For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ಅರಿತು ಬಾಳಿದರೆ, ಖಂಡಿತ ಬಾಳು ಬಂಗಾರ

ಸಣ್ಣಪುಟ್ಟ ಜಗಳಗಳು ಗಂಡ ಹೆಂಡತಿಯರ ನಡುವೆ ಇದ್ದೇ ಇರುತ್ತದೆ. ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು....

By Manu
|

ಸಂಬಂಧವೆನ್ನುವುದು ಎರಡು ಮನಸ್ಸುಗಳ ಬಂಧನ. ಎರಡು ಮನಸ್ಸುಗಳು ಒಂದಾದಾಗ ಮಾತ್ರ ಸಂಬಂಧವು ಚೆನ್ನಾಗಿರಲು ಸಾಧ್ಯ. ಆದರೆ ಪ್ರತಿಯೊಂದು ಸಂಬಂಧದಲ್ಲಿಯೂ ಏನಾದರೊಂದು ಸಮಸ್ಯೆಗಳು ಇದ್ದೇ ಇರುತ್ತದೆ.

ಸಣ್ಣಪುಟ್ಟ ಜಗಳಗಳು ಆಗುತ್ತಾ ಇದ್ದರೆ ಮಾತ್ರ ಸಂಗಾತಿಗಳ ನಡುವಿನ ಪ್ರೀತಿಯು ಮತ್ತಷ್ಟು ಹೆಚ್ಚುವುದು. ಇಲ್ಲವಾದಲ್ಲಿ ಆ ಸಂಬಂಧವು ಬೇಸರ ಮೂಡಿಸುತ್ತದೆ. ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ಸಂಗಾತಿಯು ಮುನಿಸಿಕೊಳ್ಳುವುದು, ಆಕೆಯನ್ನು ಸಮಾಧಾನಪಡಿಸುವುದು ಹೀಗೆ ಪ್ರತಿಯೊಂದು ಕೂಡ ಸಂಬಂಧದಲ್ಲಿ ತುಂಬಾ ಮುಖ್ಯ. ಆದರೆ ಇಂದಿನ ದಂಪತಿಗಳು ಸಣ್ಣಪುಟ್ಟ ಜಗಳಗಳಾದರೂ ತಮ್ಮ ಸಂಬಂಧದ ಗುಣಮಟ್ಟದ ಬಗ್ಗೆ ಸಂಶಯಪಡಲು ಆರಂಭಿಸುತ್ತಾರೆ. ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!

ಆದರೆ ಪ್ರತಿಯೊಂದು ಸಂಬಂಧದಲ್ಲಿಯೂ ಇದು ಇರುತ್ತದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ತಮ್ಮ ಸಂಗಾತಿ ಒಂದು ದಿನ ಖುಷಿ ನೀಡದೆ ಇದ್ದರೆ ಏನೋ ಸಂಶಯಪಡಲು ಆರಂಭಿಸುತ್ತಾರೆ. ಇದೆಲ್ಲವೂ ಸಾಮಾನ್ಯವೆಂದು ಅರ್ಥ ಮಾಡಿಕೊಂಡು ಮುಂದೆ ಸಾಗಲು ಮುಂದಕ್ಕೆ ಓದಿಕೊಳ್ಳಿ.....

ಕಿರಿಕಿರಿಯ ಸಮಸ್ಯೆ!

ಕಿರಿಕಿರಿಯ ಸಮಸ್ಯೆ!

ಪ್ರತಿಯೊಂದು ದಾಂಪತ್ಯದಲ್ಲೂ ಇದು ಸಾಮಾನ್ಯ. ಪ್ರತೀ ಕ್ಷಣವೂ ನಿಮ್ಮ ಸಂಗಾತಿ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವೊಮ್ಮೆ ಅವರ ಮನಸ್ಥಿತಿಯು ಬದಲಾಗುತ್ತದೆ ಮತ್ತು ಕಿರಿಕಿರಿಯಾಗುವುದು ಸಹಜ.

ಲಘುವಾಗಿ ಪರಿಗಣಿಸುವುದು,,,,

ಲಘುವಾಗಿ ಪರಿಗಣಿಸುವುದು,,,,

ಕೆಲವು ಸಮಯ ಜತೆಯಾಗಿ ಕಳೆದ ಬಳಿಕ ಸಂಗಾತಿಗಳು ಪರಸ್ಪರರನ್ನು ಲಘುವಾಗಿ ಪರಿಗಣಿಸುವುದು ಸಾಮಾನ್ಯ. ಪರಸ್ಪರ ಮಾತನಾಡಿಕೊಂಡು ಈ ಸಮಸ್ಯೆ ನಿವಾರಿಸಬಹುದು.

