For Quick Alerts
ALLOW NOTIFICATIONS  
For Daily Alerts

ಆಕರ್ಷಕವಾಗಿ ಕಾಣ ಬಯಸುವುದಾದರೆ ಈ ಆಹಾರಗಳನ್ನು ದೂರವಿಡಿ

|

ಸೌಂದರ್ಯ ಪ್ರಜ್ಞೆ ಇರುವವರಿಗೆ ತಮ್ಮ ಚರ್ಮದ ಕಾಳಜಿ ಬಗ್ಗೆ ಅಷ್ಟೇ ಆಸಕ್ತಿ ಇರುತ್ತದೆ. ಮಗುವಾಗಿದ್ದಾಗ ಮುಖದ ಚರ್ಮ ಹೇಗೆ ಯಾವುದೇ ಕಲೆಗಳು ಅಥವಾ ಗುಳ್ಳೆಗಳು ಇಲ್ಲದಂತೆ ನಯವಾಗಿ ಮತ್ತು ಸುಂದರವಾಗಿ ಕಾಣುತ್ತದೆ, ಅದೇ ರೀತಿ ದೊಡ್ಡವರಾದ ಮೇಲೂ ಇರಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ? ಆದರೆ ಇದು ಯಾರಿಗೂ ಸಾಧ್ಯವಾಗುವುದಿಲ್ಲ.

ಏಕೆಂದರೆ ಪ್ರೌಢಾವಸ್ಥೆಗೆ ಬಂದ ನಂತರ ಮುಖದ ಮೇಲೆ ಬರುವ ಮೊಡವೆಗಳು ಕೆಲವು ದಿನಗಳ ನಂತರ ಮಾಯವಾದರೂ ಅವುಗಳ ಕಲೆಗಳು ಮಾತ್ರ ಚರ್ಮದ ಮೇಲೆ ಹಾಗೆ ದೀರ್ಘ ಕಾಲದವರೆಗೂ ಉಳಿದು ಬಿಡುತ್ತವೆ. ಚರ್ಮದ ಕಲೆಗಳನ್ನು ಇಲ್ಲವಾಗಿಸಲೆಂದು ಬಳಕೆ ಮಾಡಲು ಮುಂದಾಗುವ ರಾಸಾಯನಿಕಯುಕ್ತ ಕ್ರೀಂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರಭಾವ ಬೀರಿ ಕೆಲವರಿಗೆ ಸಮಸ್ಯೆ ಕಡಿಮೆ ಆದರೆ, ಇನ್ನು ಕೆಲವರಿಗೆ ಮೊದಲಿಗಿಂತ ಹೆಚ್ಚಾಗಿ ಚರ್ಮದ ಸಮಸ್ಯೆ ಇನ್ನಷ್ಟು ಜಾಸ್ತಿಯಾಗುತ್ತದೆ.

ಮುಖದ ಸೌಂದರ್ಯವನ್ನು ಹಾಳು ಮಾಡಲು ಕೇವಲ ಪ್ರೌಢಾವಸ್ಥೆ ಮಾತ್ರ ಕಾರಣವಾಗುತ್ತದೆ ಎಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ಜೀವನ ಶೈಲಿ ನಮ್ಮ ಆಹಾರ ಶೈಲಿ ನಮ್ಮ ಮಾನಸಿಕ ಆಲೋಚನೆಗಳು ನಮ್ಮ ಚಟುವಟಿಕೆಗಳು ಎಲ್ಲವೂ ಕೂಡ ತಮ್ಮದೇ ಆದ ರೀತಿಯಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಮೇಲೆ ಕೆಲಸ ಮಾಡುತ್ತವೆ.

