ಅತ್ತೆಯೊಂದಿಗೆ ಹೊಂದಿಕೊಂಡರೆ ಅರ್ಧ ಯುದ್ಧ ಗೆದ್ದಂತೆ!

By: Hemanth
Subscribe to Boldsky

ಮದುವೆಯೆಂದರೆ ಅದು ಕೇವಲ ಎರಡು ಜೀವಗಳು ಬೆಸೆದುಕೊಳ್ಳುವ ಸಂಬಂಧವಲ್ಲ. ಎರಡು ಕುಟುಂಬಗಳು ಕೂಡ ಇಲ್ಲಿ ಒಂದಾಗುತ್ತವೆ. ಇದರಲ್ಲಿ ಹಲವಾರು ಸಂಬಂಧಗಳು ಬೆಸೆದುಕೊಳ್ಳುತ್ತವೆ. ಇಂತಹ ಸಂಬಂಧದಲ್ಲಿ ಅತ್ತೆ-ಮಾವನ ಸಂಬಂಧ ಕೂಡ ಒಂದು. ವೈವಾಹಿಕ ಜೀವನದಲ್ಲಿ ಅತ್ತೆಯ ಸಂಬಂಧವು ಅವಿಭಾಜ್ಯ ಅಂಗವೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Mother-in-law?
 

ಯಾಕೆಂದರೆ ದಿನನಿತ್ಯ ಏನಾದರೊಂದು ಕಾರಣಕ್ಕಾಗಿ ಅತ್ತೆಯೊಂದಿಗೆ ಮಾತುಕತೆ ನಡೆಯುತ್ತಲೇ ಇರುತ್ತದೆ. ಇನ್ನು ಕೆಲವೊಮ್ಮೆ ಅತ್ತೆ ಕೂಡ ನಿಮ್ಮ ಮನೆಯಲ್ಲಿಯೇ ಬಂದು ವಾಸಿಸಲು ಆರಂಭಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಏರ್ಪಡುವುದು ಸಹಜ. ಅತ್ತೆ-ಸೊಸೆ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ಮಾನಸಿಕ ತಜ್ಞರ ಪ್ರಕಾರ ಮಹಿಳೆಯು ಅಡುಗೆ ಮನೆ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಾಳೆ. ಇದರಿಂದಾಗಿ ನಿಮ್ಮ ಹಾಗೂ ಅತ್ತೆಯ ಮಧ್ಯೆ ಅಡುಗೆ ಮನೆಯ ವಿಚಾರವಾಗಿ ಯಾವಾಗಲೂ ಭಿನ್ನಾಭಿಪ್ರಾಯ ಬರಬಹುದು.

Mother-in-law?
 

ಅತ್ತೆಯೊಂದಿಗೆ ಅಡುಗೆ ಮನೆಯಲ್ಲಿ ನೀವು ಹೊಂದಾಣಿಕೆಯನ್ನು ಮಾಡಿಕೊಂಡರೆ ಅರ್ಧ ಯುದ್ಧವನ್ನು ಗೆದ್ದಂತೆ. ಅಡುಗೆ ಮನೆಗೆ ಸಂಬಂಧಿಸಿದಂತೆ ನಿಮಗೆ ಹಾಗೂ ಅತ್ತೆಗೆ ಭಿನ್ನಾಭಿಪ್ರಾಯ ಉಂಟಾಗುತ್ತಿದ್ದರೆ ಕೆಲವೊಂದು ವಿಚಾರಗಳನ್ನು ಗಮನಿಸಬೇಕಾಗುತ್ತದೆ.

ಅತ್ತೆ ಹಲವಾರು ದಶಕಗಳಿಂದ ಅಡುಗೆ ಮನೆಯಲ್ಲಿ ಇದ್ದಾಕೆ. ಆಕೆ ಇದನ್ನು ಬಿಟ್ಟುಕೊಡಲು ತಯಾರಿರುವುದಿಲ್ಲ. ಅಡುಗೆ ಮನೆಗೆ ನೀವು ಈಗ ಸಣ್ಣ ಹುಡುಗಿ. ನೀವು ಆದಷ್ಟು ಹೊಂದಾಣಿಕೆ ಮಾಡಿಕೊಂಡು ಹೋಗಿ. ಪ್ರತಿಯೊಬ್ಬ ತಾಯಿ ಕೂಡ ಮಕ್ಕಳು ತನ್ನ ಕೈಯಡುಗೆಯನ್ನು ಇಷ್ಟಪಡುತ್ತಾರೆ ಎಂದು ತಿಳಿದಿರುತ್ತಾಳೆ. ನಿಮ್ಮ ಅತ್ತೆ ಎಷ್ಟೇ ಕೆಟ್ಟ ಅಡುಗೆ ಮಾಡುತ್ತಲಿದ್ದರೂ ಆಕೆ ಹೀಗೆಯೇ ಭಾವಿಸುತ್ತಾಳೆ. ನಿಮ್ಮ ಅಡುಗೆಯನ್ನು ಗಂಡ ಇಷ್ಟಪಡುತ್ತಿದ್ದರೆ ಆಗ ಖಂಡಿತವಾಗಿಯೂ ಅತ್ತೆ ನಿಮಗೆ ಅಡುಗೆ ಮನೆಗೆ ಪ್ರವೇಶ ನೀಡಲ್ಲ. ಅತ್ತೆ-ಸೊಸೆ ಜಗಳ ನಿಮ್ಮಿಂದಲೇ ಕೊನೆಯಾಗಲಿ!  

