For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕಾಡುವ ಪಾದಗಳ ದುರ್ವಾಸನೆಗೆ ಸರಳ ಟಿಪ್ಸ್

By Super
|

ಮನುಷ್ಯನ ಮೂಗು ಅಸಹ್ಯವಾದ ವಾಸನೆಗಳನ್ನು ಸಹಿಸಿಕೊಳ್ಳುವುದಿಲ್ಲ. ಅದರಲ್ಲೂ ಇಂತಹ ವಾಸನೆ ನಮ್ಮ ದೇಹದ ಅಂಗಗಳಿಂದ ಬಂದರೆ ನಿಜಕ್ಕೂ ಅದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನಮಗೆಲ್ಲರಿಗು ವಾಸನೆ ಹೊಮ್ಮಿಸುವ ಪಾದಗಳ ಕುರಿತು ಚೆನ್ನಾಗಿ ಗೊತ್ತಿರುತ್ತದೆ.

ಅದು ಶೂ ಆಗಿರಲಿ, ಸಾಕ್ಸ್, ಸ್ಯಾಂಡಲ್ಸ್ ಅಥವಾ ಇನ್ಯಾವುದಾದರು ಪಾದರಕ್ಷೆಗಳಾಗಿರಲಿ, ವಾಸನೆ ಬರಲು ಆರಂಭಿಸಿದರೆ ನಮಗೆ ಮುಜುಗರವಾಗುತ್ತದೆ. ಆದರೆ ಮಳೆಗಾಲದಲ್ಲಿ ಈ ಮುಜುಗರದ ಜೊತೆಗೆ ಪಾದಗಳ ಇನ್‌ಫೆಕ್ಷನ್ ಸಹ ಉಂಟಾಗುತ್ತದೆ. ಆದ್ದರಿಂದ ಇದನ್ನು ತಪ್ಪದೆ ನಿವಾರಣೆ ಮಾಡಿಕೊಳ್ಳುವ ಅಗತ್ಯವಿರುತ್ತದೆ.

Rid yourself of Dirty, Smelly feet this monsoon!

ಮಳೆಗಾಲದಲ್ಲಿಯೇ ಏಕೆ?
ಮಳೆಗಾಲದಲ್ಲಿ ಆರ್ದ್ರತೆ ಅಧಿಕವಾಗಿರುತ್ತದೆ. ತೇವಾಂಶದಿಂದ ಕೂಡಿದ ವಾತಾವರಣ ಮತ್ತು ನೆಲವು ಪಾದಗಳಲ್ಲಿ ಫಂಗಲ್ ಇನ್‌ಫೆಕ್ಷನ್, ಅಥ್ಲೆಟ್ಸ್ ಫೂಟ್ ಮತ್ತು ಬೆವರಿನಿಂದ ಕೂಡಿದ ಪಾದಗಳು, ಮುಂತಾದ ಸಮಸ್ಯೆಗಳನ್ನು ತರುತ್ತದೆ. ಇದರ ಜೊತೆಗೆ ನಾವು ಈ ಕಾಲದಲ್ಲಿ ಲೆಪ್ಟೊಸ್ಪಿರೊಸಿಸ್ ಎಂಬ ಕಾಲಿನ ಇನ್‌ಫೆಕ್ಷನ್‌ಗೆ ನಾವು ಗುರಿಯಾಗುತ್ತಿರುತ್ತೇವೆ.
ಆದ್ದರಿಂದ ನಾವು ಈ ಕಾಲದಲ್ಲಿ ಕಾಲುಗಳನ್ನು ಶುದ್ಧವಾಗಿ ಇರಿಸಿಕೊಳ್ಳಬೇಕಾದುದು ಅತ್ಯಗತ್ಯ. ಇದರ ಜೊತೆಗೆ ನಾವು ಪರಿಸ್ಥಿತಿಗಳನ್ನು ಮತ್ತಷ್ಟು ಹಾಳು ಮಾಡಿಕೊಳ್ಳಲು, ಆಫೀಸಿಗೆ ಶೂಗಳನ್ನು ಹಾಕಿಕೊಂಡು ಹೋಗುತ್ತೇವೆ ಮತ್ತು ಅದೇ ಶೂ ನಲ್ಲಿ ಮನೆಗೆ ಬರುತ್ತೇವೆ. ಆಗ ಆ ನೆಂದ ಮತ್ತು ಕೊಳೆಯಾದ ಶೂಗಳಿಂದಾಗಿ ಪಾದಗಳು ವಾಸನೆ ಬರಲು ಆರಂಭಿಸುತ್ತವೆ. ಶೂಗಳಿಂದ ಕೆಸರಿನ ಕಲೆಗಳನ್ನು ತೆಗೆಯುವುದು ಹೇಗೆ?

