For Quick Alerts
ALLOW NOTIFICATIONS  
For Daily Alerts

ಗುಲಾಬಿ ವರ್ಣದ ತುಟಿಗಳಿಗಾಗಿ ಸಿಂಪಲ್ ಮನೆಮದ್ದು

By Super
|

ಇಂದು ಸೌಂದರ್ಯಪ್ರಸಾಧನಗಳು ಹಿಂದೆಂದಿಗಿಂತಲೂ ಹೆಚ್ಚಿನ ವೈವಿಧ್ಯ ಮತ್ತು ಅಪಾರವಾದ ಬಣ್ಣಗಳಲ್ಲಿ ದೊರೆಯುತ್ತಿವೆ. ಶಾಪಿಂಗ್ ಮಾಲುಗಳ ಮೂಲಕ ವಿದೇಶೀ ಪ್ರಸಾದನಗಳು ಬಂದ ಮೇಲಂತೂ ಅತ್ಯುತ್ತಮ ಗುಣಮಟ್ಟದ ಪ್ರಸಾದನಗಳು ಭಾರತೀಯ ನಾರಿಯರ ನಿದ್ದೆಗೆಡಿಸುತ್ತಿವೆ. ತಮ್ಮಲ್ಲಿರುವ ಉಡುಪಿಗೆ ಯಥಾಬಣ್ಣದ ತುಟಿಬಣ್ಣ ಅಥವಾ ಇನ್ನಾವುದೋ ಪ್ರಸಾಧನವನ್ನು ಕಂಡಾಗಲಂತೂ ಕೊಂಡುಕೊಳ್ಳದೇ ಇರಲಾರದ ಉದ್ವೇಗ ಎದುರಾಗುತ್ತದೆ.

DIY Lip Scrubs To Get Pink and Healthy Lips

ಆದರೆ ಇವುಗಳ ಬೆಲೆ ನೋಡಿದಾಗ ಮಾತ್ರ 'ಅಬ್ಬಾ' ಎಂಬ ಉದ್ಗಾರದೊಂದಿಗೇ ಆ ಉದ್ವೇಗವೆಲ್ಲಾ ಇಳಿದುಹೋಗುತ್ತದೆ. ಇಂದು ಮಾರುಕಟ್ಟೆಯಲ್ಲಿ ನಡೆದಾಡುವ ಪ್ರತಿ ಯುವತಿಯ ಅವಸ್ಥೆಯೂ ಇದೇ ಆಗಿದೆ. ಒಂದು ವೇಳೆ ನೀವೂ ಸೌಂದರ್ಯಪ್ರಿಯರಾಗಿದ್ದು ತುಟಿಬಣ್ಣ ಹಚ್ಚಿಕೊಳ್ಳುವ ಅಭ್ಯಾಸವುಳ್ಳವರಾಗಿದ್ದರೆ ನಿಮ್ಮ ತುಟಿಗಳು ಅಂದವೇ ಇರುತ್ತದೆ ಎಂದುಕೊಂಡಿರುತ್ತೀರಿ. ಇದಕ್ಕೆ ತುಟಿಬಣ್ಣದ ಪ್ಯಾಕೆಟ್ಟಿನ ಮೇಲೆ ಬರೆದಿರುವಂತೆ ಇಡಿಯ ದಿನ ತುಟಿಗಳಿಗೆ ಆರ್ದ್ರತೆ ನೀಡುತ್ತದೆ ಎಂಬ ವಾಕ್ಯವೂ ಕಾರಣವಾಗಿರಬಹುದು. ಗುಲಾಬಿ ಬಣ್ಣದ ತುಟಿಯ ಸೌಂದರ್ಯಕ್ಕಾಗಿ ಟಿಪ್ಸ್

