ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಅದ್ಭುತವಾದ ಮನೆಮದ್ದುಗಳು


ಸೊಂಟದ ಕೊಬ್ಬು ಎಂದರೆ ಲೆಕ್ಕಮಾಡಲಾಗದಷ್ಟು ತೊಂದರೆಗಳು ಎಂದೇ ಅರ್ಥ. ಸೊಂಟದ ಕೊಬ್ಬಿನಿಂದ ಸೊಂಟದ ಸುತ್ತಳತೆ ಹೆಚ್ಚುವುದು ಮಾತ್ರವಲ್ಲ, ಡೊಳ್ಳುಹೊಟ್ಟೆಯಿಂದಾಗಿ ಸಹಜಸೌಂದರ್ಯ ಕುಂದುವ ಜೊತೆಗೇ ಕೆಲವಾರು ಮಾರಣಾಂತಿಕ ಕಾಯಿಲೆಗಳೂ ಆವರಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಸೊಂಟದ ಕೊಬ್ಬು ದೇಹದಲ್ಲಿದೆ ಎಂದರೆ ದೇಹದ ಇತರ ಭಾಗಗಳಾದ ಕುತ್ತಿಗೆ, ತೊಡೆ, ಕೈ ಮೊದಲಾದ ಕಡೆಗಳಲ್ಲಿಯೂ ಕೊಬ್ಬು ತುಂಬಿಕೊಂಡಿದೆ ಎಂದೇ ಅರ್ಥ. ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ.

ಇದಕ್ಕಾಗಿ ಕಠಿಣ ವ್ಯಾಯಾಮಗಳಾದ ತೂಕ ಎತ್ತುವಿಕೆ, ಮೈ ಬಗ್ಗಿಸುವಿಕೆ, ಓಡುವುದು, ಈಜುವುದು ಮೊದಲಾದವು ಗಳನ್ನೆಲ್ಲಾ ನಿರ್ವಹಿಸಬೇಕಾಗುತ್ತದೆ, ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸಬೇಕಾಗುತ್ತದೆ, ಮುಖ್ಯವಾಗಿ ಮನಸ್ಸನ್ನು ಗಟ್ಟಿಮಾಡಿಕೊಳ್ಳಬೇಕಾಗುತ್ತದೆ. ದೃಢಮನಸ್ಸಿನಿಂದ ತೂಕ ಇಳಿಸಿಕೊಳ್ಳುವತ್ತ ಮುಂದುವರೆದರೆ ನಿಮಗೆ ಕೆಲವು ಮನೆಮದ್ದುಗಳು ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ನೆರವಾಗಲಿವೆ. ಕೇವಲ ಸೊಂಟದ ಕೊಬ್ಬು ಮಾತ್ರವಲ್ಲ, ತೊಡೆ, ಕೈ, ಕುತ್ತಿಗೆ ಮೊದಲಾದ ಕಡೆಯ ಕೊಬ್ಬುಗಳೂ ಇಲ್ಲವಾಗುತ್ತವೆ. ವಿಶೇಷವಾಗಿ ಸೊಂಟದ ಕೊಬ್ಬು ಕರಗಿಸಲು ಕೆಲವು ಅಮೂಲ್ಯ ಸಲಹೆಗಳನ್ನು ಇಂದಿನ ಲೇಖನದಲ್ಲಿ ಒದಗಿಸಲಾಗಿದೆ...

ಸೊಂಟದ ಕೊಬ್ಬಿನ ನಿವಾರಣೆಗೆ ಅಚ್ಚರಿಯ ಆಹಾರಗಳು

ಬಾರ್ಲಿ ಮತ್ತು ಕಡ್ಲೆಹಿಟ್ಟು

ಗೋಧಿ ಹಿಟ್ಟಿನ ಬದಲು ಬಾರ್ಲಿ ಮತ್ತು ಕಡ್ಲೆಹಿಟ್ಟಿನ ಮಿಶ್ರಣವನ್ನು ಪರಿಗಣಿಸಬಹುದು. ಇದು ಕೇವಲ ಸೊಂಟದ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲ, ಇತರ ಭಾಗಗಳ ಕೊಬ್ಬನ್ನೂ ಕರಗಿಸಲು ನೆರವಾಗುತ್ತದೆ.

