ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...


Ganesh Chaturthi 2018 : ಗಣೇಶನ ಪೂಜೆ ಮಾಡುವ ವಿಧಿವಿಧಾನಗಳು | ಇದನ್ನ ಪಾಲಿಸಿ | Oneindia Kannada

ಗಣಗಳ ಅಧಿಪತಿ ಗಣೇಶನನ್ನು ಪೂಜಿಸುವ ಹಬ್ಬವಾಗಿದೆ ಚತುರ್ಥಿ. ಈ ದಿನ ಗಣಪನಿಗೆ ಹಬ್ಬದ ಅಡುಗೆಯನ್ನೇ ಮಾಡಲಾಗುತ್ತದೆ. ಮೋದಕವೆಂದರೆ ಗಣಪನಿಗೆ ತುಂಬಾ ಪ್ರೀತಿ. ಅದಕ್ಕಾಗಿಯೇ ಮೋದಕವನ್ನು ಪ್ರಸಾದ ರೂಪದಲ್ಲಿ ಮನೆಯಲ್ಲಿ ತಯಾರಿಸಲಾಗುತ್ತದೆ. ಗಣಪನ ವಿಗ್ರಹವನ್ನು ಮನೆಗೆ ಕರೆತಂದು ಪೂಜೆಯನ್ನು ಮಾಡುತ್ತಾರೆ. ಹೂವಿನ ಮಾಲೆ ಹಾಕಿ ಗಣಪನನ್ನು ಶೃಂಗರಿಸುತ್ತಾರೆ. ವಿಧ ವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಗಣಪನಿಗೆ ಪೂಜೆಯನ್ನು ಮಾಡಿ ಪ್ರಸಾದವನ್ನು ವಿತರಿಸುತ್ತಾರೆ. ಪ್ರತೀ ಬಾರಿ ಚೌತಿಯಂದು ಈ ವಿಧಾನವನ್ನು ಭಕ್ತರು ಅನುಸರಿಸುತ್ತಾರೆ. ಆದರೆ ಇಂದಿನ ನಮ್ಮ ಲೇಖನದಲ್ಲಿ ಕ್ರಮಪ್ರಕಾರವಾಗಿ ಗಣಪನ ಪೂಜೆಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಗಣಪತಿ ಪೂಜೆಯಲ್ಲಿ ಯಾಕೆ ತುಳಸಿಯನ್ನು ಬಳಸುವಂತಿಲ್ಲ ಗೊತ್ತಾ?

ವಿಘ್ನ ವಿನಾಶಕ ಎಂದೇ ಕರೆಯಿಸಿಕೊಂಡಿರುವ ಗಣಪತಿ ಸಿದ್ಧಿ ಬುದ್ಧಿಯನ್ನು ಕರುಣಿಸುವವರಾಗಿದ್ದಾರೆ. ಡೊಳ್ಳು ಹೊಟ್ಟೆ ಗಣಪ, ಮೂಷಿಕ ವಾಹನ ಮೋದಕ ಹಸ್ತ ಮೊದಲಾದ ಹೆಸರುಗಳಿಂದ ಕರೆಯಿಸಲ್ಪಡುವ ಗಣಪತಿ ಪ್ರಥಮ ಪೂಜೆಗೆ ಅಧಿಪತಿಯಾಗಿದ್ದಾರೆ. ಗಣಗಳಿಗೆ ದೇವರಾಗಿದ್ದಾರೆ. ಆನೆಯ ತಲೆ ಮತ್ತು ಹಾವನ್ನು ತಮ್ಮ ಡೊಳ್ಳು ಹೊಟ್ಟೆಗೆ ಸುತ್ತಿಕೊಂಡು, ಇಲಿಯನ್ನು ವಾಹನವನ್ನಾಗಿ ಮಾಡಿಕೊಂಡಿರುವ ಗಣಪತಿ ಬೇಡಿದ್ದನ್ನು ವರವಾಗಿ ನೀಡುವ ಮಹಾಮಹಿಮರಾಗಿದ್ದಾರೆ. ಪಾರ್ವತಿ ದೇವಿಯ ಬೆವರಿನಿಂದ ಜನ್ಮತಾಳಿದ ಗಣಪತಿ ತಿಂಡಿಪ್ರಿಯರೂ ಹೌದು. ಇದರಿಂದ ಚಂದ್ರನ ಅಪಹಾಸ್ಯಕ್ಕೆ ಗುರಿಯಾಗಿ ಚೌತಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪಿದ್ದಲ್ಲವೆಂದು ಚಂದ್ರನಿಗೆ ಶಾಪವನ್ನಿತ್ತಿದ್ದರು. ಹೀಗೆ ಮಹಾಮಹಿಮ ಎಂದೆನಿಸಿಕೊಂಡಿರುವ ಗಣಪತಿ ಭಕ್ತರ ಸರಳ ಪೂಜೆಗೂ ಕರಗುವವರಾಗಿದ್ದಾರೆ ಮತ್ತು ಕೇಳಿದ್ದನ್ನು ನೀಡುವ ಭಕ್ತವತ್ಸಲರಾಗಿದ್ದಾರೆ.

