ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು


ಹಿಂದೂ ಧರ್ಮೀಯರು ಅತ್ಯಂತ ಭಕ್ತಭಾವದಿಂದ ಮೊದಲ ಪೂಜೆ ಸಲ್ಲಿಸುವ ಗಣಪತಿ ದೇವರನ್ನು ವಿಶ್ವದೆಲ್ಲೆಡೆ ಪೂಜಿಸಲಾಗುವುದು. ಯಾವುದೇ ಕೆಲಸ ಕಾರ್ಯಗಳು ಆರಂಭವಾಗಬೇಕಿದ್ದರೂ, ಮೊದಲು ಗಣಪತಿ ದೇವರಿಗೆ ಪೂಜೆ ಸಲ್ಲಿಸಬೇಕೆಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ. ಅದೇ ರೀತಿ ವರ್ಷದಲ್ಲಿ ಆಗಸ್ಟ್-ಸಪ್ಟೆಂಬರ್ ತಿಂಗಳು, ತಮಿಳಿನ ತಿಂಗಳು ಅವನಿಯಲ್ಲಿ ಬರುವಂತಹ ಚಂದ್ರನ ನಾಲ್ಕನೇ ಹಂತವನ್ನು ಗಣೇಶ ಚತುದರ್ಶಿ ಎಂದೂ ಕರೆಯಲಾಗುತ್ತದೆ. ಈ ವರ್ಷ ಸಪ್ಟೆಂಬರ್ 13ನೇ ತಾರೀಕಿಗೆ ಗಣೇಶ ಚತುದರ್ಶಿ.

Advertisement

ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಲ್ಲಿ ಗಣೇಶನ ಆರಾಧನೆ ಮಾಡಲಾಗುವುದು. ಎರಡು ಇಂಚಿನ ಗಣಪನ ಮೂರ್ತಿಯಿಂದ ಹಿಡಿದು ದೊಡ್ಡ ದೊಡ್ಡ ಗಣಪತಿ ಮೂರ್ತಿಗಳನ್ನು ಇಟ್ಟು ಪೂಜಿಸಲಾಗುವುದು. ಗಣೇಶ ಚತುದರ್ಶಿಯೆಂದರೆ ಭಾರತದಲ್ಲಿ ಇನ್ನಿಲ್ಲದ ಸಂಭ್ರಮ, ಸಡಗರ, ಗಣೇಶ ರಾಜನಂತೆ ಆಸೀನರಾಗಿರುವುದನ್ನು ನೀವು ನೋಡಬಹುದು. ಆದರೆ ಆತ ಒಳ್ಳೆಯ ಸ್ನೇಹಿತ ಮತ್ತು ಸಲಹೆಗಾರ ಕೂಡ.

Advertisement

ಸಂಭ್ರಮಿಸುವ ಮಗುವಿನಂತೆ ಅಥವಾ ಸಂಗೀತ ಸಾಧನ ನುಡಿಸುವ ಹಾಗೆ ನಿಮಗೆ ಗಣಪತಿಯು ಕಾಣಿಸಿಕೊಳ್ಳ ಬಹುದು. ಗಣಪತಿಗೆ ತಿಂಡಿ ಎಂದರೆ ಪಂಚಪ್ರಾಣ. ಇದರಿಂದ ಗಣಪತಿ ಪೂಜೆಗೆ ವಿವಿಧ ರೀತಿಯ ಭಕ್ಷ್ಯಗಳನ್ನು ಅರ್ಪಿಸಲಾಗುವುದು. ಕೆಲವೊಂದು ಹಣ್ಣುಗಳಾಗಿರುವ ಹಲಸು, ಬಾಳೆಹಣ್ಣು, ದಾಳಿಂಬೆ ಇತ್ಯಾದಿಗಳೊಂದಿಗೆ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ. ಅದರಲ್ಲೂ ಗಣಪನಿಗೆ ಮೋದಕವೆಂದರೆ ಅಚ್ಚುಮೆಚ್ಚು. ಗಣಪತಿ ದೇವರನ್ನು ಹೆಚ್ಚಾಗಿ ಜನರು ತಮ್ಮ ಆಪ್ತ ಸ್ನೇಹಿತನಂತೆ ಬರಮಾಡಿಕೊಳ್ಳುವರು. ಗಣಪತಿಯನ್ನು ಗಣಗಳ ದೇವನೆಂದು ಕರೆಯಲಾಗುತ್ತದೆ. 1995ರಲ್ಲಿ ಭಾರತದಲ್ಲಿ ಗಣಪತಿ ಮೂರ್ತಿ ಹಾಲು ಕುಡಿದ ಎನ್ನುವ ಪವಾಡವು ನಡೆದಿತ್ತು. ಈ ಸಮಯದಲ್ಲಿ ಹೆಚ್ಚಿನ ಎಲ್ಲಾ ಮನೆ ಹಾಗೂ ದೇವಾಲಯಗಳಿದ್ದ ಗಣಪತಿಯ ಮೂರ್ತಿಯು ಹಾಲು ಕುಡಿದಿತ್ತು. ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ.

