ಸೆಕ್ಸ್ ಚಟ ಅಂಟಿರುವ ಈ ಮಹಿಳೆಗೆ ಏಳು ಗಂಟೆಗಳ ನಿರಂತರ ಲೈಂಗಿಕ ಕ್ರಿಯೆಯು ಸಾಕಾಗದು!!


ಮನುಷ್ಯನಿಗೆ ಹಸಿವು, ಬಾಯಾರಿಕೆ ಮತ್ತು ಇತರ ಕೆಲವು ಬಯಕೆಗಳು ಆಗುವಂತೆ ಲೈಂಗಿಕ ಆಕಾಂಕ್ಷೆ ಕೂಡ ಒಂದು. ಇದು ಪ್ರಕೃತಿದತ್ತವಾದದ್ದು. ಲೈಂಗಿಕ ಕ್ರಿಯೆಯಿಂದ ಮನುಷ್ಯ ಕೂಡ ತನಗೆ ಬೇಕಿರುವಂತಹ ಸುಖ ಪಡೆದು ಕೊಳ್ಳುತ್ತಾನೆ. ಮಾತ್ರವಲ್ಲದೆ ಇದರೊಂದಿಗೆ ಆತ ತನ್ನ ಸಂತಾನೋತ್ಪತ್ತಿಯಲ್ಲಿ ತೊಡಗುವನು. ಲೈಂಗಿಕ ಕ್ರಿಯೆಯು ತುಂಬಾ ಸಂತೋಷಕರ, ಆನಂದ ಮತ್ತು ಬಲನೀಡುವಂತದ್ದಾಗಿದೆ.

ಇಲ್ಲಿ ಎರಡು ಆತ್ಮಗಳು ಭಾವನಾತ್ಮಕವಾಗಿ ಬೆಸೆದುಕೊಂಡಾಗ ಪ್ರೀತಿಯು ಶುದ್ಧವಾಗಿರುವುದು ಮತ್ತು ಭಾವನೆಗಳು ತೀವ್ರವಾಗಿರುವುದು. ಪ್ರಾಣಿಗಳು ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ. ಆದರೆ ಅವುಗಳಿಗೆ ಸಮಯ ಹಾಗೂ ಋತುವಿನ ನಿರ್ಬಂಧವಿರುತ್ತದೆ. ಆಯಾಯ ಋತುವಿನಲ್ಲಿ ಮಾತ್ರ ಪ್ರಾಣಿಗಳು ಲೈಂಗಿಕ ಕ್ರಿಯೆ ನಡೆಸುತ್ತವೆ. ಆದರೆ ಮನುಷ್ಯ ಹಾಗಲ್ಲ. ಆತನಿಗೆ ಪ್ರತಿನಿತ್ಯವು ಲೈಂಗಿಕಕ್ರಿಯೆ ನಡೆಸುವಂತಹ ಶಕ್ತಿಯಿದೆ. ಪ್ರತಿದಿನವೂ ಲೈಂಗಿಕ ಕ್ರಿಯೆ ಸರಿಯಾಗಿ ಆಗದಿದ್ದರೆ ಆಗ ಖಿನ್ನತೆ, ನಿರಾಶೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಆದರೆ ವ್ಯಕ್ತಿಗಳು ಸೆಕ್ಸ್ ಚಟಕ್ಕೆ ಬಿದ್ದರೆ ಆಗ ಏನು ಆಗಬಹುದು ಎಂದು ಊಹಿಸಿಕೊಳ್ಳಲು ತುಂಬಾ ಕಷ್ಟವಾಗಬಹುದು. ಕೆಲವರಿಗೆ ದಿನವಿಡೀ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಂಡರೂ ಇದರಿಂದ ತೃಪ್ತಿ ಎನ್ನುವುದು ಸಿಗದು. ಇಂತಹ ಅಪರೂಪದ ಕಾಯಿಲೆಯು ಕೆಲವು ಜನರಲ್ಲಿ ಕಂಡುಬರುವುದು. ಗಂಟೆಗಳ ಕಾಲ ಇವರು ಸೆಕ್ಸ್ ನಲ್ಲಿ ತೊಡಗಿದರೂ ಇದನ್ನು ನಿಲ್ಲಿಸಿದಾಗ ಮತ್ತೆ ಬೇಕು ಎಂದೆನಿಸುವುದು. ಪ್ರತಿನಿತ್ಯ ಏಳು ಗಂಟೆಗೂ ಹೆಚ್ಚು ಕಾಲ ಲೈಂಗಿಕಕ್ರಿಯೆಯಲ್ಲಿ ತೊಡಗುವಂತಹ ಮಹಿಳೆಯ ಬಗ್ಗೆ ನೀವು ವಿವರವಾಗಿ ಇಲ್ಲಿ ತಿಳಿಯಿರಿ...

