For Quick Alerts
ALLOW NOTIFICATIONS  
For Daily Alerts

ಹುಡುಗರಿಗೆ ಮದುವೆ ಎಂದರೆ ಇಷ್ಟವಿಲ್ಲವಂತೆ ನಂಬುತ್ತೀರಾ?

By Super
|

ಮದುವೆ ಅನ್ನೋದು ಒಂದು ಸಂಕೀರ್ಣ ಸಂಬಂಧ. ಸಂಗಾತಿಗಳು ಪರಸ್ಪರ ಹೊಂದಿಕೊಂಡು ಹೋದರೆ ಆಗ ಮಾತ್ರ ಮದುವೆಗೆ ನಿಜವಾದ ಅರ್ಥ ಬರುತ್ತದೆ. ಇಂದಿನ ದಿನಗಳಲ್ಲಿ ಯುವಜನತೆ ತಮ್ಮ ಬಾಳಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಒಲವು ತೋರುತ್ತಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ಪ್ರೇಮ ವಿವಾಹಗಳು ಇಂದು ಸಾಮಾನ್ಯವಾಗಿವೆ.

ಹೆತ್ತವರೂ ಹಿಂದಿನಂತೆ ರಂಪ ರಾಮಾಯಣ ಮಾಡುವುದು ಕಡಿಮೆಯಾಗಿದೆ. ಆದರೆ ವಿವಾಹಕ್ಕೂ ಮೊದಲು ತಮ್ಮ ಬಾಳಸಂಗಾತಿಯಾಗುವವರು ತಮಗೆ ಹೊಂದುಕೊಳ್ಳುವಂತಿದ್ದಾರೆಯೇ ಎಂದು ಪ್ರಮಾಣಿಸಿಕೊಳ್ಳಲು ಎಲ್ಲರೂ ಸಮಯದ ಮೊರೆ ಹೋಗುತ್ತಾರೆ.

ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಸಂಬಂಧದ ಬಗ್ಗೆ ಯುವಕರು ಹೆಚ್ಚು ಗಂಭೀರವಾಗಿ ಪರಿಗಣಿಸದಿರುವುದು ಗಮನಕ್ಕೆ ಬರುತ್ತದೆ. ಹೌದು ಪುರುಷರು ಮದುವೆ ಮಾಡಿಕೊಳ್ಳುವ ವಿಯದಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತಾರೆ! ಹೀಗೆ ಹೆದರುವುದಕ್ಕೆ ಕಾರಣಗಳು ಅವರವರು ಮದುವೆಯೆಂಬುದನ್ನು ಹೇಗೆ ಅರ್ಥಮಾಡಿಕೊಂಡಿರುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಪುರುಷರು ಮದುವೆಯೆಂಬುದನ್ನು ಒಂದು ಒಳ್ಳೆಯ ಸುವರ್ಣಾವಕಾಶವೆಂದುಕೊಂಡಿದ್ದರೆ ಮತ್ತೆ ಇನ್ನು ಕೆಲವರು ಅದನ್ನು ಶಾಪವೆನ್ನುತ್ತಾರೆ. ಹಾಗೆ ನೋಡುತ್ತಿದ್ದರೆ ಅಂತಹ ಗ್ರಹಿಕೆಗಳು ಕೂಡ ಬದಲಾವಣೆ ಹೊಂದಬಹುದು. ಹುಡುಗಿಯರು ತಮ್ಮ ಮದುವೆಯ ವಿಷಯದಲ್ಲಿ ಭಯಪಡಲು ಕಾರಣಗಳೇನು?

ಭಯ ಮತ್ತು ಅಭದ್ರತೆಗಳು ಯಾರಿಗಾದರೂ ಅಂತಹ ಗ್ರಹಿಕೆಗಳಿಗೆ ಉತ್ತೇಜನಕೊಡಬಹುದು. ನಿಮ್ಮ ಸುತ್ತಮುತ್ತ ಇರುವ ಜನರು ಮದುವೆಮಾಡಿಕೊಂಡು ಸುಖವಾಗಿಲ್ಲವೆಂಬುದನ್ನು ನೋಡಿದಾಗ ನಿಮಗೂ ಭಯ ಹುಟ್ಟಬಹುದು. ಹಾಗೂ ಕೆಲವು ಮದುವೆಯಾದ ಪುರುಷರು ತಮ್ಮ ಸಂಸಾರದ ಖರ್ಚುಗಳನ್ನು ನಿಭಾಯಿಸುವುದಕ್ಕೆ ಕಷ್ಟಪಡುವುದನ್ನು ನೋಡಿದಾಗ ನಿಮಗೂ ಮದುವೆ ಮಾಡಿಕೊಂಡ ಸಂಸಾರಗಳ ಬಗ್ಗೆ ನಿಮಗೆ ಒಂದು ಕೆಟ್ಟ ಕಲ್ಪನೆ ಬರಬಹುದು. ಪುರುಷರು ಮದುವೆಯ ಬಗ್ಗೆ ಹೆದರುವುದಕ್ಕೆ ಈ ರೀತಿಯಲ್ಲಿ ಹಲವಾರು ಕಾರಣಗಳಿರುತ್ತವೆ. ಪುರುಷರು ಮದುವೆಮಾಡಿಕೊಳ್ಳಲು ಏಕೆ ಹೆದರುತ್ತಾರೆಯೆಂದಕ್ಕೆ ಕೆಲವು ಗ್ರಹಿಕೆಗಳ ಕಡೆ ಒಂದು ನೋಟ ಬೀರೋಣ ಬನ್ನಿ:

