For Quick Alerts
ALLOW NOTIFICATIONS  
For Daily Alerts

ಕೊರೆಯುವ ಚಳಿಯಲ್ಲಿ, ಬಾಡದಿರಲಿ ತುಟಿಯ ಸೌಂದರ್ಯ!

ತುಟಿಗಳ ಸಮಸ್ಯೆ ಎಲ್ಲಾ ಕಾಲದಲ್ಲೂ ಸಾಮಾನ್ಯ. ತುಟಿ ಒಣಗುವುದು, ಒಡೆಯುವುದು, ತುಂಬಾ ಗಡುಸಾಗುವುದು ಇದರ ಲಕ್ಷಣ. ಆದ್ದರಿಂದ ಈ ಸಮಸ್ಯೆಗಳಿಂದ ಹೊರಬಂದು ತುಟಿಯ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.

By Hemanth
|

ಸುಂದರ ತುಟಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ನಗುವಿಗೆ ಪ್ರಕಾಶ ನೀಡುವುದು. ಈ ಸುಂದರವಾಗಿರುವ ತುಟಿಗಳನ್ನು ಚಳಿಗಾಲದಲ್ಲಿ ಆರೈಕೆ ಮಾಡುವುದು ತುಂಬಾ ಕಠಿಣ. ಯಾಕೆಂದರೆ ಚಳಿಗಾಲದಲ್ಲಿ ದೇಹದ ಪ್ರತಿಯೊಂದು ಭಾಗವನ್ನು ತುಂಬಾ ಎಚ್ಚರಿಕೆಯಿಂದ ಕಾಪಾಡಿ ಕೊಳ್ಳಬೇಕಾಗುತ್ತದೆ.

Lip Care

ಚಳಿಗಾಲದಲ್ಲಿ ಹವಾಮಾನವು ತುಂಬಾ ತಂಪಾಗಿರುವ ಕಾರಣದಿಂದ ಪಾದಗಳು, ತುಟಿ, ಕೂದಲು ಮತ್ತು ಚರ್ಮವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಅದರಲ್ಲೂ ತುಟಿಗಳು ಒಡೆಯುವುದರಿಂದ ಮುಖವು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತದೆ. ತುಟಿ ಒಡೆದು ಹೋಗುವುದನ್ನು ನಿವಾರಿಸಲು ಹಲವಾರು ರೀತಿಯ ಲಿಪ್ ಮಲಾಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕ್ಷಣ ಮಾತ್ರದಲ್ಲಿ ತುಟಿಯು ಸಹಜವಾದ ಕೆಂಬಣ್ಣವನ್ನು ಪಡೆಯಬೇಕೇ?

ಆದರೆ ಇದರಲ್ಲಿ ಬಳಸಿರುವ ರಾಸಾಯನಿಕಗಳು ನಮ್ಮ ಹೊಟ್ಟೆಗೆ ಸೇರುವ ಸಾಧ್ಯತೆ ಇದೆ. ಯಾಕೆಂದರೆ ತುಟಿಗೆ ಹಚ್ಚುವುದರಿಂದ ಬಾಯಿ ಮೂಲಕವಾಗಿ ಅದು ಹೊಟ್ಟೆ ಸೇರಿ ಅಡ್ಡ ಪರಿಣಾಮ ಬೀರಬಹುದು. ಇದರಿಂದ ಮನೆಯಲ್ಲಿ ತಯಾರಿಸುವ ಮದ್ದನ್ನು ಬಳಸುವುದು ಸೂಕ್ತ. ಚಳಿಗಾಲದಲ್ಲಿ ತುಟಿಯನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯಿರಿ. ಆಕರ್ಷಕ ತುಟಿಗೆ ಆರೈಕೆ ಮುಖ್ಯ,ಮೇಕಪ್ ಅಲ್ಲ

