For Quick Alerts
ALLOW NOTIFICATIONS  
For Daily Alerts

ಹೋಳಿಯಲ್ಲಿ ಕೂದಲು ಹಾಗೂ ತ್ವಚೆ ಸಂರಕ್ಷಣೆಗೆ ಟಿಪ್ಸ್

|

ರಂಗು-ರಂಗಿನ ಹಬ್ಬ ಹೋಳಿ ಹತ್ತಿರ ಬರುತ್ತಿದೆ. ಉತ್ತರ ಭಾರತದ ಕಡೆ ತುಂಬಾ ಫೇಮಸ್ ಆಗಿರುವ ಈ ಹೋಳಿ ಹಬ್ಬವನ್ನು, ದಕ್ಷಿಣ ಭಾರತದಲ್ಲಿಯೂ ಕೆಲವು ಕಡೆಗಳಲ್ಲಿ ಆಚರಿಸುತ್ತಾರೆ. ಬಣ್ಣದ ಓಕುಳಿ ಆಡಲು ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಸಂತೋಷದಿಂದ ನಲಿಯುವ ಈ ದಿನದಲ್ಲಿ ನಿಮ್ಮ ಕೂದಲು ಹಾಗೂ ತ್ವಚೆಯ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು.

ಹೋಳಿ ಆಟಕ್ಕೆ ಕೆಮಿಕಲ್ ಇರುವ ಬಣ್ಣದ ಪುಡಿಗಳನ್ನು ಬಳಸುತ್ತೇವೆ. ಇದರಿಂದ ಕೂದಲು ಹಾಗೂ ತ್ವಚೆ ಹಾಳಾಗಿ, ತ್ವಚೆ ಹಾಗೂ ಕೂದಲು ಸರಿಯಾಗಲು ತುಂಬಾ ಸಮಯ ಹಿಡಿಯಬಹುದು. ಆದ್ದರಿಂದ ಹೋಳಿ ಹಬ್ಬದೆಂದು ನಿಮ್ಮ ತ್ವಚೆ ಹಾಗೂ ಕೂದಲನ್ನು ಈ ಕೆಳಗಿನ ವಿಧಾನಗಳಿಂದ ಸಂರಕ್ಷಿಸುವುದು ಒಳ್ಳೆಯದು:

ಕೂದಲಿಗೆ ಹರಳೆಣ್ಣೆ ಮಸಾಜ್

ಕೂದಲಿಗೆ ಹರಳೆಣ್ಣೆ ಮಸಾಜ್

ಹೋಳಿಗೆ ಎರಡು ದಿನ ಮೊದಲೇ ಅಂದರೆ ಇವತ್ತಿನಿಂದಲೇ ಪ್ರತೀದಿನ ಹರಳೆಣ್ಣೆ ಬಳಸಿ ಮಸಾಜ್ ಮಾಡಿ. ಹೀಗೆ ಮಾಡಿದರೆ ಹೋಳಿ ಬಣ್ಣ ಕೂದಲಿನಲ್ಲಿ ಹಿಡಿಯದಂತೆ ತಡೆಯಬಹುದು.

 ಟೋನರ್ ಬಳಸಿ

ಟೋನರ್ ಬಳಸಿ

ಟೋನರ್ ಬಳಸಿ ಮುಖವನ್ನು ಸ್ವಚ್ಛ ಮಾಡಿ. ಇದರಿಂದ ರಾಸಾಯನಿಕಗಳು ಮುಖದ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುತ್ತದೆ.

 ಸಾಸಿವೆ ಎಣ್ಣೆಯಿಮದ ಬಾಡಿ ಮಸಾಜ್

ಸಾಸಿವೆ ಎಣ್ಣೆಯಿಮದ ಬಾಡಿ ಮಸಾಜ್

ಸಾಸಿವೆ ಎಣ್ಣೆಯಿಂದ ಬಾಡಿ ಮಸಾಜ್ ಮಾಡಿದರೆ ಇದು ಬಣ್ಣ ತ್ವಚೆಯಲ್ಲಿ ಹಿಡಿಯದಂತೆ ತಡೆಯುತ್ತದೆ. ಇದರಿಂದ ಬಣ್ಣವನ್ನು ಸುಲಭದಲ್ಲಿ ತೊಳೆಯಬಹುದಾಗಿದೆ.

