For Quick Alerts
ALLOW NOTIFICATIONS  
For Daily Alerts

ಹೌದು ಕಣೇ, ನೀನು ಹೇಳುತ್ತಿರುವುದು ಸರಿ! ಆಕೆಗೆ ಇಷ್ಟೇ ಸಾಕು!

ಜಗಳ ಮಾಡದೆ ಬಾಳ್ವೆ ಮಾಡುತ್ತಿರುವ ಗಂಡ-ಹೆಂಡತಿ ಈ ಪ್ರಪಂಚದಲ್ಲಿ ಯಾರೂ ಇರಲ್ಲ, ಸಣ್ಣ-ಪುಟ್ಟ ಕಾರಣಕ್ಕೆ ಜಗಳ ಬಂದೇ ಬರುತ್ತದೆ. ಆದರೆ ಆ ಜಗಳ, ಆ ಮನಸ್ತಾಪವನ್ನು ಬೆಳೆಯಲು ಬಿಡದಂತೆ ಇಬ್ಬರೂ ಪ್ರಯತ್ನಿಸಿದರೆ ಮಾತ್ರ ಸಂಸಾರ ನಡೆಸಲು ಸಾಧ್ಯ...

By Manu
|

ದಾಂಪತ್ಯದಲ್ಲಿ ಸರಸದ ಜೊತೆಗೆ ಕೊಂಚ ವಿರಸವೂ ಇರಬೇಕು. ಆಗಲೇ ಊಟದಲ್ಲಿ ಉಪ್ಪಿನಕಾಯಿಯಂತೆ ಜೀವನ ಸುಂದರವಾಗುತ್ತದೆ. ಅನ್ಯೋನ್ಯ ದಂಪತಿಗಳು ಆಗಾಗ ಕೋಳಿಜಗಳವಾಡುತ್ತಾ ಬಳಿಕ ರಮಿಸಿ ಒಂದಾಗುತ್ತಾ ಜೀವನವೆಲ್ಲಾ ಸುಖಿಯಾಗಿರುತ್ತಾರೆ. ಕೆಲವು ದಂಪತಿಗಳ ನಡುವೆ ಮಾತ್ರ ಯಾವುದೋ ವಿಚಾರದಲ್ಲಿ ಒಮ್ಮತ ಮೂಡದೇ ವಿರಸ ವಿಪರೀತಕ್ಕೇರಿ ದ್ವೇಷ ರೂಪ ಪಡೆದು ವಿರಹಕ್ಕೆ ಕಾರಣವಾಗಿರುತ್ತವೆ.

Reasons She Stopped Arguing With You

ಒಂದು ಹಂತ ದಾಟಿದ ಬಳಿಕ ಪರಸ್ಪರ ಮಾತನ್ನೇ ಆಡುವುದಿಲ್ಲ. ಒಂದು ವೇಳೆ ನಿಮ್ಮ ಪತ್ನಿ ನಿಮ್ಮೊಂದಿಗೆ ಜಗಳವಾಡುವ ಎಲ್ಲಾ ಕಾರಣಗಳಿದ್ದರೂ ಜಗಳವಾಡದೇ ಮೌನದ ಚೂರಿಯನ್ನು ಇರಿಯುವ ಕಾರಣ ಗೊತ್ತೇ? ಹೆಚ್ಚಿನವರು 'ಒಳ್ಳೆಯದೇ ಆಯ್ತು' ಎಂದು ಸಂತಸಪಟ್ಟುಕೊಳ್ಳುತ್ತಾರೆ. ಆದರೆ ತಾಳಿ! ಈ ಮೌನ ಮುಂದೆ ಬರಲಿರುವ ಭಯಂಕರ ಚಂಡಮಾರುತದ ಮುನ್ನ ಸ್ತಬ್ಧವಾಗುವ ಗಾಳಿಯಂತೆ ಯಾವುದೋ ಭಯಂಕರವಾದ ತೀರ್ಮಾನದ ಮುನ್ಸೂಚನೆಯಾಗಿರಬಹುದು. ಹೆಂಡತಿ ಹೀಗೆಲ್ಲಾ ವರ್ತಿಸಿದರೆ, ಗಂಡನಿಗೆ ಇಷ್ಟವಾಗುವುದಿಲ್ಲವಂತೆ!

