For Quick Alerts
ALLOW NOTIFICATIONS  
For Daily Alerts

ಉಗುರುಗಳ ಬಣ್ಣ ಹಳದಿಯಾಗಿದೆಯೇ? ಇಲ್ಲಿದೆ ನೋಡಿ ಟಿಪ್ಸ್

By Manu
|

ಉಗುರುಗಳ ಆರೈಕೆ ಎಂದರೆ ಬಣ್ಣ ಹಚ್ಚುವುದು ಎಂದೇ ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ಉಗುರುಗಳು ಅರೆಪಾರದರ್ಶಕ ಬಿಳಿ ಬಣ್ಣಕ್ಕಿದ್ದಷ್ಟೂ ಆರೋಗ್ಯಕರ ಎಂದು ತಿಳಿಯಬಹುದು. ಒಂದು ವೇಳೆ ಇವು ಹಳದಿ, ಕಪ್ಪಗಾಗುವುದು ಅಥವಾ ಕಪ್ಪು ಅಥವಾ ಬಿಳಿಯ ಕಲೆಗಳು ಮೂಡುವುದು, ಹೊಗೆ ತುಂಬಿದಂತೆ ಕಾಣುವುದು ಮೊದಲಾದ ಸೂಚನೆಗಳ ಮೂಲಕ ಉಗುರುಗಳ ಅನಾರೋಗ್ಯವನ್ನು ಪ್ರಕಟಿಸುತ್ತವೆ.

ಕೆಲವೊಮ್ಮೆ ಉಗುರಿಗೆ ಹಚ್ಚುವ ಬಣ್ಣದಲ್ಲಿರುವ ರಾಸಾಯನಿಕ ಅಥವಾ ಇದನ್ನು ನಿವಾರಿಸಲು ಬಳಸುವ ದ್ರಾವಣದಲ್ಲಿರುವ ಅಸಿಟೋನ್ ಉಗುರಿನ ಬಣ್ಣವನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಉಗುರಿನ ಬಣ್ಣದಲ್ಲಿ ಏರುಪೇರು-ಇದು ಹಲವು ರೋಗಗಳ ಲಕ್ಷಣ!

Nails

ಕೆಲವೊಮ್ಮೆ ಶಿಲೀಂಧ್ರದ ಸೋಂಕು, ಉಗುರುಗಳನ್ನು ಕಚ್ಚುವ ಅಥವಾ ಸರಿಯಾಗಿ ಕೈ ತೊಳೆದುಕೊಳ್ಳದ ಕಾರಣ ಆಹಾರಕಣಗಳು ಕೊಳೆತು ಬ್ಯಾಕ್ಟೀರಿಯಾದ ಸೋಂಕು ಮೊದಲಾದವು ಉಗುರುಗಳ ಬಣ್ಣವನ್ನೂ ಆರೋಗ್ಯವನ್ನೂ ಕೆಡಿಸುತ್ತವೆ. ಈ ತೊಂದರೆಗಳಿಗೆ ಕೆಲವು ನೈಸರ್ಗಿಕ ಉಪಾಯಗಳಿವೆ. ಬನ್ನಿ, ಇವುಗಳಲ್ಲಿ ಪ್ರಮುಖವಾದುದನ್ನು ನೋಡೋಣ.... ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

ಲಿಂಬೆ ಮತ್ತು ಅಡುಗೆ ಸೋಡಾ
ಲಿಂಬೆ ಒಂದು ಉತ್ತಮ ಬಿಳಿಚುಕಾರಕವಾಗಿದೆ. ಇದರ ಬ್ಯಾಕ್ಟೀರಿಯಾ ನಿವಾರಕ ಮತ್ತು ನಂಜಿನಿವಾರಕ ಗುಣ ಒಂದು ವೇಳೆ ಸೋಂಕಿನಿಂದ ಹಳದಿ ಬಣ್ಣ ಬಂದಿದ್ದರೆ ಇದನ್ನು ನಿವಾರಿಸಲು ನೆರವಾಗುತ್ತದೆ. ಅಡುಗೆ ಸೋಡಾದಲ್ಲಿ ಸತ್ತ ಜೀವಕೋಶಗಳನ್ನು ಕರಗಿಸಿ ನಿವಾರಿಸುವ ಗುಣವಿದೆ.


ಉಗುರಿನ ಸಂದಿಯಲ್ಲಿ ಸತ್ತ ಜೀವಕೋಶಗಳು ಸಾಂದ್ರೀಕೃತಕೊಂಡು ಸೋಂಕಿಗೆ ಕಾರಣವಾಗಿದ್ದರೆ ಇದನ್ನು ನಿವಾರಿಸಲು ಸಮರ್ಥವಾಗಿದೆ. ಈ ಎರಡೂ ಸಾಮಾಗ್ರಿಗಳನ್ನು ಬೆರೆಸಿ ತೆಳುವಾಗಿ ಉಗುರುಗಳ ಮೇಲೆ ಮತ್ತು ಸಂಧುಗಳಲ್ಲಿ ಹಚ್ಚಿ.

