ಗಣಪತಿ ದೇವರ ಮೂರ್ತಿ ಖರೀದಿಸುವ ಮೊದಲು ಈ ಸಂಗತಿಗಳು ಗಮನದಲ್ಲಿಟ್ಟುಕೊಳ್ಳಿ


ಗಣೇಶ ಚತುದರ್ಶಿ ಬಂದೇಬಿಟ್ಟಿದೆ. ಎಲ್ಲೆಡೆಯು ಸಂಭ್ರಮ ಕೂಡ ಮನೆ ಮಾಡಿದೆ. ವರ್ಷ ಕಳೆದು ಹೇಗೆ ಗಣೇಶ ಚತುದರ್ಶಿ ಬಂದಿದೆ ಎಂದು ಗೊತ್ತೇ ಆಗುತ್ತಿಲ್ಲ. ಗಣೇಶ ಚತುದರ್ಶಿಗೆ ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಗಣಪತಿಯ ಮೂರ್ತಿಯನ್ನಿಟ್ಟು ಪೂಜೆ, ಆರತಿ ಮಾಡಲಾಗುತ್ತದೆ. ಗಣಪತಿ ಮೂರ್ತಿಯನ್ನು ರಚಿಸುವ ಕಲಾವಿದರು ಈಗಾಗಲೇ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿ ಆಗಿದೆ. ಮಾರುಕಟ್ಟೆಯಲ್ಲಿ ಸುಂದರ ಹಾಗೂ ಬಣ್ಣಬಣ್ಣದ ಗಣಪತಿಗಳು ಜನರನ್ನು ಆಕರ್ಷಿಸುತ್ತಿದೆ. ಪ್ರತಿಯೊಬ್ಬ ಗಣಪತಿ ಭಕ್ತ ಕೂಡ ತಾನು ಅತೀ ಸುಂದರವಾಗಿರುವ ಗಣಪತಿ ಮೂರ್ತಿ ಖರೀದಿಸಬೇಕೆಂದು ಬಯಸುವನು.

ಭಗವಾನ್ ಗಣಪತಿಯ ಕುರಿತು ನಾವು-ನೀವು ಅರಿಯದ ಸತ್ಯಕಥೆಗಳು

ಹಿಂದೂಗಳು ಅತೀ ಸಡಗರ, ಸಂಭ್ರಮದಿಂದ ಆಚರಿಸುವಂತಹ ಹಬ್ಬವೇ ಗಣೇಶ ಚತುದರ್ಶಿ. ಗಣಪತಿ ದೇವರ ಮೂರ್ತಿಯನ್ನು ಮನೆಗೆ ತಂದು ಹತ್ತು ದಿನಗಳ ಕಾಲ ಪೂಜೆ, ಆರತಿ ಮಾಡಲಾಗುತ್ತದೆ. ಇದರ ಬಳಿಕ ಮೂರ್ತಿಯ ಜಲಸ್ತಂಭ ಮಾಡಲಾಗುತ್ತದೆ. ಈ ವರ್ಷ ಸಪ್ಟೆಂಬರ್ 13ರಂದು ಗಣೇಶ ಚತುದರ್ಶಿ ಬಂದಿದೆ. ಅದಾಗ್ಯೂ, ಗಣಪತಿ ಮೂರ್ತಿಯನ್ನು ಖರೀದಿಸುವ ಮೊದಲು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಕುಳಿತಿರುವ ಗಣಪತಿ ಅಥವಾ ನಿಂತಿರುವ ಗಣಪತಿ?

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿಗಳು ಲಭ್ಯವಿದೆ. ಇದರಿಂದ ಮಾರಾಟಗಾರರಿಗೆ ಲಾಭ. ಮನೆಯಲ್ಲಿ ಪೂಜೆ ಮಾಡಲು ಕುಳಿತಿರುವಂತಹ ಗಣಪತಿ ಒಳ್ಳೆಯದು. ಕಚೇರಿಗಳಿಗೆ ನಿಂತಿರುವ ಗಣಪತಿ ಆಗಬಹುದು. ಕುಳಿತಿರುವ ಗಣಪತಿಯು ಆರ್ಥಿಕ ಸ್ಥಿರತೆ ತರುತ್ತಾರೆ ಮತ್ತು ಹಣದ ದುರುಪಯೋಗ ತಡೆಯುವರು. ನಿಂತಿರುವ ಗಣಪತಿಯು ವೃತ್ತಿಯಲ್ಲಿ ಯಶಸ್ಸು ತಂದುಕೊಡುವರು.

ಗಣಪತಿ ಮೂರ್ತಿಯ ಸೊಂಡಿಲು ಬಲ ಅಥವಾ ಎಡಕ್ಕಿರಬೇಕೇ?