1. ಗಣೇಶ ಪೂಜೆ ಮಾಡುವುದು ಹೇಗೆ

ತಮ್ಮ ಮನೆಗಳಿಗೆ ಗಣಪನನ್ನು ಆಮಂತ್ರಿಸುವ ಮೂಲಕ ಗಣಪನನ್ನು ಭಕ್ತರು ಆರಾಧಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಮನಸ್ಸು ಶುದ್ಧವಾಗಿರಬೇಕು ಮತ್ತು ಭಕ್ತಿಯಲ್ಲಿ ಯಾವುದೇ ಕಪಟತನ ಇರಬಾರದು. ವಿಶೇಷ ಗಣಪನ ಪೂಜೆಯನ್ನು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

2. ಗಣೇಶ ಪೂಜೆಯ ಮಹತ್ವ

ಶಿವ ಮತ್ತು ಶಕ್ತಿಯ ಪುತ್ರನಾಗಿರುವ ಗಣೇಶನಿಗೆ ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆಯನ್ನು ಅರ್ಪಿಸಲಾಗುತ್ತದೆ. ಯಾವುದೇ ಶುಭಸಮಾರಂಭದಲ್ಲಿ ವಿಘ್ನಗಳು ಉಂಟಾಗಬಾರದೆಂದು ಗಣೇಶನಿಗೆ ಪ್ರಥಮ ಪೂಜೆಯನ್ನು ನೀಡುತ್ತಾರೆ. ಇದರಿಂದ ವಿಘ್ನಗಳು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಭಕ್ತರಿಗೆ ಧೈರ್ಯ, ಸ್ಥೈರ್ಯ, ಯಶಸ್ಸು ಮತ್ತು ಶುಭವನ್ನು ವಿಘ್ನೇಶ ನೀಡುತ್ತಾರೆ.

3. ಸ್ನಾನ ಮತ್ತು ಪೂಜೆಗೆ ಬೇಕಾದ ಸಿದ್ಧತೆಯನ್ನು ಮಾಡುವುದು ಹೇಗೆ

ಪೂಜೆಯನ್ನು ಮಾಡಬೇಕಾದ ದಿನ ಬೆಳಗ್ಗೆ ಬೇಗನೇ ಎದ್ದು ಸ್ನಾನವನ್ನು ಮಾಡಿ ಮತ್ತು "ಗಂಗೇಚ ಯುಮುನಾಶ್ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು" ಮಂತ್ರವನ್ನು ಸ್ನಾನ ಸಮಯದಲ್ಲಿ ಪಠಿಸಿ. ನಂತರ ಪೂಜೆಗೆ ಬೇಕಾದ ಸಿದ್ಧತೆಯನ್ನು ಮಾಡಿ.

4. ಮನೆಗೆ ಗಣೇಶನ ವಿಗ್ರಹವನ್ನು ತರುವ ಮೂಲಕ ಚತುರ್ಥಿ ಪೂಜೆಯನ್ನು ಮಾಡಿ

ಮನೆಗೆ ಗಣಪತಿ ಮೂರ್ತಿಯನ್ನು ತರುವ ಮೂಲಕ ಚತುರ್ಥಿ ಪೂಜೆಯನ್ನು ಪ್ರಾರಂಭಿಸಿ. ನಮ್ಮ ಮನೆಗೆ ಪ್ರೀತಿಯ ದೇವರನ್ನು ಕರೆತರುವ ಮೂಲಕ ಶುಭದಿನವೆಂದು ಆ ದಿನವನ್ನು ಕಂಡುಕೊಂಡು ಚತುರ್ಥಿ ಪೂಜೆಯನ್ನು ಮಾಡಬಹುದಾಗಿದೆ.

5. ಪೂಜೆಗೆ ಬೇಕಾದ ಪರಿಕರಗಳು

ಮನೆಗೆ ತಂದ ಹೊಸ ಗಣೇಶನ ವಿಗ್ರಹವನ್ನು ಕೂರಿಸಿಕೊಂಡು ಪೂಜೆಯನ್ನು ಪ್ರಾರಂಭಿಸಬೇಕು - ನಿರ್ದಿಷ್ಟ ಪರಿಕರಗಳನ್ನು ನೀವು ತರಬೇಕಾಗಬಹುದು. ಉದಾಹರಣೆಗೆ ಕೆಂಪು ಬಣ್ಣದ ಹೂವು, ದ್ರುವ ಹುಲ್ಲು, ಮೋದಲ (ಬೆಲ್ಲದ ತಿಂಡಿ) ತೆಂಗಿನಕಾಯಿ, ಕೆಂಪು ಚಂದನ (ಶ್ರೀಗಂಧದ ಪೇಸ್ಟ್) ಅಗರ್‌ಬತ್ತಿ ಮತ್ತು ಕರ್ಪೂರ.