ಬಳಕೆಯ ವಿಧಾನ: ಬಾರ್ಲಿಯನ್ನು ಹಿಟ್ಟುಮಾಡಿಸಿ ಒಂದು ಪ್ರಮಾಣಕ್ಕೆ ಅರ್ಧದಷ್ಟು ಪ್ರಮಾಣದಲ್ಲಿ ಕಡ್ಲೆಹಿಟ್ಟನ್ನು ಬೆರೆಸಿ ಚಪಾತಿಯ ರೂಪದಲ್ಲಿ ಸೇವಿಸಿ

ಹೊಟ್ಟೆ ಬೊಜ್ಜನ್ನು ಕರಗಿಸುತ್ತೆ ಈ ಸರಳ ಆಯುರ್ವೇದ ಮನೆ ಮದ್ದುಗಳು

ನೀರು

ಕೊಬ್ಬು ಇಳಿಸಲು ನೀರಿಗಿಂತ ಉತ್ತಮ ಆಹಾರ ಇನ್ನೊಂದಿಲ್ಲ. ನೀರು ದೇಹದಿಂದ ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆ ಜರುಗಲು ಕೊಬ್ಬನ್ನು ಬಳಸಿಕೊಳ್ಳಲು ನೆರವಾಗುತ್ತದೆ.

ಬಳಕೆಯ ವಿಧಾನ: ದಿನದ ಒಟ್ಟೂ ಅವಧಿಯಲ್ಲಿ ಕೊಂಚಕೊಂಚವಾಗಿ ಸುಮಾರು ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಬೇಕು.

ನೀರು ಮತ್ತು ಜೇನು

ಸೊಂಟದ ಕೊಬ್ಬನ್ನು ಕರಗಿಸಲು ನೀರು ಮತ್ತು ಜೇನು ಸಹಾ ಉತ್ತಮ ಆಯ್ಕೆಯಾಗಿದೆ.

ಬಳಕೆಯ ವಿಧಾನ:ಒಂದು ಲೋಟ ತಣ್ಣನೆಯ ನೀರಿಗೆ ಎರಡು ದೊಡ್ಡ ಚಮಚ ಜೇನು ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.

ನೀರು, ಲಿಂಬೆ ಮತ್ತು ಜೇನು

ಸೊಂಟದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಈ ವಿಧಾನ ಸೂಕ್ತವಾಗಿದೆ. ಇದನ್ನು ನಿತ್ಯವೂ ಅನುಸರಿಸುವುದು ಅಗತ್ಯ.

ಬಳಕೆಯ ವಿಧಾನ: ಉಗುರುಬೆಚ್ಚನೆಯ ನೀರಿನಲ್ಲ್ ಕೊಂಚ ಜೇನು ಮತ್ತು ಅರ್ಧ ಲಿಂಬೆಯ ರಸವನ್ನು ಬೆರೆಸಿ ಖಾಲಿಹೊಟ್ಟೆಯಲ್ಲಿ ನಿತ್ಯವೂ ಕುಡಿಯಬೇಕು.

ತ್ರಿಫಲದ ಬಳಕೆ

ಆಯುರ್ವೇದೀಯ ಔಷಧಿಯಾದ ತ್ರಿಫಲವೂ ಸೊಂಟದ ಕೊಬ್ಬನ್ನು ಕರಗಿಸಲು ಸೂಕ್ತವಾಗಿದೆ. ಅಲ್ಲದೇ ಸ್ನಾಯುಗಳನ್ನು ಬಲಪಡಿಸಲು ಹಾಗೂ ದೇಹದ ಆಕಾರವನ್ನು ಸುಂದರವಾಗಿಸಲೂ ನೆರವಾಗುತ್ತದೆ.

ಬಳಕೆಯ ವಿಧಾನ: ತ್ರಿಫಲ ಪುಡಿಯನ್ನು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.

ಆಹಾರ ಸೇವನೆಯ ಅಭ್ಯಾಸಗಳನ್ನು ಬದಲಿಸಿ

ಸೊಂಟದ ಕೊಬ್ಬನ್ನು ಕರಗಿಸಲು ಅನಿವಾರ್ಯವಾಗಿಯಾದರೂ ಸರಿ, ಇಷ್ಟವಿಲ್ಲದೇ ಹೋದರೂ ಸರಿ, ಆಹಾರಕ್ರಮವನ್ನು ಬದಲಿಸಲೇಬೇಕಾಗುತ್ತದೆ. ದಿನಕ್ಕೆ ಎರಡು ಬಾರಿ ಸೇವಿಸುವ ಭಾರೀ ಪ್ರಮಾಣದ ಊಟವನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ.

