For Quick Alerts
ALLOW NOTIFICATIONS  
For Daily Alerts

ಪಾದಗಳನ್ನು ನೋಡಿದರೆ ಮುತ್ತಿಡುವಂತೆ ಇರಬೇಕು!

By Suma
|

ಇತ್ತೀಚಿನ ದಿನಗಳಲ್ಲಿ ಪಾದಗಳ ಆರೈಕೆಯ ಬಗ್ಗೆ ಹೆಚ್ಚಿನವರು ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಎತ್ತರದ ಚಪ್ಪಲಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಮೆತ್ತನೆಯ ಚಪ್ಪಲಿಗಳತ್ತ ಗಮನಹರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ಪಾದಗಳು ವಿವಿಧ ರಂಗಿನಿಂದ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯಾಗಿದೆ. ನಿಮ್ಮ ಕಾಲಿನ ಆರೈಕೆಯು ಮುಂದಿನ ಆಗುಹೋಗುಗಳನ್ನು ತಡೆಯತ್ತದೆ. ಈ ನಿಟ್ಟಿನಲ್ಲಿ ಕಾಲಿನ ಆರೈಕೆಯ ಬಗ್ಗೆ ಈ ತಾಣದಲ್ಲಿ ಅನೇಕ ಸಂಗತಿಗಳನ್ನು ಈ ಹಿಂದೆ ನಿಮಗಾಗಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಕೆಲವು ಸಂಗತಿಗಳನ್ನು ನೀಡಲಾಗಿದೆ.

ನಿಮ್ಮ ಕಾಲನ್ನು ಬಿಸಿಲಿಗೆ ಹೆಚ್ಚು ಒಡ್ಡಿದರೆ, ಮೆಲನಿನ್ ಎಂಬ ಸತ್ವವು ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮವು ಕಪ್ಪಾಗಲು ಪ್ರಾರಂಭಿಸುತ್ತದೆ. ಔಷಧ ಉತ್ಪನ್ನಗಳು ಕೇವಲ ನಿಮ್ಮ ಚರ್ಮದ ಸತ್ತ ಜೀವ ಕೋಶಗಳನ್ನು ಹೊರತೆಗೆದು ಪಾದವನ್ನು ಹಿತಗೊಳಿಸುತ್ತದೆ. ಆದರೆ ಕಪ್ಪು ಕಲೆಗಳನ್ನು ಹೋಗಲಾಡಿಸುವ ಬಗೆ ಹೇಗೆ? ಬನ್ನಿ ಪಾದದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಸೌಂದರ್ಯವರ್ಧಕ ಪ್ಯಾಕ್‌ಗಳ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ... ಪಾದದ ದುರ್ವಾಸನೆಯಿಂದ ಬೇಸತ್ತು ಹೋಗಿದ್ದೀರಾ?

ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಹಾಲಿನ ಪ್ಯಾಕ್
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕೆಲವು ವಿಶೇಷ ಗುಣಗಳಿದ್ದು, ನಿಮ್ಮ ಚರ್ಮದಲ್ಲಿನ ಧೂಳನ್ನು ಸ್ವಾಭಾವಿಕವಾಗಿ ಹೊರತೆಗೆದು, ಕಪ್ಪು ಕಲೆಗಳನ್ನು ಸಕಾಲದಲ್ಲಿ ನಿವಾರಿಸುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಸತ್ವವು ಹೇರಳವಾಗಿದ್ದು, ಚರ್ಮದ ಮೇಲ್ಮೈನಲ್ಲಿರುವ ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ. ಹಾಲಿನಲ್ಲಿರುವ ತೇವಾಂಶ ನೀಡುವ ಲಕ್ಷಣದಿಂದ ನಿಮ್ಮ ಒರಟಾದ ಪಾದವು ಮೃದುಗೊಂಡು ಹೆಚ್ಚು ನಾಜೂಕಾಗುತ್ತದೆ.

Home remedies for tanned feet

ಉಪಯೋಗಿಸುವ ವಿಧಾನ
*ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಲ್ಲಿ ಒಣಗಿಸಿ ಮೃದುವಾದ ಪುಡಿಯಾಗುವವರೆಗೆ ರುಬ್ಬಿಕೊಳ್ಳಿ.
*ಈಗ ಇದಕ್ಕೆ 4 ರಿಂದ 5 ಚಮಚ ಹಾಲನ್ನೆ ಬೆರೆಸಿ ದಪ್ಪನೆಯ ಪೇಸ್ಟ್ ತಯಾರಿಸಿ.
*ಈ ಪೇಸ್ಟ್ ಅನ್ನು ನಿಮ್ಮ ಪಾದದ ಮೇಲೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಹಾಗೆಯೇ ಬಿಡಿ.
*ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
*ನಂತರ ಟವಲ್ ನಿಂದ ಪಾದವನ್ನು ಒರೆಸಿ ಮತ್ತು ಸೌಮ್ಯವಾದ ಮಾಯಿಶ್ಚರೈಸರ್ ಅನ್ನು ಲೇಪಿಸಿ.
*ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಅನುಸರಿಸಿದರೆ ಉತ್ತಮ ಫಲಿತಾಂಶ ದೊರಕುತ್ತದೆ. ಇದರಿಂದ ನಿಮ್ಮ ಪಾದದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗಿರುವುದನ್ನು ಗಮನಿಸುತ್ತೀರಿ. ಪಾದದ ಸೌಂದರ್ಯಕ್ಕೆ ಕೇವಲ 5 ನಿಮಿಷ ನೀಡಿ ಸಾಕು

ಲಿಂಬೆ ಮತ್ತು ಜೇನಿನ ಪ್ಯಾಕ್
ಲಿಂಬೆಯಲ್ಲಿ ಆಮ್ಲಯುಕ್ತ ಗುಣಲಕ್ಷಣವಿದ್ದು, ಇದು ನೈಸರ್ಗಿಕವಾದ ಸ್ವಚ್ಛಗೊಳಿಸುವ ಸಾಧನವಾಗಿದೆ. ಜೇನುತುಪ್ಪವು ನಿಮ್ಮ ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡುವ ಸಾಧನವಾಗಿದೆ.


ಉಪಯೋಗಿಸುವ ಕ್ರಮಗಳು
*ಒಂದು ಚಮಚ ಲಿಂಬೆ ರಸಕ್ಕೆ ಮತ್ತು ಒಂದು ಚಮಚ ಜೇನನ್ನು ಬೆರೆಸಿ
*ಒಂದು ಚಮಚ ಹಾಲಿನ ಪುಡಿಯನ್ನು ಸಹ ಬೆರೆಸಿ
*ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕಲಸಿ ಪೇಸ್ಟ್ ರೂಪ ಬರುವವರೆಗೆ ಮಿಶ್ರಣ ಮಾಡಿ ನಿಮ್ಮ ಪಾದದ ಮೇಲೆ ಹಚ್ಚಿಕೊಳ್ಳಿ.
*ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
*ನಂತರ ಸೂರ್ಯನ ಬೆಳಕಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ನಿಮ್ಮ ಪಾದಗಳಿಗೆ ಲೇಪಿಸಿಕೊಳ್ಳುವುದನ್ನು ಮರೆಯದಿರಿ.
English summary

Home remedies for tanned feet

You may love wearing those strappy sandals but exposing your feet to the sun can increase the production of the pigment melanin, darkening the skin. A pedicure can only remove the dead skin cells and relax tired feet. But what about the darkened complexion? Beauty expert, Shilpi Bose, suggests a few packs to lighten dark feet. 
X
Desktop Bottom Promotion