ಮೂರು ಮಕ್ಕಳ ತಾಯಿ

ರೆಬೆಕ್ಕಾ ಬಾರ್ಕರ್ ಎಂಬ 37ರ ಹರೆಯದ ಮಹಿಳೆಯು ಮೂರು ಮಕ್ಕಳ ತಾಯಿ. ಈಕೆ ಪ್ರತಿ ನಿಮಿಷವೂ ಸೆಕ್ಸ್ ಗಾಗಿ ಹಾತೊರೆಯುವಳು. ದಿನದಲ್ಲಿ ಏಳು ಗಂಟೆಗಳ ಕಾಲ ಸೆಕ್ಸ್ ನಲ್ಲಿ ಕಳೆದರೂ ಆಕೆಗೆ ತೃಪ್ತಿಯಾಗದು.

ಇದುವರೆಗೆ ಆಕೆಗೆ ತೃಪ್ತಿಯಾಗಿಲ್ಲ!

ಆಕೆ ದಿನದಲ್ಲಿ ಏಳು ಗಂಟೆಗಳ ಕಾಲ ಸೆಕ್ಸ್ ನಲ್ಲಿ ತೊಡಗಿಸಿಕೊಂಡರೂ ಆಕೆಗೆ ತುಂಬಾ ಒತ್ತಡ ಮತ್ತು ಆತಂಕದ ಭಾವನೆ ಕಡಿಮೆಯಾಗುವುದು. ಆದರೆ ಸಂಪೂರ್ಣ ತೃಪ್ತಿ ಎನ್ನುವುದು ಸಿಕ್ಕಿಲ್ಲ. ಲೈಂಗಿಕ ಕ್ರಿಯೆಯು ಕೊನೆಗೊಂಡಾಗ ಇದು ಮತ್ತೆ ಮತ್ತೆ ಆರಂಭವಾಗಬೇಕೆಂದು ಆಕೆ ಬಯಸುವಳು.

ಮನಶಾಸ್ತ್ರಜ್ಞರನ್ನು ಭೇಟಿಯಾದಳು

ಈ ಚಟದಿಂದ ಮುಕ್ತಿ ಪಡೆಯಲು ರೆಬೆಕ್ಕಾ ಮನಶಾಸ್ತ್ರಜ್ಞರ ಬಳಿ ತೆರಳಿದಳು. ವೈದ್ಯರು ಆಕೆಯ ಪರಿಸ್ಥಿತಿಯನ್ನು ತಿಳಿದುಕೊಂಡು, ಆಕೆಗೆ ಸೆಕ್ಸ್ ಚಟ ಕಡಿಮೆ ಮಾಡಲು ಕೆಲವು ಔಷಧಿಗಳನ್ನು ಸೂಚಿಸಿದರು. ಶೇ. ನಾಲ್ಕರಷ್ಟು ಮಹಿಳೆಯರಲ್ಲಿ ಇಂತಹ ಚಟವು ಕಾಣಿಸಿಕೊಳ್ಳುವುದು ಎಂದು ಆಕೆ ಹೇಳುತ್ತಾಳೆ.

ವೈದ್ಯರು ನೀಡಿದ ಮಾಹಿತಿ

ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ನಿಂದಾಗಿ ಉನ್ನತ ಮಟ್ಟದ ಸೆಕ್ಸ್ ಆಕಾಂಕ್ಷೆಯು ಬರುವುದು ಎಂದು ಮನಶಾಸ್ತ್ರಜ್ಞರು ಬಹಿರಂಗಪಡಿಸಿದ್ದಾರೆ. ಆಕೆಯ ಪರಿಸ್ಥಿತಿಯ ಬಗ್ಗೆ ಪರೀಕ್ಷೆ ಮಾಡಿದ ಬಳಿಕ ಆಕೆಗೆ ಖಿನ್ನತೆ ನಿರೋಧಕ ಔಷಧಿಯನ್ನು ನೀಡಲಾಯಿತು ಮತ್ತು ಇದರಿಂದ ಆಕೆಯ ಸೆಕ್ಸ್ ಚಟವು ಕಡಿಮೆಯಾಗುತ್ತಾ ಬಂತು.

Have a great day!
Read more...

English Summary

Making love is a pure, intense feeling where two souls connect emotionally. However, what happens when the person becomes an addict and wishes to have sex all day long? Sounds crazy, right? However, some people suffer from this rare disease where they turn sex addicts and are never satisfied with sex. They end up spending hours making out and the moment they stop, they need more...Check out the details of the woman who has sex for more than 7 hours every day and needs more...