ವಿಧಾನ

ದಿನದ ಮೂರು ಹೊತ್ತು ಊಟವನ್ನು ತ್ಯಜಿಸಿ ಇದರ ಬದಲಿಗೆ, ಚಿಕ್ಕ ಪ್ರಮಾಣದಲ್ಲಿ ದಿನದಲ್ಲಿ ನಾಲ್ಕಾರು ಬಾರಿ ಆಹಾರ ಸೇವಿಸಬೇಕು, ಅದೂ ಹಸಿವೆಯಾದಾದ ಮಾತ್ರ. ಇದರಿಂದ ದೇಹ ತನಗೆ ಅಗತ್ಯವಿದ್ದಷ್ಟು ಪೋಷಕಾಂಶಗಳನ್ನು ಮಾತ್ರವೇ ಈ ಅಲ್ಪ ಆಹಾರಗಳಿಂದ ಪಡೆದುಕೊಳ್ಳುತ್ತದೆ, ಉಳಿದಂತೆ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸತೊಡಗುವ ಮೂಲಕ ಕೊಬ್ಬು ಕರಗಲು ಪ್ರಾರಂಭಿಸುತ್ತದೆ. ಅಲ್ಪ ಆಹಾರದ ಪೂರೈಕೆ ದೇಹಕ್ಕೆ ಅಭ್ಯಾಸವಾಗುತ್ತಿದ್ದಂತೆಯೇ ಜೀವ ರಾಸಾಯನಿಕ ಕ್ರಿಯೆಯೂ ಚುರುಕುಗೊಳ್ಳುವ ಮೂಲಕ ಕೊಬ್ಬನ್ನು ಬಳಸಿಕೊಳ್ಳುವ ಪ್ರಮಾಣವೂ ಹೆಚ್ಚುತ್ತದೆ.

ಸಕ್ಕರೆಯ ಸೇವನೆ ಕಡಿಮೆ ಮಾಡಿ

ವಯಸ್ಸು ಹೆಚ್ಚುತ್ತಿದ್ದಂತೆಯೇ ಸಕ್ಕರೆಯ ಸೇವನೆಯ ಪ್ರಮಾಣವನ್ನೂ ತಗ್ಗಿಸಬೇಕಾಗುತ್ತದೆ. ಒಂದು ದೊಡ್ಡಚಮಚ ಸಕ್ಕರೆಯಲ್ಲಿ ಸುಮಾರು ಐವತ್ತರಿಂದ ಅರವತ್ತು ಕ್ಯಾಲೋರಿಗಳಿರುತ್ತವೆ. ದಿನದಲ್ಲಿ ಮೂರು ಬಾರಿ ಕುಡಿಯುವ ಟೀ ಮತ್ತು ಕಾಫಿಗಳಲ್ಲಿ ಸಕ್ಕರೆ ಎಷ್ಟು ಬೆರೆಸುತ್ತೇವೋ ಅಷ್ಟೂ ಮಟ್ಟಿಗೆ ಕ್ಯಾಲೋರಿಗಳು ದೇಹದಲ್ಲಿ ಹೆಚ್ಚುತ್ತವೆ. ನಮ್ಮ ನಿತ್ಯದ ಆಹಾರಗಳಾದ ಅಕ್ಕಿ, ಚಪಾತಿ, ಆಲುಗಡ್ಡೆ ಮೊದಲಾದವುಗಳಲ್ಲಿಯೂ ಸಕ್ಕರೆ ಇದೆ. ಈ ಆಹಾರಗಳಿಂದ ದೇಹಕ್ಕೆ ಅಗತ್ಯಪ್ರಮಾಣದ ಪೋಷಕಾಂಶಗಳು ದೊರಕುತ್ತವಾದರೂ ಅನಗತ್ಯ ಸಕ್ಕರೆಯೂ ಆಗಮಿಸುತ್ತದೆ. ಪರಿಣಾಮವಾಗಿ ಸಕ್ಕರೆಗೆ ಸಂಬಂಧಿಸಿದ ಕಾಯಿಲೆಗಳು, ಮಧುಮೇಹ ಮೊದಲಾದವು ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಸಕ್ಕರೆ ಹೆಚ್ಚಿದಷ್ಟೂ ದೇಹ ಸ್ಥೂಲಕಾಯ ಪಡೆಯುವ ಸಾಧ್ಯತೆ ಹೆಚ್ಚು.

