For Quick Alerts
ALLOW NOTIFICATIONS  
For Daily Alerts

ತ್ವಚೆಯ ಕೋಮಲತೆಗೆ ಆಲಿವ್ ಎಣ್ಣೆ-ಉಪ್ಪಿನ ಸ್ಕ್ರಬ್

By Super Admin
|

ಈಗೀಗ ಪ್ರತಿಯೊಂದು ಕಡೆಯಲ್ಲೂ ಆಲಿವ್ ತೈಲದ ಬಗ್ಗೆ ಮಾತುಕತೆಗಳು ನಡೆಯುತ್ತಾ ಇರುತ್ತದೆ. ಅದರಿಂದ ಆಗುವ ಆರೋಗ್ಯ ಲಾಭಗಳು ಮತ್ತು ಇತರ ಲಾಭಗಳ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಾ ಇದೆ. ಆದರೆ ಹಿಂದಿನ ಕಾಲದಿಂದಲೂ ಆಲಿವ್ ಎಣ್ಣೆಯನ್ನು ವಿವಿಧ ರೀತಿಯ ಸೌಂದರ್ಯವರ್ಧಕಗಳಲ್ಲಿ ಬಳಸುತ್ತಿದ್ದರು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಭಾರತ ಸಹಿತ ಇತರ ದೇಶಗಳಲ್ಲಿ ಆಲಿವ್ ತೈಲವನ್ನು ಸೌಂದರ್ಯವರ್ಧಕಗಳಲ್ಲಿ ಹಿಂದಿನಿಂದಲೂ ಬಳಸುತ್ತಾ ಇದ್ದಾರೆ.

Olive oil and salt body scrub for silky smooth skin

ಆದರೆ ಅದು ಎಲೆಮರೆಯಕಾಯಿಯಂತೆ ಇತ್ತು. ಆಲಿವ್ ಎಣ್ಣೆಯಿಂದ ಆಗುವ ಆರೋಗ್ಯ ಹಾಗೂ ಸೌಂದರ್ಯ ಲಾಭಗಳು ಈಗೀಗ ಹೆಚ್ಚಿನವರಿಗೆ ತಿಳಿಯುತ್ತಾ ಇದೆ. ಆಲಿವ್ ತೈಲದಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್, ಖನಿಜಾಂಶ ಮತ್ತು ನೈಸರ್ಗಿಕ ಕೊಬ್ಬಿನ ಆಮ್ಲವು ಚರ್ಮಕ್ಕೆ ತುಂಬಾ ಒಳ್ಳೆಯದು. ಚರ್ಮಕ್ಕೆ ಆಲಿವ್ ತೈಲದ ಲಾಭ ಪಡೆಯಬೇಕೆಂದರೆ ಮತ್ತು ಚರ್ಮವು ಕಾಂತಿಯುತವಾಗಿ ಕಾಣಬೇಕೆಂದರೆ ಆಲಿವ್ ತೈಲ ಮತ್ತು ಉಪ್ಪಿನ ಸ್ಕ್ರಬ್ ನ್ನು ಬಳಸಿಕೊಳ್ಳಿ. ಇದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯಿರಿ. ಸೌಂದರ್ಯ ದ್ವಿಗುಣಗೊಳಿಸುವಲ್ಲಿ ಆಲಿವ್ ಎಣ್ಣೆಯ ಪಾತ್ರ

• ಅರ್ಧ ಕಪ್ ಆಲಿವ್ ಎಣ್ಣೆ ಮತ್ತು ¼ ಕಪ್ ಉಪ್ಪನ್ನು ಬೆರೆಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
*ಇನ್ನು ಲಿಂಬೆ ಹಣ್ಣಿನಲ್ಲಿರುವ ತೆಗೆದುಹಾಕುವ ಗುಣದಿಂದಾಗಿ ಒಂದು ಚಮಚ ಲಿಂಬೆರಸವನ್ನು ಅದಕ್ಕೆ ಸೇರಿಸಿಕೊಳ್ಳಿ.
• ವೃತ್ತಾಕಾರದಲ್ಲಿ ಈ ಪೇಸ್ಟ್ ಅನ್ನು ಚರ್ಮಕ್ಕೆ ಉಜ್ಜಿಕೊಳ್ಳಿ.


