For Quick Alerts
ALLOW NOTIFICATIONS  
For Daily Alerts

ಸಣ್ಣ ಪುಟ್ಟ ತಪ್ಪುಗಳೇ ಸಾಕು, ದಾಂಪತ್ಯದಲ್ಲಿ ವೈಮನಸ್ಸು ಮೂಡಲು

By Deepu
|

ಸಂಬಂಧಗಳು ಒಂದು ಅವಿನಾಭಾವ ಭಾವನೆಗಳ ಬೆಸುಗೆ. ಕೆಲವೊಂದು ಜನ್ಮಜಾತವಾಗಿ ಬರುತ್ತವೆ. ಕೆಲವೊಂದು ಜೀವನ ಮುಂದೆ ಸಾಗುತ್ತಾ, ಸಾಗುತ್ತಾ ಇರುವಾಗ ಜೊತೆಯಾಗುತ್ತವೆ. ಹೀಗೆ ಒಮ್ಮೆ ಜೊತೆಯಾಗುವ ನಾವು ಸಂಬಂಧ ಎನ್ನುವ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಪ್ರಪಂಚದಲ್ಲಿರುವ ಎಲ್ಲಾ ಅಂಶಗಳ ಬಗ್ಗೆ ಮಾತು ಕತೆ ನಡೆಯುತ್ತದೆ. ಜೊತೆಗಿದ್ದಾಗ ಗಂಟೆಗಳು ಸರಿದು ಹೋಗಿದ್ದೆ ಗೊತ್ತಾಗುವುದಿಲ್ಲ. ಅದೇ ದೂರವಿದ್ದಾಗ, ಫೋನ್ ಕಡೆಗೆ ನೋಡುತ್ತೇವೆ ಅಥವಾ ಫೇಸ್‍ಬುಕ್, ವಾಟ್ಸಪ್ ಎಂದು ಚಾಟ್ ಮಾಡುತ್ತೇವೆ.

ಪ್ರತಿ ವಾಕ್ಯಕ್ಕೂ ಒಂದು ನಗು ನಿಮ್ಮ ಮುಖದಲ್ಲಿ ಉಕ್ಕುತ್ತದೆ. ಆಗ ನಿಮಗೆ ಅನಿಸುತ್ತದೆ, ನೀವು ಕೇವಲ ಒಬ್ಬ ಸಂಗಾತಿಯನ್ನು ಮಾತ್ರ ಪಡೆದಿಲ್ಲ, ಒಬ್ಬ ಒಳ್ಳೆಯ ಸ್ನೇಹಿತರನ್ನು ಸಹ ಪಡೆದಿದ್ದೀರಿ ಎಂದು ನಿಮಗೆ ಅನಿಸುತ್ತದೆ. ಆಮೇಲೆ ಒಂದೆರಡು ತಿಂಗಳು ಕಳೆದ ನಂತರ ಅನಿಸುತ್ತದೆ. ನೀವು ಇಬ್ಬರೂ ಮೊದಲಿನಂತಿಲ್ಲ ಎಂದು, ಜೊತೆಗೆ ನಿಮ್ಮ ನಡುವೆ ಒಂದು ಸಣ್ಣ ಬಿರುಕು ಸಹ ಮೂಡುತ್ತದೆ, ಅದು ಮುಂದೆ ನಿಮ್ಮನ್ನು ಬೇರೆ ಸಹ ಮಾಡಬಹುದು.

