For Quick Alerts
ALLOW NOTIFICATIONS  
For Daily Alerts

ಕೊನೆಪಕ್ಷ ಮಲಗುವ ಮುನ್ನವಾದರೂ ನೆಮ್ಮದಿಯಾಗಿ ಮಲಗಿ!

ಸಣ್ಣಪುಟ್ಟ ಜಗಳಗಳು ಸಂಸಾರದಲ್ಲಿ ಇದ್ದೇ ಇರುತ್ತದೆ. ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು. ಜಗಳವನ್ನು ಕೊನೆಗಾಣಿಸಲು ನಿಮಗೆ ಇಷ್ಟವಿಲ್ಲದೆ ಇದ್ದರೆ ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು.

By Hemanth
|

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ದಂಪತಿಗಳು ಎಷ್ಟೇ ಜಗಳ ಮಾಡಿಕೊಂಡರೂ ಕೂಡ ಅಂತಿಮವಾಗಿ ಮಲಗುವ ವೇಳೆ ಎಲ್ಲವೂ ಶಮನವಾಗುತ್ತದೆ ಎನ್ನುವುದು ಈ ಮಾತಿನ ಅರ್ಥವಾಗಿದೆ. ಸಣ್ಣಪುಟ್ಟ ಜಗಳಗಳು ಸಂಸಾರದಲ್ಲಿ ಇದ್ದೇ ಇರುತ್ತದೆ. ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?

ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು. ಜಗಳವನ್ನು ಕೊನೆಗಾಣಿಸಲು ನಿಮಗೆ ಇಷ್ಟವಿಲ್ಲದೆ ಇದ್ದರೆ ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಕೋಪದಲ್ಲಿಯೇ ನೀವು ರಾತ್ರಿ ಮಲಗಿದರೆ ಆಗ ಅದು ನಿಮ್ಮ ಹಾಗೂ ನಿಮ್ಮ ಸಂಗಾತಿಯ ಜೀವನದ ಮೇಲೆ ಪರಿಣಾಮ ಬೀರುವುದು. ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!

ಯಾಕೆಂದರೆ ಇಂತಹ ಜಗಳ ಮುಂದೆ ಡೈವೋರ್ಸ್ ತನಕ ತಲುಪುವ ಸಾಧ್ಯತೆಗಳು ಇವೆ. ಪತಿಪತ್ನಿಯ ಜಗಳ ಮರುದಿನಕ್ಕೆ ಹೋಗಲೇ ಬಾರದು. ಹಾಗೊಂದು ವೇಳೆ ಹೋದರೆ ಅದು ಅವರಿಬ್ಬರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಲೇಖನದಲ್ಲಿ ಇದರ ವಿಚಾರವನ್ನು ತಿಳಿಯಿರಿ....

ಜಗಳ ಮಾಡಿಕೊಳ್ಳಬೇಡಿ....

ಜಗಳ ಮಾಡಿಕೊಳ್ಳಬೇಡಿ....

ಮಲಗುವ ಮೊದಲು ಜಗಳವಾಡಿದರೆ ನೀವು ಅಥವಾ ನಿಮ್ಮ ಪತ್ನಿ ಶಾಂತಿಯಿಂದ ಮಲಗಲು ಸಾಧ್ಯವಿಲ್ಲ.

ರಾತ್ರಿ ಕನಸ್ಸಿನಲ್ಲೂ ಕಾಡಬಹುದು ಜಗಳ....

ರಾತ್ರಿ ಕನಸ್ಸಿನಲ್ಲೂ ಕಾಡಬಹುದು ಜಗಳ....

ಕನಸಿನಲ್ಲೂ ಕೂಡ ಜಗಳದ ದೃಶ್ಯಗಳು ಹಾಗೂ ಮಾತುಗಳು ನಿಮ್ಮ ಮುಂದೆ ಬರಬಹುದು. ಇದು ಅಜಾಗೃತ ಮನಸ್ಸನ್ನು ಕೆಡಿಸುತ್ತದೆ.

