಬಿಡಿಸಿಕೊಳ್ಳಲು ಬಾಲ್‌ ಪೆನ್‌ಗಳು ನೆರವಾಗಲಿದೆ...

ಬೆಂಕಿ ಕಡ್ಡಿಗಳು
ಬೆಂಕಿ ಕಡ್ಡಿಗಳಿಂದಲೂ ನೈಲ್‌ ಆರ್ಟ್ ಮಾಡ್ಕೊಬಹುದು ಅನ್ನೋದು ಎಲ್ಲಾ ಮಹಿಳೆಯರಿಗೂ ಹೊಳೆದಿರಲಿಕ್ಕಿಲ್ಲ. ನೀವು ನೈಲ್ ಆರ್ಟ್ ಪ್ರಿಯರಾಗಿದ್ರೆ ಜಸ್ಟ್ ಬೆಂಕಿಕಡ್ಡಿಗಳನ್ನು ನೈಲ್‌ ಪಾಲಿಶ್‌ನಲ್ಲಿ ಅದ್ದಿ ಅದ್ರಿಂದ ಉಗುರಿನಲ್ಲಿ ಚಿತ್ತಾರವನ್ನು ಬಿಡಿಸಿಕೊಳ್ಳಬಹುದು. ಒಂದು ಭಾಗದಿಂದ ಸರ್ಕಲ್‌ ಶೇಪಿನ ಚುಕ್ಕಿಗಳನ್ನು ಬಿಡಿಸಿಕೊಂಡ್ರೆ ಇನ್ನೊಂದು ಭಾಗದಿಂದ ಚೌಕಾಕಾರದ ಚುಕ್ಕಿಗಳನ್ನು ಬಿಡಿಸಿಕೊಳ್ಳಲು ಬೆಂಕಿ ಕಡ್ಡಿಗಳು ಸಹಾಯ ಮಾಡಲಿವೆ

ಟೂತ್‌ಪಿಕ್‌ಗಳು

ಹಲ್ಲಲ್ಲಿ ಆಹಾರ ಸಿಕ್ಕಿಹಾಕಿಕೊಂಡಾಗ ಮಾತ್ರ ಬಾಯಿಗೆ ಹಾಕೋಕೆ ಈ ಟೂತ್‌ಪಿಕ್‌ಗಳ ಬಳಕೆಯಾಗುತ್ತೆ ಅಂದುಕೊಳ್ಳಬೇಡಿ. ಬದಲಾಗಿ ನಿಮ್ಮ ಫ್ಯಾಷನ್‌ಗೂ ಕೂಡ ನೆರವಾಗಲಿದೆ.. ಟೂತ್‌ ಪಿಕ್‌ಗಳಿಂದ ಉಗುರಿನಲ್ಲಿ ಚುಕ್ಕಿಗಳನ್ನು ಬಿಡಿಸಿಕೊಳ್ಳಬಹುದು.. ಪ್ಲೋರಲ್‌ ಡಾಟ್, ಸಮನಾಂತರ ರೇಖೆಗಳ ಡಿಸೈನಿಗೂ ಕೂಡ ನೀವು ಈ ಟೂತ್‌ಪಿಕ್‌ಗಳನ್ನು ಬಳಕೆ ಮಾಡ್ಬಹುದಾಗಿದೆ.

ಸೇಫ್ಟಿ ಪಿನ್‌ಗಳು
ಸೇಫ್ಟಿ ಪಿನ್‌ಗಳೂ ಕೂಡ ಫೆಂಟಾಸ್ಟಿಕ್‌ ಆಗಿರುವ ನೈಟ್‌ ಆರ್ಟ್‌ ಟೂಲ್‌ಗಳಲ್ಲಿ ಒಂದು,.. ಬಟ್‌ ನೀವು ಸೇಫ್ಟಿ ಪಿನ್‌ಗಳಿಂದ ಡಿಸೈನ್ ಮಾಡಿಕೊಳ್ಳುವಾಗ ಚುಚ್ಚಿಕೊಳ್ಳದಂತೆ ಜಾಗೃತಿ ವಹಿಸ್ಬೇಕು. ಆಲ್ಟ್ರಾ ಸ್ಮಾಲ್‌ ಡಾಟ್‌ಗಳನ್ನು ಹಾಕಿಕೊಳ್ಳೋಕೆ ಅಂದ್ರೆ ಅತೀ ಚಿಕ್ಕ ಚಿಕ್ಕ ಚುಕ್ಕಿಗಳನ್ನು ಬಿಡಿಸಿಕೊಳ್ಳಲು ಈ ಸೇಫ್ಟಿ ಪಿನ್‌ಗಳು ನೆರವಾಗಲಿವೆ..

ಪೆನ್ಸಿಲ್‌ಗಳು
ಶಾರ್ಪ್‌ ಆಗಿ ಕೆತ್ತಿರುವ ಪೆನ್ಸಿಲ್‌ ಮೊನೆಗಳಿಂದಲೂ ಕೂಡ ನೈಲ್‌ ಆರ್ಟ್‌ ಡಿಸೈನ್ ಮಾಡಿಕೊಳ್ಳಬಹುದು. ಸ್ಮಾಲ್‌ ಟಿಪ್‌ಗಳು ಚಿಕ್ಕ ಚಿಕ್ಕ ಡಾಟ್‌ಗಳನ್ನು ಬಿಡಿಸಿಕೊಳ್ಳಲು ನೆರವಾದ್ರೆ, ರೌಂಡ್‌ ಆಗಿರುವ ಟಿಪ್‌ಗಳು ಮೀಡಿಯಮ್‌ ಸೈಜಿನ ಚುಕ್ಕಿಗಳ ಚಿತ್ತಾರ ಬಿಡಿಸಿಕೊಳ್ಳಲು ಸಹಾಯ ಮಾಡಲಿದೆ.

