For Quick Alerts
ALLOW NOTIFICATIONS  
For Daily Alerts

ಒಮ್ಮೆ ದಾಳಿಂಬೆ ಸಿಪ್ಪೆಯ 'ಮೌತ್‌ವಾಶ್' ಬಳಸಿ ನೋಡಿ...

By Hemanth
|

ಬಾಯಿಯ ಸ್ವಚ್ಛತೆ ಮತ್ತು ಹಲ್ಲಿನ ಆರೈಕೆಗಾಗಿ ಹೆಚ್ಚಿನವರು ಈಗೀಗ ಮೌತ್ ವಾಶ್ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನಿಮಗೆ ಬೇಕಾದಂತೆ ವಿವಿಧ ರೀತಿಯ ಮೌತ್ ವಾಶ್‌‌ಗಳು ಲಭ್ಯವಿದೆ. ಆದರೆ ಅದರಲ್ಲಿ ರಾಸಾಯನಿಕಗಳು ಇದ್ದೇ ಇರುತ್ತದೆ. ಇಂತಹ ಮೌತ್ ವಾಶ್‌ಗಳು ಬಾಯಿಯಲ್ಲಿ ಕೀಟಾಣುಗಳನ್ನು ಹೊರಹಾಕಿದರೂ ಅದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುವುದು ಖಚಿತ. ಇದರಿಂದ ಗಿಡಮೂಲಿಕೆಗಳ ಮೌತ್ ವಾಶ್ ಅನ್ನು ಬಳಸಿಕೊಂಡರೆ ಅದರಿಂದ ತುಂಬಾ ಲಾಭವಿದೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮವೂ ಇಲ್ಲ.

Natural mouthwash with pomegranate peel..!

ಇದಕ್ಕಾಗಿಯೇ ಮನೆಯಲ್ಲಿ ಮಾಡುವಂತಹ ದಾಳಿಂಬೆ ಸಿಪ್ಪೆಯ ಮೌತ್ ವಾಶ್ ಬಗ್ಗೆ ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ದಾಳಿಂಬೆ ಹಣ್ಣಿನಲ್ಲಿ ಇರುವಂತೆ ದಾಳಿಂಬೆಯ ಸಿಪ್ಪೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಹಲ್ಲುಗಳು ಕೆಡುವುದು, ಬಾಯಿ ವಾಸನೆ ಮತ್ತು ಬಾಯಿಯ ಅಲ್ಸರ್‌ ನಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಬಾಯಿ ದುರ್ವಾಸನೆಗೆ ನೈಸರ್ಗಿಕ ಮೌತ್‎ವಾಶ್

ಸ್ಟ್ರೆಪ್ಟೋಕಾಕಸ್ ಮ್ಯುಟಾನ್ಸ್ ಎನ್ನುವ ಬ್ಯಾಕ್ಟೀರಿಯಾವು ಬಾಯಿಯೊಳಗೆ ಸೇರಿಕೊಂಡು ಹಲ್ಲುಗಳ ಸವೆತ, ಬಾಯಿ ವಾಸನೆ ಮತ್ತು ಬ್ಯಾಕ್ಟೀರಿಯಾ ಶೇಖರಣೆ ಮಾಡುತ್ತದೆ. ಆದರೆ ದಾಳಿಂಬೆ ಸಿಪ್ಪೆಯಲ್ಲಿರುವ ಕೆಲವೊಂದು ಅಂಶಗಳು ಬ್ಯಾಕ್ಟೀರಿಯಾದ ನಿವಾರಣೆ ಮಾಡಿ ಹಲ್ಲುಗಳ ರಕ್ಷಣೆ ಮತ್ತು ಬಾಯಿ ವಾಸನೆ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.

ದಾಳಿಂಬೆ ಸಿಪ್ಪೆಯಲ್ಲಿರುವ ಕ್ಯಾನ್ಸರ್ ನಿರೋಧಕ ಚಟುವಟಿಕೆಯು ಬಾಯಿಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇನ್ನು ತಡ ಮಾಡುವುದು ಯಾಕೆ? ತಕ್ಷಣ ದಾಳಿಂಬೆ ಸಿಪ್ಪೆಯ ಮೌತ್ ವಾಶ್ ಮಾಡಿಕೊಳ್ಳಿ. ತಯಾರಿಸುವುದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ. ದಾಳಿಂಬೆ ಸಿಪ್ಪೆ ಬಳಸಿ, ಸೌಂದರ್ಯ ವೃದ್ಧಿಸಿ

ಬಳಸುವುದು ಹೇಗೆ?

ಮನೆಯಲ್ಲಿಯೇ ದಾಳಿಂಬೆ ಸಿಪ್ಪೆಯ ಮೌತ್ ವಾಶ್ ಮಾಡಿಕೊಳ್ಳುವುದು ಹೇಗೆಂದು ಇಲ್ಲಿ ಹಂತಹಂತವಾಗಿ ತಿಳಿಸಿಕೊಡಲಾಗಿದೆ.
•ದಾಳಿಂಬೆ ಹಣ್ಣನ್ನು ನಾಲ್ಕು ತುಂಡುಗಳಾಗಿ ಮಾಡಿಕೊಂಡು ಸಿಪ್ಪೆಯನ್ನು ಬೇರ್ಪಡಿಸಿ. ಹಣ್ಣಿನ ಹಳದಿ ಭಾಗವನ್ನು
ತೆಗೆಯಿರಿ. ಇದು ತುಂಬಾ ಕಯಿಯಾಗಿರುತ್ತದೆ.
•ಕೆಲವು ದಿನಗಳ ಕಾಲ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ. ಸಿಪ್ಪೆಯಲ್ಲಿನ ತೇವಾಂಶವೆಲ್ಲವೂ ಹೋಗಬೇಕು.
•ಒಣಗಿದ ಸಿಪ್ಪೆಯನ್ನು ಮಿಕ್ಸಿಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಸಿಪ್ಪೆಯ ತುಂಡು ಉಳಿದುಕೊಳ್ಳಬಾರದು ಎನ್ನುವುದನ್ನು ದೃಢಪಡಿಸಿಕೊಳ್ಳಿ.
•ಒಂದು ಲೀಟರ್ ನೀರಿಗೆ 20 ಮಿ.ಗ್ರಾಂ. ದಾಳಿಂಬೆ ಸಿಪ್ಪೆಯ ಹುಡಿಯನ್ನು ಹಾಕಿಕೊಂಡು ನೀರನ್ನು ಬಿಸಿ ಮಾಡಿ. ಇದನ್ನು ಸೋಸಿಕೊಂಡು ತಂಪಾದ ಬಳಿಕ ಬಳಸಿ. ಇದನ್ನು ಪ್ರಿಡ್ಜ್‌ನಲ್ಲೂ ಇಟ್ಟು ಬಳಸಿಕೊಳ್ಳಬಹುದು. ಸ್ವರ್ಗಲೋಕದ ಹಣ್ಣು ದಾಳಿಂಬೆ ಸಿಪ್ಪೆಯ ಔಷಧೀಯ ಗುಣಗಳೇನು?
English summary

Natural mouthwash with pomegranate peel..!

Did you know herbal mouthwash is known to be a more efficient and safer option as compared to its chemical counterparts? If you have been using a chemical-based mouthwash to maintain dental hygiene, why not replace it with pomegranate peel mouthwash. Just like the fruit, pomegranate peel is loaded with antioxidants and antibacterial compounds, which helps in improving your oral hygiene by preventing dental caries, gingivitis, bad breath and mouth ulcers.
X
Desktop Bottom Promotion