ಒಳ್ಳೆಯ ಪಾದರಕ್ಷೆ
ಈ ಮಳೆಗಾಲದಲ್ಲಿ ನಮ್ಮ ಪಾದಗಳಿಗೆ ಅತ್ಯಂತ ಸುರಕ್ಷೆಯನ್ನು ನೀಡುವ ಪಾದರಕ್ಷೆಗಳನ್ನು ಧರಿಸಬೇಕಾದುದು ಅತ್ಯಗತ್ಯ. ಬಹುತೇಕ ಜನ ಗಂಡು-ಹೆಣ್ಣು ಎಂಬ ಭೇದ ಭಾವವಿಲ್ಲದೆ ಫ್ಯಾಷನ್‌ಗಾಗಿ ಪಾದರಕ್ಷೆಗಳನ್ನು ಧರಿಸುತ್ತಾರೆ. ಆದರೆ ಇದರಿಂದ ಪಾದಗಳಿಗೆ ಯಾವ ಸುರಕ್ಷೆಯು ಸಿಗುವುದಿಲ್ಲ. ಕೆಸರು ಮತ್ತು ನೀರು ಪಾದರಕ್ಷೆಗಳ ಒಳಗೆ ಹಾದು ನಮ್ಮ ಪಾದಗಳನ್ನು ಹಾಳು ಮಾಡಲು ನಾವೇ ದಾರಿ ಮಾಡಿಕೊಡುತ್ತೇವೆ. ಅದರಲ್ಲಿ ಕಾಲು ಬೆರಳುಗಳ ಸಂಧಿಯಲ್ಲಿ ಉಂಟಾಗುವ ಫಂಗಸ್ ಈ ಮಳೆಗಾಲದಲ್ಲಿ ಮತ್ತಷ್ಟು ಯಾತನೆಯನ್ನು ನೀಡುತ್ತದೆ. ಅದಕ್ಕಾಗಿ ನಿಮ್ಮನ್ನು ಈ ಕಾಲದಲ್ಲಿ ರಕ್ಷಿಸುವ ಪಾದರಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಫ್ಲಾಟ್ಟರ್ಸ್
ಹೊಳೆಯುವ ಬಣ್ಣದ ಫ್ಲಾಟ್ಟರ್‌ಗಳನ್ನು ವಿಶೇಷವಾಗಿ ಮಳೆಗಾಲಕ್ಕಾಗಿ ಮಾಡಲಾಗಿರುತ್ತವೆ. ಕಾಲೇಜು ವಿದ್ಯಾರ್ಥಿಗಳ ಅತ್ಯಂತ ನೆಚ್ಚಿನ ಪಾದರಕ್ಷೆ ಇದಾಗಿರುತ್ತದೆ. ಇದನ್ನು ನೀವು ಜೀನ್ಸ್, ಕುರ್ತಾ, ಫ್ಲಿಪ್ ಫ್ಲಾಪ್ ಇತ್ಯಾದಿ ಜೊತೆಗೆ ಧರಿಸಬಹುದು. ಇವುಗಳು ವಾಟರ್ ಪ್ರೂಫ್ ಆಗಿರುವುದು ಮತ್ತೊಂದು ಹೆಚ್ಚುಗಾರಿಕೆಯಾಗಿರುತ್ತದೆ. ಇದನ್ನು ಈ ಕಾಲದಲ್ಲಿ ಕೊಳ್ಳುವುದರಿಂದ ಉಪಯೋಗವಿರುತ್ತದೆ. ಇವುಗಳು ವರ್ಷಾನುಗಟ್ಟಲೆ ಬಾಳಿಕೆ ಬರುತ್ತದೆ.

ಪ್ಲಾಸ್ಟಿಕ್/ ರಬ್ಬರ್ ಸ್ಯಾಂಡಲ್ಸ್

ಮಳೆಗಾಲದ ಪಾದರಕ್ಷೆಗಳು ಎಂದರೆ ಮೊದಲಿಗೆ ನೆನಪಿಗೆ ಬರುವುದು ಸ್ಯಾಂಡಲ್ಸ್. ಇದು ಮಳೆಗಾಲಕ್ಕೆ ಮುನ್ನದಿನದಿಂದಲೇ ಉಪಯೋಗಕ್ಕೆ ಬರುತ್ತದೆ. ಆದರೆ ಇವುಗಳು ನಿಮ್ಮ ಕಾಲಿಗೆ ಸರಿಯಾಗಿ ಫಿಟ್ ಆಗುವಂತಿರಬೇಕು. ಏಕೆಂದರೆ ನಿಮ್ಮ ಪಾದಗಳಿಗು ಸಹ ಉಸಿರಾಟದ ಅವಶ್ಯಕತೆ ಇರುತ್ತದೆ. ಓಡಾಡುವಾಗ ನಿಮ್ಮ ಪಾದಗಳು ಆರಾಮವಾಗಿರಬೇಕು. ಕ್ಯಾನ್‌ವಾಸ್ ಶೂಗಳಿಂದ ಕೊಳಕು ಕಲೆಗಳನ್ನು ನಿವಾರಿಸುವುದು ಹೇಗೆ?