ಹಾಗಲಕಾಯಿ ಜ್ಯೂಸ್

ಕೊಬ್ಬಿನ ಕಣಗಳನ್ನು ಕರಗಿಸಲು ಹಾಗಲಕಾಯಿಯ ಜ್ಯೂಸ್ ಸೇವನೆ ಉತ್ತಮವಾಗಿದೆ:

ಬಳಕೆಯ ವಿಧಾನ: ಒಂದು ತಾಜಾ ಹಾಗಲಕಾಯಿಯನ್ನು ಕೊಂಚ ನೀರಿನೊಂದಿಗೆ ಗೊಟಾಯಿಸಿ ನಿತ್ಯವೂ ಬೆಳಿಗ್ಗೆ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ.

ಸಿದ್ಧ ಆಹಾರಗಳನ್ನು ವರ್ಜಿಸಿ

ಭಾರೀ ಜಾಹೀರಾತಿನ ಮೂಲಕ ಮೊದಲಿಗೆ ನಮ್ಮ ಮನಸ್ಸನ್ನು ಮತ್ತು ಇವುಗಳನ್ನು ಸೇವಿಸುವ ಮೂಲಕ ಲಭಿಸುವ ಸಾಮಾಜಿಕ ಮಾನ್ಯತೆ ಮತ್ತು ದೊಡ್ಡತನ ಅಹಮ್ಮಿಕೆಗಳೇ ಈ ಅನಾರೋಗ್ಯಕರ ಆಹಾರಗಳ ಯಶಸ್ಸಿನ ಗುಟ್ಟಾಗಿದೆ. ವಾಸ್ತವದಲ್ಲಿ ಈ ಅಂಶಗಳನ್ನು ಪರಿಗಣಿಸದೇ ಕೇವಲ ನಿಮ್ಮ ಆರೋಗ್ಯವನ್ನು ಪರಿಗಣಿಸುವುದಾದರೆ ಯಾವುದೇ ಬುರುಗು ಪಾನೀಯ (ಸಾಫ್ಟ್ ಡ್ರಿಂಕ್), ಪಿಜ್ಜಾ, ಬರ್ಗರ್, ಚೌಮೀನ್, ಬೇಕರಿ ಉತ್ಪನ್ನಗಳು ಮತ್ತು ತಣ್ಣನೆಯ ಪಾನೀಯಗಳು, ಹಣ್ಣುಗಳ ಸ್ವಾದವಿರುವ ರಾಸಾಯನಿಕಗಳನ್ನು ಬೆರೆಸಿ 'ಡ್ರಿಂಕ್' ಎಂಬ ಹೆಸರಿನಲ್ಲಿರುವ ಪೇಯಗಳು ಮೊದಲಾದವುಗಳ ಆಕರ್ಷಣೆಗೆ ಒಳಗಾಗದೇ ಇವುಗಳಲ್ಲಿ ಯಾವುದನ್ನೂ ಸೇವಿಸಬಾರದು. ಇವು ಆ ಸಮಯಕ್ಕೆ ನಾಲಿಗೆಗೆ ರುಚಿಯ ಮೂಲಕ ತೃಪ್ತಿಯ ಅನುಭವ ನೀಡಿದರೂ ಹೊಟ್ಟೆ ಸೇರಿದ ಬಳಿಕ ನಿಧಾನವಾಗಿ ಇತರ ತೊಂದರೆಗಳನ್ನು ತಂದೊಡ್ಡಬಲ್ಲವು.