ಆದರೆ ಇದು ಪೂರ್ಣವಾಗಿ ಸತ್ಯವಲ್ಲ. ಯಾವುದೇ ತುಟಿಲೇಪ ಅಥವಾ ತುಟಿಬಣ್ಣ ತಯಾರಿಸುವಾಗ ಅಗತ್ಯವಾದ ಬಣ್ಣ ಬರಲೆಂದು ಕೆಲವು ರಾಸಾಯನಿಕಗಳನ್ನು ಮಿಶ್ರಣ ಮಾಡಿರುತ್ತಾರೆ. ಅಷ್ಟಕ್ಕೂ ಇದರ ಮೂಲವಸ್ತು ಎಂದರೆ ಮೀನಿನ ಹುರುಪೆ ಎಂದರೆ ನಂಬುತ್ತೀರಾ? ಆದರೆ ಇದು ಸತ್ಯ.
ಅಗ್ಗದ ತುಟಿಲೇಪಗಳಲ್ಲಿ ಉತ್ತಮವಲ್ಲದ ಗುಣಮಟ್ಟದ ರಾಸಾಯನಿಕಗಳನ್ನು ಉಪಯೋಗಿಸಿರುವ ಕಾರಣ ಇವುಗಳು ಎಸಗುವ ಹಾನಿಯೂ ಹೆಚ್ಚೇ ಇರುತ್ತದೆ. ಅಂದಮಾತ್ರಕ್ಕೆ ದುಬಾರಿ ಪ್ರಸಾಧನಗಳು ಅಪ್ಪಟ ಎಂದಲ್ಲ, ಆದರೆ ಇವು ಎಸಗುವ ಹಾನಿ ಕನಿಷ್ಠ ಮಟ್ಟಕ್ಕಿರುತ್ತದೆ. ನಮ್ಮ ವಾಹನಗಳ ಮೇಲೆ ಪಿಯುಸಿ (ಪೊಲ್ಯೂಶನ್ ಅಂಡರ್ ಕಂಟ್ರೋಲ್) ಎಂದು ಇಲ್ಲವೇ ಹಾಗೆ. ಪ್ರದೂಷಣೆ ಇದೆ, ಆದರೆ ನಿಯಂತ್ರಣದಲ್ಲಿದೆ ಎಂದು ಇದರ ಅರ್ಥ. ತುಟಿ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಹೀಗೆ ಮಾಡಿ

ತುಟಿಬಣ್ಣ ಭಾರತಕ್ಕೆ ಬಲುಹಿಂದೆಯೇ ಬಂದಿತ್ತಾದರೂ ಕೇವಲ ಸಿನಮಾ, ನಾಟಕರಂಗದವರು ಮಾತ್ರ ಹೆಚ್ಚಾಗಿ ಬಳಸುತ್ತಿದ್ದರು. ಗೃಹಿಣಿಯರು ಕೇವಲ ಶುಭಸಂದರ್ಭಗಳಲ್ಲಿ ಬಿಟ್ಟರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸುತ್ತಿರಲಿಲ್ಲ. ಆದರೆ ಇಂದಿನ ಯುವಜನಾಂಗ ಈ ಪ್ರಸಾಧನಗಳ ಬಗ್ಗೆ ಹೆಚ್ಚು ಒಲವು ತೋರುತ್ತಿದೆ. ಇಂದು ಲಭ್ಯವಿರುವ ತುಟಿಬಣ್ಣಗಳು ಕೊಂಚ ದುಬಾರಿಯಾಗಿದ್ದರೂ ತುಟಿಗಳಿಗೆ ಆರ್ದ್ರತೆ ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸುವ ಮೂಲಕ ಕೊಂಚ ಒಳ್ಳೆಯದನ್ನೂ ಮಾಡುತ್ತವೆ.


ಆದರೆ ಇದಕ್ಕೂ ಉತ್ತಮವಾದ ಆರೈಕೆ ನೀಡುವ ಮತ್ತು ತುಟಿಗಳಿಗೆ ನೈಸರ್ಗಿಕ ಪೋಷಣೆ ಮತ್ತು ಸೌಂದರ್ಯವನ್ನು ನೀಡುವ ಲೇಪಗಳನ್ನು ಮನೆಯಲ್ಲಿಯೇ ತಯಾರಿಸಬಹುದು, ಅದೂ ಕೆಲವೇ ನಿಮಿಷಗಳಲ್ಲಿ! ಏಕೆಂದರೆ ನೈಸರ್ಗಿಕ ಬಣ್ಣದ ತುಟಿಗಳನ್ನು ಯಾವ ಪ್ರಸಾಧನವೂ ನೀಡಲಾರದು. ಕುತೂಹಲ ಕೆರಳಿತೇ? ಕೆಳಗಿನ ಮಾಹಿತಿ ನಿಮ್ಮ ಕುತೂಹಲವನ್ನು ತಣಿಸಲಿದೆ.
ಕೊಬ್ಬರಿ ಎಣ್ಣೆಯ ಲೇಪ: (ಒಡೆದ ಮತ್ತು ಪೊರೆ ಏಳುವ ತುಟಿಗಳಿಗಾಗಿ) ಚಳಿ ಅಥವಾ ಬೇರಾವುದೋ ಕಾರಣಕ್ಕೆ ತುಟಿ ಒಡೆದು ರಕ್ತ ಒಸರುತ್ತಿದ್ದರೆ ಹಾಗೂ ಹೊರಚರ್ಮ ಪದರದಂತೆ ಎದ್ದಿದ್ದರೆ ಕೊಬ್ಬರಿ ಎಣ್ಣೆಯ ಬಳಕೆ ಅತ್ಯುತ್ತಮವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು
*1 ಚಿಕ್ಕಚಮಚ ಕೊಬ್ಬರಿ ಎಣ್ಣೆ
*1 ಚಿಕ್ಕಚಮಚ ಲಿಂಬ ರಸ
*1/2 ಚಿಕ್ಕ ಚಮಚ ಜೇನು
*3 ಚಿಕ್ಕಚಮಚ ಸಕ್ಕರೆ.