Why Are Men Afraid Of Marriage

ಕಟ್ಟುಬೀಳುವಿಕೆಯ ತೊಂದರೆಗಳು
ಕೆಲವು ಪುರುಷರು ತಾವು ಇತರರಿಗೆ ಕಟ್ಟುಬೀಳುವುದನ್ನು ದ್ವೇಷಿಸುತ್ತಾರೆ. ಯಾರಿಗಾದರೂ ಕಟ್ಟುಬೀಳುವುದು ಒಂದು ಪ್ರಯಾಸದ ಕೆಲಸವೆಂದು ಅವರಿಗೆ ತೋರುತ್ತದೆ. ಭಯ ಮತ್ತು ಅಭದ್ರತೆಗಳ ಅನೇಕ ವಿಧಗಳ ಕಾರಣಗಳು ಅವರಿಗೆ ಕಟ್ಟುಬೀಳುವ ಭೀತಿ ಅಥವಾ ಹೆದರಿಕೆಗೆ ಗುರಿಯಾಗಬಹುದು. ಎಲ್ಲಾ ಪುರುಷರು ಕಟ್ಟುಬೀಳುವುದಕ್ಕೆ ಹೆದರುತ್ತಾರೆಯೇ? ಕೆಲವು ಪುರುಷರು ಮಾತ್ರ ಇಂತಹ ಕಾರಣಗಳಿಗೆ ಹೆದರಿದರೂ, ಕ್ರಮೇಣವಾಗಿ ಅವುಗಳನ್ನು ಪರಿಹರಿಸಕೊಳ್ಳಬಹುದು. ಯುವಕರು ವಿವಾಹಿತ ಮಹಿಳೆಯರ ಹಿ೦ದೆ ಬೀಳಲು ಕಾರಣಗಳೇನು?

ಜವಾಬ್ದಾರಿಗಳು
ಅನೇಕ ಪುರುಷರು ಎಲ್ಲಾ ಜವಾಬ್ದಾರಿಗಳನ್ನು ಹೇರಿಕೊಳ್ಳುವುದನ್ನು ದ್ವೇಷಿಸುತ್ತಾರೆ ಅಲ್ಲದೆ ಅವರಿಗೆ ಮದುವೆಯೆಂಬುದು ಒಂದು ಜವಾಬ್ದಾರಿಯೆಂದು ತೋರಿದರೆ ಆ ದಿಕ್ಕಿನಲ್ಲಿ ಮುಂದುವರೆಯುವುದನ್ನು ಇಷ್ಟಪಡುವುದಿಲ್ಲ. ಆದರೆ ಕಾಲ ಕಳೆಯುದ್ದಂತೆ ಅದೇ ಪುರುಷರು ಕೆಲವು ಜವಾಬ್ದಾರಿಗಳು ತಮ್ಮ ತಮ್ಮ ಜೀವನದಲ್ಲಿ ಅನಿವಾರ್ಯಎಂದು ಅಂದುಕೊಳ್ಳುತ್ತಾರೆ.

ಸಂಸಾರದಲ್ಲಿನ ಸ್ವಾತಂತ್ರ್ಯ
ಪುರುಷರು ಮದುವೆಮಾಡಿಕೊಳ್ಳುವುದಕ್ಕೆ ಇದೊಂದು ಕಾರಣದಿಂದ ಹೆದರುತ್ತಾರೆ. ಅವರು ಮದುವೆಮಾಡಿಕೊಳ್ಳುವುದು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದೆಂಬ ಅಭಿಪ್ರಾಯಪಟ್ಟಿರುತ್ತಾರೆ. ಹೀಗೆ ಅಭಿಪ್ರಾಯಪಡುವುದು ಒಂದು ಹಾಸ್ಯಾಸ್ಪದವಾಗಿ ಕಾಣುತ್ತದೆಯಾದರೂ ಕೆಲವು ಪುರುಷರು ತಾವು ಮದುವೆಯಾದ ನಂತರ ತಮ್ಮ ಜೀವನ ನಿರ್ಬಂಧಿತವಾಗುವುದೆಂದು ಭಾವಿಸುತ್ತಾರೆ. ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?

ನಿಷ್ಠಾವಂತಿಕೆಯ ಪ್ರಶ್ನೆಗಳು
ಪುರುಷರಿಗೆ ಮದುವೆಯ ಭಯ ಹುಟ್ಟುವುದಕ್ಕೆ ಕೆಲವು ಅವಶ್ಯಕತೆಗಳ ಕೊರತೆಗಳೂ ಕಾರಣವಿರಬಹುದು. ಕೆಲವು ಪುರುಷರಿಗೆ ತಮ್ಮ ಇಡೀ ಜೀವಮಾನದಲ್ಲಿ ಒಬ್ಬರಿಗೆಮಾತ್ರ ನಿಷ್ಠೆಯಿಂದ ಇರಲು ಕಷ್ಟಪಡಬಹುದು. ಅಂತಹ ಪುರುಷರು ಸಾಧ್ಯವಾದಷ್ಟು ಅನೇಕ ಸಂಬಂಧಗಳನ್ನು ಹೊಂದಲು ಬಯಸುತ್ತಾರೆ.

English summary

Why Are Men Afraid Of Marriage

Why are men afraid of marriage? Well, it all depends upon how one perceives marriage. Some men see it as a blessing whereas some men view it as a curse. At the end of the day, such perceptions may change too. Well, fears and insecurities may influence the perception of anyone.
X
Desktop Bottom Promotion