ಇದಾದ ಮೇಲೂ ಸಹ ಅವರು ನಿಮ್ಮನ್ನು ತಮ್ಮ ಜೀವನದ ಅತ್ಯಂತ ಮುಖ್ಯ ವ್ಯಕ್ತಿಯಾಗಿ ಪರಿಗಣಿಸಿ ನಿಮ್ಮೊಂದಿಗೆ ಮಾತನಾಡುತ್ತಾರೆ. ವಾಸ್ತವ ಏನಪ್ಪಾ ಎಂದರೆ ತಜ್ಞರು ಸಹ ಖಾತರ ಮತ್ತು ಹಂಬಲಗಳಿಂದ ಕೂಡಿದ ಸಂಬಂಧ ಒಂದು ವರ್ಷ ಮಾತ್ರ ಇರುತ್ತದೆ ಎಂದು ಹೇಳುತ್ತಾರೆ. ಒಂದು ವರ್ಷ ಮುಗಿದ ಮೇಲೆ, ನಿಮಗೆ ಅವರ ಮೇಲೆ ಅಂತಹ ಸೆಳೆತ ಇರುವುದು ಕಡಿಮೆ. ಆಗಲೇ ಶುರುವಾಗುವುದು ಸಂಬಂಧವನ್ನು ಹಗುರವಾಗಿ ತೆಗೆದುಕೊಂಡು, ಉದಾಸೀನ ಮಾಡುವ ಗುಣ. ಯಾರೇ ಆಗಲಿ ಒಂದು ಪ್ರಾಮಾಣಿಕ ಕಾಳಜಿ ಇಲ್ಲದೆ ಇದ್ದಲ್ಲಿ, ನಮ್ಮೊಂದಿಗೆ ಇರುವುದಿಲ್ಲ.

ಒಮ್ಮೊಮ್ಮೆ ಈ ಸಂಬಂಧವು ಪ್ರೀತಿಯೋ ಅಥವಾ ನಿಷ್ಕಾಮ ಸ್ನೇಹವೋ ಎಂಬ ಭ್ರಮೆಯನ್ನು ಹುಟ್ಟಿಸಿಬಿಡುತ್ತದೆ. ಜೊತೆಗೆ ಅಸಹನೀಯವಾದ ಕೋಪ ಹಾಗು ಹತಾಶೆಯನ್ನು ಸಹ ತರುತ್ತದೆ. ಒಂದು ವೇಳೆ ನೀವು ಸಂಬಂಧದಲ್ಲಿದ್ದಲ್ಲಿ ಅಥವಾ ಸಂಬಂಧದಲ್ಲಿ ಇರಲು ಬಯಸಿದಲ್ಲಿ, ಈ ಕೆಳಗಿನ ಅಂಶಗಳನ್ನು ನೋಡಿ. ಈ ಅಂಶಗಳ ಕುರಿತಾಗಿ ನೀವು ಉದಾಸೀನ ತೋರುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಗಾಢ ಸಂಬಂಧಕ್ಕೆ ನಂಬಿಕೆ, ಪ್ರೀತಿ ಮತ್ತು ಬದ್ಧತೆ ಮುಖ್ಯ ಎಂಬುದನ್ನು ಮರೆಯಬೇಡಿ. ಬನ್ನಿ ಆ ತಪ್ಪುಗಳು ಯಾವುವು ಎಂದು ನೋಡೋಣ...

ಮರಳಿ ಕರೆ ಅಥವಾ ಸಂದೇಶವನ್ನು ಸಮಯಕ್ಕೆ ಮಾಡುವುದಿಲ್ಲ

ಮರಳಿ ಕರೆ ಅಥವಾ ಸಂದೇಶವನ್ನು ಸಮಯಕ್ಕೆ ಮಾಡುವುದಿಲ್ಲ

ನೀವು ಏನೋ ಬೇಕಾಗಿ ಅವರಿಗೆ ಕರೆ ಮಾಡುತ್ತಿರಿ, ಆದರೆ ಅವರು ಕರೆಯನ್ನು ಸ್ವೀಕರಿಸುವುದಿಲ್ಲ. ಮತ್ತೊಮ್ಮೆ ಕರೆ ಮಾಡುತ್ತೀರಿ, ಕರೆ ಬ್ಯುಸಿ ಬರುತ್ತದೆ. ಸಂದೇಶ ಮಾಡುತ್ತೀರಿ, ವಾಟ್ಸಪ್‌ನಲ್ಲಿ ಓದಲಾಗಿದೆ ಎಂದು ತೋರಿಸುತ್ತದೆ. ಆದರೆ ಅವರು ಅದಕ್ಕೆ ಪ್ರತಿಕ್ರಿಯೆಯನ್ನು ಮಾಡುವುದಿಲ್ಲ. ಆಮೇಲೆ ನಿಮಗೆ ಸಿಕ್ಕಾಗ ಬ್ಯುಸಿ ಇದ್ದೆ, ಅದು ಮಾಡುತ್ತಿದ್ದೆ, ಇದು ಮಾಡುತ್ತಿದ್ದೆ ಎಂದು ಹೇಳುತ್ತಾರೆ, ಇನ್ನೂ ಕೆಲವರು ಮರೆತು ಹೋದೆ ಎಂದು ಸಹ ಹೇಳುತ್ತಾರೆ. ಆದರೆ ಅವರು ಉದ್ದೇಶ ಪೂರ್ವಕವಾಗಿ ನಿಮ್ಮನ್ನು ಮರೆತಿರುತ್ತಾರೆ.

ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ

ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ

ಅವರು ಸುಮ್ಮನೆ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅದನ್ನು ಅವರು ಸುತರಾಂ ಒಪ್ಪಿಕೊಳ್ಳುವುದಿಲ್ಲ. ಅವರಿಂದ ನಿಮ್ಮ ಮನಸ್ಸಿಗೆ ನೋವಾಗಿದೆ ಎಂದರೆ, ನೀನು ತುಂಬಾ ಸೂಕ್ಷ್ಮ ಆಗಿಬಿಟ್ಟೆ ಎಂದು ನಿಮ್ಮನ್ನೆ ದೂರುತ್ತಾರೆ. ಸುಮ್ಮನೆ ಅತಿಯಾಗಿ ಆಡಬೇಡ ಎಂದು ನಿಮ್ಮನ್ನೆ ತೆಪ್ಪಗಿರಿಸಲು ಹೋಗುತ್ತಾರೆ. ಇದು ಸಹ ನಿಮ್ಮ ಮೇಲೆ ಅವರಿಗೆ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ.

ನೀವು ಅವರಿಗೆ ಆಧ್ಯತೆಯಾಗಿರುವುದಿಲ್ಲ

ನೀವು ಅವರಿಗೆ ಆಧ್ಯತೆಯಾಗಿರುವುದಿಲ್ಲ

ಮೊದಲು ನೀವು ಅವರಿಗೆ ಜೀವ, ಪ್ರಪಂಚ, ಗುರಿ ಎಲ್ಲವೂ ಆಗಿರುತ್ತೀರಿ. ಆದರೆ ಈಗಲ್ಲ!. ನಿಮ್ಮನ್ನು ನೋಡಲು ಮೊದಲು ಇದ್ದ ಕುತೂಹಲ, ಖಾತರ ಅವರಿಗೆ ಈಗ ಇರುವುದಿಲ್ಲ. ಅದರಲ್ಲೂ ಸಂಬಂಧದಲ್ಲಿ ಇರುವವರು ಒಂದು ದಿನದಲ್ಲಿ ಕನಿಷ್ಠ ಎಂದರೆ ಕನಿಷ್ಠ ವಾಕ್ಯಗಳನ್ನು ಮಾತ್ರ ಮಾತನಾಡಿರುತ್ತಾರೆ. ಅದು ಗಂಡ-ಹೆಂಡತಿಯು ಸಹ ಆಗಿರಬಹುದು. ಮಾತನಾಡಲು ಸಿಕ್ಕರೆ ಸಾಕು ಎನ್ನುವವರು, ಈಗ ಮಾತನಾಡಲು ಪಕ್ಕದಲ್ಲಿಯೇ ಇದ್ದರು ಸಹ ಮಾತನಾಡುವುದಿಲ್ಲ. ಮನೆಯಲ್ಲಿಯೇ ಇರೋಣ ಎನ್ನಬಹುದು, ಅವಕಾಶ ಸಿಕ್ಕರೆ ಲೈಂಗಿಕ ಕ್ರಿಯೆ ನಡೆಸಬಹುದು, ಆದರೆ ಅದರಲ್ಲಿ ಮೊದಲಿದ್ದ ವಾಂಛೆ ಇರುವುದಿಲ್ಲ. ಜೊತೆಯಾಗಿ ಎಲ್ಲಿಗೆ ಹೋದರೂ, ಸುಮ್ಮನೆ ನೆಪ ಮಾತ್ರಕ್ಕೆ ಅದು ಜೊತೆಯಾಗಿರುತ್ತದೆ. ಅದಕ್ಕಿಂತ ಹೆಚ್ಚಿಗೆ ಏನೂ ಇರುವುದಿಲ್ಲ.

