ಮುಖದಲ್ಲಿ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕಡಲೆ ಹಿಟ್ಟಿನ ಪ್ಯಾಕ್


ಮುಖದಲ್ಲಿ ಏನಾದರೂ ಕಲೆಗಳಿದ್ದಲ್ಲಿ ಅದು ನಮ್ಮ ಸುಂದರ ಸೊಬಗಿಗೆ ಕಪ್ಪು ಚುಕ್ಕೆ ಎಂದೆನಿಸುತ್ತದೆ. ಅದರಲ್ಲೂ ಕಪ್ಪು ವರ್ತುಲಗಳು ಅಥವಾ ಕಪ್ಪು ಕಲೆಗಳು ತ್ವಚೆಯ ವೈರಿಯಾಗಿಬಿಟ್ಟಿದೆ. ಮೃತ ಕೋಶಗಳಿಂದ ಇದು ಉಂಟಾಗುತ್ತಿದ್ದು ಇದು ತ್ವಚೆಯಲ್ಲಿ ಸಂಗ್ರಹಗೊಂಡು ಮುಖವನ್ನು ನಿಸ್ತೇಜಗೊಳಿಸುತ್ತದೆ. ಈ ಕಪ್ಪು ವರ್ತುಲಗಳಿಂದ ನಿಮ್ಮ ಸುಂದರ ತ್ವಚೆ ಕೂಡ ಹಾಳಾಗಿಬಿಡುತ್ತದೆ. ಆಗಾಗ್ಗೆ ಬ್ಯೂಟಿಪಾರ್ಲರ್‌ಗೆ ಹೋಗಿ ನಿಮ್ಮ ಈ ಕಪ್ಪು ವರ್ತುಲಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಆದರೆ ಯಾವಾಗಲೂ ಬ್ಯೂಟಿ ಪಾರ್ಲರ್‌ಗೆ ಹೋಗಿ ಅಷ್ಟೊಂದು ಹಣ ಖರ್ಚು ಮಾಡಿ ತ್ವಚೆಯನ್ನು ಕಾಪಾಡಿಕೊಳ್ಳುವುದು ಎಂದರೆ ಸುಮ್ಮನೆ ಹಣ ಖರ್ಚು ಅಂತೆಯೇ ನಮ್ಮ ಸಮಯ ಕೂಡ.

Advertisement

ಪಾರ್ಲರ್‌ಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬಳಸಿಕೊಂಡು ತ್ವಚೆಯ ಕಪ್ಪು ವರ್ತುಲಗಳನ್ನು ಹೋಗಲಾಡಿಸುವುದು ಮತ್ತು ತ್ವಚೆಯ ಇನ್ನಿತರ ಸಮಸ್ಯೆಗಳನ್ನು ನಿವಾರಿಸುವುದು ಮಾಡುತ್ತಾರೆ. ಅದಕ್ಕಾಗಿ ನೀವು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ನಿಮ್ಮ ತ್ವಚೆಯನ್ನು ಸುಂದರವಾಗಿಸಿಕೊಳ್ಳಬಹುದು.

Advertisement

ಕಡಲೆ ಹಿಟ್ಟಿನ ಪ್ಯಾಕ್ ಬಳಸಿ ಕಪ್ಪು ವರ್ತುಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಎಲ್ಲಾ ಮನೆಗಳಲ್ಲಿ ಕಡಲೆ ಹಿಟ್ಟನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅಡುಗೆ ಮನೆಯಲ್ಲಿ ಪ್ರಮುಖವಾಗಿರುವ ಕಡಲೆ ಹಿಟ್ಟು ನಿಮ್ಮ ಸೌಂದರ್ಯಕ್ಕೆ ಕೂಡ ವರದಾನವಾಗಿದೆ ಎಂಬುದನ್ನು ಮರೆಯಬೇಡಿ. ಪ್ರೊಟೀನ್‌ಗಳನ್ನು ಒಳಗೊಂಡಿರುವ ಕಡಲೆ ಹಿಟ್ಟು ನಿಮ್ಮ ತ್ವಚೆಯ ನಿಸ್ತೇಜತನವನ್ನು ಹೋಗಲಾಡಿಸಿ ಕಪ್ಪು ಚುಕ್ಕೆಗಳು ಮತ್ತು ಕಲೆಗಳನ್ನು ನಿವಾರಿಸುತ್ತದೆ.