ಮೊಳಕೆ ಬಂದ ಆಹಾರಗಳನ್ನು ಸೇವಿಸಿ

ದೇಹದ ಇತರ ಭಾಗದ ಕೊಬ್ಬುಗಳಿಗಿಂತಲೂ ಸೊಂಟದ ಕೊಬ್ಬು ಕರಗಿಸುವುದು ಭಾರೀ ಕಷ್ಟ. ಹಾಗಾಗಿ ಈ ಕೊಬ್ಬನ್ನು ಕರಗಿಸುವ ಪ್ರಯತ್ನಗಳು ಸತತ ಮತ್ತು ಸಮಗ್ರವಾಗಿರಬೇಕು. (ಅಂದರೆ ರಜಾದಿನವೆಂದು ಭಾನುವಾರ ಭಾರೀ ಊಟ ಮಾಡಬಾರದು). ಮೊಳಕೆ ಬಂದ ಕಾಳುಗಳಲ್ಲಿ ಹೆಚ್ಚಿನ ಕರಗದ ನಾರು ಮತ್ತು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಸುವ ಪೋಷಕಾಂಶಗಳಿವೆ. ಇವು ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಹೆಚ್ಚುವರಿ ಅಹಾರ ಸೇವನೆಯ ಬಯಕೆಯಿಂದ ತಪ್ಪಿಸುತ್ತವೆ. ದಿನದ ಮೂರೂ ಹೊತ್ತೂ ಒಂದಲ್ಲಾ ಒಂದು ಕಾಳುಗಳನ್ನು ಮೊಳಕೆ ಬರಿಸಿ ಕೊಂಚ ಪ್ರಮಾಣದಲ್ಲಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಹಣ್ಣುಗಳ ಮೇಲೆ ಹೆಚ್ಚಿನ ಗಮನವಿರಿಸಿ

ಆಯಾ ಋತುಮಾನದಲ್ಲಿ ಲಭಿಸುವ ಹಣ್ಣುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು, ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಸುವ ಪೋಷಕಾಂಶಗಳು, ವಿಟಮಿನ್ನುಗಳು ಮತ್ತು ಖನಿಜಗಳಿವೆ. ಇವು ಹಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುವ ಜೊತೆಗೇ ಹೆಚ್ಚು ತಿನ್ನುವುದರಿಂದಲೂ ತಪ್ಪಿಸುತ್ತವೆ.

ಉಗುರುಬೆಚ್ಚನೆಯ ನೀರನ್ನೇ ಸೇವಿಸಿ

ಆಹಾರ ಸೇವಿಸಿದ ಬಳಿಕ ತಕ್ಷಣವೇ ನೀರನ್ನು ಕುಡಿಯಬಾರದು, ಇದರಿಂದ ಜೀರ್ಣಾಂಗಗಳಲ್ಲಿ ಕಿಣ್ವಗಳು ಆಹಾರವನ್ನು ಕರಗಿಸುವ ಕ್ರಿಯೆಗೆ ಅಡ್ಡಿಯಾಗುತ್ತದೆ ಹಾಗೂ ಕೆಲವು ಆಹಾರಗಳು ವಿಷಕಾರಿಯಾಗಬಹುದು. ಬದಲಿಗೆ ಊಟಕ್ಕೂ ಕೊಂಚ ಹೊತ್ತಿನ ಮುನ್ನ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ ಹಾಗೂ ಕೊಬ್ಬನ್ನು, ವಿಶೇಷವಾಗಿ ಸೊಂಟದ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ.

ಪಪ್ಪಾಯ ಕೊಬ್ಬನ್ನು ಕರಗಿಸುತ್ತದೆ

ಹಸಿ ಮತ್ತು ಹಣ್ಣಾದ ಪೊಪ್ಪಾಯಿ ದೇಹದಿಂದ ಕೊಬ್ಬನ್ನು ಕರಗಿಸಲು ಸಮರ್ಥವಾಗಿವೆ ಹಾಗೂ ಸಪಾಟಾದ ಹೊಟ್ಟೆಯನ್ನು ಪಡೆಯಲು ನೆರವಾಗುತ್ತವೆ. ಪೊಪ್ಪಾಯಿಯಲ್ಲಿರುವ ಪಪಾಯಿನ್ ಎಂಬ ಪೋಷಕಾಂಶ ಕರಗಲು ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುವುದೇ ಇದರ ಗುಟ್ಟು.

ಎಚ್ಚರಿಕೆ: ಪಪ್ಪಾಯ ಗರ್ಭಿಣಿಯರು ಹಾಗೂ ಸಂತಾನ ಪಡೆಯಬಯಸುವ ಮಹಿಳೆಯರಿಗೆ ಸರ್ವಥಾ ಸೂಕ್ತವಲ್ಲ! ಇದು ಗರ್ಭಪಾತಕ್ಕೆ ನೇರವಾಗಿ ಕಾರಣವಾಗುತ್ತದೆ.