ಗಣಪತಿ ದೇವರನ್ನು ಬೇರೆ ಯಾವುದೇ ದೇವರು ಅಥವಾ ದೇವತೆಯೊಂದಿಗೆ ಪೂಜಿಸಬಹುದು. ಮನೆ ಹಾಗೂ ದೇವಾಲಯಗಳಲ್ಲಿ ಹೆಚ್ಚಾಗಿ ಗಣಪತಿ ದೇವರೊಂದಿಗೆ ಬೇರೊಂದು ದೇವರು ಇದ್ದೇ ಇರುವರು. ಯಾಕೆಂದರೆ ಗಣಪತಿಯ ಆಶೀರ್ವಾದವಿಲ್ಲದೆ ನಿಮಗೆ ಯಾವುದೇ ರೀತಿಯ ಯಶಸ್ಸು ಸಿಗದು. ಶಿವನ ಗಣಗಳ ಸೇನೆಯ ನಾಯಕನಾಗಿರುವ ಗಣಪತಿಯಲ್ಲಿ ಅದ್ಭುತ ಶಕ್ತಿಯಿದೆ. ಗಣಪತಿ ದೇವರು ಸಾಮಾನ್ಯ ಕಣ್ಣಿಗೆ ಕಾಣಿಸದೆ ಇರುವಂತಹ ಹಲವಾರು ದುಷ್ಟಶಕ್ತಿಗಳು ಮತ್ತು ಅಡೆತಡೆಗಳನ್ನು ದೂರ ಮಾಡುವರು.

ಮೂಲಾಧಾರ ಚಕ್ರದಲ್ಲಿ ಗಣಪತಿ ದೇವರಿರುವರು. ಇದನ್ನೇ ಕುಂಡಲಿನಿ ಶಕ್ತಿ ಎಂದು ಕರೆಯಲಾಗುತ್ತದೆ. ಗಣೇಶ ದೇವರನ್ನು ಎಬ್ಬಿಸದೆ ನಿಮ್ಮ ದೈಹಿಕ ಅಥವಾ ಸಿದ್ಧಿಯ ಶಕ್ತಿಯು ಲಭಿಸದು. ಈ ಚಕ್ರವು ಸೃಷ್ಟಿಗೆ ಧ್ವನಿ ಕಂಪನ ಉಂಟು ಮಾಡುವ ಸಾಮರ್ಥ್ಯ ಹೊಂದಿದೆ. ಪ್ರಬಲ ನೆನಪಿನ ಶಕ್ತಿ ಬೆಳವಣಿಗೆ ಮತ್ತು ಅಂತಃದೃಷ್ಟಿಯ ಕಲಿಕೆಯು ಉಂಟಾಗುವುದು. ದೇಹದ ಚಕ್ರದಲ್ಲಿ ಗಣೇಶನು ನೆಲೆನಿಂತಿರುವ ಕಾರಣದಿಂದ ಆತ ನಿಮ್ಮ ಅಸೂಹೆ, ಕ್ರೋಧ, ಭೀತಿ ಮತ್ತು ಗೊಂದಲವನ್ನು ದೂರ ಮಾಡುವನು.