ಬೆಳಗ್ಗೆ ಎದ್ದ ಬಳಿಕ ಮುಂದುವರಿಯಬಹುದು...

ಬೆಳಗ್ಗೆ ಎದ್ದ ಬಳಿಕ ಮುಂದುವರಿಯಬಹುದು...

ರಾತ್ರಿ ನೀವು ಜಗಳವನ್ನು ಅಂತ್ಯಗೊಳಿಸದೆ ಇದ್ದರೆ ಬೆಳಗ್ಗೆ ಎದ್ದ ಬಳಿಕ ಮತ್ತೆ ನಿಮ್ಮಿಬ್ಬರ ಮಧ್ಯೆ ಜಗಳವಾಗಲು ಆರಂಭವಾಗುತ್ತದೆ.

ಸಂಬಂಧದಲ್ಲಿ ಜಗಳ ಒಳ್ಳೆಯದಲ್ಲ....

ಸಂಬಂಧದಲ್ಲಿ ಜಗಳ ಒಳ್ಳೆಯದಲ್ಲ....

ಮಲಗುವ ಮೊದಲು ಜಗಳ ಮಾಡುವಂತಹ ದಂಪತಿ ತಮ್ಮ ಸಂಬಂಧದಲ್ಲಿ ತುಂಬಾ ಕಠಿಣ ಸಮಯವನ್ನು ಎದುರಿಸುತ್ತಾರೆ ಎಂದು ಹಲವಾರು ಸಂಶೋಧನೆಗಳು ಹೇಳಿವೆ.

ಮಕ್ಕಳೆದುರು....

ಮಕ್ಕಳೆದುರು....

ನಿಮಗೆ ಮಕ್ಕಳಾಗಿದ್ದರೆ ಅವರ ಮುಂದೆ ನೀವು ರಾತ್ರಿ ವೇಳೆ ಜಗಳವಾಡಿದರೆ ಅವರಿಗೂ ಅಸುರಕ್ಷತೆ ಹಾಗೂ ನಿದ್ರಾಹೀನತೆ ಕಾಡಬಹುದು.

ಇಂದ್ರಿಯ ಸುಖಗಳಿಂದ...

ಇಂದ್ರಿಯ ಸುಖಗಳಿಂದ...

ಮಲಗುವ ಮೊದಲು ಜಗಳವನ್ನು ಕೊನೆಗೊಳಿಸದೆ ಇದ್ದರೆ ಇಂದ್ರಿಯ ಸುಖಗಳಿಂದ ನೀವು ವಂಚಿತರಾಗಲಿದ್ದೀರಿ.

ಜಗಳಕ್ಕೆ ಅಂತ್ಯ ಹಾಡಲೇಬೇಕು....

ಜಗಳಕ್ಕೆ ಅಂತ್ಯ ಹಾಡಲೇಬೇಕು....

ಸಣ್ಣಪುಟ್ಟ ಜಗಳಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಲಗುವ ಮೊದಲು ಏನೇ ಜಗಳವಾದರೂ ಅದನ್ನು ಕೊನೆಗೊಳಿಸಿ. ಇದರಿಂದ ನಿಮಗೆ ಒಳ್ಳೆಯ ನಿದ್ರೆ ಹಾಗೂ ಕಹಿಯನ್ನು ಮರೆಯಲು ಸಾಧ್ಯವಾಗಬಹುದು.

English summary

Why You Shouldn't Go To Bed With Anger

It is quite natural to have small fights with your spouse but the problem gets worsened if it turns into a big fight. And then if you don't have the habit of resolving differences immediately, then you are mishandling your relationships. And then if you also have the habit of going to the bed with an angry mood then you are ruining your life and your partner's life too. Why? Read on to know...
X
Desktop Bottom Promotion