ಎಲ್ಲಾ ರೀತಿಯ ಪಿನ್‌ಗಳು
ಪೇಪರ್‌ ಚುಚ್ಚಲು ಬಳಸುವ ಪಿನ್‌ಗಳು, ಇತ್ಯಾದಿ ಯಾವುದೇ ರೀತಿಯ ಪಿನ್‌ಗಳೂ ಕಡ ನೈಲ್ ಆರ್ಟ್ ಮಾಡಿಕೊಳ್ಳಲು ಹೇಳಿ ಮಾಡಿಸಿದ ಟೂಲ್‌ಗಳಾಗಿವೆ. ಕೆಲವು ಪಿನ್‌ಗಳ ಹಿಂಭಾಗವೂ ಕೂಡ ಡಿಫರೆಂಟ್ ಡಿಫರೆಂಟ್‌ ಆಗಿ ನೈಲ್ ಆರ್ಟ್ ಮಾಡಿಕೊಳ್ಳೋದಕ್ಕೆ ನೆರವಾಗಲಿದೆ.

ಫ್ಯಾನ್ಸಿ ಕಿವಿಯೋಲೆಗಳು

ಕಿವಿಯೋಲೆಯ ಹಿಂಭಾಗದಿಂದ ಕೂಡ ನೈಲ್ ಆರ್ಟ್ ಮಾಡಿಕೊಳ್ಳಬಹುದು. ಕೆಲವು ಇಯರಿಂಗ್‌ಗಳು ಜೋತುಬೀಳುವ ಡಿಸೈನ್‌ನಲ್ಲಿರುತ್ತೆ. ನಿಮ್ಗೆ ಕಿವಿಯೋಲೆಗಳಿಂದ ನೈಲ್‌ ಆರ್ಟ್‌ ಹೇಗೆ ಅಂತ ನಗು ಬರ್ಬಹುದು. ಆದ್ರೆ ಟ್ರೈ ಮಾಡಿ ನೋಡಿ. ಅಂದದ ಚೆಂದದ ಚುಕ್ಕಿಗಳ ಡಿಸೈನ್‌ಗಾಗಿ ಕಿವಿಯೋಲೆಗಳನ್ನೂ ಕೂಡ ಬಳಕೆ ಮಾಡ್ಬಹುದು..

ಸೂಜಿಗಳು
ಮನೆಯಲ್ಲಿ ಸಣ್ಣಪುಟ್ಟದನ್ನು ಹೊಲಿಯೋಕೆ ಅಂತ ಇರುವ ಸೂಜಿ ಕೂಡ ನೈಲ್ ಆರ್ಟ್ ಮಾಡಿಕೊಳ್ಳೋದಕ್ಕೆ ನೆರವಾಗಲಿದೆ. ಸೂಜಿಯ ಎರಡೂ ಭಾಗಗಳನ್ನು ಬಳಕೆ ಮಾಡ್ಬಹುದು. ಆದ್ರೆ ನೀವು ಸೂಜಿಯ ಚೂಪಾದ ಭಾಗದಿಂದ ಗಾಯ ಮಾಡಿಕೊಳ್ಳದೇ ನೈಲ್ ಆರ್ಟ್ ಮಾಡಿಕೊಳ್ಳುವಲ್ಲಿ ಗಮನವಿರಬೇಕಾಗುತ್ತೆ. ಖಂಡಿತವಾಗ್ಲೂ ಇವುಗಳಲ್ಲಿ ಒಂದಲ್ಲ ಒಂದು ಟೂಲ್‌ ನಿಮ್ಮ ಮನೆಯಲ್ಲಿ ಲಭ್ಯವಿದ್ದೇ ಇರುತ್ತೆ. ನೀವು ನೈಲ್ ಆರ್ಟ್ಮಾ ಡಿಕೊಳ್ಳುವ ಕ್ರೇಝ್ ಹೊಂದಿದ್ರೆ ಇವುಗಳನ್ನು ಬಳಸಿ ಡಿಫರೆಂಟ್ ಡಿಫರೆಂಟ್ ಆಗಿ ನೈಲ್‌ ಆರ್ಟ್‌ ಡಿಸೈನ್ ಮಾಡಿಕೊಳ್ಳೋದಕ್ಕೆ ಟ್ರೈ ಮಾಡ್ಬಹುದು..

English summary

Super-easy nail art ideas, which should surprise you..

After clothes, shoes and hair, nail art is the next big thing. The concept is gaining popularity and the girls are enjoying every bit of attention their nails get them. Nail art is done with creative designs using different art forms. We try sharing tips and remedies for several beauty aspects. Our readers sent several requests on covering ‘easy nail art designs at Home’. Here is a Simple Chevron Tip Nail Art that needs no professional experience or tools.
Story first published: Wednesday, January 27, 2016, 12:06 [IST]
X
Desktop Bottom Promotion