ಆದ್ದರಿಂದ ದಂಪತಿಗಳು ಜಗಳವನ್ನು ಮುಂದುವರೆಸಿ ತಮ್ಮ ತೊಂದರೆಗಳಿಗೆ ಒಂದು ಇತ್ಯರ್ಥ ಪಡೆಯುವುದೇ ಮೇಲು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಏಕೆಂದರೆ ಮೌನವಾಗಿದ್ದಾಗ ಏಕಮುಖವಾದ ಯೋಚನೆಗಳು ಇಬ್ಬರಲ್ಲಿಯೂ ವಿರುದ್ಧ ದಿಕ್ಕಿಗೆ ಹರಿಯುತ್ತಾ ಇಲ್ಲದ ವಿಷಯಗಳನ್ನು ಇದೆ ಎಂದು ನಂಬಿಕೊಂಡು ತಮ್ಮದೇ ಕಲ್ಪನೆಗಳನ್ನು ಹೇರುತ್ತಾ ವಿಷಯವನ್ನು ಗೋಜಲು ಗೋಜಲಾಗಿಸಿ ಮತ್ತೆ ಸರಿಪಡಿಸಲಾರದಷ್ಟು ಹದಗೆಡಿಸಿ ಸಂಬಂಧವೇ ಕೊನೆಗೊಳ್ಳುವ ಅಪಾಯವಿದೆ.

ಇದು ಆಗಬಾರದು ಎಂದರೆ ಇಬ್ಬರೂ ತಮ್ಮ ಸಂಗಾತಿಯ ಎದುರು ತನ್ನದೇ ತಪ್ಪು ಎಂದು ಒಪ್ಪಿಕೊಂಡು ಮಡಿಲಲ್ಲಿ ಮಗುವಾಗಿ ಹುದುಗುವುದೇ ಜಾಣತನ. ಜಗಳ ತಾರಕಕ್ಕೇರಲು ಪ್ರಮುಖ ಕಾರಣವೆಂದರೆ ಅಹಮ್ಮಿಕೆ. ಒಂದು ವೇಳೆ ಇದನ್ನು ಬಿಡಲು ಸಾಧ್ಯವಿಲ್ಲದಿದ್ದರೆ ಸಂಬಂಧವನ್ನೇ ಬಿಡಬೇಕಾದೀತು. ಬನ್ನಿ ಈ ತೊಂದರೆಗೆ ಒಳಗಾಗದಿರಲು ಮೂಲ ಕಾರಣವನ್ನು ಕೆದಕಿ ನೋಡಿದಾಗ ಆಕೆ ನಿಮ್ಮೊಂದಿಗೆ ಏಕೆ ಮಾತು ನಿಲ್ಲಿಸಿದ್ದಾಳೆ ಎಂಬುದನ್ನು ಕಂಡುಕೊಳ್ಳಬಹುದು.

*ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವುದು!

