For Quick Alerts
ALLOW NOTIFICATIONS  
For Daily Alerts

ಫೇಸ್ ಬುಕ್ಕಲ್ಲಿ ಗೋವುಪ್ರಿಯ ರಾಘವೇಶ್ವರ ಸ್ವಾಮೀಜಿ

By Prasad
|
Raghaveshwara Bharati Swamiji
ಫೇಸ್ ಬುಕ್ಕಿನಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿರುವುದು ನಿಮಿತ್ತ ಮಾತ್ರ. ಅಸಲಿಗೆ ಫೇಸ್ ಬುಕ್ಕು, ಆ ಸ್ವಾಮೀಜಿಗಳ ಹಿಂಬಾಲಕರಿಗೆ, ಭಕ್ತಾದಿಗಳಿಗೆ, ಅವರನ್ನು ಆರಾಧಿಸುವವರಿಗೆ ಅನೇಕ ಧಾರ್ಮಿಕ ವಿಷಯಗಳ ಕುರಿತು ಚರ್ಚಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು ಅದ್ಭುತ ವೇದಿಕೆ ಕಲ್ಪಿಸಿಕೊಟ್ಟಿದೆ.

ಅಲ್ಲಿ ಆಧ್ಯಾತ್ಮಿಕತೆ ಎಂದರೇನು? ದೇವರು ಯಾರು, ಎಲ್ಲಿದ್ದಾನೆ? ಎಲ್ಲಿ ಯಾವ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ? ಇತ್ಯಾದಿಯಾಗಿ ಹಿಡಿದು ಸದಸ್ಯರಾದವರ ನಡುವೆಯೇ 'ಏನೇ ಕಮಲ, ಎಲ್ಲಿದ್ದಿಯೇ? ಎಷ್ಟು ದಿನವಾಯಿತು ನಿನ್ನ ನೋಡಿ? ಫೇಸ್ ಬುಕ್ಕಲ್ಲಿ ಫೇಸ್ಟುಫೇಸ್ ಆಗಿದ್ದು ತುಂಬಾ ಸಂತೋಷವಾಯಿತು' ಎನ್ನುವಂತಹ ಉಭಯ ಕುಶಲೋಪರಿಗಳೂ ನಡೆಯುತ್ತವೆ.

ಇಂತಹ ಸ್ವಾಮೀಜಿಗಳಿರುವ ಫೇಸ್ ಬುಕ್ ತಾಣಗಳಲ್ಲಿ ಪ್ರಮುಖವಾದುದು ಗೋಕರ್ಣದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ತಾಣ. ಸುಮಾರು 900 ನೆಟ್ಟಿಗರು ಈ ಫೇಸ್ ಬುಕ್ ತಾಣದ ಸದಸ್ಯರಾಗಿದ್ದಾರೆ. ತಮ್ಮ ಸಾಮಾಜಿಕ ಸೇವೆಯಿಂದಾಗಿ ಜನಾನುರಾಗಿಯಾಗಿರುವ ರಾಘವೇಶ್ವರ ಸ್ವಾಮೀಜಿಗಳ ಕುರಿತು ಅನೇಕ ಸಂಗತಿಗಳು ಇಲ್ಲಿ ಲಭ್ಯ.

ಶ್ರೀ ರಾಘವೇಶ್ವರ ಸ್ವಾಮೀಜಿಗಳು ಗೋವಿನ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರನ್ನು ಆರಾಧಿಸುವವರು ಕರ್ನಾಟಕದವರು ಮಾತ್ರವಲ್ಲ, ಹೊರರಾಜ್ಯದವರು ಮತ್ತು ಕನ್ನಡೇತರರು ಕೂಡ ಇಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದ ಇಲ್ಲಿ ಕನ್ನಡ ಸಿಗುವುದು ಸ್ವಲ್ಪ ದುರ್ಲಭವೆ.

English summary

Swamijis from Karnataka on Facebook | Raghaveshwara Bharati Swamiji | ಫೇಸ್ ಬುಕ್ ನಲ್ಲಿ ಸ್ವಾಮೀಜಿಗಳು | ರಾಘವೇಶ್ವರ ಸ್ವಾಮೀಜಿ

Sri Raghaveshwara Bharati Swamiji of Ramachandrapura Matha in Gokarna is on Facebook not just for the sake of being there. He has been reaching out to hundreds of devotees through this platform. Moreover, lots of discussions go on in the Facebook page regarding saving cow, existence of God, spirituality, religious programs.
X
Desktop Bottom Promotion