ಎಲಾ ಇವನ! ಹೋಗಿ ಹೋಗಿ ನಾಗರ ಹಾವನ್ನು ಮದುವೆಯಾಗುವುದೇ?


ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?

ಒಂದು ಹೆಣ್ಣುನಾಗರ ಹಾವಿನೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಅತ್ಯಂತ ಅಪಾಯಕರ, ಅಸಹ್ಯಕರ ಮತ್ತು ವಿಚಿತ್ರ ಎನ್ನಿಸುವ ಈ ಘಟನೆ ನಿಜವಾಗಿ ನಡೆದಿರುವ ಘಟನೆಯಾಗಿದ್ದು ಅಂತರ್ಜಾಲದ ಮೂಲಕ ಎಲ್ಲೆಡೆ ಹರಡುತ್ತಿದೆ.... ಮುಂದೆ ಓದಿ..

ಈತ ಬೌದ್ಧ ಧರ್ಮದ ಅನುಯಾಯಿ

ಬೌದ್ಧ ಧರ್ಮದ ಅನುಯಾಯಿಯಾಗಿರುವ ಈ ಯುವಕ, ಬೌದ್ಧಧರ್ಮದಲ್ಲಿ ತಿಳಿಸಿರುವ ಪ್ರಕಾರ ಮರಣಾನಂತರ ವ್ಯಕ್ತಿಗಳು ಪ್ರಾಣಿ, ಸರೀಸೃಪಗಳ ರೂಪವನ್ನು ಮುಂದಿನ ಜನ್ಮಗಳಲ್ಲಿ ಧರಿಸುತ್ತಾರೆ ಎಂದು ನಂಬಿದ್ದಾನೆ.

Image source

ನಾಗರ ಹಾವನ್ನು ಕಂಡಾಕ್ಷಣ....

ಇದುವರೆಗೆ ಈ ಯುವಕನ ನಿಜನಾಮವನ್ನು ಬಹಿರಂಗ ಪಡಿಸಿಲ್ಲ. ಈ ಯುವಕ ಮೊದಲ ಬಾರಿ ಈ ನಾಗರಹಾವನ್ನು ಕಂಡ ತಕ್ಷಣ ಹೃದಯದಲ್ಲಿ ಯಾವುದೋ ಅವ್ಯಕ್ತ ಭಾವನೆಯುಂಟಾಗಿತ್ತು. ಮರುಕ್ಷಣಕ್ಕೆ ಆತನ ಮೆದುಳಿಗೆ ಹೊಳೆದದ್ದು ಅರೆ!

ನಾಗರ ಹಾವನ್ನು ಕಂಡಾಕ್ಷಣ....

ಈ ಹಾವು ಹಿಂದಿನ ಜನ್ಮದಲ್ಲಿ ತನ್ನ ಪ್ರಿಯತಮೆಯಾಗಿದ್ದಳು ಎಂಬುದು. ಬಳಿಕ ಈತ ಆ ಹಾವನ್ನು ಜತನದಿಂದ ತನ್ನ ಮನೆಗೆ ತಂದು ಬಳಿಕ ವಿವಾಹವಾಗಿದ್ದಾನೆ. (ಯಾರು ವಿವಾಹ ವಿಧಿ ಬೋಧಿಸಿದರೋ ಗೊತ್ತಿಲ್ಲ, ಅಷ್ಟೇ ಏಕೆ. ಯಾವ ನೆಂಟರು ಸಾಕ್ಷಿ ಹೇಳಿದ್ದರೋ ಅದೂ ಗೊತ್ತಿಲ್ಲ)

ಜೊತೆ ಜೊತೆಯಾಗಿ ತಿರುಗಾಡುತ್ತಾರಂತೆ!