ಉದಾಹರಣೆಗೆ ಮಾನಸಿಕ ಆರೋಗ್ಯ ತಜ್ಞರು ಹೇಳುವಂತೆ ಮನಸ್ಸಿನಲ್ಲಿ ಕೇವಲ ನಕಾರಾತ್ಮಕ ಆಲೋಚನೆಗಳನ್ನು ತುಂಬಿಕೊಂಡಿರುವವರು ಇತರರಿಗೆ ಕೆಡುಕನ್ನು ಮಾಡಲು ಬಯಸುವ ಜನರು ತಮ್ಮ ಮನಸ್ಸಿನ ಆಲೋಚನೆಗಳನ್ನು ಮುಖದ ಮೇಲೆ ಅವರ ಭಾವನೆಗಳಲ್ಲಿ ತೋರಿಸುತ್ತಾರೆ. ಹೀಗೆ ಕೆಟ್ಟ ಆಲೋಚನೆಗಳಿಂದ ಅಂತಹ ವ್ಯಕ್ತಿಗಳ ದೇಹದಲ್ಲಿ ಕೆಲವೊಂದು ಅನಗತ್ಯ ಹಾರ್ಮೋನುಗಳ ಉತ್ತತ್ತಿ ಉಂಟಾಗಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಇನ್ನು ಆಹಾರ ಪದ್ಧತಿಯ ವಿಚಾರಕ್ಕೆ ಬರುವುದಾದರೆ, ಮುಖದ ಮೇಲೆ ಮೊಡವೆಗಳು ಗುಳ್ಳೆಗಳು ಅಥವಾ ಇನ್ನಿತರ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ತಮ್ಮ ದಿನ ನಿತ್ಯದ ಆಹಾರ ಪದ್ಧತಿಯ ಮೇಲೆ ಸ್ವಲ್ಪ ಗಮನ ವಹಿಸಬೇಕು. ತಮಗೆ ಅತ್ಯಂತ ಪ್ರಿಯವಾದ ಎಣ್ಣೆಯಲ್ಲಿ ಕರಿದ ಆಹಾರಗಳು, ಬೀದಿ ಬದಿಯ ಆಹಾರಗಳು, ಸಂಸ್ಕರಿಸಿದ ಆಹಾರಗಳು, ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡ ಆಹಾರಗಳು ಇತ್ಯಾದಿ.

ಹೀಗೆ ತಮ್ಮ ಆರೋಗ್ಯಕ್ಕೆ ಅಹಿತಕರವಾದ ಕೆಲವೊಂದು ಆಹಾರಗಳ ಮೇಲೆ ಕಡಿವಾಣ ಹಾಕಿಕೊಳ್ಳಬೇಕು. ಇತ್ತೀಚಿನ ಆಧುನಿಕ ಜೀವನ ಶೈಲಿಯಲ್ಲಿ ದೇಹಕ್ಕೆ ಯಾವುದೇ ಪೌಷ್ಟಿಕಾಂಶಗಳನ್ನು ಒದಗಿಸದಂತಹ ಆಹಾರಗಳೇ ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ಸಿಗುತ್ತಿವೆ. ಜನರು ಕೇವಲ ಇವುಗಳ ರುಚಿಗೆ ಮಾರು ಹೋಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ಪ್ರತಿ ಬಾರಿ ವೈದ್ಯರ ಬಳಿ ಹೋಗಿ ಔಷಧಿಗಳ ಸೇವನೆಗೆ ಮುಂದಾಗುವ ಬದಲು ತಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡು ಆಹಾರ ಪದ್ಧತಿಯಲ್ಲಿ ಕಟ್ಟುನಿಟ್ಟಾದ ನಿಯಮವನ್ನು ಪಾಲನೆ ಮಾಡಿಕೊಂಡು ನಡೆದರೆ ಉತ್ತಮವಾದ ದೈಹಿಕ ಸ್ವಾಸ್ತ್ಯದ ಜೊತೆಗೆ ಸುಂದರವಾದ ತ್ವಚೆ ಕೂಡ ನಿಮ್ಮದಾಗುತ್ತದೆ.

ಈ ಲೇಖನದಲ್ಲಿ ನಿಮ್ಮ ಚರ್ಮದ ಆರೋಗ್ಯಕ್ಕೆ ನೀವು ಪ್ರತಿ ದಿನ ಸೇವಿಸುವ ಯಾವೆಲ್ಲಾ ಆಹಾರಗಳು ಅನಾರೋಗ್ಯಕರ ಮತ್ತು ಅವುಗಳಿಂದ ನಿಮ್ಮ ಚರ್ಮದ ಸಮಸ್ಯೆಗಳು ಹೇಗೆ ಹೆಚ್ಚಾಗುತ್ತವೆ ಎಂಬುದರ ಜೊತೆಗೆ ಒಂದು ವೇಳೆ ಅವುಗಳು ನಿಮಗೆ ತುಂಬಾ ಇಷ್ಟವಾದ ಆಹಾರಗಳಾದರೂ ಕೂಡ ಅವುಗಳ ಬದಲಾಗಿ ಬೇರೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಾಗಿದೆ.