ಕಡಲೆ ಹಿಟ್ಟಿನಲ್ಲಿ ಮಿನರಲ್‌ಗಳು ಹಾಗೂ ವಿಟಮಿನ್‌ಗಳಿದ್ದು ವಿಟಮಿನ್ ಎ ಮತ್ತು ಬಿ ಅನ್ನು ಇದು ಹೊಂದಿದೆ ಮತ್ತು ಇದು ನಿಮ್ಮ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ. ನಿಮ್ಮ ಮುಖದ ಕೊಲೆಜನ್ ಉತ್ಪಾದನೆಯನ್ನು ಇದು ಪ್ರೋತ್ಸಾಹಿಸುತ್ತದೆ ಮತ್ತು ತ್ವಚೆಯನ್ನು ಶುಭ್ರ ಹಾಗೂ ಹೊಳೆಯುವಂತೆ ಮಾಡುತ್ತದೆ. ಹಾಗಿದ್ದರೆ ಕಡಲೆ ಹಿಟ್ಟಿನೊಂದಿಗೆ ಇನ್ನಿತರ ಸಾಮಾಗ್ರಿಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ....

ಕಡಲೆ ಹಿಟ್ಟು ಮತ್ತು ಟೊಮೆಟೊ ಜ್ಯೂಸ್

ಕಡಲೆ ಹಿಟ್ಟಿನ ಉಪಯೋಗಗಳೇನು ಎಂಬ ಪ್ರಶ್ನೆಗೆ ತಿಂಡಿಪೋತರು ಮೆಣಸಿನ ಬೋಂಡಾ ಮಾಡಲು ಆಗುತ್ತೆ ಎಂಬ ಉಢಾಫೆಯ ಉತ್ತರ ನೀಡಬಹುದು. ಆದರೆ ಸೌಂದರ್ಯದ ವಿಷಯ ಬಂದಾಗ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ. ತಮ್ಮ ತ್ವಚೆಯ ಬಗ್ಗೆ ಕಾಳಜಿ ಹೊಂದಿರುವವರು ಸೋಪು, ರಾಸಾಯನಿಕ ಮುಖಲೇಪನ, ರಾಸಾಯನಿಕ ಆಧಾರಿತ ಪ್ರಸಾಧನಗಳ ಬದಲು ಸುರಕ್ಷಿತವಾದ ಮನೆಮದ್ದುಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಇದರಲ್ಲಿ ಕಡಲೆ ಹಿಟ್ಟು ಪ್ರಮುಖವಾಗಿದೆ. ಇನ್ನು ಟೊಮೊಟೊ ರಸದಲ್ಲಿರವ ಉತ್ಕರ್ಷಣ ನಿರೋಧಿ ಅಂಶಗಳು ತ್ವಚೆಯ ಮೃದುತ್ವವನ್ನು ಸುಧಾರಿಸುತ್ತದೆ. ಕಡಲೆ ಹಿಟ್ಟಿನೊಂದಿಗೆ ಟೊಮೊಟೊ ರಸವನ್ನು ಸೇರಿಸಿಕೊಂಡು ಕಪ್ಪು ವರ್ತುಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಸಾಮಾಗ್ರಿಗಳು