ಇದರ ಬಳಕೆಯ ವಿಧಾನ ಹೀಗಿದೆ
* ಒಂದು ಪಾತ್ರೆಯಲ್ಲಿ ಲಿಂಬೆರಸವನ್ನು ಅರ್ಧದಷ್ಟು ಹಾಕಿ. ಇದಕ್ಕೆ ಕೊಂಚವೇ ಅಡುಗೆ ಸೋಡಾ ಹಾಕಿ. ಇದು ದಪ್ಪನೆಯ ಲೇಪನವಾಗುವಷ್ಟು ಬೆರೆಸಿ.
* ಈ ಲೇಪನವನ್ನು ಉಗುರುಗಳ ಮೇಲೆ ಮತ್ತು ಸಂಧುಗಳಲ್ಲಿ ಹಚ್ಚಿ.
* ಸುಮಾರು ಹತ್ತರಿಂದ ಹದಿನೈದು ನಿಮಿಷ ಹಾಗೇ ಒಣಗಲು ಬಿಡಿ
* ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
* ನಂತರ ನಿಮ್ಮ ನಿತ್ಯದ ತೇವಕಾರಕ (ಮಾಯಿಶ್ಚರೈಸರ್) ದ್ರಾವಣವನ್ನು ಕೈಗಳಿಗೆ ಮತ್ತು ಉಗುರುಗಳಿಗೆ ಹಚ್ಚಿ. ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಅನುಸರಿಸಿ. ನಿಮ್ಮ ಉಗುರುಗಳು ಸೂಕ್ತ ಬಣ್ಣ ಪಡೆಯುವವರೆಗೂ ಈ ವಿಧಾನ ಮುಂದುವರೆಸಿ.

ಹಲ್ಲುಜ್ಜುವ ಪೇಸ್ಟ್
*ನಮ್ಮ ನಿತ್ಯದ ಹಲ್ಲುಜ್ಜುವ ಪೇಸ್ಟ್ ನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕವಿದೆ. ಇದು ಹಲ್ಲುಗಳಿಗೆ ಬಿಳುಪು ನೀಡಲು ಬಳಕೆಯಾಗುತ್ತದೆ. ಈ ರಾಸಾಯನಿಕ ಉಗುರುಗಳ ಬಿಳುಪಿಗೂ ಬಳಸಬಹುದು. ಆದರೆ ಟೂಥ್ ಪೇಸ್ಟ್‌ನ ಪೆಟ್ಟಿಗೆಯ ಮೇಲೆ ಇದರ ಪ್ರಮಾಣವನ್ನು ತಿಳಿದುಕೊಳ್ಳಿ.
*ಒಂದು ವೇಳೆ ಇದರ ಪ್ರಮಾಣ 3%ಕ್ಕೂ ಹೆಚ್ಚಿದ್ದರೆ ಉಗುರುಗಳಿಗೆ ಇದು ಸೂಕ್ತವಲ್ಲ. ನಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಹಲ್ಲುಜ್ಜುವ ಪೇಸ್ಟ್!

ಬಳಕೆಯ ವಿಧಾನ
*ನಿಮ್ಮ ನೆಚ್ಚಿನ ಟೂಥ್ ಪೇಸ್ಟ್ ಅನ್ನು ತೆಳುವಾಗಿ ನಿಮ್ಮ ಉಗುರುಗಳಿಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ
*ಉಗುರಿನ ಬ್ರಶ್ ಅಥವಾ ಸೌಮ್ಯವಾದ ಟೂಥ್ ಬ್ರಶ್ ಬಳಸಿ ನಯವಾಗಿ ಉಜ್ಜಿ.


*ಬಳಿಕ ಉಗುರುಬೆಚ್ಚನೆಯ ನೀರು ತುಂಬಿರುವ ಪಾತ್ರೆಯೊಂದರಲ್ಲಿ ಬೆರಳುಗಳನ್ನು ಮುಳುಗಿಸಿ ಈ ಪೇಸ್ಟ್ಅನ್ನು ಒರೆಸುತ್ತಾ ನಿವಾರಿಸಿ. ಬಳಿಕ ಒಣ ಟವೆಲ್‌ನಿಂದ ಒರೆಸಿಕೊಳ್ಳಿ.
*ಈ ವಿಧಾನವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಅನುಸರಿಸಿ.
English summary

How To Whiten Nails in simple Steps

Though it is pretty easy to maintain nails well, at times, they could look unattractive when they turn yellow or appear stained. This could be caused due to pigments in bright or dark nail paints and acetone nail paint removers. However to cope with this nail problem better, here is are quick home remedies you could use:
X
Desktop Bottom Promotion