ಗಣೇಶ ಚತುರ್ಥಿ 2020: ಗಣಪನ ಜನ್ಮದಿನ ಚಂದ್ರನನ್ನು ನೋಡಲೇಬಾರದು ಯಾಕೆ ಗೊತ್ತೇ?


Ganesh Chaturthi 2019 : ಗಣೇಶ ಹಬ್ಬದ ದಿನ ಚಂದ್ರನನ್ನ ನೋಡಬಾರದು ಯಾಕೆ?

ಗಣೇಶನ ಆಗಮನಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಆಗಸ್ಟ್‌ 22ರಂದು ಶನಿವಾರ ವಿನಾಯಕ ಎಲ್ಲರ ಮನೆಗಳಲ್ಲಿ ಭೂರಿ ಭೋಜನ ಸವಿಯಲು ಬರುತ್ತಾನೆ. ಆದರೆ ವಕ್ರತುಂಡನ ಜನ್ಮದಿನವಾದ ಅಂದು ಅಪ್ಪಿತಪ್ಪಿಯೂ ಚಂದ್ರನನ್ನು ನೋಡಬಾರದು ಎನ್ನುತ್ತಾರೆ. ಆದರೆ ಇದಕ್ಕೆ ನಿಖರ ಕಾರಣ ಮಾತ್ರ ಗೊತ್ತಿಲ್ಲ.

Advertisement

ಬನ್ನಿ ಡೊಳ್ಳು ಹೊಟ್ಟೆ ಗಣಪನಿಗೆ ಚಂದ್ರನ ಮೇಲೆಕೆ ಸಿಟ್ಟು ತಿಳಿಯೋಣ.

Advertisement

ಒಮ್ಮೆ ಗಣಪ ಊಟದ ಬಳಿಕ ಇಲಿಯ ಮೇಲೆ ಹೋಗುತ್ತಿದ್ದಾಗ ದಾರಿಯಲ್ಲಿ ಹಾವನ್ನು ಕಂಡು ಇಲಿ ಬೆದರಿ ಗಣಪನನ್ನು ಬೀಳಿಸಿತಂತೆ. ಆಗ ದಂತ ಮುರಿದು ಊಟವೆಲ್ಲಾ ಚೆಲ್ಲಿತ್ತಂತೆ. ಹಾವನ್ನು ಹೊಟ್ಟೆಗೆ ಕಟ್ಟಿಕೊಂಡು ಆಹಾರವನ್ನು ಮತ್ತೆ ಸಂಗ್ರಹಿಸುತ್ತಿದ್ದುದನ್ನು ಕಂಡ ಚಂದ್ರ ಅವಹೇಳನ ಮಾಡಿದನಂತೆ.

ಚಂದ್ರನ ಅಹಂಕಾರವನ್ನು ಕೊನೆಗಾಣಿಸಿ ಅತನನ್ನು ಮತ್ತೊಮ್ಮೆ ವಿನಮ್ರನಾಗಿಸಲು ಗಣಪ ಚಂದ್ರನನ್ನು ಶಪಿಸಿದನಂತೆ. ಅಂದರೆ ಅಂದಿನ ದಿನದಿಂದ ಚಂದ್ರನನ್ನು ಯಾರೂ ನೋಡದಂತಾಗಲಿ ಎಂದು ಶಪಿಸಿದನಂತೆ. ತನಗೆ ದೊರೆತೆ ಈ ಭೀಕರ ಶಾಪವನ್ನು ಎಂದೂ ನಿರೀಕ್ಷಿಸದಿದ್ದ ಚಂದ್ರನ ಅಹಂಕಾರವೆಲ್ಲಾ ಥಟ್ಟನೇ ಇಳಿದು ಚಿಂತಾಕ್ರಾಂತನಾದ. ಇದುವರೆಗೂ ತನ್ನ ಸೌಂದರ್ಯದ ಬಗ್ಗೆ ಹೊಂದಿದ್ದ ಬಿಗುಮಾನವೆಲ್ಲಾ ಕಳೆದಿತ್ತು. ಹಠಮಾರಿತನ ಹಾಗೂ ಮೊಂಡಾಟವೂ ಕೊನೆಗೊಂಡಿತು.

Advertisement

ಈ ವಿದ್ಯಮಾನವನ್ನು ನೋಡುತ್ತಿದ್ದ ಇತರ ದೇವತೆಗಳು ಮುಂದೇನಾಗಬಹುದು ಎಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದರು. ಆದರೆ ಚಂದ್ರನಿಗೆ ಅಂಟಿದ ಶಾಪವನ್ನು ವಿಮೋಚನೆಗೊಳಿಸಲು ಗಣೇಶನನ್ನು ಮನವೊಲಿಸಲು ಯತ್ನಿಸತೊಡಗಿದರು. ಬಹಳ ಪ್ರಯತ್ನದ ಬಳಿಕ ಗಣೇಶ ಇವರ ಮನವಿಗೆ ಮನಕರಗಿ ಈ ಶಾಪವನ್ನು ಇಡಿಯ ವರ್ಷಕ್ಕೆ ಅನ್ವಯವಾಗುವ ಬದಲು ಗಣೇಶ ಚತುರ್ಥಿಯಂದು ಮಾತ್ರವೇ ಅನ್ವಯಿಸುವಂತೆ ಶಾಪವನ್ನು ಬದಲಿಸಿದನಂತೆ.

