For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ಅರಿತು ಬಾಳಿದರೆ ಬಾಳು ಬಂಗಾರ

By Arshad
|

ಮದುವೆಗಳು ಸ್ವರ್ಗದಲ್ಲಿಯೇ ನಡೆಯುತ್ತವೆ ಎಂದು ಹೇಳುತ್ತಾರೆ. ಆದರೆ ಸಂಬಂಧಗಳು ಮಾತ್ರ ಈ ಭೂಮಿಯ ಮೇಲೇ ಆಗುತ್ತವೆ. ಆದರೆ ಎಲ್ಲಾ ಸಂಬಂಧಗಳು ಪ್ರಾರಂಭದಲ್ಲಿ ಕಂಡಂತೆ ರೋಚಕವಾಗಿಲ್ಲದೇ ದಿನಗಳೆದಂತೆ ಹಳಸುವುದನ್ನು ಕಾಣಬಹುದು.

ಇದಕ್ಕೆ ಮುಖ್ಯ ಕಾರಣವೆಂದರೆ ಪರಸ್ಪರರ ನಡುವೆ ಮೂಡಿರುವ ಭಿನ್ನಾಭಿಪ್ರಾಯ, ವಿಶ್ವಾಸದ ಕೊರತೆ, ಸಮಯಾವಕಾಶವಿಲ್ಲದಿರುವುದು, ಸಂಬಂಧಕ್ಕೆ ಬೆಲೆ ನೀಡದೇ ಇರುವುದು ಇತ್ಯಾದಿಗಳನ್ನು ಇದಕ್ಕೆ ಉದಾಹರಿಸಬಹುದು. ಒಂದು ವೇಳೆ ಸಂಬಂಧ ಹಳಸದೇ ಇರಬೇಕಾದರೆ ಸಂಬಂಧದಲ್ಲಿ ಇರಬೇಕಾದ ಕೆಲವು ವಿಷಯಗಳನ್ನು ಇಬ್ಬರೂ ಅರಿತುಕೊಂಡಿದ್ದರೆ ಮಾತ್ರ ಸಾಧ್ಯ. ಬನ್ನಿ, ಈ ನಿಟ್ಟಿನಲ್ಲಿ ಕೆಲವು ಕುತೂಹಲಕರ ಸಂಗತಿಗಳನ್ನು ನೋಡೋಣ:

Relationship Facts To Know Each Other Better

ಮುಕ್ತಮನಸ್ಸಿನಿಂದ ಮಾತು
ಯಾವುದೇ ಸಂಬಂಧ ಸುಖಮಯವಾಗಿ ಮುಂದುವರೆಯಬೇಕಾದರೆ ಇಬ್ಬರೂ ಪರಸ್ಪರ ಮುಕ್ತಮನಸ್ಸಿನಿಂದ ಮಾತನಾಡಬೇಕು. ಎಲ್ಲಾ ವಿಷಯಗಳನ್ನು, ಅದು ಎಷ್ಟೇ ಚಿಕ್ಕದಿರಲಿ ಅಥವಾ ಗಹನವಾಗಿರಲಿ, ಇಬ್ಬರೂ ಸಮಾನವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಇದರಿಂದ ಇಬ್ಬರಿಗೂ ಇನ್ನೊಬ್ಬರ ಮನಸ್ಸಿನಲ್ಲಿ ಏನಿದೆ ಎಂಬುದು ಅರಿವಾಗಿ ಆ ಪ್ರಕಾರ ಮುನ್ನಡೆಯಲು ಪ್ರೇರಣೆ ಸಿಗುತ್ತದೆ. ಅಲ್ಲದೇ ಯಾವ ವಿಷಯ ಇಷ್ಟವಿಲ್ಲವೋ ಅದನ್ನು ಅನುಸರಿಸದಿರುವ ಮೂಲಕ ವಿಶ್ವಾಸ ಪಡೆಯಲು ಮತ್ತು ಬದ್ದತೆ ಸಾಧ್ಯವಾಗುತ್ತದೆ. ದಾಂಪತ್ಯದಲ್ಲಿ ಹೀಗೆಲ್ಲಾ ಆದರೆ, ಸಂಬಂಧಕ್ಕೆ ಬೆಲೆ ಎಲ್ಲಿ?

ಸುಖದ-ದುಃಖ ಸಮಾನರಾಗಿ ಹಂಚಿಕೊಳ್ಳಿ
ಆರೋಗ್ಯಕರ ಸಂಬಂಧಕ್ಕಾಗಿ ಜೀವನದ ಸುಖದ ಅಥವಾ ದುಃಖದ ಕ್ಷಣಗಳನ್ನು ಸಮಾನರಾಗಿ ಹಂಚಿಕೊಳ್ಳಬೇಕು. ನಿಮ್ಮ ವಿಚಾರ, ಅಭಿಪ್ರಾಯಗಳನ್ನೂ ಹಂಚಿಕೊಳ್ಳಬೇಕು. ಆಗ ಮಾತ್ರ ಸಂಬಂಧ ಮುಂದುವರೆಯಲು ಸಾಧ್ಯ.

