For Quick Alerts
ALLOW NOTIFICATIONS  
For Daily Alerts

ಚಳಿಗಾಲಕ್ಕೆ ಚರ್ಮಕ್ಕೆ ವಿಟಮಿನ್ ಇ ಆಹಾರಗಳು

|

ಚಳಿಗಾಲದಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಚರ್ಮ ಒಡೆಯುವುದನ್ನು ತಪ್ಪಿಸಲು ವಿಟಮಿನ್ ಇ ಹೆಚ್ಚಿರುವ ಕೆಲವು ಆಹಾರಗಳನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಗಳಿಗೆ ಹಚ್ಚುವುದು ಒಳ್ಳೆಯದು. ಈ ದಿನಗಳಲ್ಲೆ ನಿಮ್ಮ ಚರ್ಮ ಒಣಗಿದಂತೆ ಕಾಣುವುದು. ನಮ್ಮಿಂದ ಸಾಧ್ಯವಾದಷ್ಟು ಚರ್ಮ ಒಣಗದಂತೆ ನೋಡಿಕೊಳ್ಳಬೇಕು. ಪರಿಣಿತರ ಪ್ರಕಾರ ಒಣ ಚರ್ಮಕ್ಕೆ ಸೂಕ್ತ ಆರೈಕೆ ಮಾಡದಿದ್ದರೆ ಅದರ ಸುತ್ತಲ ಚರ್ಮ ಕೂಡ ಬಣ್ಣ ಬದಲಾಯಿಸುತ್ತದೆ.

ವಿಟಮಿನ್ ಇ ಹೆಚ್ಚಿರುವ ಆಹಾರಗಳ ಪೇಸ್ಟ್ ತಯಾರಿಸಿ ನೇರವಾಗಿ ಚರ್ಮದ ಮೇಲೆ ಹಚ್ಚುವುದು ಒಳ್ಳೆಯದು. ಈ ವಿಟಮಿನ್ ಇ ಹೆಚ್ಚಿರುವ ಆಹಾರಗಳಲ್ಲಿ ಒಂದು ಬಗೆಯ ಎಣ್ಣೆಯ ಅಂಶವಿದ್ದು ಇದು ಒಣಚರ್ಮವನ್ನು ಗುಣಪಡಿಸುತ್ತದೆ. ಜೊತೆಗೆ ಚಳಿಗಾಲದ ರಾಶಸ್ ಗಳನ್ನು ಮತ್ತು ಚರ್ಮದ ಇತರ ತೊಂದರೆಗಳನ್ನು ಹೋಗಲಾಡಿಸುತ್ತದೆ.

ಬೋಲ್ಡ್ ಸ್ಕೈ ನಿಮಗಾಗಿ ಇಲ್ಲಿ ಕೆಲವು ವಿಟಮಿನ್ ಇ ಹೆಚ್ಚಿರುವ ಆಹಾರಗಳನ್ನು ಕೊಟ್ಟಿದೆ. ಇವುಗಳನ್ನು ನಿಮ್ಮ ಚರ್ಮದ ಮೇಲೆ ದಿನದ ಹೊತ್ತಿನಲ್ಲಿ ಅಥವ ಮಲಗುವ ಮುಂಚೆ ಹಚ್ಚಿ. ಇವುಗಳನ್ನು ಹಚ್ಚುವ ಮುನ್ನ ಮುಖದ ಮೇಕಪ್ ತೆಗೆದು ಆನಂತರ ಇದನ್ನು ಹಚ್ಚುವುದನ್ನು ಮರೆಯದಿರಿ.

ಚಳಿಗಾಲಕ್ಕೆ ಚರ್ಮದ ಆರೈಕೆಗೆ ವಿಟಮಿನ್ ಇಯುಕ್ತ ಆಹಾರಗಳು:

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಚಳಿಗಾಲದಲ್ಲಿ ಚರ್ಮದ ಆರೈಕೆಗಾಗಿ ಬಳಸಬಹುದಾದ ಅತ್ಯುತ್ತಮ ವಿಟಮಿನ್ ಇ ಹೆಚ್ಚಿರುವ ಆಹಾರವಿದು. ಒಂದು ಚಮಚ ಆಲಿವ್ ಎಣ್ಣೆಯನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗದಲ್ಲಿ ವೃತ್ತಾಕಾರದಲ್ಲಿ ಹಚ್ಚಿ. ಒಂದು ಗಂಟೆಯ ನಂತರ ನೀರಿನಲ್ಲಿ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡಿ.