ದೇವತೆಗಳ ಹಣ್ಣು, 'ಪಪ್ಪಾಯ' ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!!

ಹಸಿರು ಟೀ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಠಮಾರಿ ಸೊಂಟದ ಕೊಬ್ಬನ್ನು ಕರಗಿಸಲು ನೆರವಾಗುತ್ತವೆ. ಸಕ್ಕರೆಯಿಲ್ಲದೇ ಕೇವಲ ಹಸಿರು ಟೀಯನ್ನು ಗರಿಷ್ಟ ದಿನಕ್ಕೆ ಮೂರು ಕಪ್ ನಷ್ಟು ಕುಡಿಯುವ ಮೂಲಕ ಕೊಬ್ಬಿನ ಕರಗಿಸುವಿಕೆಯ ಜೊತೆಗೇ ಇತರ ಪ್ರಯೋಜನಗಳನ್ನೂ ಪಡೆಯಬಹುದು.

ಸೇಬಿನ ಶಿರ್ಕಾ

Apple cider vinegarಎಂಬ ಹೆಸರಿನ ಈ ಶಿರ್ಕಾವನ್ನು ಕೊಂಚ ನೀರಿನಲ್ಲಿ ಅಥವಾ ಜ್ಯೂಸ್ ನಲ್ಲಿ ಬೆರೆಸಿ ಕುಡಿಯುವ ಮೂಲಕವೂ ಹೆಚ್ಚುವರಿ ಕ್ಯಾಲೋರಿಗಳನ್ನು ಕರಗಿಸಿ ಸೊಂಟದ ಕೊಬ್ಬು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸೊಂಟದ ಕೊಬ್ಬು ಕರಗಿಸಲು ಪುದೀನಾ ಬಳಕೆ

ಒಂದು ದೊಡ್ಡಚಮಚ ಪುದಿನಾ ರಸವನ್ನು ಎರಡು ದೊಡ್ಡ ಚಮಚ ಜೇನಿನೊಂದಿಗೆ ಬೆರೆಸಿ ದಿನದ ಅವಧಿಯಲ್ಲಿ ಖಾಲಿಮಾಡಿ. ಈ ವಿಧಾನವನ್ನು ಒಂದು ತಿಂಗಳ ಕಾಲ ಅನುಸರಿಸಿ.

ನುಗ್ಗೇ ಕಾಯಿ

ನುಗ್ಗೇಕಾಯಿಯ ರಸವನ್ನು ನಿತ್ಯವೂ, ಒಟ್ಟು ಎರಡು ದೊಡ್ಡಚಮಚದಷ್ಟು ಸತತವಾಗಿ ಒಂದು ತಿಂಗಳ ಕಾಲ ಸೇವಿಸಿ. ತಿಂಗಳ ಬಳಿಕ ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತದೆ.

ಸೊಂಟದ ಕೊಬ್ಬಿಗೆ ಈರುಳ್ಳಿಯ ಬೀಜ

ಅಜ್ವೈನ್ ಎಂದು ಕರೆಯುವ ಈ ಬೀಜಗಳು (20ಗ್ರಾಂ), ಕಲ್ಲುಪ್ಪು (20ಗ್ರಾಂ), ಜೀರಿಗೆ (20ಗ್ರಾಂ) ಮತ್ತು ಕಾಳುಮೆಣಸು (20ಗ್ರಾಂ) ಗಳನ್ನು ಒಂದು ಲೋಟ ಮಜ್ಜಿಗೆಯಲ್ಲಿ ಬೆರೆಸಿ ಖಾಲಿಹೊಟ್ಟೆಯಲ್ಲಿ ನಿತ್ಯವೂ ಕುಡಿಯಿರಿ.

ಕಾರ್ಬೋಹೈಡ್ರೇಟುಗಳ ಪ್ರಮಾಣ ತಗ್ಗಿಸಿ

ದಿನದ ಆಹಾರಗಳಲ್ಲಿ ಕಾರ್ಬೋ ಹೈಡ್ರೇಟುಗಳು ಕಡಿಮೆ ಇರುವಂತೆ ನೋಡಿಕೊಳ್ಳಿ. ಈ ಪ್ರಮಾಣ ಹೆಚ್ಚಿದ್ದರೆ ಇನ್ಸುಲಿನ್ ಪ್ರಮಾಣವೂ ಹೆಚ್ಚುತ್ತದೆ ಹಾಗೂ ಸ್ಥೂಲಕಾಯದ ಸಹಿತ ಇತರ ತೊಂದರೆಗಳೂ ಹೆಚ್ಚುತ್ತವೆ.