 ಹೋಳಿ ಆಡುವ ಮುನ್ನ ಲಿಪ್ ಬಾಮ್ ಹಚ್ಚಿ

ಹೋಳಿ ಆಡುವ ಮುನ್ನ ಲಿಪ್ ಬಾಮ್ ಹಚ್ಚಿ

ನಿಮ್ಮ ತುಟಿಯ ತ್ವಚೆ ದೇಹದ ತ್ವಚೆಗಿಂತ ತುಂಬಾ ತೆಳುವಾಗಿರುತ್ತದೆ. ಆದ್ದರಿಂದ ಆಡುವ ಮಂದವಾಗಿ ಲಿಪ್ ಬಾಮ್ ಹಚ್ಚಿ. ಇದರಿಂದ ಬಣ್ಣ ಲಿಪ್ ಬಾಮ್ ಮೇಲೆ ಕೂರುತ್ತದೆ, ತುಟಿಯ ತ್ವಚೆಗೆ ತಾಗುವುದಿಲ್ಲ. ಹೀಗೆ ತುಟಿಯ ಅಂದವನ್ನು ಕಾಪಾಡಬಹುದು.

ಕಿವಿಗೆ ಬಾದಾಮಿ ಎಣ್ಣೆಯನ್ನು ಹಚ್ಚಿ

ಕಿವಿಗೆ ಬಾದಾಮಿ ಎಣ್ಣೆಯನ್ನು ಹಚ್ಚಿ

ಕಿವಿಯಲ್ಲಿ ಬಣ್ಣ ಕೂತರೆ ಹೋಗಲು ತುಂಬಾ ಸಮಯ ಹಿಡಿಯುವುದು. ಆದ್ದರಿಂದ ಹೋಳಿಯ ಮುನ್ನ ಕಿವಿಗೆ ಬಾದಾಮಿ ಎಣ್ಣೆ ಹಚ್ಚಿ. ಆಗ ಬಣ್ಣವನ್ನು ಸುಲಭದಲ್ಲಿ ತೊಳೆದು ತೆಗೆಯಬಹುದು.

ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿ ಕಟ್ಟಿ

ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿ ಕಟ್ಟಿ

ಕೂದಲು ಗಂಟಾಗದಿರಲು ಚೆನ್ನಾಗಿ ಬಾಚಿ, ಬಿಗಿದು ಕಟ್ಟಿಡಿ.

ಉಗುರಿಗೆ ಬಣ್ಣ ಹಚ್ಚಿ

ಉಗುರಿಗೆ ಬಣ್ಣ ಹಚ್ಚಿ

ಉಗುರುಗಳು ಹೋಳಿ ಬಣ್ಣದಿಂದ ಕೆಟ್ಟದಾಗಿ ಕಾಣುವುದು. ಉಗುರುಗಳನ್ನು ಕತ್ತರಿಸಿ, ನೇಲ್ ಪಾಲಿಷ್ ಹಚ್ಚಿ. ಇದರಿಂದ ಹೋಳಿ ಬಣ್ಣ ಉಗುರಿಗೆ ಹಿಡಿಯುವುದಿಲ್ಲ. ಹೋಳಿ ನಂತರ ನೇಲ್ ರಿಮೋವರ್ ಬಳಸಿ, ಉಗುರನ್ನು ಸ್ವಚ್ಚಗೊಳಿಸಿದರೆ ಉಗುರು ಮೊದಲಿನ ಅಂದವನ್ನು ಪಡೆಯುತ್ತದೆ.

ಮೂಗಿಗೆ ಸಾಸಿವೆ ಎಣ್ಣೆ ಹಚ್ಚಿ

ಮೂಗಿಗೆ ಸಾಸಿವೆ ಎಣ್ಣೆ ಹಚ್ಚಿ

ಮೂಗಿಗೆ ಸ್ವಲ್ಪ ಸಾಸಿವೆ ಎಣ್ಣೆ ಸವರಿ. ಇದು ಮೂಗಿನ ಒಳಗೆ ಬಣ್ಣ ಹೋಗದಂತೆ ತಡೆಯುತ್ತದೆ.

English summary

Skin n Hair Care Tips Before Holi |Body care Tips | ಹೋಳಿಯಲ್ಲಿ ತ್ವಚೆ ಹಾಗೂ ಕೂದಲಿನ ಸಂರಕ್ಷಣೆಗೆ ಟಿಪ್ಸ್ | ದೇಹದ ಆರೈಕೆಗೆ ಟಿಪ್ಸ್

Holi is a festival that is known for its exuberant colours and maddening celebrations.But with the right skin care for Holi, you can easily protect your skin and hair from Holi colours.Here are some skin care and hair care tips that need to be followed before Holi.
X
Desktop Bottom Promotion