ಬರೀ ಒಂದೇ ದಿನದಲ್ಲಿ ಶೀತ-ಕೆಮ್ಮು ನಿವಾರಿಸುವ ಸರಳ ಆಯುರ್ವೇದ ಮನೆಮದ್ದುಗಳು


ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ಸಾಮಾನ್ಯ ಶೀತ ಮತ್ತು ಕೆಮ್ಮುಗಳಿಗೆ ಕೆಲವಾರು ಮದ್ದುಗಳನ್ನು ಒದಗಿಸಲಾಗಿದೆ. ಸುಮಾರು ಅರ್ಧ ಗ್ರಾಂ ನಷ್ಟು ಏಲಕ್ಕಿ ಮತ್ತು ಹಸಿಶುಂಠಿ ಮತ್ತು ಕೊಂಚ ಜೇನು ಬೆರೆಸಿ ಸೇವಿಸಿದಾಗ ಗಂಟಲಭಾಗದಲ್ಲಿ ಕಟ್ಟಿಕೊಂಡಿದ್ದ ಕಫ ಕರಗಿ ಕೆಮ್ಮು ನಿವಾರಣೆಯಾಗುತ್ತದೆ. ಇನ್ನೊಂದು ವಿಧಾನದಲ್ಲಿ ಪುಡಿಮಾಡಿದ ಏಲಕ್ಕಿ, ಒಣಫಲಗಳ ಪುಡಿ ಮತ್ತು ಕೊಂಚ ತುಪ್ಪ ಸಕ್ಕರೆಯನ್ನು ಬೆರೆಸಿ ಸೇವಿಸಿದಾಗಲೂ ಕಫ ನಿವಾರಣೆಯಾಗುತ್ತದೆ. ಮತ್ತೊಂದು ವಿಧಾನದಲ್ಲಿ ದಾಲ್ಚಿನ್ನಿ ಪುಡಿ, ಹಿಪ್ಪಲಿ (piper longum)ಗಳನ್ನು ಒಂದಕ್ಕೆ ಮೂರರ ಪ್ರಮಾಣದಲ್ಲಿ ನೀರಿನಲ್ಲಿ ಕುದಿಸಿ ದಿನಕ್ಕೆ ಮೂರು ಬಾರಿ ಕುಡಿಯುವ ಮೂಲಕ ಕೆಮ್ಮು ನಿವಾರಣೆಯಾಗುತ್ತದೆ.

ವಿಶೇಷವಾಗಿ ಕಫದ ವ್ಯಕ್ತಿಗಳಿಗೆ ಈ ಚಿಕಿತ್ಸೆ ಹೆಚ್ಚು ಸೂಕ್ತವಾಗಿದೆ. ಮತ್ತೂ ಒಂದು ವಿಧಾನದಲ್ಲಿ ದಾಲ್ಚಿನ್ನಿ ಪುಡಿ, ಧನಿಯ ಕಾಳು ಮತ್ತು ಒಣ ಶುಂಠಿಯ ಪುಡಿಯನ್ನು ಮಿಶ್ರಣ ಮಾಡಿ ಪ್ರತಿ ಬಾರಿ ಎರಡು ಚಿಕ್ಕ ಚಮಚದಂತೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಕೆಮ್ಮು ಶೀಘ್ರವಾಗಿ ಕಡಿಮೆಯಾಗುತ್ತದೆ. ಒಂದು ಗ್ರಾಂ ಒಣಶುಂಠಿಯ ಪುಡಿಯನ್ನು ಕೊಂಚ ಜೇನಿನೊಂದಿಗೆ ಬೆರೆಸಿ ದಿನಕ್ಕೆ ದಿನಕ್ಕೆ ಮೂರು ಬಾರಿ ಸೇವಿಸಿದಾಗ ಶೀತ ಮತ್ತು ಕೆಮ್ಮು ಗುಣವಾಗುತ್ತದೆ.