*3 ಚಮಚ ಕಡಲೆ ಹಿಟ್ಟು

*3 ಚಮಚ ಟೊಮೆಟೊ ರಸ

*1/4 ಚಮಚ ದಾಲ್ಚಿನ್ನಿ ಹುಡಿ

ತಯಾರಿಸುವುದು ಹೇಗೆ

ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಟೊಮೊಟೊ ರಸ ಮತ್ತು ದಾಲ್ಚಿನ್ನಿ ಹುಡಿಯನ್ನು ಬೆರೆಸಿಕೊಳ್ಳಿ. ನಿಮ್ಮ ಮುಖಕ್ಕೆ ಎಲ್ಲವನ್ನು ಮಿಶ್ರ ಮಾಡಿಕೊಂಡು ಹಚ್ಚಿ ಇದನ್ನು 20-25 ನಿಮಿಷ ಹಾಗೆಯೇ ಬಿಡಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ ಮತ್ತು ಒಣಗಲು ಬಿಡಿ. ನಿತ್ಯವೂ ಇದನ್ನು ಬಳಸಿಕೊಂಡು ಸ್ವಚ್ಛ ಸುಂದರ ಮುಖವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಕಡಲೆ ಹಿಟ್ಟು, ಮೊಸರು ಮತ್ತು ಹಾಲು

ನೀವು ಒಣ ತ್ವಚೆಯನ್ನು ಹೊಂದಿದ್ದರೆ ಈ ಪ್ಯಾಕ್ ಅದ್ಭುತವಾಗಿ ಕೆಲಸ ಮಾಡುತ್ತದೆ. ಹಾಲು ಮತ್ತು ಮೊಸರಿನಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.

ಸಾಮಾಗ್ರಿಗಳು

2 ಚಮಚ ಕಡಲೆ ಹಿಟ್ಟು

2 ಚಮಚ ಹಸಿ ಹಾಲು

1 ಚಮಚ ಮೊಸರು

ಚಿಟಿಕೆಯಷ್ಟು ಅರಿಶಿನ ಹುಡಿ

ಮಾಡುವ ವಿಧಾನ

ಕಡಲೆ ಹಿಟ್ಟು, ಹಸಿ ಹಾಲು ಮತ್ತು ಮೊಸರನ್ನು ಚಿಟಿಕೆ ಅರಶಿನದೊಂದಿಗೆ ಬೆರೆಸಿಕೊಳ್ಳಿ. ಪ್ಯಾಕ್ ತುಂಬಾ ಗಟ್ಟಿಯಾಗಿದ್ದರೆ ಇದಕ್ಕೆ ಸ್ವಲ್ಪ ನೀರು ಸೇರಿಸಿ. ನಿಮ್ಮ ಮುಖಕ್ಕೆ ಈ ಪ್ಯಾಕ್ ಅನ್ನು ಹಚ್ಚಿಕೊಳ್ಳಿ, ಪ್ಯಾಕ್ ಹಚ್ಚುವಾಗ ಬ್ರಶ್ ಬಳಸಿ. 25 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಡಲೆ ಹಿಟ್ಟು ಮತ್ತು ಪಪ್ಪಾಯ

ಪಪ್ಪಾಯವು ವಿಟಮಿನ್ ಎ ಮತ್ತು ಸಿ ಹಾಗೂ ಮಿನರಲ್‌ಗಳನ್ನು ಒಳಗೊಂಡಿದ್ದು ಇದು ಹೊಳೆಯುವ ತ್ವಚೆಯನ್ನು ನೀಡುತ್ತದೆ. ಇದು ಆ್ಯಂಟಿ ಮೈಕ್ರೊಬಯಲ್ ಅಂಶಗಳನ್ನು ಒಳಗೊಂಡಿದ್ದು ಮೊಡವೆ ಮತ್ತು ಕಪ್ಪು ಕಲೆಗಳನ್ನು ಇದು ನಿವಾರಿಸುತ್ತದೆ.

ಸಾಮಾಗ್ರಿಗಳು

*2 ಚಮಚ ಮ್ಯಾಶ್ ಮಾಡಿದ ಪಪ್ಪಾಯ

*2 ಚಮಚ ಕಡಲೆ ಹಿಟ್ಟು

*1 ಚಮಚ ಲಿಂಬೆ ರಸ

ಮಾಡುವ ವಿಧಾನ

ಒಂದು ಬೌಲ್‌ನಲ್ಲಿ ಮ್ಯಾಶ್ ಮಾಡಿದ ಪಪ್ಪಾಯವನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಕಡಲೆ ಹಿಟ್ಟು ಹಾಗೂ ಲಿಂಬೆ ರಸವನ್ನು ಸೇರಿಸಿಕೊಳ್ಳಿ ಮತ್ತು ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 20 -30 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ 2-3 ಬಾರಿ ಈ ವಿಧಾನವನ್ನು ಅನುಸರಿಸಿ.