ಗಣಪತಿ ಮೂರ್ತಿಯನ್ನು ಖರೀದಿಸುವಾಗ ಹೆಚ್ಚಿನವರಲ್ಲಿ ಸೊಂಡಿಲು ಯಾವ ಕಡೆಗಿರಬೇಕು ಎನ್ನುವ ಗೊಂದಲ ಕಾಡುವುದು. ಬಾಲಗಣಪನು ಎರಡು ಕಡೆಯ ಸೊಂಡಿಲಿನಲ್ಲಿ ಸುಂದರವಾಗಿ ಕಾಣುವನು. ಆದರೆ ಇದೆರಡನ್ನು ಪೂಜೆಗೆ ಬಳಸಬಾರದು. ಗಣಪತಿಯ ಸೊಂಡಿಲು ಎಡಭಾಗಕ್ಕೆ ಇರಬೇಕು ಮತ್ತು ಇಂತಹ ಮೂರ್ತಿಯು ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗಿದೆ.

ಇಲಿ ಅಥವಾ ಮೋದಕ?

ಗಣಪತಿ ದೇವರ ಮೂರ್ತಿಯೊಂದಿಗೆ ಅವರ ವಾಹನ ಇಲಿ ಕೂಡ ಇರುವುದು. ದೇವರ ಪಾದದ ಕೆಳಗಡೆ ಮೋದಕ ತಿನ್ನುವ ಇಲಿಯನ್ನು ಕೆಲವೆಡೆ ತೋರಿಸಲಾಗಿದೆ. ಗಣಪತಿ ದೇವರಿಗೂ ಮೋದಕವು ತುಂಬಾ ಪ್ರಿಯವಾಗಿದೆ. ಗಣಪತಿ ದೇವರ ಮೂರ್ತಿಯೊಂದಿಗೆ ಇಲಿ ಮತ್ತು ಮೋದಕ ಇರುವುದನ್ನು ನೀವು ಖರೀದಿ ಮಾಡಿ.

ಮೂರ್ತಿ ತಯಾರಿಕೆಗೆ ಬಳಸುವ ಸಾಮಗ್ರಿಗಳು

ಗಣಪತಿ ದೇವರ ಮೂರ್ತಿಯನ್ನು ಮಣ್ಣು, ಪ್ಯಾರಿಸ್ ಆಫ್ ಪ್ಲಾಸ್ಟರ್ ಅಥವಾ ಇತರ ಯಾವುದೇ ಸಾಮಗ್ರಿಯಿಂದ ತಯಾರಿಸಬಹುದು. ಮೂರ್ತಿ ತಯಾರಿಕೆಗೆ ರಾಸಾಯನಿಕ ಬಳಕೆ ಮಾಡಬಾರದು. ಅದಾಗ್ಯೂ, ಮಣ್ಣು ಮತ್ತು ಮರಳು ಬಳಸಿಕೊಂಡು ಮನೆಯಲ್ಲೇ ಗಣಪತಿ ಮೂರ್ತಿ ತಯಾರಿಸಿದರೆ ಒಳ್ಳೆಯದು. ಹೀಗೀಗ ಹೆಚ್ಚಾಗಿ ಪ್ಯಾರಿಸ್ ಆಫ್ ಪ್ಲಾಸ್ಟರ್ ಬಳಸಿ ಮೂರ್ತಿ ತಯಾರಿಸಲಾಗುತ್ತದೆ. ಪೂಜೆಗೆ ಮರದ ಮೂರ್ತಿ ಬಳಸಬಾರದು. ಇದನ್ನು ಪೂಜಾಕೊಠಡಿಯಲ್ಲೂ ಇಡಬಾರದು.

ಮೂರ್ತಿಯ ಬಣ್ಣ

ಗಣೇಶ ಚತುದರ್ಶಿಗೆ ಖರೀದಿಸುವ ಗಣಪತಿ ಮೂರ್ತಿಯ ಬಣ್ಣವು ತುಂಬಾ ಮಹತ್ವ ಪಡೆಯುವುದು. ಕುಂಕುಮ ಬಣ್ಣವನ್ನು ಮೂರ್ತಿಗೆ ಬಳಸಬಹುದು. ಬಿಳಿ ಬಣ್ಣದಿಂದಲೂ ಮೂರ್ತಿ ತಯಾರಿಸಬಹುದು. ಇಂತಹ ಮೂರ್ತಿಗಳು ಮನೆಯಲ್ಲಿ ಶಾಂತಿ ತರುವುದು. ಗಣೇಶ ಚತುದರ್ಶಿ ವೇಳೆ ಇಂತಹ ಬಣ್ಣದ ಮೂರ್ತಿಗಳನ್ನು ಪೂಜಿಸಿದರೆ ಅದರಿಂದ ನಿಮ್ಮ ಇಷ್ಟಾರ್ಥಗಳು ಬೇಗನೆ ಈಡೇರುವುದು ಎಂದು ಹೇಳಲಾಗಿದೆ.

ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...

Read More About: life fact

Have a great day!
Read more...

English Summary

Ganesha Chaturthi is just a few days away. The markets are full of Ganesha idols. Decorated beautifully, these idols add colours to the market and attract a lot of Ganesha devotees tempting them to buy each one of the beautifully decorated idols.