For Quick Alerts
ALLOW NOTIFICATIONS  
For Daily Alerts

ಈ ವಿಶ್ವಂಭರ ಸ್ವಾಮೀಜಿ ಯಾರು? ಈಗ ಎಲ್ಲಿದ್ದಾರೆ?

By Prasad
|
Vishwambhar Swamiji
ಫೇಸ್ ಬುಕ್ ನಲ್ಲಿರುವ ಸ್ವಾಮೀಜಿಗಳ ಬಗ್ಗೆ ಬರೀತಿದ್ದೀರಲ್ಲ. ಯಾಕೆ ಫೇಸ್ ಬುಕ್ಕಲ್ಲಿ ಸ್ವಾಮೀಜಿ ಇರಬಾರದಾ? ಅದರಲ್ಲೇನು ಅಂಥ ವಿಶೇಷ ಅಂತ ಅವರ ಬಗ್ಗೆ ಬರೀತಿದ್ದೀರಿ? ಅಂತೆಲ್ಲ ನೂರೆಂಟು ಪ್ರಶ್ನೆ ಕೇಳಿ ಓದುಗರೊಬ್ಬರು ಕಾಮೆಂಟ್ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಸ್ವಾಗತ.

ಈ ಸ್ವಾಮೀಜಿಗಳೆಲ್ಲ ಫೇಸ್ ಬುಕ್ ನಲ್ಲಿ ಯಾಕಿದ್ದಾರೆ ಅನ್ನುವುದಕ್ಕಿಂತ ಇಂಟರ್ ನೆಟ್ಟಿನಲ್ಲಿ ಅವರೆಲ್ಲ ಎಂತಹ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎನ್ನುವುದು ನಮ್ಮ ಕುತೂಹಲ. ಈ ತಾಣವನ್ನು ಸ್ವಾಮಿಗಳು ಯಾವ ಬಗೆಯಲ್ಲಿ ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಯಾರ್ಯಾರಿಗೆ ಎಷ್ಟು ಭಕ್ತರಿದ್ದಾರೆ? ಇದರಿಂದ ಏನು ಪ್ರಯೋಜನ?

ಯಾವುದೇ ಪ್ರವಚನಗಳಿಲ್ಲದೆ, ಅನುಭವ ಮಂಟಪಗಳಿಲ್ಲದೆ, ಭಿತ್ತಿಪತ್ರಗಳಿಲ್ಲದೆ, ಈಮೇಲುಗಳಿಲ್ಲದೆ ಸಾವಿರಾರು ಭಕ್ತಾದಿಗಳನ್ನು ಒಂದೇ ಏಟಿಗೆ ತಲುಪಬಹುದಾದ ಸೋಷಿಯಲ್ ಮೀಡಿಯ ಈ ಫೇಸ್ ಬುಕ್. ಸ್ವಾಮೀಜಿಗಳು ಭಕ್ತಾದಿಗಳನ್ನು ಮಾತ್ರವಲ್ಲ ಭಕ್ತಾದಿಗಳು ಇನ್ನಿತರ ಭಕ್ತರನ್ನು ಕೂಡ ಸಂಧಿಸುವ, ಮಾಹಿತಿಗಳನ್ನು ಹಂಚಿಕೊಳ್ಳುವ ಉಪಯುಕ್ತ ತಾಣ ಇದಾಗಿದೆ. ಹಾಗಂತ ಇಲ್ಲಿ ನಡೆಯುವ ಎಲ್ಲ ಚರ್ಚೆಗಳು ಉಪಯುಕ್ತವಾಗಿರುತ್ತವೆ ಅಂತಲ್ಲ.