ಎಲ್ಲಾ ಸಂಕಷ್ಟಗಳಿಂದ ಪಾರುಮಾಡುವ 'ಗಣೇಶ ಕವಚ ಸ್ತೋತ್ರಂ'

ಅಂದರೆ ಈ ತಪ್ಪು ಮಾಡಿದವರು ಗಣೇಶ ಚತುರ್ಥಿಯ ದಿನದಂದು ಇಡಿಯ ದಿನ ಗಣೇಶನನ್ನು ಸ್ತುತಿಸುತ್ತಾ ಹಾಗೂ ಇತರ ಧಾರ್ಮಿಕ ಕಾರ್ಯಗಳಲ್ಲಿ ಕಳೆದು ಗಣೇಶನನ್ನು ಪ್ರಾರ್ಥಿಸಬೇಕು ಆಗ ಈ ಶಾಪ ತಟ್ಟುವುದಿಲ್ಲ. ವಾಸ್ತವವಾಗಿ ಈ ಶಾಪ ಹಠಮಾರಿತನ, ಅಹಂಕಾರವನ್ನು ತ್ಯಜಿಸಲು ಹಾಗೂ ವಿನಮ್ರರಾಗಿರಲು ನೀಡಲಾಗಿದೆಯೇ ಹೊರತು ಗಣಪನ ನಿಜವಾದ ಭಕ್ತರಿಗಲ್ಲ.

Advertisement

ಗಣೇಶ ಸ್ವತಃ ಸುಂದರಾಂಗನಲ್ಲದಿದ್ದರೂ ತನ್ನ ಗುಣಗಳಿಂದ ಎಲ್ಲರ ಮನ ಗೆದ್ದಿರುವಂತೆ ಬಾಹ್ಯ ಸೌಂದರ್ಯದ ಥಳಕನ್ನು ಬಿಟ್ಟು ಆಂತರಿಕ ಸೌಂದರ್ಯ ಹಾಗೂ ಸದ್ಗುಣಗಳನ್ನೇ ಕಾಣುವುದೇ ಗಣೇಶನಿಗೆ ಪ್ರಿಯವಾಗಿದೆ. ಓರ್ವ ವ್ಯಕ್ತಿಯ ಬಾಹ್ಯ ಲಕ್ಷಣಗಳನ್ನು ಪರಿಗಣಿಸಿ ಟೀಕಿಸುವುದು ಅಥವಾ ಸೌಂದರ್ಯಕ್ಕೆ ಪ್ರಾದ್ಯಾನ್ಯತೆ ನೀಡದಿರುವಂತೆ ಗಣೇಶನ ಈ ಶಾಪ ಸದಾ ಎಚ್ಚರಿಸುತ್ತದೆ.

ಈ ವಿಶ್ವದ ಪ್ರತಿಯೊಂದೂ ದೇವರಿಗೆ ಸೇರಿದೆ ಹಾಗೂ ನಮ್ಮೊಳಗಿರುವ ಪ್ರತಿಯೊಂದೂ ದೇವರ ಕಣವಾಗಿದ್ದು ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅಂದರೆ ದೇಹದ ಪ್ರತಿಕಣವೂ ದೇವರ ಅಂಶವೇ ಆಗಿರುವಾಗ ಇದರಲ್ಲಿ ಸೌಂದರ್ಯ ಅಥವಾ ಕುರೂಪದ ಪ್ರಶ್ನೆಯೇ ಬರುವುದಿಲ್ಲ.

Advertisement


ಈ ಕಥೆಯ ಮೂಲಕ ಪ್ರತಿಯೊಬ್ಬರ ಹೃದಯದಲ್ಲಿಯೇ ದೇವರು ನೆಲೆಸಿರುವ ಕಾರಣ 'ಮನವೇ ಮಂತ್ರಾಲಯ' ಎಂಬ ನಾಣ್ಣುಡಿ ಜನಜನಿತವಾಗಿದೆ. ಈ ಕಥೆಯಿಂದ ನಾವು ಯಾರನ್ನೂ ಅವರ ಬಾಹ್ಯ ಸೌಂದರ್ಯದಿಂದ ಅಳೆಯಬಾರದು ಎಂದು ಕಲಿಯಬೇಕಾಗಿದೆ.

Read more...

English Summary

Moon God (Chandra) was handsome and was always proud of his looks. Even humans compare a beautiful face with the glowing moon. Maybe too much of praise made Moon God proud. One day, when Lord Ganesha was walking, Moon God (Chandra) tried to make fun of him by making sarcastic remarks. He commented upon the belly and the elephant head of Lord Ganesha.