For Quick Alerts
ALLOW NOTIFICATIONS  
For Daily Alerts

ಚುಮುಚುಮು ಚಳಿಗೆ-ನೈಸರ್ಗಿಕ ಬಾಡಿ ಸ್ಕ್ರಬ್‌

By Manu
|

ನಮ್ಮ ದೇಹದ ಚರ್ಮವು ಅತ್ಯಂತ ಸೂಕ್ಷ್ಮವಾಗಿದ್ದು, ಚಳಿಗಾಲದ ಸಮಯದಲ್ಲಂತೂ ಸಣ್ಣ ಪುಟ್ಟ ಸಮಸ್ಯೆಗಳೂ ಋಣಾತ್ಮಕ ಪ್ರತಿಕೂಲ ಪರಿಣಾಮವನ್ನು ಬೀರಬಲ್ಲವು. ಹಾಗಂತ ಬ್ಯೂಟಿ ಪಾರ್ಲರ್‌ಗೆ ಹೋದರೆ ಸಿಕ್ಕಾಪಟ್ಟೆ ಹಣ ಸುರಿಯಬೇಕಾಗುತ್ತದೆ, ಅಲ್ಲದೆ ಇವರು ಬಳಸುವ ರಾಸಾಯನಿಕ ಸ್ಕ್ರಬ್ಬಿಂಗ್ ಅಂತೂ ದೇಹದ ಚರ್ಮಕ್ಕೆ ಹಾನಿಕರವೇ ಹೊರತು, ನಯ ಪೈಸೆಯ ಪ್ರಯೋಜನವಿಲ್ಲದಂತಾಗಬಹುದು. ಹಾಗಾದರೆ ತ್ವಚೆಯನ್ನು ಸಮಸ್ಯೆಗಳಿಂದ ಕಾಪಾಡಲು ಬೇರೆ ಮಾರ್ಗವೇ ಇಲ್ಲವೇ ಎಂದು ಯೋಚಿಸದಿರಿ. ವಾವ್! ದೇಹಕ್ಕೆ ಸ್ಕ್ರಬ್ ಮನೆಯಲ್ಲಿಯೆ ಮಾಡಬಹುದು

ಏಕೆಂದರೆ ಒಮ್ಮೊಮ್ಮೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನಾವು ಸಾಧಾರಣ ವಸ್ತುಗಳಿಂದಲೇ ಅದ್ಭುತ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ದೇಹ ಹಾಗೂ ತ್ವಚೆಯನ್ನು ಆರೋಗ್ಯಯುತವಾಗಿ ಮತ್ತು ಕಾಂತಿಯುತವಾಗಿ ಕಾಪಾಡಬಹುದಾಗಿದೆ. ಈ ವಿಧಾನವೇ ಬಾಡಿ ಸ್ಕ್ರಬ್ಬಿಂಗ್ ಆಗಿದೆ. ಪಾರ್ಲರ್‌ಗಳಲ್ಲಿ ಬಾಡಿ ಸ್ಕ್ರಬ್ಬಿಂಗ್ ಅನ್ನು ನೀವು ಮಾಡಬಹುದಾಗಿದ್ದರೂ ಇದಕ್ಕೆ ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ರಾಸಾಯನಿಕ ಸ್ಕ್ರಬ್‌ಗಳಿಗಿಂತಲೂ ನೈಸರ್ಗಿಕವಾಗಿ ಮನೆಯಲ್ಲೇ ನೀವು ತಯಾರಿಸಬಹುದಾದ ಸ್ಕ್ರಬ್‌ಗಳು ಅದ್ಭುತ ಪರಿಣಾಮವನ್ನು ತ್ವಚೆಯ ಮೇಲೆ ಉಂಟುಮಾಡಬಲ್ಲವು.

ಪಾರ್ಲರ್‌ಗಳಲ್ಲಿ ಮಾಡುವ ದೇಹದ ಸ್ಕ್ರಬ್ ಅನ್ನು ಮನೆಯಲ್ಲೇ ಸರಳ ರೀತಿಯಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿರುವೆವು. ಈ ಸ್ಕ್ರಬ್ ತಯಾರಿ ವಿಧಾನವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ಮಾಹಿತಿ ಪಡೆದುಕೊಳ್ಳಿ.