6. ಗಣೇಶ ಪೂಜೆಗೆ ಅಲ್ತಾರ್ ಅನ್ನು ಸಿದ್ಧಪಡಿಸಿ

ನಿಮ್ಮ ಮನೆಯ ಪೂಜಾ ಪೀಠದಲ್ಲಿ ಮರದ ಮಣೆಯನ್ನು ಹಾಕಿ ಅದರ ಮೇಲೆ ಬಿಳಿ ಬಟ್ಟೆಯನ್ನು ಹಾಸಿ. ಅದರ ಮೇಲೆ ಗಣೇಶನ ವಿಗ್ರಹ ಮತ್ತು ಮೂರ್ತಿಯನ್ನು ಇರಿಸಿ. ಮೂರ್ತಿಗೆ ಹೂವಿನ ಮಾಲೆ, ಅರಶಿನ ಪೇಸ್ಟ್, ಕುಂಕುಮ, ಶ್ರೀಗಂಧದ ಪೇಸ್ಟ್ ಮತ್ತು ಇನ್ನಿತರ ಸುವಾಸನೆಯ ವಸ್ತುಗಳನ್ನು ಹಚ್ಚಿ. ದೀಪವನ್ನು ಹಚ್ಚಿ ಮತ್ತು ಗಣೇಶನ ವಿಗ್ರಹದ ಮುಂದೆ ಪೂಜಾ ಪರಿಕರಗಳನ್ನು ಇರಿಸಿ.

7. ಗಣೇಶ ಪೂಜೆಯನ್ನು ಮಾಡುವ ಮೊದಲು

ಪೂಜೆಯನ್ನು ಪ್ರಾರಂಭಿಸುವ ಮುನ್ನ, ಪೂಜೆಗೆ ಯಾವುದೇ ವಿಘ್ನ ಬರದಿರಲಿ ಎಂದು ಗಣೇಶನನ್ನು ಪ್ರಾರ್ಥಿಸಿ. ಸ್ವಲ್ಪ ನೀರು ಮತ್ತು ಹೂವು ತೆಗೆದುಕೊಂಡು ಮಂತ್ರವನ್ನು ಪಠಿಸ:- ಓಂ ಗಣ್ ಗಣಪತಯೇ ನಮಃ ವಕ್ರ ತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ಶ್ರೀ ವಿಘ್ನ ವಿನಾಶಾಕಾಯ ನಮಃ, ಸರ್ವಬೋಚಾರಣ

8. ಗಣೇಶ ಪೂಜೆ

ಗಣೇಶನನ್ನು ಪ್ರಾರ್ಥಿಸಿ ಮತ್ತು ಈ ಬೀಜಮಂತ್ರವನ್ನು 21 ಬಾರಿ ಪಠಿಸಿ. "ಓಂ ಗಂ ಗಣಪತೆಯೇ ನಮಃ" ಮೂರ್ತಿ ಅಥವಾ ಫೋಟೋದ ಮುಂದೆ ನೀರು ಚಿಮುಕಿಸಿ. ಅಸ್ಮಿನ್ ಬಿಂಬೇ ಸುಮುಖಂ ಶ್ರೀ ಮಹಾಗಣಪತಿಮ್ ಆವಾಹಯಾಮಿ (ಈ ಫೋಟೋ ಅಥವಾ ವಿಗ್ರಹದಲ್ಲಿ ಗಣೇಶ ಬಂದು ಪ್ರತಿಷ್ಠಾಪನೆಗೊಳ್ಳಲಿ). ನೀರು, ಹೂವು, ಶ್ರೀಗಂಧದ ಪೇಸ್ಟ್, ಕುಂಕುಮ, ಧ್ರುವ ಹುಲ್ಲನ್ನು ಅರ್ಪಿಸಿ. ಗರ್ಗವನ್ನು ದೇವರಿಗೆ ಸಮರ್ಪಿಸಿ.