ಈಗ ಆಕೆಗೆ ಗೊತ್ತಾಗಿದೆ, ಆಕೆ ಏನು ಹೇಳಬಯಸುತ್ತಾಳೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತಿಲ್ಲ. ಎಷ್ಟು ಹೇಳಿದರೂ ನೀವು ನಿಮ್ಮದೇ ವಾದವನ್ನು ಮಂಡಿಸಿ ನಿಮ್ಮ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುತ್ತಿರುವುದು ಆಕೆಗೆ ಸರಿಬರುತ್ತಿಲ್ಲ. ಹಾಗಿದ್ದಾಗ ನಿಮ್ಮ ಯೋಚನಾಲಹರಿಯನ್ನು ಕೊಂಚ ಬದಲಿಸಿ ಇನ್ನೊಂದು ದೃಷ್ಟಿಕೋಣದಿಂದ ನೋಡಿ. ಕೊನೆಪಕ್ಷ ಮಲಗುವ ಮುನ್ನವಾದರೂ ನೆಮ್ಮದಿಯಾಗಿ ಮಲಗಿ!
'ಒಂದು ವೇಳೆ ಆಕೆ ಹೇಳುತ್ತಿರುವುದು ಸರಿಯೇ ಆಗಿದ್ದರೆ' ಎಂಬ ನಿಟ್ಟಿನಲ್ಲಿ ಯೋಚಿಸಿ. ಹೆಚ್ಚಿನ ಬಾರಿ ಹೀಗೆ ಯೋಚಿಸಲು ನಿಮ್ಮ ಅಹಮ್ಮಿಕೆ ಅಡ್ಡಬರುತ್ತದೆ. ನಿಮ್ಮಲ್ಲೇ ತೊಂದರೆ ಇದ್ದರೆ 'ಹೌದು ನೀನು ಹೇಳುತ್ತಿರುವುದೂ ಸರಿ' ಎನ್ನುವ ಮೂಲಕ ಆಕೆಯ ಹೃದಯವನ್ನು ಮತ್ತೆ ಗೆಲ್ಲಬಹುದು.

*ಜಗಳ ತಾರಕಕ್ಕೇರುವುದನ್ನು ಮಹಿಳೆ ಇಷ್ಟಪಡಲ್ಲ!
ಆಕೆ ನಿಮ್ಮನ್ನು ಬಿಟ್ಟು ಜೀವನದಲ್ಲಿ ಮುಂದುವರೆಯಲು ನಿರ್ಧರಿಸಿರಬಹುದು. ಕೋಳಿಜಗಳ ಎಲ್ಲಾ ಮಹಿಳೆಯರಿಗೆ ಇಷ್ಟವಾದ ವಿಷಯವಾದರೂ ಜಗಳ ತಾರಕಕ್ಕೇರುವುದನ್ನು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಒಂದು ವೇಳೆ ಜಗಳ, ಕಲಹ, ವಾಗ್ಯುದ್ದಗಳು ನಿತ್ಯದ ಜಂಜಾಟವಾದರೆ ಹೆಚ್ಚಿನ ಮಹಿಳೆಯರು ಸ್ವತಂತ್ರರಾಗುವತ್ತ ಒಲವು ತೋರುತ್ತಾರೆ. ನಿಮ್ಮ ಸಂಗಾತಿಯ ಮೌನವೂ ಇದನ್ನೇ ಸೂಚಿಸುತ್ತಿದ್ದಿರಬಹುದು.

* ಆಕೆಯಲ್ಲಿ ಈಗ ಪ್ರಬುದ್ಧತೆ ಕಾಣುತ್ತಿದೆ
ವರ್ಷಗಳು ಕಳೆದಂತೆ ಆಕೆ ಹೆಚ್ಚು ಹೆಚ್ಚು ಪ್ರಬುದ್ದಳಾಗುತ್ತಿದ್ದು ಇದಕ್ಕೆ ಸರಿಸಮನಾಗಿ ನೀವು ಪ್ರಬುದ್ಧರಾಗದೇ ಇಂದಿಗೂ ಚೆಲ್ಲು ಚೆಲ್ಲಾಗಿ ಆಡುತ್ತಿರುವುದು ಆಕೆಗೆ ಇಷ್ಟವಾಗದೇ ಇರಬಹುದು. ವರ್ಷಗಳೆದಂತೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಇನ್ನೂ ಹೆಚ್ಚು ಪ್ರಬುದ್ದರಾಗಲು ನೆರವಾಗುವುದೇ ಸುಂದರ ಜೀವನದ ಸಾರವಾಗಿದೆ.