ಕಾಫಿ ಪುಡಿಯ ಸ್ಕ್ರಬ್‌

ಕಾಫಿ ಪುಡಿಯ ಸ್ಕ್ರಬ್‌

ಚಳಿಗಾಲದಲ್ಲಿ ಚರ್ಮದ ಹೊರಭಾಗದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಸೋಪು ಹಾಕಿ ಎಷ್ಟು ಉಜ್ಜಿದರೂ ಬಾರದ ಈ ಜೀವಕೋಶಗಳು ಹಳೆಯ ಕಾಫಿಬೀಜದ ಪುಡಿಯನ್ನು ಉಜ್ಜಿಕೊಳ್ಳುವ ಮೂಲಕ ಈ ಜೀವಕೋಶಗಳು ಸುಲಭವಾಗಿ ಹೊರಬರುತ್ತವೆ. ಇದಕ್ಕಾಗಿ ಕಾಫಿಬೀಜಗಳನ್ನು ನುಣ್ಣಗೆ ಪುಡಿಮಾಡಿ ಬಿಸಿ ನೀರಿನಲ್ಲಿ ನೆನೆಸಿ. ಬಿಸಿನೀರಿನ ಸ್ನಾನದ ಬಳಿಕ ಕಾಫಿಯ ಲೇಪನವನ್ನು ಇಡಿಯ ದೇಹಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ನಂತರ ಮೈಯುಜ್ಜುವ ಬ್ರಶ್ ಉಪಯೋಗಿಸಿ ಉಜ್ಜಿಕೊಳ್ಳಿ. ಚರ್ಮದ ಕಾಂತಿ ಹೆಚ್ಚಿರುವುದನ್ನು ನೋಡಿ ದಂಗಾಗುತ್ತೀರಿ

ಬಾದಾಮಿ ಕಿತ್ತಳೆ ಸ್ಕ್ರಬ್

ಬಾದಾಮಿ ಕಿತ್ತಳೆ ಸ್ಕ್ರಬ್

ಬಾದಾಮಿ ಎಣ್ಣೆ ಚರ್ಮಕ್ಕೆ ಅದರಲ್ಲೂ ಚಳಿಗಾಲದಲ್ಲಿ ಚರ್ಮಕ್ಕೆ ಬಹಳ ಒಳ್ಳೆಯ ಎಣ್ಣೆ. ಚಳಿಗಾಲದಲ್ಲಿ ತೇವಾಂಶವನ್ನು ಕಾಪಾಡಲು ನೈಸರ್ಗಿಕ ಬಾದಾಮಿ ಎಣ್ಣೆ ಅತಿ ಅವಶ್ಯಕ.ಇದಕ್ಕೆ ಕಿತ್ತಳೆ ಬಳಸುವುದರಿಂದ ತಾಜಾತನ ನೀಡುವುದರ ಜೊತೆಗೆ ಚರ್ಮ ಕಾಂತಿಯುತವಾಗುತ್ತದೆ. ಬೇಕಾಗುವ ಸಾಮಗ್ರಿಗಳು:

ಒಂದು ಮುಷ್ಟಿಯಷ್ಟು ಬಾದಾಮಿ ಒಂದು ಕಿತ್ತಳೆ ಹಣ್ಣಿನ ಸಿಪ್ಪೆ ಒಂದು ಕಪ್ ಆಲಿವ್ ಆಯಿಲ್ ಇವೆಲ್ಲವುಗಳನ್ನು ಮಿಕ್ಸ್ ಮಾಡಲು ಬ್ಲೆಂಡರ್ ಬಳಸಿ.ಇದು ಸರಿಯಾಗಿ ಪುಡಿಯಾಗಿ ಮಿಶ್ರವಾದ ನಂತರ ದೇಹಕ್ಕೆ ಹಚ್ಚಿ. ಎಂಟು - ಹತ್ತು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ.

ಮಸಾಲ ಪದಾರ್ಥಗಳ ಸ್ಕ್ರಬ್

ಮಸಾಲ ಪದಾರ್ಥಗಳ ಸ್ಕ್ರಬ್

ಭಾರತೀಯ ಅಡುಗೆಗಳಲ್ಲಿ ಮಸಾಲ ಪದಾರ್ಥಗಳು ಮುಖ್ಯ ಪಾತ್ರ ವಹಿಸುತ್ತವೆ.ಅದೇ ಮಸಾಲ ಪದಾರ್ಥಗಳು ಬಾಡಿ ಸ್ಕ್ರಬ್‌ಗಳಾದರೆ? ಅವುಗಳು ನಮ್ಮ ಆಹಾರದ ರುಚಿಯನ್ನು ಹೇಗೆ ಹೆಚ್ಚಿಸುತ್ತವೋ ಹಾಗೆಯೇ ನಮ್ಮ ದೇಹಕ್ಕೆ ಕೂಡ ಕಾಂತಿ ನೀಡುತ್ತವೆ.