ತುಟಿಗಳನ್ನು ಸ್ಕ್ರಬ್ ಮಾಡಿ
ವಾರದಲ್ಲಿ ಒಂದು ಸಲವಾದರೂ ತುಟಿಗಳನ್ನು ಸ್ಕ್ರಬ್ ಮಾಡಬೇಕು. ಸ್ಕ್ರಬ್ ಮಾಡುವುದರಿಂದ ಸತ್ತ ಚರ್ಮಗಳು ಕಿತ್ತುಬರುವುದು. ಸತ್ತ ಚರ್ಮವು ಕಿತ್ತು ಬರುವುದರಿಂದ ತಾಜಾ ಹಾಗೂ ಸುಂದರ ಚರ್ಮವು ಬರುವುದು. ಸ್ವಲ್ಪ ಸಕ್ಕರೆಗೆ ಜೇನುತುಪ್ಪನ್ನು ಹಾಕಿಕೊಂಡು ತುಟಿಗಳನ್ನು ಸ್ಕ್ರಬ್ ಮಾಡಿ. ಇದು ಒಳ್ಳೆಯ ನೈಸರ್ಗಿಕ ವಿಧಾನ.

ರಾತ್ರಿ ಜೇನುತುಪ್ಪ ಹಚ್ಚಿ


ಅತಿಯಾದ ಚಳಿಯಿಂದಾಗಿ ತುಟಿಯು ಒಣಗಿ ಹೋಗುವುದು. ಇಂತಹ ಸಮಯದಲ್ಲಿ ತುಟಿಯನ್ನು ಕಾಪಾಡಬೇಕು. ಚಳಿಗಾಲದಲ್ಲಿ ಜೇನುತುಪ್ಪವು ತುಂಬಾ ಪರಿಣಾಮಕಾರಿ. ಜೇನುತುಪ್ಪವು ತುಟಿಗಳಿಗೆ ತೇವಾಂಶ ನೀಡುವುದು ಮತ್ತು ದಿನವಿಡಿ ತುಟಿಗಳು ತೇವಾಂಶದಿಂದ ಇರುವಂತೆ ನೋಡಿಕೊಳ್ಳುವುದು. ಜೇನುತುಪ್ಪವು ನೈಸರ್ಗಿಕ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು. ಇದು ತುಟಿಗಳ ಆರೋಗ್ಯವನ್ನು ಕಾಪಾಡುತ್ತದೆ.

ಒಣ ತುಟಿಗಳಿಗೆ ನೈಸರ್ಗಿಕ ಚಿಕಿತ್ಸೆ
ಚಳಿಗಾಲದಲ್ಲಿ ತುಟಿಯ ತೇವಾಂಶದಿಂದ ಇರಲು ಹಾಗೂ ಮೃಧುವಾಗಿರಲು ಕೆಲವೊಂದು ನೈಸರ್ಗಿಕ ವಿಧಾನವನ್ನು ಬಳಸಿಕೊಳ್ಳುವುದು ತುಂಬಾ ಒಳ್ಳೆಯದು. ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಒಣ ಹಾಗೂ ಒಡೆದ ತುಟಿಗಳನ್ನು ಆರೈಕೆ ಮಾಡಬಹುದು. ತುಟಿ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಹೀಗೆ ಮಾಡಿ

ಲಿಂಬೆರಸ, ಜೇನುತುಪ್ಪ, ಬೆಣ್ಣೆ, ಸೌತೆಕಾಯಿ, ಸಕ್ಕರೆಯ ಸ್ಕ್ರಬ್, ಗ್ಲಿಸರಿನ್ ಮತ್ತು ಜೇನುತುಪ್ಪ, ರೋಸ್ ವಾಟರ್ ಮತ್ತು ಜೇನುತುಪ್ಪ ಹೀಗೆ ಹಲವಾರು ರೀತಿಯ ನೈಸರ್ಗಿಕ ಚಿಕಿತ್ಸೆಗಳನ್ನು ಬಳಸಿಕೊಳ್ಳಬಹುದು. ಇವುಗಳು ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೋಗ್ಯ ಕಾಪಾಡುವುದು.

English summary

How To Protect Lips In Winter

Winter can be a brutal time of the year on your skin, hair and lips.The cold air and the dry atmosphere can make your skin and hair suffer on large scale. One common problem every one of us suffers from in cold days is dry and chapped lips. Here are ways how to protect lips in winter, read on.
X
Desktop Bottom Promotion