For Quick Alerts
ALLOW NOTIFICATIONS  
For Daily Alerts

ಇದು ಮಳೆಗಾಲದ ಬ್ಯೂಟಿ ಟಿಪ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...

By Manu
|

ಬಿರುತಾಪದ ಬಿಸಿಲಿನ ದಿನಗಳು ಕಳೆದ ಬಳಿಕ ಎದುರಾಗುವ ಮಳೆಯ ಕಾರಣ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ. ಗಾಳಿಯಲ್ಲಿ ತೇಲುವ ವಿವಿಧ ವೈರಸ್ಸುಗಳು, ಬ್ಯಾಕ್ಟೀರಿಯಾಗಳು ಹಲವು ರೀತಿಯ ರೋಗಗಳನ್ನು ತಂದೊಡ್ಡುವ ಜೊತೆಗೇ ತ್ವಚೆಗೂ ಅಪಾಯವನ್ನು ತಂದೊಡ್ಡುತ್ತವೆ.

Best Homemade Scrubs and Masks for Monsoon

ಆದ್ದರಿಂದ ಬಿಸಿಲಿನ ದಿನಗಳಂತೆಯೇ ಮಳೆಗಾಲದ ದಿನಗಳಲ್ಲಿಯೂ ತ್ವಚೆಯ ಆರೈಕೆ ಮಾಡುವುದು ಅಗತ್ಯವಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಗಾಳಿಯಲ್ಲಿ ಹೆಚ್ಚುವ ಆರ್ದ್ರತೆ ಎಣ್ಣೆಪಸೆಯನ್ನು ಹೆಚ್ಚಿಸುತ್ತದೆ. ಗಾಳಿ ಒಣಗಿರುವ ಕಾರಣ ಚರ್ಮ ಒಡೆಯುವುದು ಮತ್ತು ಉರಿಗೂ ಕಾರಣವಾಗುತ್ತದೆ. ಅಲ್ಲದೇ ಶಿಲೀಂಧ್ರದ ಸೋಂಕಿನ ಕಾಟವನ್ನೂ ಚರ್ಮ ಎದುರಿಸಬೇಕಾಗಬಹುದು. ಚುಮುಚುಮು ಚಳಿಗೆ-ನೈಸರ್ಗಿಕ ಬಾಡಿ ಸ್ಕ್ರಬ್‌

ಮಳೆಗಾಲದಲ್ಲಿ ಅತಿ ಅಗತ್ಯವಾಗಿ ಕೈಗೊಳ್ಳಬೇಕಾದ ಆರೈಕೆ ಎಂದರೆ ಸತ್ತ ಜೀವಕೋಶಗಳನ್ನು ನಿವಾರಿಸುವುದು. ಇತರ ಸಮಯದಲ್ಲಿ ಸತ್ತ ಜೀವಕೋಶಗಳು ಬಿಡಿಯಾಗಿ ಹಾರಿ ಹೋದರೆ ಮಳೆಗಾಲದಲ್ಲಿ ಇವು ಹೊರಚರ್ಮಕ್ಕೆ ತೆಳುವಾದ ಪದರದಂತೆ ಅಂಟಿಕೊಂಡಿರುತ್ತದೆ. ಇದನ್ನು ನಿವಾರಿಸುವುದೇ ಕಠಿಣ ಕಾರ್ಯ.

ಇದನ್ನು ನಿವಾರಿಸಿದಾಗ ಮಾತ್ರ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಚರ್ಮದ ತೈಲಗಳು ಮತ್ತು ಬೆವರು ಹೊರಬರಲು ಸಾಧ್ಯವಾಗುತ್ತದೆ. ಇದರಿಂದ ರಕ್ತಸಂಚಾರ ಸುಗಮಗೊಂಡು ಚರ್ಮ ಕಾಂತಿಯುಕ್ತ ಮತ್ತು ತಾಜಾತನದಿಂದ ಕೂಡಿರುತ್ತದೆ. ಬ್ಯೂಟಿ ಟಿಪ್ಸ್: ಲಿಂಬೆ ಹಣ್ಣಿನ ಬಾಡಿ ಸ್ಕ್ರಬ್‌, ನೀವೂ ಪ್ರಯತ್ನಿಸಿ