ಕಾಳುಮೆಣಸಿನ ಪುಡಿ, (500 ಮಿಲಿಗ್ರಾಂ), ಕೊಂಚ ಜೇನು, ಸಕ್ಕರೆ ಮತ್ತು ತುಪ್ಪವನ್ನು ಬೆರೆಸಿ ಸೇವಿಸಿದಾಗಲೂ ಕೆಮ್ಮು ಮತ್ತು ಶೀತ ಗುಣವಾಗುತ್ತದೆ. ಒಂದು ವೇಳೆ ಕೆಮ್ಮು ಅತಿ ಹೆಚ್ಚಿಲ್ಲದಿದ್ದರೆ ಕೊಂಚ ಬೆಳ್ಳುಳ್ಳಿಯ ರಸವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಕೊಂಚ ಸಕ್ಕರೆಯೊಂದಿಗೆ ಸೇವಿಸುವ ಮೂಲಕ ಶೀಘ್ರವಾಗಿ ಗುಣವಾಗುತ್ತದೆ...

ಶೀತ ಮತ್ತು ಕೆಮ್ಮನ್ನು ನಿಯಂತ್ರಿಸುವುದು ಹೇಗೆ?

ರಂಜಳ ಹೂವಿನ (bakula flowers) ಎಸಳುಗಳನ್ನು ಕೊಂಚ ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟು ಮರುದಿನ ಮಕ್ಕಳಿಗೆ ಕುಡಿಸಿದರೆ ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ. ಪ್ರತಿದಿನವೂ ಸುಮಾರು ಐದಾರು ತುಳಸಿ ಎಲೆಗಳನ್ನು ಸತತವಾಗಿ ಎರಡು ತಿಂಗಳುಗಳ ಕಾಲ ಸೇವಿಸಿದರೆ ಆಗಾಗ ಮರುಕಳಿಸುವ ಶೀತದಿಂದ ರಕ್ಷಣೆ ಪಡೆಯಬಹುದು. ಅಲ್ಲದೇ ಶ್ವಾಸನಾಳಕ್ಕೆ ಎದುರಾಗುವ ತೊಂದರೆಗಳು ಮತ್ತು ಶೀತ ಮತ್ತು ಕೆಮ್ಮನ್ನೂ ನಿವಾರಿಸಬಹುದು. ಜೇಷ್ಠ ಮಧುವಿನ ರಸ (liquorice)ವನ್ನು ಒಂದು ಲೋಟ ಬಿಸಿಹಾಲಿನಲ್ಲಿ ಬೆರೆಸಿ ಸೇವಿಸುವ ಮೂಲಕವೂ ಸಾಮಾನ್ಯ ಶೀತ ಇಲ್ಲವಾಗುತ್ತದೆ. ಕಾಗೆಸೊಪ್ಪು (Indian Nightshade roots) ಮತ್ತು ಧನಿಯ ಬೀಜಗಳನ್ನು ಕುದಿಸಿ ಕುಡಿಯುವ ಮೂಲಕ ಕೆಮ್ಮು ನಿವಾರಣೆಯಾಗುತ್ತದೆ.

ಚಿಟಿಕೆಯಷ್ಟು ಕೇಸರಿ ಪುಡಿ

ಚಿಟಿಕೆಯಷ್ಟು ಕೇಸರಿ ಪುಡಿಯನ್ನು ಒಂದು ಲೋಟ ಬಿಸಿಹಾಲಿನೊಂದಿಗೆ ಬೆರೆಸಿ ಕುಡಿಯುವ ಮೂಲಕವೂ ಸಾಮಾನ್ಯ ಶೀತ ನಿವಾರಣೆಯಾಗುತ್ತದೆ. ಕಾಗೆಸೊಪ್ಪು ಮತ್ತು ಹಿಪ್ಪಲಿಯನ್ನು ಕೊಂಚ ಜೇನು ಮತ್ತು ತುಪ್ಪದೊಂದಿಗೆ ಬೆರೆಸಿ ಸೇವಿಸಿದಾಗ ವಿಶೇಷವಾಗಿ ಕಫ ಮತ್ತು ಪಿತ್ತದ ಮೂಲದ ವ್ಯಕ್ತಿಗಳಿಗೆ ಕೆಮ್ಮು ನಿವಾರಣೆಯಾಗುತ್ತದೆ. ಒಣಕೆಮ್ಮಿನಿಂದ ಬಳಲುತ್ತಿರುವ ಮಕ್ಕಳಿಗೆ ಕರಜಾತ ಬೀಜದ (Indian Beech) ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಕುಡಿಸುವ ಮೂಲಕ ಶೀಘ್ರ ಉಪಶಮನ ದೊರಕುತ್ತದೆ. ಇದೇ ಬೀಜದ ಪುಡಿಯವನ್ನು ಆಘ್ರಾಣಿಸುವ ಮೂಲಕ ತೀವ್ರತರದ ಕುಹರ ಅಥವಾ ಸೈನಸ್ ನ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಕಫ ನಿವಾರಣೆಗೆ ನೆರವಾಗುತ್ತದೆ.