1 ಸಕ್ಕರೆ ಅಂಶ : -

1 ಸಕ್ಕರೆ ಅಂಶ : -

ನಮ್ಮಲ್ಲಿ ಒಂದು ಭಾವನೆ ಇರುತ್ತದೆ. ಅದೇನೆಂದರೆ ಕೇವಲ ಮಧುಮೇಹ ಇರುವವರು ಮಾತ್ರ ಹೆಚ್ಚು ಸಕ್ಕರೆ ಅಂಶಗಳನ್ನು ಒಳಗೊಂಡ ಆಹಾರಗಳನ್ನು ತಿನ್ನಬಾರದು. ಬೇರೆಯವರಿಗೆ ಸಕ್ಕರೆಯಿಂದ ಯಾವುದೇ ತೊಂದರೆ ಇಲ್ಲ ಎಂದು. ಆದರೆ ಇದು ತಪ್ಪು. ಏಕೆಂದರೆ ಸಕ್ಕರೆಯ ಪ್ರಭಾವಕ್ಕೆ ನಾನಾ ಮುಖಗಳಿವೆ. ಅದರಲ್ಲಿ ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುವ ಗುಣವೂ ಒಂದು.

ಅದರಲ್ಲೂ ವಿಶೇಷವಾಗಿ ಮೊದಲೇ ನೀವು ಯಾವುದಾದರೂ ಚರ್ಮವ್ಯಾಧಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಸಕ್ಕರೆ ಅಂಶದ ಸೇವನೆಯಲ್ಲಿ ನೀವು ಮಧುಮೇಹಿ ರೋಗಿಗಳಿಗಿಂತ ವಿಶೇಷವಾದ ಜಾಗ್ರತೆ ವಹಿಸಬೇಕು. ಹಾಗಾಗಿ ನೀವು ಪ್ರತಿ ದಿನ ಕುಡಿಯುವ ಕಾಫಿ ಅಥವಾ ಚಹಾ ಗೆ ಕಡಿಮೆ ಸಕ್ಕರೆ ಉಪಯೋಗಿಸಿ ಸೇವನೆ ಮಾಡಿದರೆ ಸಾಕಾಗುತ್ತದೆ ಎಂದುಕೊಳ್ಳಬೇಡಿ. ನೀವು ತಿನ್ನುವ ಸಿಹಿ ಪದಾರ್ಥಗಳ ಮೇಲೂ ಸಹ ಕಡಿವಾಣ ಹಾಕಿಕೊಳ್ಳಬೇಕು. ತಂಪು ಪಾನೀಯಗಳು, ಬೇಕರಿ ತಿಂಡಿಗಳು, ಕಾರ್ನ್ ಸಿರಪ್ ಇತ್ಯಾದಿಗಳ ಮೇಲೆ ನಿಮ್ಮ ಹಿಡಿತವಿರಲಿ.

ನಿಮ್ಮ ಚರ್ಮ ವ್ಯಾಧಿಗಳನ್ನು ಅಂದರೆ ಉದಾಹರಣೆಗೆ ಸೋರಿಯಾಸಿಸ್ ಅಥವಾ ಇಸುಬು ಗುಣ ಪಡಿಸಿಕೊಳ್ಳಲು ವೈದ್ಯರು ಔಷಧಿ, ಆಯಿಂಟ್ಮೆಂಟ್ ಜೊತೆಗೆ ಆಹಾರ ಪಥ್ಯವನ್ನೂ ಸೂಚಿಸಿರುತ್ತಾರೆ. ಅದರಲ್ಲಿ ಸಕ್ಕರೆ ಅಂಶ ಕೂಡ ಒಂದು. ಕನಿಷ್ಠ ಪಕ್ಷ ನಿಮ್ಮ ಚರ್ಮದ ಸಮಸ್ಯೆ ವಾಸಿ ಆಗುವವರೆಗೆ ಸಕ್ಕರೆ ಪದಾರ್ಥಗಳನ್ನು ಸ್ವಲ್ಪ ದೂರ ಇಡುವುದು ಒಳ್ಳೆಯದು.

ಏಕೆಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು - ಕಡಿಮೆ ಆದಂತೆ ಅದರ ಪ್ರಭಾವ ಮೇಲಿನ ಚರ್ಮದ ಮೇಲೆ ಉಂಟಾಗುವುದು ಸಹಜ. ಹಾಗೂ ನಿಮಗೆ ಸಕ್ಕರೆ ಅಂಶವನ್ನು ಸೇವನೆ ಮಾಡಲೇಬೇಕು ಎಂದಿದ್ದರೆ ನೈಸರ್ಗಿಕವಾಗಿ ಇರುವ ಎಳನೀರು, ಜೇನು ತುಪ್ಪ, ಆಪಲ್ ಸಾಸ್ ಇತ್ಯಾದಿಗಳನ್ನು ನಿಯಮಿತವಾಗಿ ಸೇವನೆ ಮಾಡಬಹುದು.

2 ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಅಂಶಗಳು : -

2 ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಅಂಶಗಳು : -

ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡಿರುವ ಆಹಾರಗಳು ಎಲ್ಲರಿಗೂ ಒಳ್ಳೆಯದು. ಆದರೆ ಚರ್ಮದ ಸಮಸ್ಯೆಗಳನ್ನು ಒಳಗೊಂಡಿರುವವರಿಗೆ ಮಾತ್ರ ಇವು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳುತ್ತಾರೆ. ಅಕ್ಕಿ ಹಾಗೂ ಗೋಧಿಯಿಂದ ತಯಾರು ಮಾಡಿದ ಯಾವುದೇ ಆಹಾರ ಪದಾರ್ಥಗಳು ಚರ್ಮದ ಸಮಸ್ಯೆ ಇರುವವರಿಗೆ ಅಷ್ಟಾಗಿ ಸರಿ ಹೊಂದುವುದಿಲ್ಲ ಎಂದು ತಿಳಿದು ಬಂದಿದೆ.

ಏಕೆಂದರೆ ಕಾರ್ಬೋಹೈಡ್ರೇಟ್ ಆಹಾರಗಳು ಕೂಡ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಮಾಡಿ ಇನ್ಸುಲಿನ್ ಪ್ರಮಾಣದ ಉತ್ಪತ್ತಿಯನ್ನು ಹೆಚ್ಚು ಕಡಿಮೆ ಮಾಡಿ ಸುಂದರವಾದ ಚರ್ಮದ ಮೇಲೆ ಗುಳ್ಳೆಗಳು, ಮೊಡವೆಗಳು, ಬ್ಲಾಕ್ಹೆಡ್ ಗಳಿಗೆ ಕಾರಣವಾಗುತ್ತವೆ. ಹೆಚ್ಚಾಗಿ ಬ್ರೆಡ್, ಬನ್, ಕೇಕ್, ಪೇಸ್ಟ್ರಿ ಗಳನ್ನು ತಿನ್ನುವವರು ತಮ್ಮ ಸೌಂದರ್ಯದ ಬಗ್ಗೆ ಅತೀವವಾದ ಕಾಳಜಿ ಹೊಂದಿದ್ದರೆ, ದಯವಿಟ್ಟು ಇಂತಹ ಆಹಾರಗಳಿಂದ ಸ್ವಲ್ಪ ದೂರ ಉಳಿಯಿರಿ. ನಾರಿನ ಅಂಶ ಕಡಿಮೆ ಇರುವ ಈ ಆಹಾರಗಳು ನಿಮ್ಮ ರಕ್ತದ ಹರಿವಿನಲ್ಲಿ ಬಹಳ ಬೇಗನೆ ಸೇರ್ಪಡೆಗೊಂಡು ನಿಮ್ಮ ಚರ್ಮದ ಸಮಸ್ಯೆಗೆ ಕಾರಣವಾಗುತ್ತವೆ.