ಕಡಲೆ ಹಿಟ್ಟು ಬಳಸಿ 5 ಬಗೆಯ ಫೇಸ್ ಮಾಸ್ಕ್

ಕಡಲೆ ಹಿಟ್ಟು ಮತ್ತು ಗ್ಲಿಸರಿನ್

ನೀವು ಜಿಡ್ಡಿನ ತ್ವಚೆಯನ್ನು ಹೊಂದಿದ್ದೀರಿ ಎಂದಾದಲ್ಲಿ ಇದು ಉತ್ತಮವಾಗಿದೆ.

ಸಾಮಾಗ್ರಿಗಳು

*2 ಚಮಚ ಕಡಲೆ ಹಿಟ್ಟು

*1 ಚಮಚ ಗ್ಲಿಸರಿನ್

ಮಾಡುವುದು ಹೇಗೆ

*ಕಡಲೆ ಹಿಟ್ಟು ಮತ್ತು ಗ್ಲಿಸರಿನ್ ಅನ್ನು ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಮಿಶ್ರಣವನ್ನು ವೃತ್ತಾಕಾರವಾಗಿ

ಮಸಾಜ್ ಮಾಡಿ

*2-3 ನಿಮಿಷ ಇದನ್ನು ಪುನರಾವರ್ತಿಸಿ. 20 ನಿಮಿಷಗಳ ನಂತರ *ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ನಿಮ್ಮ ಮುಖವನ್ನು ಒರೆಸಲು ಮೃದುವಾದ ಟವೆಲ್ ಬಳಸಿಕೊಳ್ಳಿ.

ಕಡಲೆಹಿಟ್ಟು ಮತ್ತು ಮಜ್ಜಿಗೆ

ಚರ್ಮದ ಬಣ್ಣವನ್ನು ತಿಳಿಗೊಳಿಸಲು ಕಡಲೆಹಿಟ್ಟು ತುಂಬಾ ಒಳ್ಳೆಯದು. ಮಜ್ಜಿಗೆ ಜತೆ ಸೇರಿಸಿದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಬೇಕಾಗುವ ಸಾಮಗ್ರಿಗಳು

*2 ಚಮಚ ಕಡಲೆಹಿಟ್ಟು

*1 ಚಮಚ ಮಜ್ಜಿಗೆ

*1 ಚಮಚ ಟೊಮೆಟೊ ಜ್ಯೂಸ್

*½ ಚಮಚ ಅರಿಶಿನ ಹುಡಿ

ವಿಧಾನ

*ಕಡಲೆಹಿಟ್ಟು ಮತ್ತು ಮಜ್ಜಿಗೆಯನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. 2. ಟೊಮೆಟೊ ಜ್ಯೂಸ್ ಮತ್ತು ಅರಿಶಿನ ಹುಡಿಯನ್ನು ಇದಕ್ಕೆ ಹಾಕಿ.

*ಪೇಸ್ಟ್ ತುಂಬಾ ದಪ್ಪಗಿದ್ದರೆ ಸ್ವಲ್ಪ ಮಜ್ಜಿಗೆ ಹೆಚ್ಚು ಹಾಕಿ.

*ಇನ್ನು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ.

*ನಂತರ ಈ ಮಿಶ್ರಣವನ್ನು ಪ್ರತೀ ದಿನ ಬಳಸಿಕೊಳ್ಳಿ. ನಿಯಮಿತವಾಗಿ ಬಳಸಿಕೊಂಡರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

Read more...

English Summary

Dark spots, acne scars and pimples are some of the common skin problems that we all face. Rich in proteins, gram flour helps in treating the dullness and dark spots on the skin. It contains minerals and vitamin A and B that will help in keeping the skin healthy. You can use it with ingredients like turmeric glycerine, etc.