ಹಲ್ಲುಗಳ ಹೊಳಪಿಗೆ ಸರಳ ಟ್ರಿಕ್ಸ್- ಅದೇ ಆಯುರ್ವೇದ ಚಿಕಿತ್ಸೆ!

By: Arshad
Subscribe to Boldsky

ಕೂದಲು ಕಪ್ಪಗಿರಬೇಕೆಂದೂ, ಹಲ್ಲುಗಳು ಬೆಳ್ಳಗಿರಬೇಕೆಂದೂ ಎಲ್ಲರೂ ಬಯಸುತ್ತಾರೆ. ವಾಸ್ತವವಾಗಿ ಅಪ್ಪಟ ಬಿಳಿ ಹಲ್ಲುಗಳಿರುವುದು ಕೆಲವು ಜನರಿಗೆ ಮಾತ್ರ. ಉಳಿದವರ ಹಲ್ಲು ಸ್ವಾಭಾವಿಕವಾಗಿ ಕೊಂಚ ಹಳದಿ ಅಥವಾ ಹಾಲಿನ ಕೆನೆಯ ಬಣ್ಣಕ್ಕಿರುತ್ತದೆ.

ಉಳಿದಂತೆ ಧೂಮಪಾನ, ಅತಿ ಹೆಚ್ಚಿನ ಕಾಫಿ ಅಥವಾ ಟೀ ಸೇವನೆ, ತಂಬಾಕು ಗುಟ್ಕಾ ಜಗಿಯುವುದು, ಅಡಿಕೆ ಮೆಲ್ಲುವುದು ಮೊದಲಾದ ಅಭ್ಯಾಸಗಳಿಂದ ಹಲ್ಲುಗಳ ಬಣ್ಣ ಅತೀವ ಹಳದಿ ಬಣ್ಣಕ್ಕೆ ಅಥವಾ ಕಪ್ಪು ಬಣ್ಣಕ್ಕೂ ತಿರುಗಬಹುದು. ಇದನ್ನು ಪುನಃ ಬಿಳಿಬಣ್ಣಕ್ಕೆ ತಿರುಗಿಸಲು ಸಾಧ್ಯ ಎಂದು ಹಲವಾರು ಜಾಹೀರಾರುಗಳು ಎದೆತಟ್ಟಿ ಹೇಳಿಕೊಳ್ಳುತ್ತವೆ.  ಹಳದಿ ಹಲ್ಲಿನ ಸಮಸ್ಯೆಗೆ, ಪವರ್ ಫುಲ್ ಮನೆಮದ್ದು

ಆದರೆ ಇದಕ್ಕಾಗಿ ಬಳಸುವ ಪ್ರಬಲ ರಾಸಾಯನಿಕಗಳು ಹಲ್ಲನ್ನು ಸವೆಸಿ ಒಸಡುಗಳನ್ನೂ ಸಡಿಲಿಸಿ ಹಲ್ಲು ಮತ್ತು ಒಸಡುಗಳನ್ನು ತೀರಾ ದುರ್ಬಲವಾಗಿಸಿಬಿಡುತ್ತವೆ. ಕ್ರಮೇಣ ಕೊಂಚ ಗಟ್ಟಿಯಾದ ಆಹಾರ ತಿನ್ನುವಾಗ ಹಲ್ಲೇ ಕಳಚಿ ಬರಬಹುದು. ಕ್ಷಣಮಾತ್ರದಲ್ಲಿ ಹಳದಿ ಹಲ್ಲುಗಳನ್ನು ಶುಭ್ರಶ್ವೇತ ವರ್ಣಕ್ಕೆ ತಿರುಗಿಸಿ!

ಇದರ ಬದಲಿಗೆ ನಿಸರ್ಗ ನೀಡಿರುವ ಸಾಮಾಗ್ರಿಗಳನ್ನು ಉಪಯೋಗಿಸಿ ಕೊಂಚ ನಿಧಾನವಾದರೂ ಸರಿ, ಯಾವುದೇ ಹಾನಿ ಅಥವಾ ಅಡ್ಡಪರಿಣಾಮವಿಲ್ಲದ ಆಯುರ್ವೇದ ಸೂಚಿಸುವ ವಿಧಾನಗಳನ್ನೇಕೆ ಅನುಸರಿಸಬಾರದು? ಬನ್ನಿ, ಹಲ್ಲುಗಳು ತಮ್ಮ ಸಹಜ ಬಣ್ಣವನ್ನು ಪುನಃ ಪಡೆದುಕೊಳ್ಳಲು ಆಯುರ್ವೇದದಲ್ಲಿ ಏನಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಆಲದ ಮರದ ಬೇರು

ಆಲದ ಮರದ ಬೇರು

ಆಲದ ಮರದ ಗೆಲ್ಲುಗಳಿಂದ ಜೋತಾಡುವ ಬೇರುಗಳ ಚಿಕ್ಕ ತುಂಡೊಂದರಿಂದ ಹಲ್ಲನ್ನು ಉಜ್ಜಿಕೊಳ್ಳಲು ಆಯುರ್ವೇದ ಸಲಹೆ ಮಾಡುತ್ತದೆ.

ಆಲದ ಮರದ ಬೇರು

ಆಲದ ಮರದ ಬೇರು

ಇದರಲ್ಲಿರುವ ರಸ ಕೊಂಚ ಖಾರವಾದ ರುಚಿ ಒಸಡುಗಳನ್ನು ಜುಮು ಜುಮು ಎನಿಸಿದರೂ ಒಸಡು ಮತ್ತು ಹಲ್ಲುಗಳ ಆರೋಗ್ಯಕ್ಕೆ ಮತ್ತು ಸ್ವಚ್ಛತೆ ಕಾಪಾಡಲು ಸಮರ್ಥವಾಗಿದೆ. ಕ್ರಮೇಣ ಹಲ್ಲಿನ ಬಣ್ಣ ಸಹಜವರ್ಣಕ್ಕೂ ತಿರುಗುತ್ತದೆ.

