ಎಂತಹ ಅವಸ್ಥೆ ನೋಡಿ-ಭಾರತದ ಇಂತಹ ಏಳು ಜಾಗಗಳಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ!!


ಭಾರತದಲ್ಲಿ ಇಲ್ಲಿನ ಪ್ರಜೆಗಳಿಗೆ ಎಲ್ಲಿ ಬೇಕಾದರಲ್ಲಿ ತಿರುಗಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಭಾರತದಲ್ಲೇ ಕೆಲವೊಂದು ಪ್ರದೇಶಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ. ಇದನ್ನು ಕೇಳಿ ಖಂಡಿತವಾಗಿಯೂ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ.

ಭಾರತವು ಪ್ರಜಾಪ್ರಭುತ್ವ ದೇಶವಾಗಿದ್ದರೂ ಕೆಲವೊಂದು ಪ್ರದೇಶಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಭಾರತೀಯರಿಗೆ ಪ್ರವೇಶವಿಲ್ಲದೆ ಇರುವಂತಹ ಆ ಪ್ರದೇಶಗಳು ಯಾವುದು ಎನ್ನುವಂತಹ ಕುತೂಹಲ ನಿಮ್ಮಲ್ಲಿ ಖಂಡಿತವಾಗಿಯೂ ಬಂದಿರುವುದು. ಇಂತಹ ಏಳು ಪ್ರದೇಶಗಳು ಯಾವುದು ಎಂದು ತಿಳಿಯಿರಿ...

ಫ್ರೀ ಕಸೊಲ್ ಕೆಫೆ, ಕಸೊಲ್

ಹೆಸರಿನಲ್ಲಿ ಫ್ರೀ ಇದೆಯೆಂದು ಎಲ್ಲರೂ ಈ ಕೆಫೆಯೊಳಗಡೆ ಹೋಗಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಕಸೊಲ್ ನಲ್ಲಿ ಭಾರತೀಯರು ಮತ್ತು ವಿದೇಶಿಯರು ತಿರುಗಾಡಲು ಬರುವರು. ಆದರೆ ಈ ಕೆಫೆಯಲ್ಲಿ ವಿದೇಶಿ ಪಾಸ್ ಪೋರ್ಟ್ ಇರುವಂತಹ ಜನರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಕೆಫೆಯು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇಲ್ಲಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಕೆಲವು ಭಾರತೀಯರ ಗುಂಪು ಇಲ್ಲಿಗೆ ಬಂದು ತುಂಬಾ ಗಲಾಟೆ ಮಾಡಿದೆ. ಇದರಿಂದ ಈ ಪ್ರದೇಶದಲ್ಲಿ ಶಾಂತಿ ಕದಡಿದೆ ಎನ್ನುತ್ತಾರೆ ಕೆಫೆ ಮಾಲಕರು.

Image Source

ಯುನೊ-ಇನ್ ಹೋಟೆಲ್, ಬೆಂಗಳೂರು

ಯುನೊ-ಇನ್ ಹೋಟೆಲ್ ಬೆಂಗಳೂರಿನಲ್ಲಿರುವಂತಹ ಜಪಾನ್ ನಾಗರಿಕರಿಗೆ ಸೇವೆ ಒದಗಿಸುವ ಉದ್ದೇಶದಿಂದಾಗಿ 2012ರಲ್ಲಿ ಆರಂಭವಾಗಿತ್ತು. 2104ರಲ್ಲಿ ಇದು ಜನಪ್ರಿಯತೆಯು ತುಂಬಾ ಹೆಚ್ಚಾಯಿತು ಮತ್ತು ಇಲ್ಲಿನ ಸಿಬ್ಬಂದಿ ಭಾರತೀಯರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ವರ್ಣವೈಷಮ್ಯದ ಹಿನ್ನೆಲೆಯಲ್ಲಿ ಈ ಹೋಟೆಲ್ ನ್ನು ಇತ್ತೀಚೆಗೆ ಬೆಂಗಳೂರು ಮಹಾನಗರ ಪಾಲಿಕೆಯು ಬಂದ್ ಮಾಡಿಸಿದೆ.