ಮಾನಸಿಕ ಒತ್ತಡ

ಮಾನಸಿಕ ಒತ್ತಡದಲ್ಲಿದ್ದಾಗ ದೇಹ ಹೆಚ್ಚು ಕಾರ್ಟಿಸೋಲ್ ಎಂಬ ರಸದೂತವನ್ನು ಉತ್ಪಾದಿಸುತ್ತದೆ. ಇದರಿಂದಲೂ ದೇಹದಲ್ಲಿ ಕೊಬ್ಬು ಸಂಗ್ರಹವಾಗತೊಡಗುತ್ತದೆ. ಮಾನಸಿಕ ಒತ್ತಡದಿಂದ ಹೊರಬರಲು ಸೀತಾಲಿ ಪ್ರಾಣಾಯಾಮ, ಸಿತ್ಕಾರಿ ಪ್ರಾಣಾಯಾಮ, ಅನುಲೋಮ ವಿಲೋಮ ಪ್ರಾಣಾಯಾಮ ಅಥವಾ ಬಾಹ್ಮೀ ಪ್ರಾಣಾಯಾಮ ಮೊದಲಾದವುಗಳನ್ನು ಅನುಸರಿಸಬಹುದು.

ಸೊಂಟದ ಕೊಬ್ಬು ಸಂಗ್ರಹಗೊಳ್ಳದಿರಲು ಈ ಎಚ್ಚರಿಕೆಗಳನ್ನು ಪಾಲಿಸಬೇಕು

ಆಹಾರದಲ್ಲಿ ಉಪ್ಪು ಅತ್ಯಲ್ಪ ಪ್ರಮಾಣದಲ್ಲಿರಲಿ. ಹೆಚ್ಚು ಉಪ್ಪು ಎಂದರೆ ಹೆಚ್ಚು ನೀರು ಕುಡಿಯಬೇಕಾಗುತ್ತದೆ, ನೀರು ಹೆಚ್ಚಿದ್ದಷ್ಟೂ ತೂಕ ಹೆಚ್ಚುವುವೂ ಸುಲಭವಾಗುತ್ತದೆ.

ಆರಾಮದಾಯಕ ಜೀವನಕ್ರಮ ಆಧಾರಿತ ತೊಂದರೆ ಇರುವ ವ್ಯಕ್ತಿಗಳು ಅತಿ ಕಡಿಮೆ ಉಪ್ಪು ಬಳಸಬೇಕು, ಸಾಧ್ಯವಾದರೆ ಉಪ್ಪನ್ನು ವರ್ಜಿಸಬೇಕು.

ಗೋಧಿಹಿಟ್ಟು ಮತ್ತು ಗೋಧಿಯಾಧಾರಿತ ಉತ್ಪನ್ನಗಳನ್ನು ವರ್ಜಿಸಿ ಬಾರ್ಲಿಯ ಉತ್ಪನ್ನಗಳನ್ನು ಸೇವಿಸತೊಡಗಬೇಕು.

ಸಕ್ಕರೆಯನ್ನು ಸೇವನೆಯನ್ನು ತಗ್ಗಿಸಿ

ಮಾನಸಿಕ ಒತ್ತಡಕ್ಕೆ ಒಳಗಾಗದೇ ಇರಲು ಯತ್ನಿಸಿ

ಮೈದಾ ಆಧಾರಿತ ಆಹಾರಗಳು ಬೇಡವೇ ಬೇಡಾ

ಕುರಿಯ ಮಾಂಸ ಅಥವಾ ಯಾವುದೇ ಕೆಂಪು ಮಾಂಸವನ್ನು ಸೇವಿಸಬಾರದು.

Have a great day!
Read more...

English Summary

Belly fat means reservoir of problems. Belly fat is associated with increase of waist size, bulging of tummy and many dreadful diseases and disorders. If somebody has belly fat, there is a greater probability of having fats in the other regions of the body like neck, thighs and arms. To reduce belly fat is not an easy task. One has to go through rigorous exercise regime like weight lifting, gym, running, swimming, etc. However, the problems of belly fat can be tackled with simple home remedies.