For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ಹೀಗೆಲ್ಲಾ ಆದರೆ, ಸಂಬಂಧಕ್ಕೆ ಬೆಲೆ ಎಲ್ಲಿ?

By Deepu
|

ಸಂಬಂಧ ಎನ್ನುವುದು ಜೀವನದ ಆಧಾರ ಸ್ತಂಭಗಳಲ್ಲಿ ಒಂದು. ಪ್ರತಿಯೊಬ್ಬರು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಇರುವ ಅನ್ಯೋನ್ಯ ಸಂಬಂಧದಲ್ಲಿ ತಾವು ಇರಬೇಕು ಎಂದು ಬಯಸುತ್ತಾರೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಅವಿಭಕ್ತ ಕುಟುಂಬಗಳಿಗೆ ಮಾತ್ರ ಅನ್ವಯವಾಗುವ ಮಾತಲ್ಲ. ಇಬ್ಬರು ಕೂಡಿ ಬಾಳಿದರೂ ಸ್ವರ್ಗ ಸುಖ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಾವೇನೋ ಕೂಡಿ ಬಾಳಿದರೆ ಸ್ವರ್ಗ ಸುಖ ಎಂದು ನಂಬುತ್ತೇವೆ. ಆದರೆ ನಾವು ಎಷ್ಟೇ ಪ್ರಯತ್ನಪಟ್ಟರು, ನಾವು ಸಂಬಂಧವನ್ನು ಅಂತ್ಯ ಮಾಡಿಕೊಳ್ಳುವ ದಿನ ಒಮ್ಮೊಮ್ಮೆ ಕೆಲವರ ಬಾಳಲ್ಲಿ ಬಂದು ಬಿಡುತ್ತದೆ. ಸಂಬಂಧದಲ್ಲಿ ಏನೆಲ್ಲಾ ನಡೆದು ಹೋಗುತ್ತದೆ ನೋಡಿ...

ಈ ಅಂಕಣದಲ್ಲಿ ನಾವು ನಿಮ್ಮ ಸಂಬಂಧ ಅಂತ್ಯಕ್ಕೆ ಬಂದು ತಲುಪಿದೆ ಎಂದು ಪರಿಶೀಲಿಸಿಕೊಳ್ಳಲು ಕೆಲವೊಂದು ಅಂಶಗಳನ್ನು ನೀಡಿದ್ದೇವೆ. ಭಿನ್ನಾಭಿಪ್ರಾಯವು ಬಂದಿರುವ ಸಂಬಂಧವು ಸ್ವಲ್ಪ ಸಮಯದಲ್ಲಿಯೇ ಸರಿಹೋಗುತ್ತದೆ. ಆದರೆ ಮನಸ್ಸು ಘಾಸಿಗೊಂಡ ಸಂಬಂಧವು ತುಂಬಾ ದಿನ ಉಳಿಯುವುದಿಲ್ಲ. ಅಂತಹ ಸಂಬಂಧವು ನಿಮ್ಮ ಬಾಳಿನ ಬಗಲ ಮುಳ್ಳಾಗಿ ಕಾಡುತ್ತದೆ, ಅದನ್ನು ನಿವಾರಿಸಿಕೊಳ್ಳುವುದು ನಿಮಗೆ ಒಳ್ಳೆಯದು. ಪ್ರೀತಿ, ಪ್ರೇಮದ ಜೊತೆಗೆ ಸಂಬಂಧಕ್ಕೂ ಬೆಲೆ ನೀಡಿ
ಒಂದು ವೇಳೆ ನಾವು ನಿಮಗೆ ತಿಳಿಸುತ್ತಿರುವ ಈ ಅಂಶಗಳು ನಿಮ್ಮ ಸಂಬಂಧದಲ್ಲಿ ಇದ್ದರೆ, ಆ ಸಂಬಂಧದಿಂದ ಮೊದಲು ಹೊರ ನಡೆಯುವುದು ಒಳ್ಳೆಯದು. ಇದು ನಿಮ್ಮಿಬ್ಬರಿಗೂ ಒಳ್ಳೆಯದು. ನಿಮ್ಮಿಬ್ಬರಿಗೂ ಸೂಕ್ತವಾದ ಸಂಗಾತಿಗಳು ಪ್ರಪಂಚದಲ್ಲಿ ತಪ್ಪದೆ ದೊರೆಯುತ್ತಾರೆ. ಅವರಿಗಾಗಿ ಹುಡುಕಿ, ಬನ್ನಿ ನಿಮ್ಮ ಸಂಬಂಧದಲ್ಲಿ ಯಾವ ಸೂಚನೆಗಳು ನಿಮ್ಮ ಸಂಬಂಧ ಮುಕ್ತಾಯ ಹಂತವನ್ನು ತಲುಪಿದೆ ಎಂದು ತಿಳಿಸುತ್ತಿವೆ ನೋಡೋಣ...