Image Source

MostRead: ನಿಮಗೆ ಕೀವುಗುಳ್ಳೆ ಹಾಗೂ ಕುರ ಆಗಿದ್ದರೆ ಇಲ್ಲಿದೆ ನೋಡಿ ಪವರ್‌ ಫುಲ್ ಮನೆಮದ್ದುಗಳು

ಹೈಲ್ಯಾಂಡ್ ಲಾಡ್ಜ್(ಹೆಸರ ಬದಲಾಯಿಸಲಾಗಿದೆ)ಚೆನ್ನೈ

ತಮಿಳುನಾಡಿನ ತ್ರಿಪ್ಲಿಕನೆಯಲ್ಲಿರುವಂತಹ ಈ ಲಾಡ್ಜ್ ಹಿಂದಿನ ನವಾಬರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಇದರಿಂದ ತುಂಬಾ ಶಿಸ್ತುಬದ್ಧವಾಗಿರುವಂತಹ ಈ ಲಾಡ್ಜ್ ನಲ್ಲಿ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರಿಗೆ ಮಾತ್ರ ಪ್ರವೇಶವಿದೆ.

Image Source

ಗೋವಾದ ಕೆಲವು ಬೀಚ್ ಗಳಲ್ಲಿ ವಿದೇಶಿಯರಿಗೆ ಮಾತ್ರ ಪ್ರವೇಶ!

ಗೋವಾದ ಕೆಲವೊಂದು ಬೀಚ್ ಗಳಲ್ಲಿ ಭಾರತೀಯರೊಂದಿಗೆ ಭೇದಭಾವ ಮಾಡಲಾಗುತ್ತಿದೆ. ಬಿಕಿನಿ ಧರಿಸಿ ಬರುವಂತಹ ವಿದೇಶಿಗರನ್ನು ರಕ್ಷಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಇಲ್ಲಿನ ಉಸ್ತುವಾರಿ ವಹಿಸಿಕೊಂಡಿರುವವರು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೇವಲ ಭಾರತೀಯರು ಮಾತ್ರ ಪುಂಡಾಟಿಕೆ ಮಾಡುತ್ತಾರೆ ಎನ್ನುವಂತಿದೆ.

ಪಾಂಡಿಚೇರಿಯ ವಿದೇಶಿಗರಿಗೆ ಮಾತ್ರ ಬೀಚ್ ಗಳು

ಕೇವಲ ಗೋವಾ ಮಾತ್ರವಲ್ಲದೆ, ಪಾಂಡಿಚೇರಿಯಲ್ಲಿರುವಂತಹ ಕೆಲವೊಂದು ಬೀಚ್ ಗಳು ಕೂಡ ಭಾರತೀಯರಿಗೆ ಪ್ರವೇಶ ನಿರಾಕರಿಸಿವೆ. ಭಾರತದಲ್ಲಿ ಪಾಂಡಿಚೇರಿಯಲ್ಲಿ ಕೂಡ ಕೆಲವೊಂದು ಒಳ್ಳೆಯ ಬೀಚ್ ಗಳು ಇವೆ. ಬೀಚ್ ನಲ್ಲಿ ಭಾರತೀಯ ಮತ್ತು ಫ್ರಾನ್ಸ್ ನ ವಾಸ್ತುಶಿಲ್ಪ ಕಲೆಯಿದೆ. ಆದರೆ ಪಾಂಡಿಚೇರಿಯ ಕೆಲವು ಬೀಚ್ ಗಳಲ್ಲಿ ಗೋವಾದಂತೆ ಕೇವಲ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರಿಗೆ ಮಾತ್ರ ಪ್ರವೇಶವಿದೆ.