ತುಳಸಿ

ತುಳಸಿ

ತುಳಸಿಯ ಅಪಾರ ಔಷಧೀಯ ಗುಣಗಳಲ್ಲಿ ಹಲ್ಲುಗಳ ಸ್ವಚ್ಛತೆಯೂ ಒಂದು. ತುಳಸಿ ಎಲೆಗಳನ್ನು ಒಣಗಿಸಿ ಮಾಡಿದ ಪುಡಿಯನ್ನು ಹಲ್ಲುಜ್ಜಲು ಪೇಸ್ಟ್ ಬದಲಿಗೆ ಬಳಸಬಹುದು.

ತುಳಸಿ

ತುಳಸಿ

ಇದರಿಂದ ಬಾಯಿಯ ಒಳಭಾಗದಲ್ಲಿ ಸೋಂಕು ಆಗುವ ಸಾಧ್ಯತೆ ಕಡಿಮೆಯಾಗುವ ಜೊತೆಗೇ ಒಸಡುಗಳಲ್ಲಿ ಒಸರುವ ರಕ್ತವನ್ನು ನಿಲ್ಲಿಸಲೂ ಸಾಧ್ಯವಾಗುತ್ತದೆ. ಕ್ರಮೇಣ ಹಲ್ಲುಗಳು ಹೆಚ್ಚು ಹೊಳಪು ಮತ್ತು ತಮ್ಮ ಸಹಜವರ್ಣವನ್ನು ಪಡೆಯುತ್ತವೆ.

ಬೇವು

ಬೇವು

ಬೇವು ಸಹಾ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಮೂಲಿಕೆಯಾಗಿದೆ. ಇದರ ಗೆಲ್ಲಿನ ತುದಿಭಾಗದ ಕಡ್ಡಿಗಳನ್ನು ಬ್ರಶ್ ರೂಪದಲ್ಲಿ ಬಳಸುವ ಮೂಲಕ ಹಲ್ಲುಗಳು ಅತಿ ಸ್ವಚ್ಛವಾಗುವ ಜೊತೆಗೇ ಹಲವು ಸೋಂಕುಗಳಿಂದ ರಕ್ಷಣೆಯನ್ನೂ ಪಡೆಯಬಹುದು.

ಬೇವು

ಬೇವು

ಆದರೆ ಇದರ ಕಹಿಯಾದ ರುಚಿಯಿಂದಾಗಿ ಹೆಚ್ಚಿನವರು ಒಲವು ತೋರದೇ ಇದ್ದರೂ ಭಾರತದ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರಾದಾಯಿಕವಾಗಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುವ ಕ್ರಮವಿದೆ.ಇದರಲ್ಲಿರುವ ಬೇವಿನ ಎಣ್ಣೆಯಲ್ಲಿ ಪ್ರತಿಜೀವಕ ಗುಣವಿದ್ದು ಹಲ್ಲುಗಳಿಗೆ ತೂತು ಬೀಳುವ ಸಾಧ್ಯತೆಯನ್ನು

ಕಡಿಮೆಗೊಳಿಸುತ್ತದೆ.

ಬಬೂಲ್

ಬಬೂಲ್

ನೋಡಲಿಕ್ಕೆ ಹುಣಸೆ ಮರವನ್ನೇ ಹೋಲುವ ಬಬೂಲ್ ವೃಕ್ಷವೂ ಹಲ್ಲುಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಹೆಸರಿನ ಟೂಥ್ ಪೇಸ್ಟ್ ಹಾಗೂ ಪೌಡರುಗಳು ಮಾರುಕಟ್ಟೆಯಲ್ಲಿವೆ. ಹಲ್ಲುಗಳ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಲು ಈ ಮರದ ಅಂಶ ಅತ್ಯಂತ ಸಮರ್ಥವಾಗಿದೆ.

ಬಬೂಲ್

ಬಬೂಲ್

ಈ ಮರದ ಚಿಕ್ಕ ಗೆಲ್ಲುಗಳ ತುಂಡುಗಳ ತುದಿಯ ಸಿಪ್ಪೆ ಸುಲಿದು ಒಳಗಿನ ನಾರುಗಳನ್ನು ಬಿಡಿಯಾಗಿಸಿ ಟೂಥ್ ಬ್ರಶ್ ನಂತೆ ಬಳಸುವ ಮೂಲಕ ಹಲ್ಲುಗಳು ಶುಭ್ರವಾಗುವುದು ಮಾತ್ರವಲ್ಲ, ಬಣ್ಣವವನ್ನೂ ಸಹಜವರ್ಣಕ್ಕೆ ಬದಲಿಸುತ್ತದೆ. ಇದರಲ್ಲಿರುವ ಟ್ಯಾನಿನ್ ಎಂಬ ರಾಸಾನಯನಿಕ ಹಲ್ಲುಗಳನ್ನು ದೃಢಗೊಳಿಸಲು ಮತ್ತು ಬಿಳಿದಾಗಿಸಲು ನೆರವಾಗುತ್ತದೆ.

 
English summary

Natural Ayurveda Home Remedies for Shiny White Teeth

Who doesn't desire a nice set of pearly white teeth? But there are many times when teeth become pale and yellowish, which could be due to a host of factors like smoking, drinking too much coffee or tea, or even chewing tobacco. These are some tips and tricks! First up, let's tell you about the herbs that help in making teeth nice and white!
Story first published: Friday, August 26, 2016, 9:02 [IST]
Please Wait while comments are loading...
Subscribe Newsletter