ಆಯಾ ಸ್ವಾಮೀಜಿಗೆ ಮಾತ್ರ ಸಂಬಂಧಿಸಿದ ಮಾಹಿತಿಯ ಜೊತೆಗೆ ಇತರ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಕೂಡ ಇಲ್ಲಿ ಮಾಹಿತಿ ಹಾಕಿ ಇತರರಿಗೂ ತಲುಪುವಂತೆ ಮಾಡಬಹುದು. ಇಂಥ ಉಪಯೋಗವನ್ನು ಎಷ್ಟು ಸ್ವಾಮೀಜಿಗಳು ಪಡೆದುಕೊಂಡಿದ್ದಾರೆ? ಉತ್ತರ ಹುಡುಕುತ್ತ ಹೋದರೆ ಕೆಲ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಅತ್ಯಂತ ಕ್ರಿಯಾಶೀಲರಾಗಿರುವ ಪೇಜಾವರ ಶ್ರೀಗಳ ಮತ್ತು ರಾಘವೇಶ್ವರ ಭಾರತಿ ಸ್ವಾಮಿಜಿಗಳ ಫೇಸ್ ಬುಕ್ ಬಗ್ಗೆ ಈ ತಾಣದಲ್ಲಿ ಓದಿದ್ದೀರಿ. ಇಲ್ಲಿ ಸಾವಿರಗಟ್ಟಲೆ ಭಕ್ತರಿಲ್ಲದಿದ್ದರೂ ಚಟುವಟಿಕೆ ನಿರಂತರವಾಗಿದೆ.

ಹಾಗೆಯೇ ಹುಡುಕುತ್ತಿರುವಾಗ ಸಿಕ್ಕಿದ್ದು ವಿಶ್ವಂಭರ ಸ್ವಾಮೀಜಿ ಎಂಬ ಕಾವಿಧಾರಿ ಸ್ವಾಮೀಜಿಯ ಫೇಸ್ ಬುಕ್ ತಾಣ. ಅವರ ಹಿಂಬಾಲಕರನ್ನು ನೋಡಿ ದಂಗಾಯಿತು. ಸುಮಾರು ನಾಲ್ಕೂವರೆ ಸಾವಿರ ಗೆಳೆಯರನ್ನು ಅವರು ಸಂಪಾದಿಸಿದ್ದಾರೆ. ಆದರೆ, ತಾಣದಲ್ಲಿ ಅಷ್ಟೊಂದು ಚರ್ಚೆ ನಡೆದಿರುವುದು ಕಂಡುಬರುತ್ತಿಲ್ಲ. ಅವರು ಮುಂಬಯಿಯವರಾದರೂ ನಮ್ಮ ಬೆಂಗಳೂರಿನಲ್ಲೇ ನೆಲೆಸಿದ್ದಾರೆಂದು ಮಾಹಿತಿ ನೀಡುತ್ತದೆ. ಇಷ್ಟು ಹೊರತುಪಡಿಸಿದರೆ ಬೇರೆ ಮಾಹಿತಿ ಇಲ್ಲ.

ಅಷ್ಟೊಂದು ಗೆಳೆಯರನ್ನು ಸಂಪಾದಿಸಿದ್ದು ಹೇಗೆ? ಚಟುವಟಿಕೆ ಯಾಕೆ ನಿಂತ ನೀರಾಗಿದೆ? ನಿಜಕ್ಕೂ ಇವರು ಸ್ವಾಮೀಜಿನಾ? ಅಥವಾ ಸ್ವಾಮೀಜಿ ಅಂತ ಹೆಸರಿಟ್ಟುಕೊಂಡಿದ್ದಾರಾ? ಇವರಿಗೂ ಆರ್ಟ್ ಆಫ್ ಲಿವಿಂಗ್ ಗೂ ಏನು ಸಂಬಂಧ? ಸ್ವಾಮೀಜಿಯ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ಈ ದಟ್ಸ್ ಕನ್ನಡ ತಾಣದಲ್ಲಿಯೇ ಹಂಚಿಕೊಳ್ಳಬೇಕೆಂದು ಕೋರಿಕೆ. [ಒನ್‌ಇಂಡಿಯಾ ಕನ್ನಡ ಫೇಸ್‌ಬುಕ್ ಫ್ಯಾನ್ ಕ್ಲಬ್ ಸೇರಿರಿ]

English summary

Swamijis from Karnataka on Facebook | Vishwambhar Swamiji | ಫೇಸ್ ಬುಕ್ ನಲ್ಲಿ ಸ್ವಾಮೀಜಿಗಳು | ವಿಶ್ವಂಭರ ಸ್ವಾಮೀಜಿ

Meet Sri. Vishwambhara Swamiji on Social Media platform, Facebook. Mumbai based swamiji living in Bangalore has 4377 followers. No activity on the page.
X
Desktop Bottom Promotion