ಸಾಮಾನ್ಯ ಶೀತಕ್ಕೆ ಅತ್ಯುತ್ತಮವಾದ ಹದಿನೈದು ಸಲಹೆಗಳು

* ಹುರಿದ ಅಕ್ರೋಟಿನ ಪುಡಿಯನ್ನು ಸೇವಿಸುವ ಮೂಲಕ ಒಣಕೆಮ್ಮು ಗುಣವಾಗುತ್ತದೆ.

* ಒಣಕೆಮ್ಮಿಗೆ ಶುಂಠಿಯ ರಸ, ಜೇನು, ಸಕ್ಕರೆ ಮತ್ತು ಅರಿಶಿನವನ್ನು ಬೆರೆಸಿದ ಲೇಹ್ಯವನ್ನು ಕೊಂಚಕೊಂಚವಾಗಿ ನೆಕ್ಕುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

* ವಾತ ಮತ್ತು ಕಫದ ವ್ಯಕ್ತಿಗಳಿಗೆ ಲಿಂಬೆರಸವನ್ನು ಕುಡಿಯುವ ಮೂಲಕ ಕೆಮ್ಮು ಮತ್ತು ಕಫ ನಿವಾರಣೆಯಾಗಲು

ನೆರವಾಗುತ್ತದೆ.

* ಕೊಲ್ತೊಗಚೆ(cassia flower)ಹೂವಿನ ಎಸಳುಗಳನ್ನು ಕುದಿಸಿ ಸೋಸಿದ ದ್ರವ ಕುಡಿಯುವ ಮೂಲಕ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.

* ಕೊಂಚ ತಾಜಾ ಮೆಂತೆಸೊಪ್ಪಿನ ಎಲೆಗಳನ್ನು ಅರೆದು ಸೇವಿಸುವ ಮೂಲಕವೂ ಸಾಮಾನ್ಯ ಶೀತ ಮತ್ತು ಕೆಮ್ಮು

ಗುಣವಾಗುತ್ತದೆ.

ಸಾಮಾನ್ಯ ಶೀತಕ್ಕೆ ಅತ್ಯುತ್ತಮವಾದ ಹದಿನೈದು ಸಲಹೆಗಳು

* ಒಂದು ವೇಳೆ ಕೆಮ್ಮು ತೀವ್ರತರದ್ದಾಗಿದ್ದರೆ ಹಾಗೂ ಶೀಘ್ರವೇ ಗುಣಪಡಿಸಬೇಕಿದ್ದರೆ ಎರಡು ಏಲಕ್ಕಿಗಳನ್ನು ಕೊಂಚ ದಾಲ್ಚಿನ್ನಿಯ ಚೆಕ್ಕೆ ಮತ್ತು ಜೇಷ್ಠಮಧುವನ್ನು ಬೆರೆಸಿ ಜಗಿದು ನುಂಗಬೇಕು

* ಅಳಲೆಕಾಯಿ (Nut Gall) ಮಕ್ಕಳಲ್ಲಿ ಎದುರಾಗುವ ಶೀತ ಮತ್ತು ಕೆಮ್ಮಿನ ನಿವಾರಣೆಗೆ ಅತ್ಯುತ್ತಮ ಔಷಧಿಯಾಗಿದೆ.

* ಶೀತ ಮತ್ತು ಕೆಮ್ಮಿನ ನಿವಾರಣೆಗೆ ಕೆಲವು ಲವಂಗಗಳನ್ನು ಜಗಿದು ನುಂಗುವುದೂ ಒಂದು ಉತ್ತಮ ಆಯ್ಕೆಯಾಗಿದೆ.