ಸಂಗಾತಿಯಿಂದ ಕಡೆಗಣನೆ

ಸಂಗಾತಿಯಿಂದ ಕಡೆಗಣನೆ

ಜೀವನದ ಪ್ರತಿಯೊಂದು ಕ್ಷಣವೂ ನಿಮ್ಮ ಕಡೆ ಗಮನಹರಿಸುವುದು ಸಾಧ್ಯವಾಗಿರುವುದಿಲ್ಲ. ವೃತ್ತಿ ಜೀವನ ಹಾಗೂ ಮಕ್ಕಳ ಕಾರಣದಿಂದ ಹೀಗೆ ಆಗಬಹುದು. ಇದು ತುಂಬಾ ಸಾಮಾನ್ಯ ವಿಷಯ. ಇದನ್ನು ಬಗೆಹರಿಸುವ ಸಾಮರ್ಥ್ಯ ನಿಮ್ಮಲ್ಲಿದೆ.

ಆಸಕ್ತಿ ಕುಂದಿದೆ....

ಆಸಕ್ತಿ ಕುಂದಿದೆ....

ಜೀವನದ ಪ್ರತೀ ದಿನವೂ ಸಂಗಾತಿಯು ಆಸಕ್ತಿಯಿಂದ ಹಾಸಿಗೆಯಲ್ಲಿ ವರ್ತಿಸಬೇಕೆಂದಿಲ್ಲ. ಕೆಲವು ಕಾರಣಗಳಿಂದ ಆಸಕ್ತಿ ಕಡಿಮೆ ಇರಬಹುದು.

ಆಸಕ್ತಿ ಕುಂದಿದೆ....

ಆಸಕ್ತಿ ಕುಂದಿದೆ....

ಪ್ರೀತಿ ವ್ಯಕ್ತಪಡಿಸುವುದರಲ್ಲಿ ಏಳುಬೀಳುಗಳು ಇರಬಹುದು. ಇದು ಸಾಮಾನ್ಯ. ಇಂತಹ ಸಮಸ್ಯೆಗೆ ಸಂಗಾತಿಯಿಂದ ದೂರವಾಗಬೇಕಿಲ್ಲ. ಮಾತಿನ ಮೂಲಕ ಇದನ್ನು ಬಗೆಹರಿಸಿ.

ಆಕರ್ಷಣೆ ಹೋಗಿದೆ

ಆಕರ್ಷಣೆ ಹೋಗಿದೆ

ದಾಂಪತ್ಯದ ಆರಂಭದಲ್ಲಿ ಇದ್ದ ಆಕರ್ಷಣೆ ಮತ್ತು ರೋಚಕತೆ ಜೀವಮಾನವಿಡಿ ಉಳಿದುಕೊಳ್ಳುತ್ತದೆ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿದೆ. ಕೆಲವು ವರ್ಷಗಳಲ್ಲಿಯೇ ಈ ಆಕರ್ಷಣೆ ಕಡಿಮೆಯಾಗುವುದು. ಆದರೆ ನೀವು ಒಳ್ಳೆಯ ಸಂಗಾತಿಗಳಾಗಿದ್ದರೆ ಪ್ರೀತಿ ಹಾಗೂ ಒಲವು ಹಾಗೆ ಉಳಿಯುತ್ತದೆ. ಪ್ರತೀ ಕ್ಷಣವನ್ನು ಆನಂದಿಸುತ್ತಾ ಇರಬೇಕು. ಆಕರ್ಷಣೆ ಎನ್ನುವುದು ತಾತ್ಕಾಲಿಕ. ಆದರೆ ಒಲವು ಶಾಶ್ವತ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.

English summary

Problems That Are Normal In Relationships

Some problems are quite normal in any relationship. But young couples may get confused and they doubt about the quality of their relationship. They tend to feel disconnected even when a small fight happens; they get upset even if a single night goes without any excitement. Such things and so many others are normal in almost all relationships. So, you don't need to doubt the quality of your relationship. Read on to know more...
X
Desktop Bottom Promotion