For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಎಷ್ಟು ಜಿಲ್ಲೆ ಇದೆ ಅಂತ ನಿಮಗೆ ಗೊತ್ತಿಲ್ವ!

|
ಇದೇನೂ ದೊಡ್ಡ ಸಂಗತಿ, ನಮ್ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ ನಮಗೆ ಗೊತ್ತಿಲ್ವ ಅಂತ ಗುರಾಯಿಸಬೇಡಿ. ನಿಮ್ಮ ಪಕ್ಕದಲ್ಲಿರುವರನ್ನು ಒಂದಿಬ್ಬರನ್ನು ಕೇಳಿ ನೋಡಿ. ಖಂಡಿತಾ ಒಬ್ಬರೊಬ್ಬರದ್ದು ಒಂದೊಂದು ಉತ್ತರ. ಕೆಲವರು ಇಪ್ಪತ್ತಾರರಿಂದ ಸುರು ಮಾಡುತ್ತಾರೆ.

ಹೆಚ್ಚಿನವರಿಗೆ ನಮ್ಮ ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ ಎಂದು ಗೊತ್ತಿಲ್ಲ. ಯಾವೆಲ್ಲ ಜಿಲ್ಲೆಗಳಿವೆ ಅಂತ ಕೇಳಿದರೆ ಗೋವಿಂದ. ತನ್ನ ಊರಿನ ಆಸುಪಾಸು ಮತ್ತು ಕೆಲಸ ಮಾಡುವ ಪ್ರದೇಶದ ಆಸುಪಾಸಿನ ಜಿಲ್ಲೆಗಳನ್ನು ಹೇಳುತ್ತಾರೆ. ಹೀಗೆ ಹೇಳುತ್ತ ಹೋದಂತೆ ಸಂಖ್ಯೆ 20 ದಾಟಿಸಲು ಕಷ್ಟಪಡುತ್ತಾರೆ. ಕೆಲವು ಹೆಸರುಗಳು ಗಂಟಲಿನಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತವೆ.

ಗೊತ್ತಿಲ್ಲದವರು, ಅರ್ಧ ಗೊತ್ತಿರುವರು ದಯವಿಟ್ಟು ಮುಂದೆ ಓದಿಕೊಳ್ಳಿ. ಯಾರಾದ್ರೂ, ಯಾವತ್ತಾದ್ರೂ ಕೇಳಿದ್ರೆ ಪಟಪಟನೆ ಹೇಳುತ್ತ ಹೋಗಿರಿ. ಕರ್ನಾಟಕದ ಆಡಳಿತ ಸುಲಭಗೊಳಿಸಲು ಒಟ್ಟು ನಾಲ್ಕು ವಿಭಾಗಗಳಾಗಿ 30 ಜಿಲ್ಲೆಗಳನ್ನು ವಿಂಗಡಿಸಲಾಗಿದೆ.

ಬೆಂಗಳೂರು ವಿಭಾಗ: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.

ಬೆಳಗಾವಿ ವಿಭಾಗ: ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ

ಗುಲ್ಬರ್ಗ ವಿಭಾಗ: ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ

ಮೈಸೂರು ವಿಭಾಗ: ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು

ಛೀ ನಮ್ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ, ಯಾವೆಲ್ಲ ಜಿಲ್ಲೆಗಳಿವೆ ಅಂತ ಕನ್ನಡಿಗಾರದ ನಮಗೆ ಗೊತ್ತಿಲ್ಲದಿದ್ದರೆ ನಾಚಿಕೆಗೇಡು ಅಲ್ವೆ. ಯಾವೆಲ್ಲ ಜಿಲ್ಲೆಗಳಿವೆ ಅಂತ ಮರೆತು ಹೋದ್ರೆ ಮತ್ತೆ ಓದಿಕೊಳ್ಳಿ. ಜೈ ಕರ್ನಾಟಕ

English summary

Karnataka districts list | Districts in Karnataka | Four Division | ಕರ್ನಾಟಕದ ಜಿಲ್ಲೆಗಳು

Do you know how much districts in Karnataka State. There is four division: Bangalore, Belgaum, Gulbarga and Mysore Division. Karnataka districts list....
Story first published: Friday, May 27, 2011, 20:22 [IST]
X
Desktop Bottom Promotion