ಕುಂಬಳಕಾಯಿ

ಕುಂಬಳಕಾಯಿ

ಕುಂಬಳಕಾಯಿ ಮೊಡವೆಗಳಿಂದುಂಟಾಗುವ ಕಲೆಗಳನ್ನು ನಿವಾರಿಸುವಲ್ಲಿ ಸಹಕಾರಿ. ಇದರ ಪೇಸ್ಟ ತಯಾರಿಸಿಕೊಂಡು ರಾತ್ರಿ ವೇಳೆ ಮುಖಕ್ಕೆ ಹಚ್ಚಿಕೊಳ್ಳಿ. ಮರುದಿನ ಬೆಳಗ್ಗೆ ಮುಖವನ್ನು ತೊಳೆದುಕೊಳ್ಳಿ.

ಅವಕ್ಯಾಡೊ

ಅವಕ್ಯಾಡೊ

ಅವಕ್ಯಾಡೊ ಜ್ಯೂಸ್ ಚಳಿಗಾಲದಲ್ಲಿನ ಒಣಚರ್ಮಕ್ಕೆ ಒಳ್ಳೆಯ ಆರೈಕೆ ಮಾಡುತ್ತದೆ. ಈ ಹಣ್ಣನ್ನು ಮುಖ ಮತ್ತು ಕುತ್ತಿಗೆಯ ಭಾಗದಲ್ಲಿ ವೃತ್ತಾಕಾರದಲ್ಲಿ ಹಚ್ಚಿಕೊಳ್ಳಿ. ಒಣಗಿದ ಮೇಲೆ ಇದನ್ನು ನೀರಿನಲ್ಲಿ ತೊಳೆದುಕೊಳ್ಳಿ.

ಸ್ಪಿನಾಚ್

ಸ್ಪಿನಾಚ್

ಸೊಪ್ಪನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ನಿರಿಗೆಗಳಿರುವ ಜಾಗಕ್ಕೆ ಹೆಚ್ಚಾಗಿ ಹಚ್ಚಿಕೊಳ್ಳಿ. ಇದು ಗೆರೆಗಳನ್ನು ತಿಳಿಯಾಗಿಸಲು ನೆರವು ನೀಡುತ್ತದೆ. ಒಣಗಿದ ನಂತರ ಆಲಿವ್ ಎಣ್ಣೆ ಹಚ್ಚಿ ಆಮೇಲೆ ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ವಿಟಮಿನ್ ಇ ಹೆಚ್ಚಿದೆ. ಬಾದಾಮಿ ಎಣ್ಣೆ ಚರ್ಮದ ಮೇಲಿನ ಕಲೆಗಳನ್ನು ತೆಗೆಯುತ್ತದೆಯಂತೆ. ಇದನ್ನು ಚಳಿಗಾಲದಲ್ಲಿ ಬಳಸುವುದು ಒಳ್ಳೆಯದು.

ಬೆರ್ರಿ

ಬೆರ್ರಿ

ಬೆರ್ರಿ ಜಾತಿಯ ಹಣ್ಣುಗಳು ಚಳಿಗಾಲದಲ್ಲಿ ಚರ್ಮಕ್ಕೆ ಬಹಳ ಒಳ್ಳೆಯದು. ಇದು ಒಣ ಚರ್ಮಕ್ಕೆ ಒಳ್ಳೆಯ ಆರೈಕೆ ಮಾಡುತ್ತದೆ. ಮಿಕ್ಸಡ್ ಬೆರ್ರಿ ಹಣ್ಣಿನ ಜ್ಯೂಸನ್ನು ಮುಂಜಾನೆ ನಿಮ್ಮ ಚರ್ಮಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದುಬಿಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಏಪ್ರಿಕಾಟ್

ಏಪ್ರಿಕಾಟ್

ಒಣ ಚರ್ಮವನ್ನು ತೆಗೆಯಲು ಏಪ್ರಕಾಟನ್ನು ಬಳಸಬಹುದು. ಮಲಗುವ ಮುನ್ನ ಈ ಹಣ್ಣನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಗಳಲ್ಲಿ ವೃತ್ತಾಕಾರದಲ್ಲಿ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಬಿಸಿ ನೀರಲ್ಲಿ ತೊಳೆದುಕೊಳ್ಳಿ.

ಟೊಮೊಟೊ

ಟೊಮೊಟೊ

ಈ ಹಣ್ಣು ಚರ್ಮದ ಕಪ್ಪಾಗಿರುವುದನ್ನು ಸರಿಪಡಿಸುತ್ತದಂತೆ. ಚಳಿಗಾಲದ ಸೂರ್ಯ ಕೂಡ ಚರ್ಮವನ್ನು ಕಪ್ಪಾಗಿಸುತ್ತಾನೆ. ಆದ್ದರಿಂದ ಟೊಮೊಟೊ ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಟ್ಯಾನ್ ತೆಗೆಯಬಹುದು.

