For Quick Alerts
ALLOW NOTIFICATIONS  
For Daily Alerts

ಇವೆಲ್ಲಾ ವಿಚಾರಗಳನ್ನು, ಆಪ್ತ ಸ್ನೇಹಿತರ ಬಳಿ ಮಾತ್ರ ಹೇಳಿ!

By Arshad
|

ನಿನಗೆ ಬಂಧುಗಳನ್ನು ನಾನೇ ನೀಡುತ್ತೇನೆ, ಆದರೆ ಸ್ನೇಹಿತರನ್ನು ಮಾತ್ರ ನೀನೇ ಹುಡುಕಿಕೊಳ್ಳಬೇಕಪ್ಪಾ ಎಂದು ದೇವರು ನಾವು ಹುಟ್ಟುವ ಮೊದಲೇ ನಮಗೆ ಹೇಳಿರುತ್ತಾನಂತೆ. ಅಂತೆಯೇ ಬಂಧುಗಳ ಜೊತೆಗೇ ಸ್ನೇಹಿತರೂ ಜೀವಮಾನವಿಡೀ ಉತ್ತಮ ಬಾಂಧವ್ಯ ಉಳಿಸಿಕೊಳ್ಳಬಲ್ಲರು. ಬೆಸ್ಟ್ ಫ್ರೆಂಡ್ ಜೊತೆ ಪ್ರೀತಿ ಮೂಡಿತೇ?

ಸ್ನೇಹಿತರಿಲ್ಲದ ಜೀವನ ಅತಿ ನೀರಸ. ಕೆಲವರ ಸ್ನೇಹವನ್ನಂತೂ ಒಂದು ಮಾದರಿಯಾಗಿ ಪರಿಗಣಿಸಲಾಗುತ್ತದೆ. ಇವರನ್ನು ಪ್ರಾಣ ಸ್ನೇಹಿತರೆಂದು ಕರೆಯಲಾಗುತ್ತದೆ. ಪ್ರಾಣ ಸ್ನೇಹಿತರಲ್ಲಿ ಎಲ್ಲಾ ವಿಷಯಗಳನ್ನೂ, ಅದರಲ್ಲಿ ಅತ್ಯಂತ ಖಾಸಗಿಯಾದ ವಿಷಯಗಳನ್ನೂ ಹಂಚಿಕೊಳ್ಳಲಾಗುತ್ತದೆ.

ಈ ಸ್ನೇಹಿತರ ನಡುವೆ ಕೆಲವು ಬಾರಿ ಕೋಳಿ ಜಗಳ ನಡೆದು ಒಬ್ಬರ ಮುಖ ಇನ್ನೊಬ್ಬರು ನೋಡದ ಹಂತ ಬಂದರೂ ಮುಂದಿನ ದಿನ ಇಬ್ಬರೂ ಮತ್ತೊಮ್ಮೆ ಹೆಗಲ ಮೇಲೆ ಕೈ ಹಾಕಿ ಏನೂ ನಡೆದೇ ಇಲ್ಲವಂತೆ ನಡೆದುಕೊಳ್ಳುತ್ತಾ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತಾರೆ. ಬಾಲ್ಯದ ಗೆಳತಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬಹುದೇ?

ಆದರೆ ಕೆಲವು ವಿಷಯಗಳನ್ನು ನಿಮ್ಮ ಅತ್ಯಂತ ಆಪ್ತ ಮಿತ್ರನಲ್ಲಿ ಹಂಚಿಕೊಳ್ಳಬೇಕು. ಪ್ರಾಣ ಸ್ನೇಹಿತನ ಹೊರತಾಗಿ ಇತರರಿಗೆ ಈ ಗುಟ್ಟಿನ ವಿಷಯಗಳು ತಿಳಿಯದೇ ಇದ್ದಷ್ಟೂ ನಿಮಗೇ ಒಳ್ಳೆಯದು. ಇವು ಯಾವುವು ಎಂಬ ಕುತೂಹಲ ಮೂಡಿತೇ? ಮುಂದೆ ಓದಿ......

ಗುಟ್ಟು #1 ಪ್ರೇಮ ವೈಫಲ್ಯ

ಗುಟ್ಟು #1 ಪ್ರೇಮ ವೈಫಲ್ಯ

ನಿಮ್ಮ ವಿಫಲ ಪ್ರೇಮದ ಬಗ್ಗೆ ನಿಮ್ಮ ಪ್ರಾಣ ಸ್ನೇಹಿತನ ಅಥವಾ ಸ್ನೇಹಿತೆಯ ಹೊರತಾಗಿ ಬೇರಾರಲ್ಲೂ ಚಕಾರವೆತ್ತುವುದೇ ಬೇಡ. ಏಕೆಂದರೆ ನೀವು ಅನುಭವಿಸುತ್ತಿರುವ ವೇದನೆಯನ್ನು ಕೇವಲ ನಿಮ್ಮ ಪ್ರಾಣ ಸ್ನೇಹಿತರು ಮಾತ್ರ ಗ್ರಹಿಸಿ ಸಾಂತ್ವಾನ ನೀಡಬಲ್ಲರು.