3 ಡೈರಿ ಉತ್ಪನ್ನಗಳು : -

3 ಡೈರಿ ಉತ್ಪನ್ನಗಳು : -

ಡೈರಿ ಉತ್ಪನ್ನಗಳು ಎಂದರೆ ಹಾಲು, ಮೊಸರು, ಬೆಣ್ಣೆ,, ತುಪ್ಪ ಇತ್ಯಾದಿ. ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಎಲ್ಲಾ ಹಾಲಿನ ಪದಾರ್ಥಗಳಲ್ಲಿ ಜಿಡ್ಡಿನ ಅಂಶ ಹೆಚ್ಚಾಗಿರುತ್ತದೆ. ನೀವು ಮೊಡವೆಗಳ ಸಮಸ್ಯೆ ಇದೆ ಎಂದು ಚರ್ಮ ರೋಗ ತಜ್ಞರ ಬಳಿ ಹೋದರೆ ಅವರು ಮೊಟ್ಟ ಮೊದಲು ನಿಮಗೆ ಹೇಳುವುದು ಜಿಡ್ಡಿನ ಅಂಶ ಹೆಚ್ಚಾಗಿರುವ ಯಾವುದೇ ಆಹಾರವನ್ನು ತಿನ್ನಬೇಡಿ ಎಂದು.

ಏಕೆಂದರೆ ಜಿಡ್ಡಿನ ಅಂಶಕ್ಕೂ ನಿಮ್ಮ ಚರ್ಮದ ಮೇಲೆ ನಿಮ್ಮ ಕಣ್ಣೆದುರಿಗೆ ಕಂಡು ಬರುತ್ತಿರುವ ಸಮಸ್ಯೆಗಳಿಗೂ ನೇರವಾದ ಸಂಬಂಧವಿದೆ.

ಹಾಗಾಗಿ ಪ್ರತಿ ದಿನ ಹಾಲು ಕುಡಿಯುವ ಅಭ್ಯಾಸ ಇದ್ದವರು ಈ ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಹಸುವಿನ ಹಾಲಿನಲ್ಲಿ ಅಮೈನೋ ಆಮ್ಲಗಳು ಇರುವ ಕಾರಣ ಇದು ಮನುಷ್ಯನ ದೇಹದಲ್ಲಿ ಬೆಳವಣಿಗೆಯ ಹಾರ್ಮೋನ್ ಎಂದು ಕರೆಯಲಾದ IGF-1 ಹಾರ್ಮೋನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಮಾಡಿ ಮುಖದ ಮೇಲೆ ಮೊಡವೆಗಳು ಮೂಡಲು ಕಾರಣ ಆಗುತ್ತವೆ. ಅಷ್ಟೇ ಅಲ್ಲದೆ ಕೆಲವರಿಗೆ ಬೆಳಗಿನ ಸಮಯದಲ್ಲಿ ಹಾಲು ಕುಡಿದರೆ ವಾಕರಿಕೆ ಹಾಗು ವಾಂತಿ ಉಂಟಾಗುವ ಸಂಭವ ಹೆಚ್ಚಿರುತ್ತದೆ.

ಇದಕ್ಕೆ ಕಾರಣ ಹಾಲಿನಲ್ಲಿರುವ ' ಲ್ಯಾಕ್ಟೋಸ್ ' ಅಂಶ ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಲ್ಯಾಕ್ಟೋಸ್ ಹಾಲಿನಲ್ಲಿರುವ ಒಂದು ನೈಸರ್ಗಿಕವಾದ ಸಕ್ಕರೆ ಅಂಶ. ಕೆಲವರಿಗೆ ಲ್ಯಾಕ್ಟೋಸ್ ಅಂಶ ದೇಹದಲ್ಲಿ ಸರಿಯಾಗಿ ಜೀರ್ಣ ಆಗುವುದಿಲ್ಲ.

