For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯ ಸಮಸ್ಯೆ ನಾಲ್ಕು ಗೋಡೆಯ ಮಧ್ಯವೇ ಇರಲಿ!

ದಾಂಪತ್ಯವೆನ್ನುವುದು ಯಾವಾಗಲೂ ಎರಡು ದೇಹ ಹಾಗೂ ಎರಡು ಮನಸ್ಸುಗಳ ಮಧ್ಯೆ ಸಾಗುತ್ತಿರಬೇಕು. ಇದರಲ್ಲಿ ಮೂರನೇಯವರು ಪ್ರವೇಶ ಮಾಡಿದರೆ ಅದರ ಪರಿಣಾಮ ತುಂಬಾ ಕೆಟ್ಟದಾಗುತ್ತದೆ. ಅದರಲ್ಲೂ ಕೆಲವೊಂದು ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚಿಸಲೇಬಾರದು...

By Hemanth
|

ದಾಂಪತ್ಯ ಜೀವನವೆಂದರೆ ಅದು ಪರಸ್ಪರರನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸುವುದು. ಎರಡು ಚಕ್ರಗಳು ಜತೆಯಾಗಿ ಸಾಗಿದಾಗ ಮಾತ್ರ ಗಾಡಿ ಸರಿಯಾಗಿ ಮುಂದೆ ಹೋಗುವುದು. ಹೀಗೆ ದಾಂಪತ್ಯ ಕೂಡ. ದಾಂಪತ್ಯದಲ್ಲಿನ ಸಂತೋಷ ಹಾಗೂ ದುಃಖವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಮನಸ್ಸು ಹೇಳುತ್ತದೆ. ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ಸಂತೋಷವನ್ನು ಕೆಲವೊಮ್ಮೆ ನಮ್ಮ ಆಪ್ತರೊಂದಿಗೆ ಹಂಚಿಕೊಂಡರೆ ಅದು ಹಿಮ್ಮಡಿಯಾಗುತ್ತದೆ. ಆದರೆ ದಾಂಪತ್ಯದಲ್ಲಿನ ಜಗಳದ ಬಗ್ಗೆ ಹೇಳಲು ಹೋಗದೆ ಇರುವುದೇ ಒಳ್ಳೆಯದು. ಸಂತೋಷದ ಸಮಯದಲ್ಲಿ ಆಪ್ತರು ನಮ್ಮೊಂದಿಗೆ ಇರುತ್ತಾರೆ. ಅದೇ ದುಃಖದಲ್ಲೂ ಅವರು ಪಾಲುದಾರರು ಆಗುತ್ತಾರೆ. ಆದರೆ ಪ್ರತೀ ಸಲ ಸಣ್ಣಪುಟ್ಟ ಜಗಳವನ್ನು ಆಪ್ತರು ಹಾಗೂ ಸ್ನೇಹಿತರ ಮುಂದೆ ಹೇಳಿಕೊಂಡರೆ ಅದರಿಂದ ನಾವೇ ನಗೆಪಾಟಲಿಗೀಡಾಗುತ್ತೇವೆ. ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!

ಇದರಿಂದ ದಾಂಪತ್ಯವೆನ್ನುವುದು ಯಾವಾಗಲೂ ಎರಡು ದೇಹ ಹಾಗೂ ಎರಡು ಮನಸ್ಸುಗಳ ಮಧ್ಯೆ ಸಾಗುತ್ತಿರಬೇಕು. ಇದರಲ್ಲಿ ಮೂರನೇಯವರು ಪ್ರವೇಶ ಮಾಡಿದರೆ ಅದರ ಪರಿಣಾಮ ತುಂಬಾ ಕೆಟ್ಟದಾಗುತ್ತದೆ. ಅದರಲ್ಲೂ ಕೆಲವೊಂದು ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚಿಸಲೇಬಾರದು. ಅದು ಯಾವುದೆಂದು ಲೇಖನದಲ್ಲಿ ತಿಳಿದುಕೊಳ್ಳಿ.....

ನಾಲ್ಕು ಗೋಡೆಗಳ ನಡುವಿನ ವಿಷಯ....

ನಾಲ್ಕು ಗೋಡೆಗಳ ನಡುವಿನ ವಿಷಯ....

ನಾಲ್ಕು ಗೋಡೆಗಳ ಮಧ್ಯೆ ಹಾಸಿಗೆಯಲ್ಲಿ ಏನಾಗುತ್ತದೆ ಎಂದು ಸ್ನೇಹಿತರೊಂದಿಗೆ ಚರ್ಚಿಸಬಾರದು. ಇದರಿಂದ ಆತ ಅಥವಾ ಆಕೆಗೆ ತುಂಬಾ ಮುಜುಗರವಾಗಬಹುದು. ಹಾಸಿಗೆಯಲ್ಲಿ ನಿಮ್ಮಿಬ್ಬರ ಮಧ್ಯೆ ಏನು ನಡೆಯುತ್ತಾ ಇದೆ ಮತ್ತು ಸಂಗಾತಿ ಎಷ್ಟು ಸಮರ್ಥ ಎಂದು ಸ್ನೇಹಿತರು ತಿಳಿದುಕೊಳ್ಳಬೇಕಾಗಿಲ್ಲ.