•ಐದು ನಿಮಿಷ ಪೇಸ್ಟ್ ಅನ್ನು ಹಾಗೆ ಬಿಟ್ಟು ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.
* ಇನ್ನು ಇದೇ ಪೇಸ್ಟ್ ಅನ್ನು ಒಡೆದಿರುವ ಪಾದಗಳಿಗೆ ಬಳಸಬಹುದು. ಒಡೆದಿರುವ ಪಾದಗಳನ್ನು ಕಲ್ಲಿಗೆ ಉಜ್ಜಿಕೊಂಡ ಬಳಿಕ ಈ ಪೇಸ್ಟ್ ಅನ್ನು ಹಾಕಿ ಪಾದವನ್ನು ಸ್ಕ್ರಬ್ ಮಾಡಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ಪಾದವನ್ನು ತೊಳೆಯಿರಿ. ಬ್ಯೂಟಿ ಟಿಪ್ಸ್: ಲಿಂಬೆ ಹಣ್ಣಿನ ಬಾಡಿ ಸ್ಕ್ರಬ್‌, ನೀವೂ ಪ್ರಯತ್ನಿಸಿ

ಇದನ್ನು ಪಾಲಿಸಿರಿ
ಪ್ರತೀ ದಿನ ರಾತ್ರಿ ಮಲಗುವ ಮೊದಲು ಕಾಲಿಗೆ ಸಾಕ್ಸ್ ಹಾಕಿಕೊಳ್ಳಿ. ಇದರಿಂದ ತೇವಾಂಶ ಹಾಗೆ ಇರುತ್ತದೆ. ಆಲಿಕ್ ಆಮ್ಲದಿಂದ ಸಮೃದ್ಧವಾಗಿರುವ ಆಲಿವ್ ತೈಲವು ನೈಸರ್ಗಿಕ ಶಾಮಕ ಮತ್ತು ಒಳ್ಳೆಯ ತೇವಾಂಶವನ್ನು ನೀಡುತ್ತದೆ. ಚರ್ಮದ ಸತ್ತ ಕೋಶಗಳನ್ನು ಉಪ್ಪು ತೆಗೆದುಹಾಕುತ್ತದೆ. ಉಪ್ಪಿನಲ್ಲಿರುವಂತಹ ಖನಿಜಾಂಶಗಳು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಚರ್ಮವನ್ನು ಕಾಂತಿಯುವಾಗಿ ಮಾಡಲು ಮನೆಯಲ್ಲೇ ಮಾಡಿರುವ ಈ ಸ್ಕ್ರಬ್ ಅನ್ನು ಬಳಸಿಕೊಳ್ಳಿ.

ಚರ್ಮಕ್ಕೆ ಯಾವ ಎಣ್ಣೆ ಬಳಸುತ್ತೀದ್ದೀರಿ?
ಚರ್ಮಕ್ಕೆ ಯಾವ ಎಣ್ಣೆ ಬಳಸಬೇಕೆಂದು ನಿಮಗೆ ಚಿಂತೆಯಾಗಿರಬಹುದು. ಯಾಕೆಂದರೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ತೈಲಗಳು ಲಭ್ಯವಿದೆ. ನಿಮ್ಮ ಚರ್ಮಕ್ಕೆ ಯಾವ ತೈಲ ಹೊಂದಿಕೊಳ್ಳುತ್ತದೆ ಎಂದು ನೋಡುವುದು ಮುಖ್ಯ. ಎಕ್ಸ್ಟ್ರಾ ವರ್ಜಿನ್ ಆಲಿವ್ ತೈಲವನ್ನು ಬಳಸಿದರೆ ಅದರಿಂದ ಹಲವಾರು ರೀತಿಯ ಲಾಭಗಳಿವೆ.

English summary

Olive oil and salt body scrub for silky smooth skin

Of late, everyone has been harping on the many beauty benefits of olive oil, but the truth is that the oil has been used as a beauty ingredient since ancient times. And why not, olive oil is packed with antioxidants, minerals and natural fatty acids which are superb for skin. If you want to reap the benefits of olive oil and get a silky smooth skin, whip up this olive oil and salt body scrub recommended for you have a look...
X
Desktop Bottom Promotion