ಪ್ರೀತಿಗೆ ಬೆಲೆ ಇರಲಿ
ಆರೋಗ್ಯಕರ ಸಂಬಂಧ ಎಂದಿಗೂ ಬಲವಂತವಾಗಿ ಆಗಲು ಸಾಧ್ಯವಿಲ್ಲ. ಒಂದು ವೇಳೆ ಈ ರೀತಿಯದ್ದಾಗಿದ್ದರೆ ಇದು ಪತಿ ಪತ್ನಿಯರಿಗಿಂತ ಹೆಚ್ಚಾಗಿ ಗುಲಾಮ-ಮಾಲಿಕನ ಸಂಬಂಧವಾಗುತ್ತದೆ. ಆದ್ದರಿಂದ ಇಬ್ಬರೂ ಪರಸ್ಪರರ ಪ್ರೀತಿಪಾತ್ರರಾಗಬೇಕೇ ವಿನಃ ಮಾಲಿಕ ಗುಲಾಮರಾಗಕೂಡದು. ಸಂತೋಷದ ಸಂಸಾರಕ್ಕೆ ಬೇಕು ಆರೋಗ್ಯಕರ ದಾಂಪತ್ಯ

ಮಾನಸಿಕವಾಗಿಯೂ ಹತ್ತಿರವಾಗಿರಿ
ಸಂಬಂಧ ಕೇವಲ ದೈಹಿಕವಾಗಿ ಅಲ್ಲ, ಮಾನಸಿಕವಾಗಿಯೂ ಇರಬೇಕು. ಅಂದರೆ ಮಾನಸಿಕವಾಗಿ ಎಷ್ಟು ಹತ್ತಿರಾಗುತ್ತೀರೋ ದೈಹಿಕವಾಗಿಯೂ ಹತ್ತಿರಾಗುವುದು ಅಗತ್ಯ. ಆದರೆ ಎರಡಕ್ಕೂ ಮಿತಿಗಳಿವೆ. ವಾಸ್ತವವಾಗಿ ದೈಹಿಕ ಆಕರ್ಷಣೆ ವಿವಾಹದ ಪ್ರಾರಂಭದಲ್ಲಿ ಹೆಚ್ಚಾಗಿದ್ದು ಕ್ರಮೇಣ ಕಡಿಮೆಯಾಗುತ್ತಾ ಹೋದರೂ ಮಾನಸಿಕವಾಗಿ ಹೆಚ್ಚು ಹೆಚ್ಚು ಹತ್ತಿರಾಗುತ್ತಾ ಹೋಗಬೇಕು.

ಇಲ್ಲಿ ಇಬ್ಬರೂ ಸಮಾನರು ನೆನಪಿಡಿ
ಸಂಬಂಧದಲ್ಲಿ ಇಬ್ಬರೂ ಸಮಾನರಾಗಿದ್ದು ಯಾರೂ ಮೇಲಲ್ಲ. ಯಾವಾಗ ನಾನೇ ಮೇಲೆ, ನಾನು ಹೇಳಿದಂತೆ ಕೇಳಿಕೊಂಡಿರಬೇಕು ಎಂಬ ಭಾವನೆ ಮೂಡಿತೋ ಆಗ ಸಂಬಂಧ ಏಕಮುಖವಾಗಿದ್ದು ನಿರಾಸೆ ಮತ್ತು ಹತಾಷೆಯಿಂದ ಕೂಡಿದ ಸಂಬಂಧವಾಗಿರುತ್ತದೆ. ಆದರೆ ಪರಸ್ಪರ ಗೌರವಿಸುವ ಸಂಬಂಧ ಜೀವನವನ್ನು ಸುಖಮಯವಾಗಿಸುತ್ತದೆ. ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ಸರಳ ಸೂತ್ರಗಳು

ನಿರ್ಮಲ ಮನಸ್ಸಿನ ಪ್ರೀತಿ
"ನನ್ನ ಜೀವನದಲ್ಲಿ ನೀನೇ ಮುಖ್ಯ, ನಾನು ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ" ಎಂದು ಬಾಯಿಮಾತಿನಲ್ಲಿ ಹೇಳಬೇಕಾಗಿಯೇ ಇಲ್ಲ. ಮನಸ್ಸಿನಲ್ಲಿ ಈ ಭಾವನೆಯನ್ನು ಬಲವಾಗಿ ಮೂಡಿಸಿಕೊಂಡು ಆ ಪ್ರಕಾರ ನಿಮ್ಮ ಸಂಗಾತಿಯನ್ನು ಯಾವುದೇ ಪ್ರತಿಫಲವಿಲ್ಲದೇ ಪ್ರೀತಿಸಿದರೆ ನಿಮ್ಮ ಸಂಗಾತಿಯಿಂದಲೂ ಇದೇ ರೀತಿಯ ಪ್ರೀತಿ ಹರಿದು ಬರುತ್ತದೆ. ಈ ಪ್ರೀತಿ ಜೀವನದ ಯಾವುದೇ ಐಶ್ವರ್ಯಕ್ಕೂ ಮಿಗಿಲಾದ ಐಶ್ವರ್ಯವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಕೂಡದು.

English summary

Relationship Facts To Know Each Other Better

it is very important to know the interesting facts about relationships to make it work and stay happy with each other. Knowing relationship facts will also help know your partner and their likes. Lets check out the interesting facts of relationship:
X
Desktop Bottom Promotion