ವಿಧಾನ:
*ಒಂದು ಚಿಕ್ಕ ಬೋಗುಣಿಯಲ್ಲಿ ಕೊಬ್ಬರಿ ಎಣ್ಣೆ, ಲಿಂಬೆರಸ ಮತ್ತು ಜೇನನ್ನು ಸೇರಿಸಿ ಮಿಶ್ರಣ ಮಾಡಿ. ಇವೆಲ್ಲವೂ ಬೆರೆತ ಬಳಿಕ ಸಕ್ಕರೆ ಹಾಕಿ ಕದಡಿ. ಈ ಮಿಶ್ರಣವನ್ನು ತುಟಿಗಳಿಗೆ ವೃತ್ತಾಕಾರದಲ್ಲಿ ಹಚ್ಚಿ, ಕೊಂಚವೇ ಒತ್ತಡ ನೀಡಿ. ಬಳಿಕ ಸುಮಾರು ಅರ್ಧದಿಂದ ಒಂದು ನಿಮಿಷದವರೆಗೆ ಹಾಗೇ ಬಿಡಿ.
*ನಂತರ ಒದ್ದೆ ಟವೆಲ್ಲೊಂದನ್ನು ಬಳಸಿ ಒರೆಸಿಕೊಳ್ಳಿ. ಈ ವಿಧಾನವನ್ನು ವಾರಕ್ಕೊಂದು ಬಾರಿ ಅನುಸರಿಸುವ ಮೂಲಕ ಮೃದುವಾದ ಮತ್ತು ನೈಸರ್ಗಿಕ ಬಣ್ಣದ ತುಟಿಗಳನ್ನು ಪಡೆಯಬಹುದು.

ಕೋಕೋ ಬೆಣ್ಣೆಯ ಲೇಪ (ಪದರ ಎದ್ದಿರುವ ತುಟಿಗಳಿಗಾಗಿ)
ಅಗತ್ಯವಿರುವ ಸಾಮಾಗ್ರಿಗಳು:
*2 ಚಿಕ್ಕಚಮಚ ಕಂದು ಸಕ್ಕರೆ
*1 ಚಿಕ್ಕ ಚಮಚ ಬಿಳಿಸಕ್ಕರೆ
*1/2 ಚಿಕ್ಕ ಚಮಚ ಕೋಕೋ ಬೆಣ್ಣೆ (ಲಭ್ಯವಿಲ್ಲದಿದ್ದರೆ ಶಿಯಾ ಬೆಣ್ಣೆ (100% shea butter) ಸಹಾ ಉಪಯೋಗಿಸಬಹುದು. ಇವಿರುವ ಕ್ರೀಂ ಬಳಸಬೇಡಿ.
*1 ಚಿಕ್ಕ ಚಮಚ ಜೇನು
*2-3 ಬಿಂದುಗಳಷ್ಟು ಬಾದಾಮಿ ಎಣ್ಣೆ.

ವಿಧಾನ:
*ಜೇನು, ಬಾದಾಮಿ ಎಣ್ಣೆ, ಕೋಕೋ ಬೆಣ್ಣೆಯನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸೇರಿಸಿ ಮಿಶ್ರಣ ಮಾಡಿ. ಬೆರೆತ ಬಳಿಕ ಕಂದು ಮತ್ತು ಬಿಳಿ ಸಕ್ಕರೆ ಸೇರಿಸಿ.
*ಇನ್ನು ಈ ಮಿಶ್ರಣವನ್ನು ತುಟಿಗಳಿಗೆ ವೃತ್ತಾಕಾರದಲ್ಲಿ ಹಚ್ಚಿ, ಕೊಂಚವೇ ಒತ್ತಡ ನೀಡಿ. ಬಳಿಕ ಸುಮಾರು ಒಂದರಿಂದ ಎರಡು ನಿಮಿಷಗಳವರೆಗೆ ಹಾಗೇ ಬಿಡಿ. ನಂತರ ಒದ್ದೆ ಟವೆಲ್ಲೊಂದನ್ನು ಬಳಸಿ ಒರೆಸಿಕೊಳ್ಳಿ.
*ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಅನುಸರಿಸಬಹುದು. ಕ್ರಮೇಣ ಇದರಿಂದ ಆರೋಗ್ಯವಂತ ಮತ್ತು ನೈಸರ್ಗಿಕ ಬಣ್ಣದ ತುಟಿಗಳು ನಿಮ್ಮದಾಗುತ್ತವೆ.

English summary

DIY Lip Scrubs To Get Pink and Healthy Lips

Lip scrubs, although a relatively new concept in India, has been around since a while. The concept of lip scrubs is to get rid of dead cells and peeling skin. Lip scrubs also moisturise your lips while exfoliating them. Continue reading to know how you can use homemade lip scrubs to get pink and supple lips in less than a few minutes.
X
Desktop Bottom Promotion