For Quick Alerts
ALLOW NOTIFICATIONS  
For Daily Alerts

ಉದ್ಯೋಗಿ ಮಹಿಳೆಯರ ಅಂದ ಹೆಚ್ಚಿಸುವ ಕಾಟನ್ ಸೀರೆಗಳು

By Super
|

ನಾರಿಗೆ ಸೀರೆ ಚಂದ ಎನ್ನುವ ಮಾತಿದೆ. ಸೀರೆಯುಟ್ಟ ನಾರಿಯ ಸೌಂದರ್ಯವನ್ನು ಬಣ್ಣಿಸಲು ಪದಗಳೇ ಸಾಲದು. ಸೀರೆ ಭಾರತದ ಸಾಂಪ್ರದಾಯಿಕ ಉಡುಗೆ ಕೂಡ. ಆಧುನಿಕ ಜಗತ್ತಿನ ನಾರಿ ಕೂಡ ಕಚೇರಿಗೆ ಹೋಗುವಾಗ ಸೀರೆಯುಡಲು ಬಯಸುತ್ತಾಳೆ. ಹೆಚ್ಚಿನ ಮಹಿಳೆಯರು ಸೀರೆಯುಡಲು ಬಯಸುವುದು ಇದು ಯಾವ ದೇಹರಚನೆಗೂ ಹೊಂದಿಕೊಳ್ಳುತ್ತದೆ ಎನ್ನುವ ಕಾರಣದಿಂದಾಗಿ. ನೀವು ಎಷ್ಟೇ ದಪ್ಪ ಅಥವಾ ಸಪೂರವಿರಲಿ, ಕೆಲಸ ಮಾಡುವ ಜಾಗದಲ್ಲಿ ನೀವು ಸೀರೆಯುಟ್ಟರೆ ತುಂಬಾ ಅಂದವಾಗಿ ಮತ್ತು ಆಕರ್ಷಕವಾಗಿ ಕಾಣಿಸುತ್ತೀರಿ.

ಈ ರೀತೀಯ ಸಾಂಪ್ರದಾಯಿಕ ಉಡುಗೆಯನ್ನು ಹಬ್ಬಗಳಂತಹ ವಿಶೇಷ ಸಂದರ್ಭ, ಕ್ಲೈಂಟ್ ಗಳೊಂದಿಗೆ ಮೀಟಿಂಗ್, ಕಚೇರಿ ಸಂಬಂಧಿಸಿದ ಸಭೆ ಅಲ್ಲದೆ ಇತರ ಯಾವುದೇ ಸಂದರ್ಭದಲ್ಲಿ ಸೀರೆಯು ನಿಮಗೆ ಅತ್ಯುತ್ತಮ ಉಡುಗೆಯಾಗಿ ಕಾಣಿಸುತ್ತದೆ. ಸೀರೆಯ ಮೋಹ ಬಾಲಿವುಡ್ ಮಂದಿಯನ್ನು ಬಿಟ್ಟಿಲ್ಲ. ಬಾಲಿವುಡ್‌ನ ಸೆಲೆಬ್ರಿಟಿಗಳು ಫ್ಯಾನ್ಸಿ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ವಿದ್ಯಾ ಬಾಲನ್ ಯಾವಾಗಲೂ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಿರುತ್ತಾರೆ. ಕಷ್ಟವಾಗದಿರಲಿ ಕಾಟನ್ ಸೀರೆ ನಿರ್ವಹಣೆ

ವಿದ್ಯಾ ಬಾಲನ್ ಧರಿಸುವ ಕಾಟನ್ ಸೀರೆಗಳು ಕೆಲಸ ಮಾಡುವ ಮಹಿಳೆಯರಿಗೆ ಹೇಳಿ ಮಾಡಿಸಿದಂತಿದೆ. ಬನ್ನಿ ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ನಾವಿಲ್ಲ ಕಾಟನ್ ಸೀರೆಗಳನ್ನು ಪಟ್ಟಿ ಮಾಡಿದ್ದೇವೆ. ನೀವೊಮ್ಮೆ ಕಣ್ಣುಹಾಯಿಸಿ...

ಪ್ರಿಂಟೆಡ್ ಕಾಟನ್

ಪ್ರಿಂಟೆಡ್ ಕಾಟನ್

ಕಚೇರಿಗೆ ಹೋಗುವಾಗ ಧರಿಸಬಹುದಾದ ಮತ್ತೊಂದು ಸೀರೆಯೆಂದರೆ ಪ್ರಿಂಟೆಡ್ ಕಾಟನ್. ನಿಮ್ಮ ದೇಹದ ರಚನೆಗೆ ಅನುಗುಣವಾಗಿ ಪ್ರಿಂಟ್ ಗಳನ್ನು ಆಯ್ಕೆ ಮಾಡಿ. ನೀವು ದಪ್ಪಗಿದ್ದರೆ ಆಗ ಸಣ್ಣ ಪ್ರಿಂಟ್‌ಗಳನ್ನು ಆಯ್ಕೆ ಮಾಡಿ, ಸಪೂರ ದೇಹವನ್ನು ಹೊಂದಿರುವವರು ದೊಡ್ಡ ಪ್ರಿಂಟ್ ಆಯ್ಕೆ ಮಾಡಿ.