ಈಗ ಈ ಜೋಡಿ ಜೊತೆಯಾಗಿ ಚಲನಚಿತ್ರ ನೋಡುವುದು, ಬಾತುಕೋಳಿಗಳಿಗೆ ತಿನಿಸು ನೀಡುವುದು (ಈಕೆ ಬಾತುಗಳನ್ನು ತಿನ್ನುವ ಬಗ್ಗೆ ಯೋಚಿಸುತ್ತಿದ್ದಿರಬಹುದು), ಆಟ ಆಡುವುದು (ಯಾವ ಆಟವೋ ಗೊತ್ತಿಲ್ಲ), ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದು (ಹಾವು ಯಾವ ವ್ಯಾಯಾಮ ಮಾಡುತ್ತದೆ?) ಮೊದಲಾದ ಹತ್ತು ಹಲವು ಚಟುವಟಿಕೆಗಳಿಂದ ದಾಂಪತ್ಯ ಸವಿಯುತ್ತಿದ್ದಾರಂತೆ.

ಈತ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ

ಈತನ ಹುಚ್ಚಾಟಗಳನ್ನು ನೋಡಿ ಈತನ ಹಿತೈಷಿಗಳು ಹಾವಿಸ ಸಹವಾಸ ಬೇಡ ಮಾರಾಯಾ, ಇದನ್ನು ಕಾಡಿನಲ್ಲಿ ಬಿಟ್ಟು ಬಿಡು ಎಂದು ಹಿತವಚನಗಳನ್ನು ನೀಡಿದ್ದರೂ ಈತ ಅವರ ಮಾತುಗಳಿಗೆ ಕಿವಿಗೊಡುತ್ತಿಲ್ಲ. ಬದಲಿಗೆ ಈ ಹಾವನ್ನು ಇನ್ನಷ್ಟು ಹಚ್ಚಿಕೊಳ್ಳುತ್ತಿದ್ದಾನೆ.

ಹಾವಿನೊಂದಿಗೆ ಜೀವನ ನಡೆಸುತ್ತಿರುವ ಮಾನವ!

ಪ್ರಸ್ತುತ "ಹಾವಿನೊಂದಿಗೆ ಜೀವನ ನಡೆಸುತ್ತಿರುವ ಮಾನವ" ಎಂಬ ಪ್ರಖ್ಯಾತಿ (ಕುಖ್ಯಾತಿ)ಯನ್ನು ಪಡೆದಿರುವ ಈತನ ಸಂಸಾರವನ್ನು ನೋಡಲು ಜನರು ಗುಂಪುಗುಂಪಾಗಿ ಆತನ ಮನೆಗೆ ಬರುತ್ತಿದ್ದಾರಂತೆ.

ಇದು ಪ್ರೀತಿಯೋ ಅಥವಾ ಮಾನಸಿಕ ಕಾಯಿಲೆಯೋ?

ಈ ವಿಷಯ ತಿಳಿದ ಬಳಿಕ ಬುದ್ಧಿಜೀವಿಗಳು "ನಿಜವಾದ ಪ್ರೇಮವೆಂದರೆ ಇದೇ" ಎಂದು ಉದ್ಗಾರ ತೆಗೆಯಬಹುದು.

ಇದು ಪ್ರೀತಿಯೋ ಅಥವಾ ಮಾನಸಿಕ ಕಾಯಿಲೆಯೋ?

ಆದರೆ ಕಲ್ಪನೆಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುವಾಗ ವಿಷಕಾರಿ ಪ್ರಾಣಿಯೊಂದಿಗೆ ಸಂಸಾರ ನಡೆಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಆತನಿಗೆ ಹೇಗೆ ತಿಳಿಯಹೇಳಬೇಕೋ ಎಂದು ಆತನ ಮನೆಯವರಿಗೆ ಗೊತ್ತಾಗುತ್ತಿಲ್ಲವಂತೆ. ನಿಮಗೇನಾದರೂ ಹೇಳಬೇಕೆನಿಸಿದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಬಹುದು.

Have a great day!
Read more...

English Summary

A Thai man believes that a white cobra resembles his dead girlfriend! And guess what he did with it? He married the snake! Yes, now we know this sounds bizarre, but this story is awfully interesting too. Check out this unique case of a man marrying a cobra, and he did this because he was following Buddhism, in which people believe that the dead are reincarnated in the form of animals and reptiles.