ಬ್ಯಾಚುಲರ್‌ನಲ್ಲಿ ಮಾಡುತ್ತಿದ್ದ ಚೇಷ್ಟೆ, ಮದುವೆ ಬಳಿಕ ನಡೆಯಲ್ಲ!

ಬ್ಯಾಚುಲರ್ ಆಗಿದ್ದಾಗ ಮಾಡುತ್ತಿದ್ದ ಕೆಲವೊಂದು ಕಪಿಚೇಷ್ಟೆಗಳನ್ನು ಮದುವೆಯಾದ ಬಳಿಕ ಮಾಡಲು ಸಾಧ್ಯವಾಗಲ್ಲ. ಮದುವೆ ವೇಳೆ ಬೆಸೆದಿರುವ ಬಂಧವೇ ಅದಕ್ಕೆ ಕಾರಣವಾಗಿದೆ. ಮದುವೆ ಬಳಿಕ ಪತ್ನಿಯನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕಾಗುತ್ತದೆ.

By: Hemanth
Subscribe to Boldsky

ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮದುವೆಯಾದ ಬಳಿಕ ಜೀವಮಾನವಿಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೊಂದಿಕೊಂಡು ಬದುಕಬೇಕಾಗುತ್ತದೆ. ಮದುವೆಗಿಂತ ಮೊದಲು ಊರಿಡಿ ತಿರುಗುತ್ತಿದ್ದ ವ್ಯಕ್ತಿ ಕೂಡ ಮದುವೆಯಾದ ಬಳಿಕ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ.  ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ಬ್ಯಾಚುಲರ್ ಆಗಿದ್ದಾಗ ಮಾಡುತ್ತಿದ್ದ ಕೆಲವೊಂದು ಕಪಿಚೇಷ್ಟೆಗಳನ್ನು ಮದುವೆಯಾದ ಬಳಿಕ ಮಾಡಲು ಸಾಧ್ಯವಾಗಲ್ಲ. ಮದುವೆ ವೇಳೆ ಬೆಸೆದಿರುವ ಬಂಧವೇ ಅದಕ್ಕೆ ಕಾರಣವಾಗಿದೆ. ಮದುವೆ ಬಳಿಕ ಪತ್ನಿಯನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕಾಗುತ್ತದೆ. ನಿನ್ನನ್ನು ಮದುವೆಯಾಗಿದ್ದೇ ನಾನು ಮಾಡಿದ ದೊಡ್ಡ ತಪ್ಪು!

ಇದು ಪತಿಯಾದವನ ಕರ್ತವ್ಯವಾಗಿದೆ. ಆದರೆ ಇದಕ್ಕಾಗಿ ನೀವು ಸಂಪೂರ್ಣವಾಗಿ ಬದಲಾಗಬೇಕೆಂದು ನಾವು ಹೇಳುತ್ತಿಲ್ಲ. ಪತಿಯಾದವನು ಕೆಲವೊಂದು ಮೂರ್ಖತನದ ಕೆಲಸಗಳನ್ನು ಕೈಬಿಡಬೇಕು. ಆ ಮೂರ್ಖತನದ ಕೆಲಸಗಳು ಯಾವುದು ಎಂದು ತಿಳಿಯಬೇಕಾದರೆ ಮುಂದೆ ಓದುತ್ತಾ ಹೋಗಿ...   


ಪತ್ನಿಯನ್ನು ತಾಯಿಗೆ ಹೋಲಿಕೆ ಮಾಡುವುದು

ತಾಯಿಯ ಗುಣಗಳು ನಿಮಗೆ ಇಷ್ಟವಿದ್ದರೆ ಅದರಲ್ಲಿ ತಪ್ಪೇನಿಲ್ಲ. ತಾಯಿಯ ಅಡುಗೆ ಇಷ್ಟವಾದರೆ ಅದನ್ನು ಆನಂದಿಸಿ. ಆದರೆ ಪತ್ನಿಯನ್ನು ನಿಮ್ಮ ತಾಯಿಗೆ ಹೋಲಿಸಿದರೆ ಆಕೆ ಖಂಡಿತವಾಗಿಯೂ ಸಿಟ್ಟಾಗಿ ರೇಗುವುದರಲ್ಲಿ ಸಂಶಯವೇ ಇಲ್ಲ.

