For Quick Alerts
ALLOW NOTIFICATIONS  
For Daily Alerts

ಕಿವಿ ಶುಚಿಗೊಳಿಸಲು ಇಲ್ಲಿದೆ ನೈಸರ್ಗಿಕ ಮಾರ್ಗ

|
Ear
ಕಿವಿಯಲ್ಲಿ ಅತಿಯಾದ ಗುಗ್ಗೆ ತುಂಬಿದ್ದರೆ ಕಿವಿ ತುರಿಕೆ ಅಥವಾ ಕಿವಿ ಮುಚ್ಚುವ ಸಮಸ್ಯೆ ತಲೆದೋರುತ್ತದೆ. ಅದರಲ್ಲೂ ಈ ಥಂಡಿಯ ವಾತಾವರಣದಲ್ಲಿ ಕಿವಿಗೆ ಬೇಗನೆ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಕಿವಿ ಶುಚಿಗೊಳಿಸುವಾಗ ತುಂಬಾ ನೋವಾಗುತ್ತದೆ ಎಂಬ ಕಾರಣಕ್ಕೆ ಅದರ ಬಗ್ಗೆ ನಿರ್ಲಕ್ಷ್ಯ ಮೂಡಿರುತ್ತದೆ. ಆದ್ದರಿಂದ ಕಿವಿಯ ಗುಗ್ಗೆಯನ್ನು ಸುಲಭವಾಗಿ ಹೊರ ತೆಗೆಯುವ ಕೆಲವು ಮಾರ್ಗಗಳು ಇಲ್ಲಿವೆ.

1.ಪಾರಾಫಿನ್ ಎಣ್ಣೆ: ಇದು ಕಿವಿಯ ಕೊಳಕನ್ನು ತೆಗೆಯಲು ಸುಲಭವಾದ ಮಾರ್ಗ. ಈ ಪ್ಯಾರಾಫಿನ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕಿವಿಗೆ ಕೆಲವು ಹನಿಗಳನ್ನು ಹಾಕಿಕೊಳ್ಳಬೇಕು. ಅದು ಕಿವಿಯ ಪೂರಾ ಒಳಗೆ ಹೋಗಿ ಕರಗುವ ತನಕ ಕಾಯಬೇಕು. ನಂತರ ಗುಗ್ಗೆ ತೆಗೆದು ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು.

2. ಹೈಡ್ರೋಜೆನ್ ಪೆರಾಕ್ಸೈಡ್: ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಗೆ ಪೆರಾಕ್ಸೈಡ್ ಬೆರೆಸಿ ಎರಡೂ ಕಿವಿಗಳಿಗೆ ಒಂದೆರಡು ಹನಿಯನ್ನು ಹಾಕಬೇಕು. ಇದು ಕಿವಿಯನ್ನು ಬೇಗನೆ ಶುದ್ಧಗೊಳಿಸಿಬಿಡುತ್ತದೆ. ಕಿವಿಯಲ್ಲಿ ತುಂಬಿರುವ ಎಲ್ಲಾ ಕೊಳೆಯು ಹೊರಬರುವ ತನಕ ಈ ಹನಿಗಳನ್ನು ಗಂಟೆಗೆ ಒಂದು ಬಾರಿಯಂತೆ ಹಾಕುತ್ತಿರಬೇಕು.

3. ಗ್ಲಿಸರಿನ್: ಗ್ಲಿಸರಿನ್ ಹನಿಗಳನ್ನು ಕಿವಿಗೆ ಹಾಕಿದರೆ ಕಿವಿ ಒಳಗೆ ಸೇರಿರುವ ಘನ ರೂಪದ ಕೊಳೆ ಹೊರಬಂದು ತುರಿಕೆಯನ್ನು ಕಡಿಮೆಗೊಳಿಸುತ್ತದೆ.

4. ಬೆಳ್ಳುಳ್ಳಿ: ಕೊಬ್ಬರಿ ಎಣ್ಣೆಯೊಂದಿಗೆ ಒಂದೆರಡು ಎಸಳು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಆ ಎಣ್ಣೆಯನ್ನು ಕಿವಿಯಿಂದ ಗುಗ್ಗೆ ತೆಗೆಯಲು ಉಪಯೋಗಿಸಬಹುದು. ಇದು ಆಂಟಿ ಬ್ಯಾಕ್ಟೀರಿಯಾದಂತೆಯೂ ಕೆಲಸ ನಿರ್ವಹಿಸಿ ಕಿವಿಗೆ ಇನ್ನಿತರ ಸೋಂಕು ತಗುಲುವುದನ್ನು ತಡೆಯುತ್ತದೆ. ಆದರೆ ಬೆಳ್ಳುಳ್ಳಿ ಕಿವಿಯ ಒಳಗೆ ಹೋಗದಂತೆ ಎಚ್ಚರಿಕೆವಹಿಸಿಬೇಕು.

5. ಬಿಸಿ ಆಲಿವ್ ಎಣ್ಣೆ: ಬಿಸಿ ಮಾಡಿದ ಆಲಿವ್ ಎಣ್ಣೆ ಯನ್ನು ಮೇಲೆ ಹೇಳಿದಂತೆ ಕಿವಿಗೆ ಹಾಕಿದರೆ ಗುಗ್ಗೆಯನ್ನು ಸಂಪೂರ್ಣವಾಗಿ ಹೊರತೆಗೆಯಬಹುದು.

6. ಕಿವಿಗಳಿಂದ ಗುಗ್ಗೆ ಹೊರತೆಗೆಯಲು ಪಿನ್ನುಗಳನ್ನು, ಕಡ್ಡಿಯನ್ನು ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸಬಾರದು. ಉತ್ತಮವಾದ ಹತ್ತಿಯನ್ನು ಹೊಂದಿರುವ ಬಡ್ಸ್ ಗಳನ್ನು ಬಳಸಬಹುದು.

English summary

Ear wax removal, Ear wax removal home remedies, ಕಿವಿಯಲ್ಲಿ ಗುಗ್ಗೆ ಸಮಸ್ಯೆ, ಗುಗ್ಗೆ ಶುದ್ಧಗೊಳಿಸುವ ನೈಸರ್ಗಿಕ ಮಾರ್ಗ

The ear wax is actually produced by the canal glands for the protecting and moistening of the ear. The organ cleaning wax sometimes gets mixed with the dirt and water and blocks the ear which gradually leads to severe pain. This ear wax can be removed easily with some remedies available at home. Try using these remedies instead of the ointments and drops available in stores as these are mild.
Story first published: Tuesday, August 16, 2011, 15:32 [IST]
X
Desktop Bottom Promotion