ಬೇಕಾಗುವ ಪದಾರ್ಥಗಳು:

*ಒಂದು ಕಪ್ ಬ್ರೌನ್ ಶುಗರ್ ಒಂದು ಕಪ್ ಹರಳು ಸಕ್ಕರೆ

*ಕಾಲು ಕಪ್ ಬಾದಾಮಿ ಅಥವಾ ತೆಂಗಿನ ಎಣ್ಣೆ

*ಎರಡು ಚಮಚ ಚಕ್ಕೆ ಪುಡಿ (ದಾಲ್ಚಿನ್ನಿ)

*ಎರಡು ಚಮಚ ಶುಂಠಿ ಪೇಸ್ಟ್

*ಎರಡು ಚಮಚ ಜಾಯಿಕಾಯಿ ಪುಡಿ

*ಇವು ಎಲ್ಲವನ್ನು ಸೇರಿಸಿ,ಮಿಕ್ಸರ್ ಅಥವಾ ಬ್ಲೆನ್ಡರ್ ಬಳಸಿ ಅದನ್ನು ಮಿಶ್ರಮಾಡಿ. ಇದನ್ನು ದೇಹಕ್ಕೆ ಸರಿಯಾಗಿ ಹಚ್ಚಿ. ಸ್ವಲ್ಪ ಸಮಯದ ನಂತರ ಸರಿಯಾಗಿ ನೀರಿನಿಂದ ತೊಳೆಯಿರಿ.

ಆಲೀವ್ ಆಯಿಲ್ ಸ್ಕ್ರಬ್

ಆಲೀವ್ ಆಯಿಲ್ ಸ್ಕ್ರಬ್

ಸಮುದ್ರದ ಉಪ್ಪು ಮತ್ತು ಎಕ್ಸ್‌ಟ್ರಾ ವರ್ಜಿನ್ ಆಲೀವ್ ಆಯಿಲ್ ಅನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಉಪ್ಪು ಈ ಎಣ್ಣೆಯಲ್ಲಿ ಕರಗಲು ಬಿಡಿ. ಇದರ ಮೂಲಕ ಇಡೀ ದೇಹಕ್ಕೆ ಸ್ಕ್ರಬ್ ಮಾಡಿಕೊಳ್ಳಬಹುದು. ಇದಾದ ಮೇಲೆ ಒಂದು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಈ ಸ್ಕ್ರಬ್ ಚಳಿಗಾಲದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಹರ್ಬಲ್ ಸ್ಕ್ರಬ್

ಹರ್ಬಲ್ ಸ್ಕ್ರಬ್

1 1/2 ಕಪ್ ಎಪ್ಸಂ ಸಾಲ್ಟ್, 3/4 ಕಪ್ ಬೇಕಿಂಗ್ ಸೋಡಾ ಮತ್ತು 3/4 ನುಣ್ಣಗೆ ರುಬ್ಬಿಕೊಂಡ ಗಿಡಮೂಲಿಕೆಗಳ ಪುಡಿಯನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಇದನ್ನು ಚೆನ್ನಾಗಿ ಬೆರೆಸಿಕೊಳ್ಳಿ ಮತ್ತು ಇದನ್ನು ಗಾಳಿಯಾಡದ ಒಂದು ಜಾಡಿಯಲ್ಲಿ ಹಾಕಿಟ್ಟುಕೊಳ್ಳಿ. ನಂತರ ದಿನವೂ ಇದನ್ನು ಬಳಸಬಹುದು. ಇದರಲ್ಲಿ ಲಿಂಬೆ ಹುಲ್ಲು ಮತ್ತು ಬಾದಾಮಿ ಎಣ್ಣೆಯಿರುವಂತೆ ನೋಡಿಕೊಳ್ಳಿ. ಏಕೆಂದರೆ ಲಿಂಬೆ ಹುಲ್ಲು ಆಹ್ಲಾದಕತೆಯನ್ನು ಮತ್ತು ತಾಜಾತನವನ್ನು ಒದಗಿಸುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಾಗಿದ್ದು ತ್ವಚೆಯನ್ನು, ಹಾಗೂ ದೇಹದ ಚರ್ಮವನ್ನು ಮೃದು ಮತ್ತು ಕೋಮಲವನ್ನಾಗಿಸುತ್ತದೆ.

English summary

Homemade body scrub duriing winter

Human skin has to face an accumulation of dead skin cells on the epidermis, resulting in flakes, soreness and patchy skin. It is then that one can banish winter woes and opt for an all-natural exfoliation regime to heal weather-beaten skin. Come with us and read on about our list of top 5 DIY all-natural recipes for homemade body scrubs to keep winter dryness at bay.
Story first published: Wednesday, December 2, 2015, 20:45 [IST]
X
Desktop Bottom Promotion