ಫ್ಲಿಪ್ ಫ್ಲಾಪ್ಸ್
ವರ್ಣರಂಜಿತ ನಮೂನೆಗಳಲ್ಲಿ ಲಭಿಸುವ ಫ್ಲಿಪ್ ಫ್ಲಾಪ್‌ಗಳು ಈ ಕಾಲಕ್ಕೆ ಮತ್ತಷ್ಟು ಸೂಕ್ತ. ಇವುಗಳ್ನನು ರಬ್ಬರ್‌ನಿಂದ ಮಾಡಿರುತ್ತಾರೆ. ಜೊತೆಗೆ ಇವು ನೆಂದರೂ ಬೇಗ ಒಣಗುತ್ತವೆ. ಆದರೆ ಅಗ್ಗದ ದರದಲ್ಲಿ ದೊರೆಯುವ ನಕಲಿ ಪಾದರಕ್ಷೆಗಳು ಈ ಮಳೆಗಾಲವನ್ನು ತಡೆಯುವುದಿಲ್ಲ, ಕೆಸರು ಮತ್ತು ನೀರಿನಿಂದ ಅವು ಹಾಳಾಗುತ್ತವೆ. ಜೊತೆಗೆ ನೀವು ರಸ್ತೆಯಲ್ಲಿ ಜಾರಿ ಬೀಳುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ನಿಮಗೆ ಸರಿಹೊಂದು ಫ್ಲಿಪ್ ಫ್ಲಾಪ್ಸ್ ಮಾತ್ರ ಕೊಂಡು ಕೊಳ್ಳಿ.

ಈ ಕಾಲದಲ್ಲಿ ಯಾವುದನ್ನು ನಿಯಂತ್ರಿಸಬೇಕು
ಮುಖ್ಯವಾಗಿ ಈ ಬಗೆಯ ಪಾದರಕ್ಷೆಗಳನ್ನು ಮೊದಲು ನಿಯಂತ್ರಿಸಿ
*ಕ್ಯಾನ್ವಾಸ್ ಶೂಗಳು ನೀರನ್ನು ಹೀರಿಕೊಳ್ಳುತ್ತವೆ ಮತ್ತು ಬೇಗ ಹಾಳಾಗುತ್ತವೆ.
*ಫಾರ್ಮಲ್ ಶೂಗಳನ್ನು ಅಥವಾ ಚರ್ಮದ ಶೂಗಳನ್ನು ಮಳೆಯು ಹಾಳು ಮಾಡುತ್ತದೆ. ಜೊತೆಗೆ ನೀವು ಧರಿಸುವ ಸಾಕ್ಸ್‌ಗಳು ಸಹ ಹಾಳಾಗುತ್ತವೆ.
*ಸಾಕ್ಸ್ ನೆಂದಾಗ ಅದನ್ನು ನೀವು ಕೆಲಸ ಮಾಡುವ ಜಾಗದಲ್ಲಿ ಬಿಚ್ಚಿ ಇಡಲು ಆಗುವುದಿಲ್ಲ. ಹಾಗಾಗಿ ಇಡೀ ದಿನ ನೀವು ನೆಂದ ಸಾಕ್ಸ್‌ನಲ್ಲಿ ಇರಬೇಕಾಗುತ್ತದೆ. ಹೈ ಹೀಲ್ಸ್ ಸಹ ನಿಮಗೆ ಒದ್ದೆ ನೆಲದಲ್ಲಿ ನಡೆಯಲು ಗ್ರಿಪ್ ನೀಡುವುದಿಲ್ಲ. ಆಗ ನಿಮಗೆ ಜಾರಿ ಬೀಳುವ ಸಂಭವ ಇರುತ್ತದೆ. ಹಾಗಾಗಿ ಈ ಬಗೆಯ ಪಾದರಕ್ಷೆಗಳನ್ನು ಈ ಕಾಲದಲ್ಲಿ ಬಳಸಬಹುದು.

English summary

Rid yourself of Dirty, Smelly feet this monsoon!

We are all well aware of the problems of smelly feet. Whether it is shoes and socks, boots, or sandals for some reason we can’t run away from smelly feet. The problem is embarrassing and ever existent! But more care and concern needs to be given to our feet during the monsoons. Along with smelly feet we are also prone to feet infections and feet diseases that spread during the monsoons.
Story first published: Saturday, July 11, 2015, 19:26 [IST]
X
Desktop Bottom Promotion