ಗಾಢ ಬಣ್ಣದ ರವಕೆ

ಗಾಢ ಬಣ್ಣದ ರವಕೆ

ನೀವು ಬಿಳಿ ಕಾಟನ್ ಸೀರೆಯನ್ನು ಉಡುವುದಾದರೆ ಆಗ ಅದಕ್ಕೆ ಗಾಢ ಬಣ್ಣದ ರವಕೆಯನ್ನು ಧರಿಸಿ. ಕೆಂಪು ಬಣ್ಣದ ರವಕೆಯು ತುಂಬಾ ಸ್ಪಂದನಶೀಲ ಮತ್ತು ಸಾಂಪ್ರದಾಯಿಕ ಉಡುಗೆಯ ಅಂದವನ್ನು ಹೆಚ್ಚಿಸುತ್ತದೆ.

ಪ್ರಿಂಟೆಂಡ್ ರವಿಕೆಗಳು

ಪ್ರಿಂಟೆಂಡ್ ರವಿಕೆಗಳು

ಗಾಢ ಬಣ್ಣದ ಸೀರೆಯನ್ನು ಧರಿಸಿದರೆ ಆಗ ಅದಕ್ಕೆ ಪ್ರಿಂಟೆಂಡ್ ರವಿಕೆಗಳನ್ನು ಉಟ್ಟರೆ ಆಗ ನಿಮ್ಮ ಸೌಂದರ್ಯವು ದ್ವಿಗುಣಗೊಳ್ಳುತ್ತದೆ. ಸುಟ್ಟ ಕಿತ್ತಳೆ ಬಣ್ಣದ ಸೀರೆಯು ಕಪ್ಪು ಮತ್ತು ಬಿಳಿ ಬಣ್ಣದ ರವಕೆಗೆ ಸರಿಯಾಗಿ ಮ್ಯಾಚ್ ಆಗುತ್ತದೆ.

ಸೂರ್ಯಕಿರಣದ ಸ್ಪರ್ಶ

ಸೂರ್ಯಕಿರಣದ ಸ್ಪರ್ಶ

ನೀವು ಕಚೇರಿಯ ಮೀಟಿಂಗ್ ನಲ್ಲಿ ಭಾಗಿಯಾಗುವುದಿದ್ದರೆ ಆಗ ಹೆಚ್ಚು ಗಾಢವೂ ಅಲ್ಲದ, ಮಸುಕಾದ ಬಣ್ಣವು ಅಲ್ಲದ ಸೀರೆಯನ್ನು ಆಯ್ಕೆ ಮಾಡಿ. ಕೆಲಸ ಮಾಡುವ ಮಹಿಳೆಗೆ ಲೆಮನ್ ಕಾಟನ್ ಸಾರಿ ಅತ್ಯುತ್ತಮ ಆಯ್ಕೆ. ಕೂದಲನ್ನು ಭುಜದ ಮೇಲೆ ಬಿಡಿ ಮತ್ತು ಹೆಚ್ಚು ಆಭರಣಗಳನ್ನು ಧರಿಸಬೇಡಿ.

ಕಲರ್ ಬ್ಲಾಕ್ಸ್

ಕಲರ್ ಬ್ಲಾಕ್ಸ್

ಕಲರ್ ಬ್ಲಾಕ್ಸ್ ಸೀರೆಗಳು ತುಂಬಾ ಸುಂದರ ಹಾಗೂ ಈ ಋತುವಿಗೆ ಹೇಳಿ ಮಾಡಿಸಿದ್ದಾಗಿದೆ. ಈ ಸೀರೆಯ ವಿಶೇಷತೆಗಳಲ್ಲಿ ಒಂದೆಂದರೆ ಈ ಸೀರೆಗೆ ನೀವು ಯಾವುದೇ ರವಿಕೆಯನ್ನು ಧರಿಸಿ ಸ್ಟೈಲ್ ಮಾಡಬಹುದು.

English summary

Cotton Sarees For Working Women

Saree is the traditional Indian attire and many women prefer to wear sarees to their workplace. The saree is a very comfortable attire and it gives a very formal yet traditional look. Many women opt for a saree as it suits all types of figures.Here are 10 best sarees for the working women, take a look:
Story first published: Friday, June 26, 2015, 23:19 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more