ಮದುವೆ ಮುಂಚೆ, ಇವೆಲ್ಲಾ ಸಂಗತಿ ನಿಮಗೆ ತಿಳಿದಿರಲಿ

ಕೆಲವೊಮ್ಮೆ ಸಂಬಂಧಗಳನ್ನು ಉಳಿಸಲು ನಾವು ಇನ್ನಿಲ್ಲದ ಪ್ರಯತ್ನ ಮಾಡಬೇಕು. ಆದರೆ ನಿಮಗೆ ಇಷ್ಟವಿಲ್ಲದೆ ಇರುವಂತಹ ಸಂಬಂಧದಲ್ಲಿ ಕಟ್ಟುಪಾಡುಗಳನ್ನು ಹಾಕಿಕೊಂಡು ಮುಂದುವರಿಯಬೇಡಿ. ಈ ಲೇಖನದಲ್ಲಿ ಇಂತಹ ಸಂಬಂಧದ ಬಗ್ಗೆ ನಾವು ವಿವರ ನೀಡಲಿದ್ದೇವೆ...

By: Deepu
Subscribe to Boldsky

ಮನುಷ್ಯರಾದ ಮೇಲೆ ಬಾಲ್ಯದಿಂದ ಹಿಡಿದು ವಯಸ್ಸಾಗುವ ತನಕ ಪ್ರತಿಯೊಂದು ಹಂತದಲ್ಲಿ ಒಂದೊಂದು ಸಂಬಂಧಗಳ ಕೊಂಡಿಗಳು ನಮ್ಮನ್ನು ಬೆಸೆಯುತ್ತಾ ಹೋಗುತ್ತದೆ. ಕೆಲವೊಂದನ್ನು ನಾವಾಗಿಯೇ ಕಳಚಿಕೊಂಡರೆ ಮತ್ತೆ ಕೆಲವು ಕಾಲ ಸಾಗಿದಂತೆ ಕಳಚಿ ಬೀಳುತ್ತದೆ.

ಅದರಲ್ಲೂ ಯೌವನದಲ್ಲಿ ಬೆಸೆಯುವಂತಹ ಸಂಬಂಧಗಳು ತುಂಬಾ ಮಹತ್ವವವನ್ನು ಪಡೆಯುತ್ತದೆ. ಇದು ನಮ್ಮ ಮುಂದಿನ ಜೀವನವನ್ನೇ ನಿರ್ಧರಿಸುತ್ತದೆ.  ಬ್ಯಾಚುಲರ್‌ನಲ್ಲಿ ಮಾಡುತ್ತಿದ್ದ ಚೇಷ್ಟೆ, ಮದುವೆ ಬಳಿಕ ನಡೆಯಲ್ಲ!

ಇಂತಹ ಸಂಬಂಧಗಳು ಭಾವನಾತ್ಮಕವಾಗಿ ನಮ್ಮನ್ನು ಕಟ್ಟಿಕೊಂಡಿರುತ್ತದೆ. ಕೆಲವು ಸಂಬಂಧಗಳನ್ನು ಉಳಿಸಲು ನಾವು ಇನ್ನಿಲ್ಲದ ಪ್ರಯತ್ನ ಮಾಡಬೇಕು. ಆದರೆ ನಿಮಗೆ ಇಷ್ಟವಿಲ್ಲದೆ ಇರುವಂತಹ ಸಂಬಂಧದಲ್ಲಿ ಕಟ್ಟುಪಾಡುಗಳನ್ನು ಹಾಕಿಕೊಂಡು ಮುಂದುವರಿಯಬೇಡಿ. ಈ ಲೇಖನದಲ್ಲಿ ಇಂತಹ ಸಂಬಂಧದ ಬಗ್ಗೆ ನಾವು ವಿವರ ನೀಡಲಿದ್ದೇವೆ. ಇದನ್ನು ತಿಳಿಯಿರಿ. ನಿನ್ನನ್ನು ಮದುವೆಯಾಗಿದ್ದೇ ನಾನು ಮಾಡಿದ ದೊಡ್ಡ ತಪ್ಪು!      


ಮದುವೆಯ ಭರವಸೆ

ನೀವು ಒಬ್ಬರ ಸಂಬಂಧದಲ್ಲಿ ಗಂಭೀರವಾಗಿರುವ ತನಕ ಮದುವೆ ಬಗ್ಗೆ ಯಾವುದೇ ಭರವಸೆ ನೀಡಬೇಡಿ. ಯಾಕೆಂದರೆ ಆ ವ್ಯಕ್ತಿಯಲ್ಲಿ ಭರವಸೆ ಮೂಡಬಹುದು. ಆಕೆ ಅಥವಾ ಆತನಲ್ಲಿ ಭರವಸೆ ಉಂಟಾಗಬಹುದು. ಇದರಿಂದ ಮುಂದೆ ಸಂಬಂಧದಿಂದ ದೂರ ಉಳಿಯುವುದು ಕಷ್ಟವಾಗಬಹುದು.