ಪ್ರತಿ ದಿನ ಹಾಲು ಕುಡಿಯುವ ಅಭ್ಯಾಸ ಇದ್ದವರಿಗೆ ತುಂಬಾ ದೀರ್ಘ ಕಾಲದವರೆಗೆ ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆ ಕಂಡು ಬರುವುದು ಸಹಜ. ಹೀಗೆ ಸೇವಿಸುವ ಆಹಾರದಲ್ಲಿ ಏರು - ಪೇರು ಉಂಟಾದರೆ ಅದರ ನೇರ ಪ್ರಭಾವ ಚರ್ಮದ ಮೇಲೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಡೈರಿ ಉತ್ಪನ್ನಗಳ ಬದಲಾಗಿ ಬಾದಾಮಿ ಹಾಲು, ತೆಂಗಿನಕಾಯಿ ಹಾಲು ಇತ್ಯಾದಿಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು.

ಜಂಕ್ ಫುಡ್ : -

ಜಂಕ್ ಫುಡ್ : -

ಇತ್ತೀಚಿನ ಯುವಜನತೆ ಬೀದಿ ಬದಿಯ ಜಂಕ್ ಫುಡ್ ದಾಸ್ಯಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ. ಇದೊಂದು ಅನಾರೋಗ್ಯಕರ ಆಹಾರ ಎಂದು ಪ್ರತಿಯೊಬ್ಬರಿಗೂ ಗೊತ್ತು. ಆದರೂ ಕೂಡ ಸಂಜೆಯ ಸ್ನಾಕ್ಸ್ ಸಮಯದಲ್ಲಿ ಜಂಕ್ ಫುಡ್ ಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅವರು ಬಳಕೆ ಮಾಡುವ ಅದೆಷ್ಟೋ ದಿನಗಳ ಸಾಸ್, ಟೊಮೆಟೊ ಕೆಚಪ್ ಗಳು ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ.

ಪ್ರತಿ ದಿನ ಎಡೆ ಬಿಡದೆ ಇಂತಹ ಆಹಾರಗಳನ್ನು ಸೇವನೆ ಮಾಡುತ್ತಿದ್ದರೆ ಒಣ ಚರ್ಮದ ಸಮಸ್ಯೆ ಉಂಟಾಗುವುದು ಖಚಿತ. ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಬಳಕೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಸಿಗಬೇಕಾದ ಪೌಷ್ಟಿಕಾಂಶಗಳ ಮಟ್ಟ ಕಡಿಮೆ ಆಗುತ್ತದೆ. ಇದರಿಂದ ನಮ್ಮ ದೇಹದ ಆರೋಗ್ಯದ ಸಮಸ್ಯೆ ಮಾತ್ರವಲ್ಲ ಚರ್ಮದ ಸಮಸ್ಯೆಗಳು ಕೂಡ ಉದ್ಭವವಾಗುತ್ತವೆ.

ಅದರಲ್ಲೂ ಒಮೆಗಾ - 3 ಫ್ಯಾಟಿ ಆಸಿಡ್ ಮತ್ತು ಒಮೆಗಾ - 6 ಫ್ಯಾಟಿ ಆಸಿಡ್ ಅಂಶಗಳು ಹೆಚ್ಚಾಗಿ ಒಳಗೊಂಡಿರುವ ಆಹಾರಗಳನ್ನು ಸೇವನೆ ಮಾಡಿದರೆ ಚರ್ಮದ ಉರಿಯೂತ ಕಂಡು ಬಂದು ಚರ್ಮದ ಮೇಲೆ ಗುಳ್ಳೆಗಳು, ಕೆರೆತ, ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದು ಇತ್ಯಾದಿ ಸಮಸ್ಯೆಗಳು ಕಾಡುವುದು ಸಹಜ. ಹಾಗಾಗಿ ಸಾಧ್ಯವಾದಷ್ಟು ಹೊರಗಿನ ಅದರಲ್ಲೂ ಬೀದಿ ಬದಿಯ ಜಂಕ್ ಫುಡ್ ಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿಕೊಂಡು ಮನೆಯ ಆಹಾರಗಳಿಗೆ ಹೆಚ್ಚು ಒತ್ತು ನೀಡಿ.