ಬೆಣ್ಣೆ

ಬೆಣ್ಣೆ

ಬೆಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಿರುತ್ತದೆ. ಇದು ನಿಮ್ಮ ಒಣ ಚರ್ಮಕ್ಕೆ ಒಳ್ಳೆಯ ಆರೈಕೆ ನೀಡುತ್ತದೆ. ಒಂದು ಟೀಚಮಚ ಬೆಣ್ಣೆಯನ್ನು ಮುಖ ಮತ್ತು ಕುತ್ತಿಗೆಯ ಭಾಗಗಳಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ತೊಳೆದುಕೊಳ್ಳಿ. ಮೂರು ದಿನಕ್ಕೊಮ್ಮೆ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಗೋಧಿ

ಗೋಧಿ

ಗೋಧಿ ಹಿಟ್ಟಿನಲ್ಲಿ ವಿಟಮಿನ್ ಇ ಹೆಚ್ಚಿರುತ್ತದೆ. ಗೋಧಿ ಹಿಟ್ಟನ್ನು ಬಳಸಿ ಪೇಸ್ಟ್ ಮಾಡಿಕೊಳ್ಳಿ ಇದರಿಂದ ಫೇಸ್ ಪ್ಯಾಕ್ ನಂತೆ ಹಚ್ಚಿಕೊಳ್ಳಿ. ಒಣಗಿದ ನಂತರ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ.

ಮೂಲಿಕೆಗಳು

ಮೂಲಿಕೆಗಳು

ನೆಟಲ್ಸ್ ಮಾದರಿಯ ಮೂಲಿಕೆಗಳಲ್ಲಿ ವಿಟಮಿನ್ ಇ ಹೆಚ್ಚಿದ್ದು ತ್ವಚೆಯ ಆರೈಕೆಗೆ ಒಳ್ಳೆಯದು. ಇವು ಚಳಿಗಾಲದಲ್ಲಿ ಚರ್ಮದ ಮೇಲಾಗುವ ರ್ಯಾಷ್ ಗಳನ್ನು ತೆಗೆಯುತ್ತವೆ.

ಪರಂಗಿ ಹಣ್ಣು

ಪರಂಗಿ ಹಣ್ಣು

ಪರಂಗಿ ಹಣ್ಣಿನ ಕುಸುರಿನಲ್ಲಿ ವಿಟಮಿನ್ ಇ ಹೆಚ್ಚಿರುತ್ತದೆ. ಮೂರು ತುಂಡು ಪರಂಗಿ ಹಣ್ಣನ್ನು ರುಬ್ಬಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ನವಿರಾಗಿ ಮಸಾಜ್ ಮಾಡಿ. 10 ನಿಮಿಷದ ನಂತರ ತೊಳೆಯಿರಿ. ಇದು ಕಲೆಗಳನ್ನು ತೆಗೆಯುವಲ್ಲಿ ಸಹಕಾರಿ.

ಕಡಲೆ ಕಾಯಿ

ಕಡಲೆ ಕಾಯಿ

ಹುರಿದ ಕಡಲೆಕಾಯಿಯನ್ನು ಹಿಟ್ಟು ಮಾಡಿಕೊಳ್ಳಿ. ಇದನ್ನು ಬಿಸಿ ನೀರಿನಲ್ಲಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಒಣಗಿದ ನಂತರ ನೀರಿನಿಂದ ತೊಳೆದುಕೊಳ್ಳಿ. ಇದು ಬಿರುಕುಬಿಟ್ಟ ಚರ್ಮವನ್ನು ಗುಣಪಡಿಸುತ್ತದೆ.

ಜಾಯಿಕಾಯಿ

ಜಾಯಿಕಾಯಿ

ಜಾಯಿಕಾಯಿ ಪುಡಿ ಒಣಚರ್ಮಕ್ಕೆ ಬಹಳ ಒಳ್ಳೆಯದು. ಇದನ್ನು ಸ್ವಲ್ಪ ಹಾಲಿನೊಂದಿಗೆ ಕಲಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಒಣಗಿದ ನಂತರ ಬಿಸಿನೀರಿನಲ್ಲಿ ತೊಳೆದು ಕೊಳ್ಳಿ.

English summary

Vitamin E Rich Foods For Skin In Winter

During the winter season, skin care is ideally important. Vitamin E is one of the main ingredients which should be consistent in certain foods which you need to apply on your face and neck region in order to get rid of the chapped skin.
Story first published: Monday, December 9, 2013, 13:22 [IST]
X
Desktop Bottom Promotion