ಯಾವುದೇ ಕೊಟ್ಟು-ತೆಗೆದುಕೊಳ್ಳುವಿಕೆಗಳು ಇರುವುದಿಲ್ಲ

ಯಾವುದೇ ಕೊಟ್ಟು-ತೆಗೆದುಕೊಳ್ಳುವಿಕೆಗಳು ಇರುವುದಿಲ್ಲ

ಹುಟ್ಟುಹಬ್ಬ, ಭೇಟಿಯಾದ ದಿನ, ಪ್ರೇಮಿಗಳ ದಿನ, ಹೊಸ ವರ್ಷ ಹೀಗೆ ನಾನಾ ಉಡುಗೊರೆಗಳು ವಿನಿಮಯವಾಗುತ್ತಿದ್ದ ದಿನಗಳು ಮಾಯವಾಗಿ, ಸುಮ್ಮನೆ, ಇರುವ ದಿನಗಳು ಬಂದಿರುತ್ತವೆ. ಅಸಲಿಗೆ ಆ ದಿನ ಬಂದಿದೆ ಎಂದು ಸಹ ಇವರಿಗೆ ನೆನಪಿರುವುದಿಲ್ಲ. ನೀವು ಒಂದು ವಿಶೇಷ ದಿನ ಅವರಿಗಾಗಿ ಕೆಲವು ವಿಶೇಷಗಳೊಂದಿಗೆ ಕಾಯುತ್ತಿದ್ದರು ಸಹ, ಅವರು ಅಂದು ನಿಮಗೆ ಕರೆಯನ್ನೆ ಮಾಡುವುದಿಲ್ಲ. ನಿಮ್ಮನ್ನು ಕೇಳುವುದು ಸಹ ಇಲ್ಲ.

ಉದಾಸೀನಕ್ಕೆ ಗುರಿಯಾಗಿದ್ದೀರಿ ಎಂದೆನಿಸಬಹುದು

ಉದಾಸೀನಕ್ಕೆ ಗುರಿಯಾಗಿದ್ದೀರಿ ಎಂದೆನಿಸಬಹುದು

ನೀವು ಮೆಚ್ಚುಗೆಯನ್ನು ಗಳಿಸಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿರುತ್ತೀರಿ. ಆದರೂ ನಿಮಗೆ ಬರಬೇಕಾದ ಮೆಚ್ಚುಗೆಯು ಬಂದಿರುವುದಿಲ್ಲ. ನೀವು ಉದಾಸೀನಕ್ಕೆ ಗುರಿಯಾಗಿದ್ದೀರಿ ಎಂದೆನಿಸಬಹುದು. ಒಮ್ಮೊಮ್ಮೆ ನಿಮ್ಮನ್ನು ಉದ್ದೇಶಪೂರ್ವಕವಾಗಿ ಉದಾಸೀನಕ್ಕೆ ಗುರಿ ಮಾಡಿರುತ್ತಾರೆ. ನಿಮ್ಮ ಕಾರ್ಯಗಳಿಗೆ ಮೆಚ್ಚುಗೆಯನ್ನು ಸೂಚಿಸಿರುವುದಿಲ್ಲ. ಏಕೆಂದರೆ ನೀವು ಸಂತೋಷ ಪಡುವುದು ಅವರಿಗೆ ಬೇಕಾಗಿರುವುದಿಲ್ಲ. ಈ ಸೂಚನೆಗಳು ಸಿಕ್ಕರೆ ನೀವು ಒಂದು ಅನಾರೋಗ್ಯಕರ ಸಂಬಂಧದಲ್ಲಿ, ಉದಾಸೀನಕ್ಕೆ ಗುರಿಯಾಗಿದ್ದೀರಿ ಎಂದು ಭಾವಿಸಿ.

English summary

Signs you’re being taken for granted in a relationship

Every relationship begins with a lot of promise. Both of you spend hours talking to each about everything under the sun. When you’re not together, you’re hooked to your phone chatting on Facebook or WhatsApp and every conversation brings a smile to your face. You think you’ve finally found someone who is not only your partner, but also a really good friend. However, over the next few months, you notice that the two of you are not as close as you thought. They seem to have become a little distant and even aloof.
Story first published: Thursday, February 18, 2016, 20:20 [IST]
X
Desktop Bottom Promotion