5 ಕೆಲವು ಆಹಾರಗಳು ಕೆಲವರಿಗೆ ಮಾತ್ರ ಸೂಕ್ತ : -

5 ಕೆಲವು ಆಹಾರಗಳು ಕೆಲವರಿಗೆ ಮಾತ್ರ ಸೂಕ್ತ : -

ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದೈಹಿಕ ಪ್ರಕೃತಿ ಇರುತ್ತದೆ. ಒಂದೇ ಮನೆಯಲ್ಲಿ ಒಂದೇ ಕುಟುಂಬದವರಾದರೂ ಕೂಡ ಒಬ್ಬೊಬ್ಬರಲ್ಲಿ ಒಂದೊಂದು ಭಿನ್ನತೆ ಎದ್ದು ಕಾಣುತ್ತದೆ. ಆಹಾರದ ವಿಚಾರದಲ್ಲೂ ಹಾಗೆ. ಕೆಲವರಿಗೆ ಹೆಚ್ಚಾಗಿ ಬದನೆಕಾಯಿ ತಿನ್ನುವ ಆಸೆ ಇದ್ದರೆ, ಇನ್ನೊಬ್ಬರಿಗೆ ಬದನೆಕಾಯಿ ಸ್ವಲ್ಪವೂ ಇಷ್ಟವಿರುವುದಿಲ್ಲ. ಏಕೆಂದರೆ ಅವರಿಗೆ ಅದರಿಂದ ಆರೋಗ್ಯಕ್ಕೆ ಏನಾದರೂ ಸಮಸ್ಯೆ ಉಂಟಾಗುತ್ತದೆ ಎನ್ನುವ ಅನುಭವ ಅದಾಗಲೇ ಆಗಿರುತ್ತದೆ.

ಅದೇ ರೀತಿ ಕೆಲವರು ಹೆಚ್ಚು ಸಿಹಿ ಪದಾರ್ಥಗಳನ್ನು ಇಷ್ಟ ಪಟ್ಟರೆ ಇನ್ನೂ ಕೆಲವರು ಖಾರದ ಅಂಶಗಳನ್ನು ಒಳಗೊಂಡ ಆಹಾರಗಳಿಗೆ ಬೇಡಿಕೆ ಇಡುತ್ತಾರೆ. ಈ ವಿಷಯವನ್ನು ಇಲ್ಲಿ ಏಕೆ ಪ್ರಸ್ತಾಪಿಸುತ್ತಿದ್ದೇವೆ ಎಂದರೆ ಒಬ್ಬರು ಸೇವಿಸುವ ಆಹಾರ ನಮ್ಮ ಆರೋಗ್ಯಕ್ಕೂ ಸಹಕಾರಿಯಾಗಿರುತ್ತದೆ ಎಂದು ತಿಳಿದುಕೊಳ್ಳುವುದು ತಪ್ಪು. ಮೇಲ್ನೋಟಕ್ಕೆ ನಮಗೆ ಇಷ್ಟವಿಲ್ಲದ ಆಹಾರದಿಂದ ನಮಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಎನಿಸಿದರೂ ನಿಧಾನವಾಗಿ ದಿನ ಕಳೆದಂತೆ ಅದರ ಪ್ರಭಾವ ನಮ್ಮ ಆರೋಗ್ಯದ ಮೇಲೆ ಆಗಬಹುದು.

ಇದರಿಂದ ಮಾನಸಿಕವಾಗಿ ನಾವು ಕುಗ್ಗುತ್ತೇವೆ. ನಮ್ಮ ಮೆದುಳಿನಲ್ಲಿ ಬರುವ ಅಹಿತಕರ ಆಲೋಚನೆಗಳು ಕೆಲವೊಮ್ಮೆ ನಮ್ಮ ದೇಹದಲ್ಲಿ ಅವಶ್ಯವಿಲ್ಲದ ಹಾರ್ಮೋನುಗಳನ್ನು ಹೆಚ್ಚು ಉತ್ಪತ್ತಿ ಮಾಡಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಹಾಗಾಗಿ ಆರೋಗ್ಯ ಭರಿತವಾದ ಮತ್ತು ನಿಮ್ಮ ದೇಹಕ್ಕೆ ಸೂಕ್ತವಾಗುವಂತಹ ನೈಸರ್ಗಿಕ ರೂಪದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಲು ಮುಂದಾಗಿ.

English summary

Anti-Aging Diet : Foods to Avoid to Look Younger and Beautiful

Anti-ageing Diet in Kannada: Here are the list of foods to avoid to look younger and beautiful. Take a look.
X