ಆದೇಶ ನೀಡುವುದು

ರಾಜನಂತೆ ನೀವು ಆದೇಶ ನೀಡಿದರೆ ಪತ್ನಿ ಅದನ್ನು ಖಂಡಿತವಾಗಿಯೂ ಪಾಲಿಸುತ್ತಾಳೆ ಎಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ಮೂರ್ಖತನ. ಇಂತಹ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ನೀವು ಪಶ್ಚಾತ್ತಾಪ ಪಡುತ್ತೀರಿ.

ಹಠಾತ್ ಆಗಿ ಮನೆಗೆ ಸ್ನೇಹಿತರನ್ನು ಕರೆದುಕೊಂಡು ಬರುವುದು

ಪತ್ನಿಗೆ ಯಾವುದೇ ಸೂಚನೆ ನೀಡದೆ ಮಧ್ಯಾಹ್ನದ ವೇಳೆ ನಿಮ್ಮ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದರೆ ಏನಾಗುತ್ತದೆ ಎಂದು ನೋಡಿ. ಇಂತಹ ಮೂರ್ಖತನದ ಕೆಲಸಗಳು ಪತ್ನಿಯನ್ನು ಸಿಟ್ಟಿಗೆಬ್ಬಿಸಬಹುದು.

ಪತ್ನಿಯ ಪೋಷಕರನ್ನು ನಿಂದಿಸುವುದು

ಪತ್ನಿಯ ಪೋಷಕರನ್ನು ನಿಂದಿಸುವಂತಹ ಕೆಲಸವನ್ನು ಕನಸಿನಲ್ಲೂ ಮಾಡಲು ಹೋಗಬೇಡಿ. ಜೀವಮಾನವಿಡಿ ಆಕೆ ಇದಕ್ಕೆ ಕ್ಷಮೆ ನೀಡಲ್ಲ.

ಹಳೆ ಪ್ರೇಯಸಿ ಬಗ್ಗೆ ಮಾತನಾಡುವುದು

ಪುರುಷರಿಗೆ ತಮ್ಮ ಹಳೆಯ ಪ್ರೇಮದ ಬಗ್ಗೆ ಮಾತನಾಡುವುದರಿಂದ ಖುಷಿ ಸಿಗುತ್ತದೆ. ಆದರೆ ಮದುವೆ ಬಳಿಕ ಇದು ಮೂರ್ಖತನ. ಮದುವೆ ಬಳಿಕ ಹಳೆ ಪ್ರೇಮಿ ಬಗ್ಗೆ ಮಾತನಾಡಿದರೆ ಪತ್ನಿಗೆ ಅದರಿಂದ ನಿರಾಶೆ ಉಂಟಾಗಿ ಸಿಟ್ಟು ಬರಬಹುದು.

ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು

ಪತ್ನಿಗೆ ತಿಳಿಸದೆ ಮತ್ತು ಆಕೆಯೊಂದಿಗೆ ಚರ್ಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಾ ಇದ್ದರೆ ಒಂದು ನಿಮಿಷ ನಿಲ್ಲಿ. ನಿಮ್ಮ ನಿರ್ಧಾರ ತಪ್ಪಾದರೆ ಅದರ ಬಗ್ಗೆ ಆಕೆ ಜೀವಮಾನವಿಡಿ ಮಾತನಾಡುತ್ತಾ ಇರುತ್ತಾಳೆ.

ಪತ್ನಿ ಮತ್ತು ತಾಯಿ ಮಧ್ಯೆ ಜಗಳ ಹಚ್ಚುವುದು

ನಿಮ್ಮ ತಾಯಿ ಹಾಗೂ ಪತ್ನಿ ಜಗಳ ಮಾಡುತ್ತಾ ಇದ್ದಾಗ ಅದನ್ನು ನಿಲ್ಲಿಸಲು ನಿಮಗೆ ಕಷ್ಟವಾದರೆ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಅವರಿಬ್ಬರ ಮಧ್ಯೆ ಜಗಳ ಶುರುವಾಗುವಂತೆ ಮಾಡಬೇಡಿ. ಇದು ವಿಶ್ವಯುದ್ಧವನ್ನು ಆರಂಭ ಮಾಡಿದಷ್ಟೇ ಕೆಟ್ಟ ಪರಿಣಾಮ ನಿಮ್ಮ ಮೇಲೆ ಬೀರುತ್ತದೆ.

 

Story first published: Monday, November 21, 2016, 10:16 [IST]
English summary

Foolish Things Men Do in Relationships

Being a good husband is more about trying to understand your wife and ensuring that her stay with you is comfortable. But that doesn't mean you have to turn into a henpecked husband. But at least, avoiding certain foolish things might help. If you are wondering what those foolish things are, here are they....
Please Wait while comments are loading...
Subscribe Newsletter