ನೀವು ಮಾತ್ರ ನಿಮ್ಮ ಸಂಗಾತಿಯನ್ನು ಭೇಟಿ ಮಾಡಲು ಬಯಸುತ್ತೀರಿ

ನೀವು ಮಾತ್ರ ನಿಮ್ಮ ಸಂಗಾತಿಯನ್ನು ಭೇಟಿ ಮಾಡಲು ಬಯಸುತ್ತೀರಿ

ಕೆಲವು ಕಾಲವಾದ ನಂತರ ನಿಮ್ಮ ಸಂಗಾತಿಯನ್ನು ಭೇಟಿ ಮಾಡಲು ನೀವು ಮಾತ್ರ ಆಲೋಚನೆ ಮಾಡುತ್ತೀರಿ. ಆದರೆ ಅವರು ಮಾತ್ರ ನಿಮ್ಮನ್ನು ಭೇಟಿ ಮಾಡಲು ಮನಸ್ಸು ಮಾಡುವುದಿಲ್ಲ. ನೀವು ಸಿಗೋಣಾ ಎಂದರು ಅವರು ಬೇಡ, ನನಗೆ ಕೆಲಸ ಇದೆ ಎನ್ನುತ್ತಾರೆ.

ಅವರು ತಮ್ಮ ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸುವುದಿಲ್ಲ

ಅವರು ತಮ್ಮ ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸುವುದಿಲ್ಲ

ನಿಮ್ಮ ಬಗ್ಗೆ ನಿಮ್ಮ ಸಂಗಾತಿಯ ಮನೆಯವರಿಗೆ ಗೊತ್ತಿದ್ದರು ಸಹ, ಅವರಿಗೆ ನಿಮ್ಮನ್ನು ಭೇಟಿ ಮಾಡುವ ಅವಕಾಶವನ್ನು ನಿಮ್ಮ ಸಂಗಾತಿ ಒದಗಿಸುವುದಿಲ್ಲ. ಅವರ ಕುಟುಂಬದಿಂದ ನಿಮ್ಮನ್ನು ಒಂದು ಅಂತರದಲ್ಲಿ ಇರಿಸಿರುತ್ತಾರೆ. ಅವರ ಕುಟುಂಬದ ವಿಚಾರದಲ್ಲಿ ನೀವು ತಲೆ ಹಾಕಲು ಅವರು ಬಿಡುವುದಿಲ್ಲ. ಇದರ ಅರ್ಥ ಅವರು ನಿಮ್ಮಿಂದ ಬೇರೆಯಾಗಲು ಕಾಯುತ್ತಿದ್ದಾರೆ ಎಂದರ್ಥ.

ಪರಿಹಾರಗಳು ಬೇಕಿರುವುದಿಲ್ಲ

ಪರಿಹಾರಗಳು ಬೇಕಿರುವುದಿಲ್ಲ

ನಿಮ್ಮ ಸಂಗಾತಿಯು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗುವುದಿಲ್ಲ, ಕೆಲವೊಂದು ಸಮಸ್ಯೆಗಳು ನಿಮ್ಮ ನಡುವೆ ಬಂದರು ಸಹ ಅದನ್ನು ಪರಿಹರಿಸಿಕೊಳ್ಳುವ ಗೋಜಿಗೆ ಅವರು ಹೋಗುವುದಿಲ್ಲ. ಇದರರ್ಥ ಅದು ಪರಿಹಾರವಾಗುವುದು ಅವರಿಗೆ ಬೇಕಾಗಿಲ್ಲ ಎಂದೇ ಅರ್ಥ.

ಅನ್ಯೋನ್ಯತೆ ಕಣ್ಮರೆಯಾಗಿರುತ್ತದೆ

ಅನ್ಯೋನ್ಯತೆ ಕಣ್ಮರೆಯಾಗಿರುತ್ತದೆ

ಮೊದ ಮೊದಲು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಪರಸ್ಪರ ನೋಡಲು ಮತ್ತು ಸ್ಪರ್ಶಿಸಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ದಿನಗಳೆದಂತೆ ನಿಮ್ಮ ನಡುವೆ ಆ ಅನ್ಯೋನ್ಯತೆಯು ಮಾಯವಾಗುತ್ತದೆ. ನೀವಿಬ್ಬರು ಒಟ್ಟಿಗೆ ಕುಳಿತು ಕಾಲ ಕಳೆಯುವುದು ದೂರದ ಮಾತಾಗಿರುತ್ತದೆ.

ಸುಳ್ಳುಗಳು

ಸುಳ್ಳುಗಳು

ಸಂಗಾತಿಯು ಸುಳ್ಳುಗಳ ಮೂಟೆಯನ್ನೆ ಹೊತ್ತು ತಿರುಗುತ್ತಾರೆ. ಸಣ್ಣ ಸಣ್ಣ ಕ್ಷಮೆಗಳ ಜೊತೆಗೆ ಅವರು ಬರುತ್ತಾರೆ. ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾರೆ. ಇದರಿಂದ ನಿಮಗೆ ಗೊತ್ತಾಗುತ್ತದೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು. ಇವೆಲ್ಲವೂ ಸಂಬಂಧ ಕಡಿದುಕೊಳ್ಳುವ ಸಮಯ ಬಂದಿದೆ ಎಂದು ಸೂಚಿಸುತ್ತವೆ.

English summary

Signs That It Is All Over

Everybody looks forward to have an everlasting relationship. However, there are a few relationships that do end, no matter how hard you try to save it, it is just not worth holding on to the relationship anymore. In this article, we are here to share some of the tips that make you realise that the relationship is completely over and you are just hanging on to it.
X
Desktop Bottom Promotion