For Quick Alerts
ALLOW NOTIFICATIONS  
For Daily Alerts

ಆಲೂ ಪರೋಟ-ಬ್ರೇಕ್ ಫಾಸ್ಟ್ ರೆಸಿಪಿ

|

ಆಲೂಪರೋಟವನ್ನು ಮಾಡುವ ವಿಧಾನ ಕಷ್ಟವಿರಬಹುದು ಎಂದು ಕೆಲವರು ಅಂದಕೊಳ್ಳುತ್ತಾರೆ. ಆದರೆ ಚಪಾತಿಯಷ್ಟೇ ಸುಲಭವಾಗಿ ಇದನ್ನು ತಯಾರಿಸಬಹುದು. ಆಲೂ ಮಸಾಲ ತಯಾರಿಸುವುದು ಮಾತ್ರ ಎಕ್ಸಟ್ರಾ ಕೆಲಸ ಅಷ್ಟೇ. ಚಪಾತಿಗಾದರೆ ಜೊತೆಗೆ ಸಾಗು ಅಥವಾ ಬಾಜಿ ತಯಾರಿಸಬೇಕು. ಆಲೂ ಪರೋಟಕ್ಕೆ ಚಟ್ನಿ ಅಥವಾ ಉಪ್ಪಿನಕಾಯಿ ಇದ್ದರೂ ಸಾಕು.

ಆಲೂ ಪರೋಟದ ಮುಖ್ಯ ರುಚಿ ಅಡಗಿರುವುದು ಅದಕ್ಕೆ ಬಳಸುವ ಮಸಾಲೆ ಮೇಲೆ. ಇಲ್ಲಿ ನಾವು ಸುಲಭವಾಗಿ, ರುಚಿಯಾಗಿ ಆಲೂಪರೋಟ ಮಾಡುವ ವಿಧಾನ ವಿವರಿಸಿದ್ದೇವೆ ನೋಡಿ:

Aloo Parota Recipe

ಪರೋಟದ ಒಳಗೆ ತುಂಬಲು ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಆಲೂಗೆಡ್ಡೆ5-6
ಖಾರದ ಪುಡಿ ಅರ್ಧ ಚಮಚ
ಚಾಟ್ ಮಸಾಲಾ ಅರ್ಧ ಚಮಚ
ಜೀರಿಗೆ ಪುಡಿ 1 ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಎಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು

ಪರೋಟಕ್ಕೆ ಸಾಮಗ್ರಿಗಳು:

ಮೈದಾಹಿಟ್ಟು
ಚಿಟಿಕೆ ಅರಿಶಿಣ
ಕಾಲು ಚಮಚ ಉಪ್ಪು
ಒಂದು ಚಮಚ ಎಣ್ಣೆ/ತುಪ್ಪ

ತಯಾರಿಸುವ ವಿಧಾನ:

* ಮೈದಾಹಿಟ್ಟು, ಅರಿಶಿಣ, ಉಪ್ಪು, ಎಣ್ಣೆಯನ್ನು ಸ್ವಲ್ಪ ನೀರು ಹಾಕಿ ಕಲೆಸಿ

* ಬೇಯಿಸಿದ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಅದಕ್ಕೆ ಖಾರದಪುಡಿ, ಉಪ್ಪು, ಚಾಟ್ ಮಸಾಲಾ, ಜೀರಿಗೆ ಪುಡಿ, ಕೊತ್ತಂಬರಿ ಪುಡಿಯನ್ನು ಹಾಕಿ ಚೆನ್ನಾಗಿ ಕಲೆಸಿ, ನಂತರ ಒಂದು ಚಮಚ ಎಣ್ಣೆ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ ಚಿಕ್ಕ-ಚಿಕ್ಕ ಉಂಡೆ ತಯಾರಿಸಿಡಿ.

* ಈಗ ಕಲೆಸಿಟ್ಟ ಮೈದಾ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಒಂದೊಂದಾಗಿ ಚಿಕ್ಕ ಮೈದಾ ಹಿಟ್ಟಿನ ಉಂಡೆ ತೆಗೆದುಕೊಂಡು ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಹಾಳೆ ಇಟ್ಟು ಚಿಕ್ಕ ಪೂರಿಯಂತೆ ಒತ್ತಿ ಅದರಲ್ಲಿ ಆಲೂ ಮಸಾಲ ಮಿಶ್ರಣವನ್ನು ಇಟ್ಟು ಪುನಃ ಮಡಚಿ ಉಂಡೆ ಕಟ್ಟಿ.

* ಆಲೂ ಮಸಾಲಾ ಮಿಶ್ರಣವನ್ನು ಮುಚ್ಚಿ ತಯಾರಿಸಿದ ಉಂಡೆಗೆ ಎಣ್ಣೆ ಸವರಿಕೊಂಡು ಮೆಲ್ಲಗೆ ಪೂರಿಗಿಂತ ಸ್ವಲ್ಪ ದೊಡ್ಡದಾಗಿ ತಟ್ಟಿ .

* ತವಾವನ್ನು ಬಿಸಿ ಮಾಡಿ, ನಂತರ ಕಾದ ತವಾಕ್ಕೆ ಎಣ್ಣೆ ಸವರಿ ಅದರಲ್ಲಿ ಹಾಕಿ ಅದರ ಎರಡೂ ಬದಿಯನ್ನು ಚಪಾತಿಗೆ ಬೇಯಿಸಿದ ರೀತಿ ಬೇಯಿಸಿದರೆ ಆಲೂ ಪರೋಟ ರೆಡಿ.

English summary

Aloo Parota Recipe

Aloo paratha is almost everyone's favourite Indian recipe. But how often do you manage to make it for your office lunch box? Not too often, do you? You just miss this Indian recipe because of short deadlines in the morning.
X
Desktop Bottom Promotion