ಸಕುರಾ ರಯೊಕಾನ್ ರೆಸ್ಟೋರೆಂಟ್, ಅಹ್ಮದಾಬಾದ್

ಇದು ಅಹ್ಮದಾಬಾದ್ ನಲ್ಲಿರುವಂತಹ ಜಪಾನಿ ರೆಸ್ಟೋರೆಂಟ್. ಇದು ಹೆಚ್ಚು ಜನಪ್ರಿಯವಲ್ಲದೆ ಇದ್ದರೂ ಭಾರತೀಯರಿಗೆ ಇಲ್ಲಿ ಪ್ರವೇಶವಿಲ್ಲ, ಕೇವಲ ಜಪಾನ್ ನಾಗರಿಕರಿಗೆ ಮಾತ್ರ ಪ್ರವೇಶ. ಆದರೆ ಈ ರೆಸ್ಟೋರೆಂಟ್ ನ ಮಾಲಕ ಮಾತ್ರ ಭಾರತೀಯ! ಭೇದಭಾವದ ಬಗ್ಗೆ ಕೇಳಿದಾಗ, ಹಿಂದೆ ಉತ್ತರ ಭಾರತದ ಹುಡುಗಿಯರನ್ನು ವೈಟರ್ ಗಳಾಗಿ ನೇಮಿಸಲಾಗಿತ್ತು. ಆದರೆ ಭಾರತೀಯರು ಗ್ರಾಹಕರು ಅವರಿಗೆ ಕಿರುಕುಳ ನೀಡುತ್ತಲಿದ್ದರು ಎಂದು ಹೇಳುತ್ತಾರೆ. ಇದರಿಂದಾಗಿ ಈ ನಿಯಮ ಮಾಡಲಾಗಿದೆ ಎನ್ನುತ್ತಾರೆ.

MostRead:ಪ್ರತಿಯೊಂದು ರಾಶಿಚಕ್ರದಲ್ಲಿ ಅಡಗಿರುವ ಆಶ್ಚರ್ಯಕರ ಸಂಗತಿಗಳು

ವಸತಿ ಸಂಕೀರ್ಣ(ಹೆಸರು ಗೌಪ್ಯವಾಗಿಡಲಾಗಿದೆ) ತಮಿಳುನಾಡು

ತಮಿಳುನಾಡಿನ ತಿರುನೆಲ್ವೆಲಿಯ ಕುಂಡಕುಲಂ ಪರಿಮಾಣ ಸ್ಥಾವರದ ಸಮೀಪ ಇರುವಂತಹ ವಸತಿ ಸಂಕೀರ್ಣವು ಕೇವಲ ರಷ್ಯಾದ ನಾಗರಿಕರಿಗೆ ಮಾತ್ರ ಮೀಸಲಿಡಲಾಗಿದೆ. ಪ್ರವೇಶದ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಇದ್ದರೂ ಹೇಗೆ ಭೇದಭಾವ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಆಘಾತವಾಗುತ್ತದೆ. ಇಂತಹ ಭೇದಭಾವ ಯಾಕೆ? ಸಂಸ್ಥೆಗಳು ಮತ್ತು ಹೋಟೆಲ್ ಗಳು ಪ್ರವೇಶ ನಿರಾಕರಿಸುವ ಹಕ್ಕು ಇದೆಯಾ? ಇದು ಸಂಪೂರ್ಣವಾಗಿ ವರ್ಣವೈಷಮ್ಯವಾಗಿದೆ ಮತ್ತು ಇದು ಸಂಪೂರ್ಣವಾಗಿ ಭಾರತೀಯರು ಹಕ್ಕುಗಳ ಉಲ್ಲಂಘನೆಯಾಗಿದೆ.

Have a great day!
Read more...

English Summary

However, what happens when you are banned from entering certain places in your own mother land? Well, we, here at Boldsky, are about to share the details about places where Indians are banned from visiting, in India.