ನಿಮ್ಮ ನಡುವಿನ ಜಗಳ ಯಾರೊಂದಿಗೂ ಚರ್ಚಿಸಬೇಡಿ...

ನಿಮ್ಮ ನಡುವಿನ ಜಗಳ ಯಾರೊಂದಿಗೂ ಚರ್ಚಿಸಬೇಡಿ...

ಸಂಗಾತಿ ಜತೆ ಜಗಳವಾಡಿದ ಬಳಿಕ ನಿಮ್ಮ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕೆಂದು ಆಗುವುದು ಸಹಜ. ಆದರೆ ಇದು ಸರಿಯಲ್ಲ, ನಿಮ್ಮ ಜಗಳವನ್ನು ಹೊರಗಡೆ ಯಾರೊಂದಿಗೂ ಚರ್ಚಿಸಲು ಹೋಗಬೇಡಿ. ಸ್ನೇಹಿತರು ಪಕ್ಷಪಾತಿ ಮತ್ತು ತೀರ್ಪು ನೀಡುವವನಾಗಿದ್ದರೆ ನಿಮ್ಮ ಸಂಬಂಧವು ವಿಫಲವಾಗಿದೆ ಎನ್ನುತ್ತಾನೆ.

ಸ್ನೇಹಿತರಲ್ಲಿ ಎಲ್ಲಾ ವಿಷಯ ಹೇಳುವ ಮೊದಲು....

ಸ್ನೇಹಿತರಲ್ಲಿ ಎಲ್ಲಾ ವಿಷಯ ಹೇಳುವ ಮೊದಲು....

ದಾಂಪತ್ಯವನ್ನು ಮುನ್ನಡೆಸಲು ಹಣವೂ ಬೇಕು. ಆದರೆ ಕೆಲವೊಮ್ಮೆ ಹಣದ ಅಡಚಣೆಯಾಗಿ ಆರ್ಥಿಕ ಮುಗ್ಗಟ್ಟು ಕಾಡುವುದು ಸಹಜ. ಈ ಸಮಯದಲ್ಲಿ ಸಂಗಾತಿಯ ಜತೆಗಿದ್ದು ಅವರಿಗೆ ಹೆಗಲು ನೀಡಬೇಕು. ಆರ್ಥಿಕ ಮುಗ್ಗಟ್ಟಿನ ಬಗ್ಗೆ ಸ್ನೇಹಿತರಲ್ಲಿ ಹೇಳಿಕೊಂಡು ಸಂಗಾತಿಯ ಬಗ್ಗೆ ತಮಾಷೆ ಮಾಡಿದರೆ ಇದು ಸಂಬಂಧಕ್ಕೆ ಆರೋಗ್ಯಕಾರಿಯಲ್ಲ.

ವಿಚ್ಛೇದನಕ್ಕೆ ನಾಂದಿಯಾಗಬಹುದು!

ವಿಚ್ಛೇದನಕ್ಕೆ ನಾಂದಿಯಾಗಬಹುದು!

ಸಂಬಂಧದಲ್ಲಿನ ಜಗಳ ಹಾಗೂ ಬೇರೆ ವಿಷಯಗಳ ಬಗ್ಗೆ ಪೋಷಕರು ಹಾಗೂ ಒಡಹುಟ್ಟಿದವರ ಜತೆ ಚರ್ಚೆ ಮಾಡಬಹುದು. ಆದರೆ ಸ್ನೇಹಿತರನ್ನು ಇದರಿಂದ ಆದಷ್ಟು ಮಟ್ಟಿಗೆ ದೂರವಿಡಿ. ಯಾಕೆಂದರೆ ಅವರು ನಿಮ್ಮಿಬ್ಬರ ವಿಚ್ಛೇದನ ಮಾಡಿಸಬಹುದು.

ಇಂತಹ ವಿಷಯಕ್ಕೆಲ್ಲಾ ಸ್ನೇಹಿತನ್ನು ದೂರವಿಡಿ!

ಇಂತಹ ವಿಷಯಕ್ಕೆಲ್ಲಾ ಸ್ನೇಹಿತನ್ನು ದೂರವಿಡಿ!

ನಿಮ್ಮ ಸಂಗಾತಿ ಹಿಂದೆ ವಿಚ್ಛೇದನ ಪಡೆದಿದ್ದರೆ ಅಥವಾ ಯಾವುದೇ ಸಂಬಂಧದಲ್ಲಿ ವಿಫಲವಾಗಿದ್ದರೆ ಇದನ್ನು ಸ್ನೇಹಿತರಿಗೆ ಹೇಳಬೇಕೆಂದಿಲ್ಲ. ಯಾಕೆಂದರೆ ಅವರು ನಿಮ್ಮ ತಲೆಗೆ ವಿಷ ತುಂಬಬಹುದು.

English summary

Why You Shouldn't Discuss Marital Issues With Friends

Exposing all the happy moments of your relationship may cause envy and jealousy in others; exposing the bad side of your relationship may make you a laughing stock or a topic of gossip for others. And then there are certain things that should never be discussed even with friends. Here are they..
X
Desktop Bottom Promotion