* ಕೊಂಚ ಕೇಸರಿ (ಮೂರು ನಾಲ್ಕು ದಳಗಳು) ಮತ್ತು ಬಿಸಿಹಾಲನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದಾಗ

ಮಕ್ಕಳಲ್ಲಿ ಎದುರಾಗುವ ಶೀತ ಮತ್ತು ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ.

* ದೊಡ್ಡಜೀರಿಗೆ ಮತ್ತು ಒಣಶುಂಠಿಯ ಪುಡಿಯನ್ನು ಬೆರೆಸಿ ಜೇನಿನೊಂದಿಗೆ ಮಿಶ್ರಣ ಮಾಡಿ ಸೇವಿಸಿದಾಗಲೂ ಶೀತ ಮತ್ತು ಕೆಮ್ಮು ಗುಣವಾಗುತ್ತದೆ.

* ನೀರುಳ್ಳಿಯ ಬೀಜಗಳನ್ನು ಅರೆದು ಕೊಂಚ ಅರಿಶಿನ ಪುಡಿಯೊಂದಿಗೆ ಬೆರೆಸಿ ಲೇಪನ ತಯಾರಿಸಿ ಎದೆ ಮತ್ತು ಕಫ ಕಟ್ಟಿರುವ ಭಾಗಕ್ಕೆ ಹಚ್ಚಿಕೊಂಡಾಗ ಶೀತದಿಂದ ಉಪಶಮನ ದೊರಕುತ್ತದೆ.

* ಕಸ್ತೂರಿ ಬೆಂಡೆ (Musk mallow)ಯ ಸೇವನೆಯಿಂದಲೂ ಕಫ ಮತ್ತು ಕೆಮ್ಮು ಗುಣವಾಗುತ್ತದೆ.

ಸಾಮಾನ್ಯ ಶೀತಕ್ಕೆ ಅತ್ಯುತ್ತಮವಾದ ಹದಿನೈದು ಸಲಹೆಗಳು

* ತೀವ್ರತರದ ಕೆಮ್ಮು ಮತ್ತು ಶೀತವಿದ್ದರೆ ಅರಿಶಿನ ಮತ್ತು ಬೆಲ್ಲವನ್ನು ಬೆರೆಸಿ ಸೇವಿಸಬೇಕು. ಸಾಮಾನ್ಯ ಶೀತಕ್ಕೆ ಈರುಳ್ಳಿಯ ವಾಸನೆಯನ್ನು ಆಘ್ರಾಣಿಸುವುದೂ ಉತ್ತಮ ಪರಿಹಾರವಾಗಿದೆ.

*ಕೆಮ್ಮು ಮತ್ತು ಶೀತಕ್ಕೆ ತುಳಸಿ ಎಲೆಗಳು, ಶುಂಠಿ, ಕಾಳುಮೆಣಸು ಮತ್ತು ಹಿಪ್ಪಲಿಯನ್ನು ಕುದಿಸಿ ತಣಿಸಿದ ನೀರನ್ನು ದಿನಕ್ಕೆ ನಾಲ್ಕು ಬಾರಿ ಕೊಂಚ ನೀರಿನೊಂದಿಗೆ ಸೇವಿಸಬೇಕು.

* ತೀವ್ರತರದ ಶೀತ ಮತ್ತು ಕೆಮ್ಮು ಇದ್ದರೆ ತಲಾ ಏಳು ತುಳಸಿಯ ಮತ್ತು ಪುದಿನಾ ಎಲೆಗಳನ್ನು ಮೂರು ಕಾಳು ಕಾಳುಮೆಣಸನ್ನು ಕುದಿಸಿ ತಣಿಸಿದ ನೀರನ್ನು (ಸುಮಾರು 30 ಮಿಲಿಲೀ)ದಿನಕ್ಕೆರಡು ಬಾರಿ ಸೇವಿಸಬೇಕು.

Have a great day!
Read more...

English Summary

There are many home remedies in the form of Ayurvedic formulations and naturopathy that can be used for treatment of cough and cold. The combination of cardamom and ginger (0.5gram each) when given along with honey is extremely useful to wash out the blocked phlegm in cough. The mix of powered cardamom roasted fruit along with ghee and sugar, alleviates cough. The decoction of cinnamon and piper longum (in the proportion of 3 tsp, thrice a day) helps to relieve cough, especially in those people who are Kapha in nature.