ಗುಟ್ಟು #1 ಪ್ರೇಮ ವೈಫಲ್ಯ

ಗುಟ್ಟು #1 ಪ್ರೇಮ ವೈಫಲ್ಯ

ಒಂದು ವೇಳೆ ನೀವು ಇನ್ನಾರನ್ನೋ ಪ್ರೀತಿಸುತ್ತಿದ್ದು ಈ ಬಗ್ಗೆ ತಿಳಿಸುವುದು ಹೇಗೆ ಎಂದು ಗೊತ್ತಾಗದೇ ಇದ್ದಾಗ ನಿಮ್ಮ ಪ್ರಾಣ ಸ್ನೇಹಿತರು ಮಾತ್ರ ನೆರವಿಗೆ ಬರಬಲ್ಲರು. ನಿಮಗೆ ಸೂಕ್ತವಾದ ಸಂದೇಶವನ್ನೂ ಬರೆದು ಕೊಡಬಲ್ಲರು.

ಗುಟ್ಟು #3 ಸಾಮಾಜಿಕ ಸೈಟುಗಳಲ್ಲಿ ನಿಮ್ಮ ಪಾತ್ರ

ಗುಟ್ಟು #3 ಸಾಮಾಜಿಕ ಸೈಟುಗಳಲ್ಲಿ ನಿಮ್ಮ ಪಾತ್ರ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸೈಟುಗಳಲ್ಲಿ ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತೀರಿ ಎಂಬುದು ಪ್ರಮುಖವಾದ ಅಂಶವಾಗಿದೆ. ಹೆಚ್ಚಿನ ಪ್ರಸಂಗಗಳಲ್ಲಿ ಭಾವಚಿತ್ರವನ್ನು ನೀಡದೇ ಕೇವಲ ಹೆಸರಿನ ಮೂಲಕ ಮಾತ್ರ ವ್ಯವಹರಿಸುವುದು ಉತ್ತಮ. ಈ ಸಂದರ್ಭದಲ್ಲಿ ಹೇಗೆ ಮುಂದುವರೆಯಬೇಕು ಎಂಬುದನ್ನು ಕೇವಲ ಪ್ರಾಣಸ್ನೇಹಿತ ಮಾತ್ರ ಸೂಚಿಸಲು ಸಾಧ್ಯ.

ಗುಟ್ಟು #4 ಆಪ್ತ ಕ್ಷಣಗಳು

ಗುಟ್ಟು #4 ಆಪ್ತ ಕ್ಷಣಗಳು

ಪ್ರೇಮದ ಭರದಲ್ಲಿ ಪ್ರಿಯಕರ ಅಥವಾ ಪ್ರಿಯಮೆಯೊಡನೆ ಕಳೆದ ಕ್ಷಣಗಳ ಬಗ್ಗೆ ಕೇವಲ ಪ್ರಾಣಸ್ನೇಹಿತನಿಗೆ ಮಾತ್ರ ತಿಳಿಸುವುದು ಉತ್ತಮ. ಏಕೆಂದರೆ ಇದರ ಪರಿಣಾಮ ವ್ಯತಿರಿಕ್ತವಾದರೆ ನೆರವಿಗೆ ಬರಲು ಕೇವಲ ಪ್ರಾಣಸ್ನೇಹಿತನಿಗೆ ಮಾತ್ರ ಸಾಧ್ಯ.

ಗುಟ್ಟು #5 ಖಾಸಗಿ ಕ್ಷಣಗಳು

ಗುಟ್ಟು #5 ಖಾಸಗಿ ಕ್ಷಣಗಳು

ಕೆಲವೊಮ್ಮೆ ಮನೆಯಿಂದ ಹೊರಗಿದ್ದಾಗ ಅಥವಾ ಪ್ರಯಾಣದ ಸಮಯದಲ್ಲಿ ಮೂತ್ರಕ್ಕೆ ಅಥವಾ ನಿಸರ್ಗಕರೆಗೆ ಅವಸರವಾದಾಗ ಸೂಕ್ತ ವ್ಯವಸ್ಥೆ ಇಲ್ಲದಿದ್ದಲ್ಲಿ ಕೇವಲ ಪ್ರಾಣಸ್ನೇಹಿತ ಮಾತ್ರ ನಿಮ್ಮ ನೆರವಿಗೆ ಬರಬಲ್ಲರು.

English summary

Things Only A Best Friends Should Know

We all have best friends and there are those who become a part of your life and you would be together until death departs you both! One's best friends know everything about you. Be it your bitter breakup or the blind date you had, they would know every bit of you which you have not shared with anybody.
X
Desktop Bottom Promotion