ತಪ್ಪುತಿಳುವಳಿಕೆಯ ಕಾರ್ಮೋಡವನ್ನು ದೂರ ಮಾಡಲು ಮತ್ತು ಯಾವುದೇ ಕಠಿಣ ಪರಿಸ್ಥಿತಿ ವಿರುದ್ಧ ಹೋರಾಡಲು ಗಣಪತಿ ದೇವರು ನೆರವಾಗುವರು. ಸ್ನೇಹಪರವಾಗಿರುವ ದೇವರಾಗಿರುವ ಗಣಪತಿ ದೇವರು ನೆರವಿಗೆ ಲಭ್ಯವಿರುವರು ಮತ್ತು ಅವರನ್ನು ನಂಬಿದವರ ಸಮಸ್ಯೆಗಳನ್ನು ದೂರ ಮಾಡುವರು. ನಿಮ್ಮ ಶತ್ರುವನ್ನು ದೂರ ಮಾಡಲು ಗಣಪತಿ ದೇವರ ಧ್ಯಾನ ಮಾಡಬಹುದು. ಗಣಪತಿ ದೇವರು ಯಾವುದೇ ಸಂಕಷ್ಟ ಮತ್ತು ಸಮಸ್ಯೆಯಲ್ಲಿ ನಿಮಗೆ ನೆರವಾಗುವ ಕಾರಣದಿಂದ ಯಶಸ್ಸು ಮತ್ತು ಸಂತೋಷವು ನಿಮಗೆ ಸಿಗುವುದು. ಗಣಪತಿ ದೇವರ ಈ 12 ಶಕ್ತಿಗಳ ಧ್ಯಾನ ಮಾಡಿ ಮತ್ತು ನಿಮಗೆ ಜೀವನದಲ್ಲಿ ಯಾವ ರೀತಿಯಿಂದ ಇದು ನೆರವಾಗುವುದು ಎಂದು ತಿಳಿಯಿರಿ.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

1.ಮಹಾಗಣಪತಿ, (ಶ್ರೇಷ್ಠ ಗಣಪತಿ)ಯು ನಿಮಗೆ ಸಂಪೂರ್ಣ ಯಶಸ್ಸು ಮತ್ತು ರಕ್ಷಣೆಯನ್ನು ಜೀವನದ ಎಲ್ಲಾ ಹಂತದಲ್ಲಿ ರಕ್ಷಣೆ ನೀಡುವರು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

2.ದ್ವಿಜ ಗಣೇಶ, (ಎರಡು ಸಲ ಹುಟ್ಟಿದಾತ) ನಿಮಗೆ ಒಳ್ಳೆಯ ಆರೋಗ್ಯ ಮತ್ತು ಸಮೃದ್ಧಿ ನೀಡುವರು. ಗಣಪತಿ ದೇವರಿಗೆ ನಾಲ್ಕು ತಲೆ ಮತ್ತು ಜಪಮಾಲೆ ಮಣಿಗಳು, ಪುಸ್ತಕ, ನೀರು ಮತ್ತು ದಂಡದೊಂದಿಗೆ ನಾಲ್ಕು ಕೈಗಳು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

3.ಹೆರಾಂಬ ಗಣಪತಿ, (ಸಂಪತ್ತಿನ ರಕ್ಷಕ), ಐದು ತಲೆಯುಳ್ಳ, ಹತ್ತು ಕೈಗಳು ಮತ್ತು ಸಿಂಹದ ಮೇಲೆ ಸವಾರಿ ಮಾಡುವಾತ.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

4.ವೀರ ಗಣಪತಿ, 16 ಕೈಗಳಲ್ಲಿ 16 ಪ್ರಬಲ ಅಸ್ತ್ರಗಳನ್ನು ಹೊಂದಿರುವ ಸೇನಾನಿಯಾಗಿರುವ ಗಣಪತಿ ಮಹಿಳೆಯರನ್ನು ಎಲ್ಲಾ ರೋಗಗಳಿಂದ ರಕ್ಷಿಸುವರು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

5.ಕರ್ಪಗ ವಿನಾಯಗರ್, ಎರಡು ಕೈಗಳಿರುವ, ಇಷ್ಟಾರ್ಥ ಸಿದ್ಧಿಸುವ, ಅರ್ಧಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಇವರು ಸಂಪತ್ತು ಕರುಣಿಸುವರು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

7. ನರಮುಖ ಗಣೇಶ, ಆದಿ ವಿನಾಯಗರ್ ಎಂದು ಕರೆಯಲಾಗುತ್ತದೆ. ಇದು ಗಣಪತಿಯ ತುಂಬಾ ಪುರಾತನ ರೂಪ. ಇದರಲ್ಲಿ ಆನೆ ತಲೆ ಬದಲಿಗೆ ಮನುಷ್ಯನ ತಲೆಯಿದೆ.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

8. ಸಿದ್ಧಿ ಮತ್ತು ಬುದ್ಧಿ ವಿನಾಯಕ, ಜಾಣ ಗಣಪತಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಸಂಗಾತಿಗಳು. ಸಿದ್ಧಿಯು ಜ್ಞಾನ ಆಶೀರ್ವದಿಸಿದರೆ, ಬುದ್ಧಿಯು ಜ್ಞಾನವನ್ನು ವಿಶ್ಲೇಷಿಸುವಳು.

ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

9. ನೃತ್ಯ ಗಣಪತಿ, (ನೃತ್ಯ ಮಾಡುವ ಗಣಪತಿ). ಇಚ್ಚೆ ನೀಡುವ ಮರದ ಕೆಳಗೆ ನೃತ್ಯ ಮಾಡುವುದನ್ನು ಚಿತ್ರಿಸಲಾಗಿದೆ. ಸಂತೋಷದ ಆಶೀರ್ವಾದ ಮತ್ತು ದೇವರು ಹಾಗೂ ಹಿರಿಯರಿಂದ ಅನುಗ್ರಹ ಪ್ರಾಪ್ತಿಯಾಗುವುದು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

10. ವಿಘ್ನ ಗಣಪತಿ, ಅಡೆತಡೆ ನಿವಾರಣೆ ಮಾಡುವ ಗಣಪತಿಗೆ ಎಂಟು ಕೈಗಳು. ಇದರಲ್ಲಿ ಶಂಖ, ವಿಷ್ಣುವಿನ ಸುದರ್ಶನ ಚಕ್ರವಿದೆ. ಇದು ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವುದು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

11. ಸೇವಿ ಸಾಯಿಥ ಗಣಪತಿ, ಇದು ಗಣಪತಿಯ ವಿಭಿನ್ನ ರೂಪ. ಕಲಿಯುಗದಲ್ಲಿ ಒಳ್ಳೆಯ ಕೆಲಸ ಮಾಡಿದರೂ ಶಿಕ್ಷೆಗೆ ಒಳಗಾಗುವವರಿಗೆ ಈ ಗಣಪತಿ ರಕ್ಷಣೆ ನೀಡವನು.

ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು

12. ಆಲಿಂಗ ನರ್ತನ ಗಣಪತಿ, ಇದು ಗಣಪತಿ ದೇವರ ನೃತ್ಯದ ರೂಪ. ಕಾಲಿಂಗ ಸರ್ಪದ ತಲೆ ಮೇಲೆ ನಿಂತು ನರ್ತಿಸುವುದು.

ಗಣಪತಿ ಅರ್ಥವಶೀರ್ಷ ಅಥವಾ ಗಣಪತಿ ಉಪನಿಷದ್ ಪಠಿಸುವ ಲಾಭಗಳು

ಇದು ತುಂಬಾ ಸಣ್ಣ ಉಪನಿಷತ್ ನ್ನು ತುಂಬಾ ವಿಳಂಬವಾಗಿ ರಚಿಸಿದ ಗಣಗಳು ಗಣಪತಿ ದೇವರಿಗೆ ಅರ್ಪಿಸುವವು. ಗಣಪತಿ ಭಕ್ತರಿಗೆ ಅವರು ಯಾವಾಗಲೂ ರಕ್ಷಕರಾಗಿರುವರು. ಶುದ್ಧ ಮನಸ್ಸಿನಿಂದ ಈ ಉಪನಿಷತ್ ನ ಪದಗಳನ್ನು ಪಠಿಸಿದಾಗ, ಗಣಪತಿ ದೇವರು ಎಲ್ಲಾ ಪಾಪ ಮತ್ತು ಅಡೆತಡೆಗಳನ್ನು ನಿವಾರಿಸುವರು. ಇದನ್ನು ಪಠಿಸುವ ಮೂಲಕ ಭಕ್ತರು ತಮ್ಮ ಜೀವನದಲ್ಲಿ ಹೆಚ್ಚು ಜಾಗೃತ ಮತ್ತು ಶ್ರೇಷ್ಠ ಜ್ಞಾನ ಪಡೆಯಬಹುದು.

ಗಣಪತಿ ದೇವರ ಮೂರ್ತಿ ಖರೀದಿಸುವ ಮೊದಲು ಈ ಸಂಗತಿಗಳು ಗಮನದಲ್ಲಿಟ್ಟುಕೊಳ್ಳಿ

Read more...

English Summary

In recent times, Ganesha is perhaps the most widely worshipped God of the Hindu pantheon. The day of the year when he is most widely worshipped is on the fourth Moon phase of Tamil month of Avani (August- September), also known as Ganesha Chaturthi. This year it falls on September 13,2018. During this festival, statues of Ganesha that are as small as two inches and as tall as two-storeyed buildings are venerated with grandeur.