Mother-in-law?
 

*ಏನೇ ಆದರೂ ಅತ್ತೆ ಕೂಡ ನಿಮ್ಮಂತೆ ಮಹಿಳೆ ಎನ್ನುವುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಮಹಿಳೆಯರಾಗಿರುವ ಕಾರಣ ಒಬ್ಬರ ಅಡುಗೆಯನ್ನು ಮತ್ತೊಬ್ಬರು ಇಷ್ಟಪಡುವುದು ತುಂಬಾ ಕಷ್ಟವೆನ್ನಬಹುದು. ಮನೆಯಲ್ಲಿಯೇ ಇರುವಂತಹ ಮಹಿಳೆಯರಿಗೆ ಈ ಸಮಸ್ಯೆ.ಆದರೆ ಕೆಲಸಕ್ಕೆ ಹೋಗುವವರಿಗೆ ಈ ಸಮಸ್ಯೆ ಇರಲ್ಲ.

*ನೀವು ಕೆಲಸಕ್ಕೆ ಹೋಗುವಾಗ ನಿಮಗೆ ಅಡುಗೆ ಮನೆಯ ಉಸಾಬರಿ ಯಾಕೆ ಬೇಕು. ನಿಮ್ಮ ಅತ್ತೆ ಅಡುಗೆ ಮಾಡಲಿ, ಅದನ್ನು ನೀವು ಅಸ್ವಾದಿಸಿ. ಮೊದಮೊದಲು ತರಕಾರಿ ತುಂಡುಮಾಡುವುದು, ಅದರ ನಾರು ತೆಗೆಯುವುದು ಇಂತಹ ಕೆಲಸಗಳನ್ನು ನೀಡಿದರೆ ನೀವು ಹಿಂಜರಿಯದೆ ಮಾಡಿ. ಅಡುಗೆ ಮನೆಯಲ್ಲಿಯೇ ಇದ್ದುಕೊಂಡು ಅಂತಿಮವಾಗಿ ಅಡುಗೆ ಮನೆಯ ನಿಯಂತ್ರಣ ಪಡೆದುಕೊಳ್ಳಿ.

*ಅಡುಗೆ ಮನೆಯಲ್ಲಿ ಕೆಲವೊಂದು ಜವಾಬ್ದಾರಿಯನ್ನು ತೆಗೆದುಕೊಂಡರೆ ಆಗ ನೀವು ಸಮರ್ಥರಿದ್ದೀರಿ ಎಂದು ಆಕೆಗೆ ಅನಿಸುತ್ತದೆ. ಮನೆಯಲ್ಲಿ ಯಾವುದೇ ಸಮಾರಂಭ ಅಥವಾ ಅತಿಥಿಗಳು ಮನೆಗೆ ಬಂದರೆ ಆಗ ಕೆಲಸದಲ್ಲಿ ಕೈಜೋಡಿಸಿ ಅತ್ತೆಯ ಕೆಲಸದ ಭಾರವನ್ನು ಕಡಿಮೆ ಮಾಡಿ.

Mother-in-law?
 

*ಅತ್ತೆಯ ಕೆಲವೊಂದು ವಿಶೇಷ ಅಡುಗೆಗಳನ್ನು ನೀವು ಕಲಿತುಕೊಂಡು ಆಕೆಯ ಮನ ಗೆಲ್ಲಲು ಪ್ರಯತ್ನಿಸಿ. ಈ ಮೂಲಕ ನಿಮ್ಮ ಹಾಗೂ ಅತ್ತೆಯ ಜತೆಗಿನ ಸಂಬಂಧವು ಬಲವಾಗುವುದು. ಇದರಿಂದ ಅಡುಗೆ ಮನೆಯಲ್ಲಿ ನೀವು ನಿಯಂತ್ರಣ ಪಡೆದುಕೊಳ್ಳಬಹುದು.

*ಅಡುಗೆ ಮನೆಗಾಗಿ ನೀವು ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆಕೆ ನಿಮ್ಮೊಂದಿಗೆ ಹೊಂದಾಣಿಕೆಗೆ ಮುಂದಾದರೆ ನೀವು ಕೂಡ ಅದಕ್ಕೆ ಮುಂದಾಗಿ. ಅಡುಗೆ ಮನೆಯನ್ನು ಸರಿಯಾಗಿ ಹಂಚಿಕೊಳ್ಳಿ. ನೀವಾಗಿಯೇ ಕೆಲವೊಂದು ಅಡುಗೆಗಳನ್ನು ತಯಾರಿಸಿ ಅದರಲ್ಲಿ ನಿಮ್ಮ ಪಾರುಪತ್ಯವಿರಲಿ. ಅಡುಗೆ ಮನೆಯಲ್ಲಿ ಅತ್ತೆಯೊಂದಿಗೆ ವ್ಯವಹರಿಸುವಾಗ ನೀವು ಆಕೆಯನ್ನು ಕಡೆಗಣಿಸಬಾರದು. ತಾಳ್ಮೆಯಿಂದ ಇದ್ದರೆ ಅತ್ತೆಯೊಂದಿಗಿನ ಎಲ್ಲಾ ಸಮಸ್ಯೆಯೂ ನಿವಾರಣೆಯಾಗುತ್ತದೆ.

Story first published: Thursday, September 22, 2016, 16:16 [IST]
English summary

How To Share Kitchen With Mother-in-law?

Your relationship with your mother-in-law is centred around the kitchen. To deal with your mother-in-law in the kitchen you need to act smart.
Please Wait while comments are loading...
Subscribe Newsletter