9. ಗಣೇಶ ಪೂಜೆ

ಗಣೇಶ ಬೀಜ ಮಂತ್ರವನ್ನು 108 ಬಾರಿ ಪಠಿಸಿ ಮತ್ತು ಧ್ರುವ ಹುಲ್ಲು ಹಾಗೂ ಅರ್ಕ ಹೂವುಗಳನ್ನು ಪೂಜೆಯ ಸಮಯದಲ್ಲಿ ನೀಡಿ. ಗಣೇಶನಿಗೆ ಇದು ತುಂಬಾ ಪ್ರಿಯವಾದುದು ಮತ್ತು ಇವುಗಳನ್ನು ನೀವು ಅರ್ಪಿಸಲೇಬೇಕು. ಗಣೇಶನ ಶ್ಲೋಕವನ್ನು ಪಠಿಸಿ:- ಗಜಾನನಂ ಭೂತಗಣಾದಿ ಸೇವಿತಂ ಕಪಿತ್ತ ಜಂಬೂಫಲಸಾರ ಭಕ್ಷಿತಂ ಉಮಾ ಸುತಮ್ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಮ್

10. ಗಣೇಶ ಪೂಜೆಯನ್ನು ಸಂಪನ್ನಗೊಳಿಸುವುದು

ಪೂಜೆ ಮತ್ತು ಗಣೇಶನಿಗೆ ಅರ್ಪಣೆಯನ್ನು ನೀಡಿದ ನಂತರ ಕರ್ಪೂರದ ಆರತಿಯನ್ನು ದೇವರಿಗೆ ಮಾಡಿ. ನಮಸ್ಕಾರ ಮಾಡಿ ಮತ್ತು ಗಣೇಶನ ಅನುಗ್ರಹವನ್ನು ಪಡೆದುಕೊಳ್ಳಿ. ವಿಗ್ರಹವನ್ನು ಇರಿಸಿದ ಪೀಠದ ಮುಂದೆ ಕುಳಿತುಕೊಂಡು ವಿಗ್ರಹಕ್ಕೆ ಹೂವನ್ನು ಸಮರ್ಪಿಸಿ. ನಿಮ್ಮ ಮನೆಯ ಸದಸ್ಯರಿಗೆ ಪೂಜಾ ಪ್ರಸಾದವನ್ನು ನೀಡಿ. ಮರುದಿನ ಬೆಳಗ್ಗೆ ದೀಪವನ್ನು ಹಚ್ಚಿ ಮತ್ತು ಹೂವನ್ನು ಸಮರ್ಪಿಸಿ ಹಾಗೂ ನಿಮ್ಮ ಮನೆಗೆ ಬಂದು ನೀವು ನೀಡಿದ ಪೂಜೆಯನ್ನು ಸ್ವೀಕರಿಸಿ ನಿಮ್ಮನ್ನು ಅನುಗ್ರಹಿಸಿದ್ದಕ್ಕೆ ಗಣೇಶನಿಗೆ ವಂದನೆಯನ್ನು ತಿಳಿಸಿ.

11. ಗಣೇಶ ಚತುರ್ಥಿ ಮುಹೂರ್ತ 2018 - ಸಪ್ಟೆಂಬರ್ 13 2018 (ಗುರುವಾರ)

ಮಧ್ಯಾಹ್ನ ಗಣೇಶ ಪೂಜೆ ಸಮಯ = 10:19 ರಿಂದ 12:46; ಸಮಯ = 2 ಗಂಟೆಗಳು 27 ನಿಮಿಷ; 12 ರಂದು, ಚಂದ್ರನ ನೋಟವನ್ನು ತಪ್ಪಿಸಲು = 16:07 ರಿಂದ 19:49; ಸಮಯ= 3 ಗಂಟೆಗಳು 41 ನಿಮಿಷ; 13 ರಂದು, ಚಂದ್ರನ ನೋಟವನ್ನು ತಪ್ಪಿಸಲು = 08:43 ರಿಂದ 20:28; ಸಮಯ= 11 ಗಂಟೆಗಳು 44 ನಿಮಿಷ; ಚತುರ್ಥಿ ತಿಥಿ ಪ್ರಾರಂಭ = 16:07 12/Sep/2018 ರಂದು ; ಚತುರ್ಥಿ ತಿಥಿ ಮುಕ್ತಾಯ = 14:51 13/Sep/2018 ರಂದು. ನಿಮಗೆಲ್ಲರಿಗೂ ಚತುರ್ಥಿ ಹಬ್ಬದ ಶುಭಾಶಯಗಳು.

ಗಣಪತಿ ದೇವರ ವಿವಿಧ ಹೆಸರುಗಳು ಯಾವುದು?

Have a great day!
Read more...

English Summary

It is that time of the year, when all the ‘bappa’ bhakts (devotees) are eager to play host to the Lord by inviting him to their homes. The freshness in the breeze and the picture perfect weather strikes a perfect balance between mind, body and soul. In order to please the Ganapati, and make him visit your abode year on year, we tell you how to perform the special ‘Ganesh Chaturthi’ puja (prayer).