* ಆಕೆಗೆ ಇನ್ನು ಹೆಚ್ಚಿನ ಜಗಳವೇ ಬೇಡ
ಸಾಮಾನ್ಯವಾಗಿ ಮಹಿಳೆಯರು ನಿತ್ಯದ ಕೆಲಸಗಳಲ್ಲಿ, ತಮ್ಮ ಆರೋಗ್ಯದ ವಿಷಯದಲ್ಲಿ ಹಲವಾರು ಒತ್ತಡಗಳಿಗೆ ಒಳಗಾಗಿರುತ್ತಾರೆ. ಇದರ ಮೇಲೆ ನಿಮ್ಮೊಂದಿಗೆ ಜಗಳ ಕಾಯುವುದು ಅವರಿಗೆ ಇಷ್ಟವಿಲ್ಲದ ಸಂಗತಿಯಾಗಿದೆ. ಆದ್ದರಿಂದ ನಿಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಎದುರಾದರೂ ಆಕೆ ತಕ್ಷಣ ಇದನ್ನು ವಿರೋಧಿಸಿ ನಿಮ್ಮೊಂದಿಗೆ ಜಗಳ ಮುಂದುವರೆಸಲು ಇಚ್ಛಿಸದೇ ಮೌನಕ್ಕೆ ಶರಣಾಗಬಹುದು. ಆದ್ದರಿಂದ ಜಗಳ ಮುಂದುವರೆಸುವ ಮುನ್ನ ಅವರ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಕೊಂಚ ಗಮನಿಸಿ ವಿಷಯ ಕೆದಕದೇ ಇರುವುದೇ ಜಾಣತನವಾಗಿದೆ. ಸಂಗಾತಿ ಜೊತೆ ಜಗಳವಾಡಿದರೆ ಹೀಗೆ ಮಾಡಬಹುದೇ?

* ಆಕೆ ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುತ್ತಿರಬಹುದು
ಹೆಚ್ಚಿನ ದಂಪತಿಗಳು ತಮ್ಮ ಸಂಗಾತಿಯ ಇಷ್ಟಕ್ಕೆ ವಿರುದ್ಧವಾದ ಯಾವುದೇ ಕೆಲಸಗಳನ್ನು ಮುಂದುವರೆಸುವುದಿಲ್ಲ. ಸಂಗಾತಿಗೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಧೂಮಪಾನದಂತಹ ಬಹಳ ವರ್ಷಗಳ ಚಟವನ್ನು ಬಿಟ್ಟವರಿದ್ದಾರೆ. ಸಂಗಾತಿಯ ಹೃದಯವನ್ನು ಗೆಲ್ಲಲು ಇಬ್ಬರೂ ಕೆಲವು ಬದಲಾವಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸುಂದರವಾಗುತ್ತದೆ.


ಒಂದು ವೇಳೆ ನೀವು ಆಕೆಯ ಇಷ್ಟದ ಪ್ರಕಾರದ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳುವ ಯಾವುದೇ ಸೂಚನೆ ತೋರದೇ ಇದ್ದಾಗ ಮಾತ್ರ ಆಕೆ ನಿಮ್ಮ ಬಗ್ಗೆ 'ಇದೊಂದು ಕತ್ತೆ, ಇದು ಬದಲಾವುಗುದಿಲ್ಲ, ಬದಲಿಗೆ ತಾನೇ ಈ ಕತ್ತೆಗೆ ಅನುಸಾರವಾಗಿ ಬದಲಾಗಬೇಕು' ಎಂಬ ನಿರ್ಧಾರಕ್ಕೆ ಬಂದು ನಿಮ್ಮನ್ನು ಅರಿತುಕೊಳ್ಳಲು ಮೌನವಹಿಸಿ ನಿಮ್ಮ ಚರ್ಯೆಗಳನ್ನು ಗಮನಿಸುತ್ತಿರಬಹುದು.
English summary

Reasons She Stopped Arguing With You

If your wife never had the habit of arguing with you, then its okay. But what if she stopped arguing with you only now? Does that mean anything? Well, it could be a good thing. But wait, it could also indicate something else. Stoic silence could mean disagreement also.
X
Desktop Bottom Promotion