ಪ್ರತಿಯೊಬ್ಬರಲ್ಲಿ ಡೇಟಿಂಗ್ ಬಗ್ಗೆ ಹೇಳುವುದು

ಒಬ್ಬ ವ್ಯಕ್ತಿಯ ಬಗ್ಗೆ ನೀವು ಸಂಪೂರ್ಣವಾಗಿ ಗಂಭೀರವಾಗುವ ತನಕ ಬೇರೆ ಯಾರಿಗೂ ನಿಮ್ಮ ಡೇಟಿಂಗ್ ಬಗ್ಗೆ ತಿಳಿಸಬೇಡಿ.

ಆಗಾಗ ಆ ವ್ಯಕ್ತಿ ಜತೆ ಮಲಗುವುದು!

ದೇಹದ ಆಕರ್ಷಣೆ ಕೂಡ ನಿಮ್ಮಲ್ಲಿನ ಸಂಬಂಧವನ್ನು ಮತ್ತಷ್ಟು ಬೆಸೆದು ಬಿಡುತ್ತದೆ. ಮದುವೆಯಾಗುವ ಯೋಜನೆಗಳು ಇಲ್ಲದೆ ಇದ್ದಾಗ ಒಬ್ಬ ವ್ಯಕ್ತಿಯೊಂದಿಗೆ ನೀವು ಆಗಾಗ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳಬೇಡಿ. ಇದು ಮುಂದೆ ಸಮಸ್ಯೆಯಾಗಬಹುದು.

ಭವಿಷ್ಯದ ಬಗ್ಗೆ ಮಾತನಾಡುವುದು

ನೀವು ಆಗಾಗ ಭವಿಷ್ಯದ ಬಗ್ಗೆ ಮಾತನಾಡುತ್ತಾ ಇದ್ದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ಸಂಬಂಧದ ಬಗ್ಗೆ ಆಸೆಗಳು ದೃಢವಾಗುತ್ತಾ ಹೋಗುತ್ತದೆ. ಆ ವ್ಯಕ್ತಿ ಬಗ್ಗೆ ಗಂಭೀರವಾಗಿಲ್ಲವೆಂದಾದರೆ ಇದು ನೀವು ಮಾಡುತ್ತಿರುವ ದೊಡ್ಡ ತಪ್ಪು.

ಜೀವನವನ್ನು ಬದಲಾಯಿಸುವುದು

ನಿಮಗೆ ಯಾವುದೇ ವ್ಯಕ್ತಿಯನ್ನು ಮದುವೆಯಾಗುವ ಇರಾದೆ ಇಲ್ಲವೆಂದಾದರೆ ಆಗ ಆ ವ್ಯಕ್ತಿಗಾಗಿ ನೀವು ಬದಲಾಗುವ ಅಗತ್ಯವಿಲ್ಲ.

ಪ್ರತೀ ಜಗಳದ ಬಗ್ಗೆ ರಾಜಿಯಾಗುವುದು

ಒಬ್ಬ ವ್ಯಕ್ತಿಯೊಂದಿಗೆ ನೀವು ಮುಂದಿನ ಬದುಕು ಸಾಗಿಸಬೇಕೆಂದು ನಿರ್ಧರಿಸಿದ್ದರೆ ಮಾತ್ರ ಆಗಾಗ ಜಗಳವಾಗುತ್ತಿದ್ದರೂ ರಾಜಿಯಾಗಿ. ಇಲ್ಲವೆಂದಾದರೆ ಇಂತಹ ಜಗಳವೇ ನಿಮ್ಮ ಸಂಬಂಧವನ್ನು ದೂರ ಮಾಡುತ್ತದೆ. ಆ ವ್ಯಕ್ತಿಗೆ ನೀವು ಭವಿಷ್ಯದಲ್ಲಿ ಬೇಕೆಂದು ಅನಿಸಿದರೆ ಖಂಡಿತವಾಗಿಯೂ ಜಗಳದ ಬಳಿಕ ರಾಜಿಯಾಗಲು ಮುಂದೆ ಬರುತ್ತಾನೆ/ತ್ತಾಳೆ.

 

Story first published: Monday, November 21, 2016, 15:16 [IST]
English summary

Don’t Do This Unless You Wish To Marry That Person

Some relationships are meant to be causal. They may not need promises. And some relationships may have longer span and they may need all your emotional investment. Now, let us know what not to do in such a situation.
Please Wait while comments are loading...
Subscribe Newsletter