ಈ ಸತ್ತ ಜೀವಕೋಶಗಳನ್ನು ನಿವಾರಿಸಲು ಕೆಲವು ಲೇಪಗಳಿದ್ದು ಇವು ಗಟ್ಟಿಯಾಗಿ ಅಂಟಿಕೊಂಡಿದ್ದ ಪದರವನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಬನ್ನಿ ಇಂತಹ ಸುಲಭವಾದ ಕೆಲವು ವಿಧಾನಗಳನ್ನು ನೋಡೋಣ:

ಕಂದು ಸಕ್ಕರೆ ಮುಖಲೇಪ
*ಸಮಪ್ರಮಾಣದಲ್ಲಿ ಕಂದು ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ನಿಮಗೆ ಎಷ್ಟು ಅಗತ್ಯ ಎನಿಸುತ್ತದೆಯೋ ಆ ಪ್ರಕಾರ ಬೆರೆಸಿ.
*ಈ ಲೇಪನವನ್ನು ಮುಖದ ಸಹಿತ ಇಡಿಯ ಶರೀರಕ್ಕೆ ತೆಳುವಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ಸ್ನಾನ ಮಾಡಿ. ಇದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮ ಕೋಮಲ ಮತ್ತು ಕಾಂತಿಯುಕ್ತವಾಗುತ್ತದೆ.

ಬಾಳೆಹಣ್ಣಿನ ಮುಖಲೇಪ
ಸತ್ತ ಜೀವಕೋಶಗಳನ್ನು ನಿವಾರಿಸುವ ಜೊತೆಗೇ ಆರ್ದ್ರತೆಯನ್ನು ಹೀರಿಕೊಳ್ಳುವಂತೆ ಮಾಡುವ ಗುಣ ಬಾಳೆಹಣ್ಣಿನಲ್ಲಿದೆ. ಚರ್ಮದ ಸೂಕ್ಷ್ಮ ರಂಧ್ರಗಳನ್ನು ಅಗಲವಾಗಿ ತೆರೆದು ಕಲ್ಮಶಗಳು ಹೊರಬರಲು ನೆರವಾಗುತ್ತದೆ.
ಯಾವಾಗ ಬೇಕಾದರೂ ಸುಲಭವಾಗಿ ದೊರಕುವ ಈ ಹಣ್ಣನ್ನು ಬಳಸಿ ಮಳೆಗಾಲದಲ್ಲಿಯೂ ಚರ್ಮದ ಆರೈಕೆ ಪಡೆಯಬಹುದು. ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ಮಾಡುವ ವಿಧಾನ
*ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ.
*ಇದಕ್ಕೆ ನಾಲ್ಕು ಚಿಕ್ಕಚಮಚ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿ
*ಕೆಲವು ಹನಿ ವನಿಲ್ಲಾ ಎಸೆನ್ಸ್ ರಸವನ್ನು ಬೆರೆಸಿ.
*ಈ ಮುಖಲೇಪವನ್ನು ನಯವಾದ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಮುಖ ಮತ್ತು ದೇಹದ ಇತರ ಭಾಗಗಳಿಗೆ ತೆಳುವಾಗಿ ಹಚ್ಚು.


*ಕೊಂಚ ಹೊತ್ತಿನ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ಪರ್ಯಾಯವಾಗಿ ಒಂದು ಬಾಳೆಹಣ್ಣಿನ ತಿರುಳಿಗೆ ಒಂದು ಲಿಂಬೆಯ ರಸ ಸೇರಿಸಿ ಚೆನ್ನಾಗಿ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಬಹುದು.
*ಕೊಂಚ ಹೊತ್ತಿನ ಬಳಿಕ, ಅಂದರೆ ಈ ಲೇಪ ಒಣಗಿದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸಮಯದ ಆಭಾವವಿದ್ದಾಗ ಈ ವಿಧಾನ ಹೆಚ್ಚು ಸೂಕ್ತವಾಗಿದೆ.
English summary

Best Homemade Scrubs and Masks for Monsoon

Monsoon is a great welcome after the scorching heat of summer. But we have to take proper care of our skin during the monsoon times. You can easily make these scrubs at home instead of spending a huge amount of money by buying them.
X
Desktop Bottom Promotion