For Quick Alerts
ALLOW NOTIFICATIONS  
For Daily Alerts

ಅಯ್ಯಯ್ಯೋ ಗರ್ಲ್ ಫ್ರೆಂಡ್ ಸಹವಾಸ ಬೇಡಪ್ಪಾ ಬೇಡ..!

By Super
|

ತಮ್ಮ ಜೀವನಸಂಗಾತಿಯಾಗುವವರ ಬಗ್ಗೆ ಮೂಡುವ ಕನಸುಗಳು ಗರಿಕಟ್ಟುವುದು ಹದಿಹರೆಯದಲ್ಲಿ. ನಿಮ್ಮ ಸುತ್ತಮುತ್ತಲಿರುವವರಲ್ಲಿ ಕೆಲವರು ಅತಿ ಹೆಚ್ಚಾಗಿ ಆಕರ್ಷಿಸುತ್ತಾರೆ. ಅವರಲ್ಲಿ ಕೆಲವರು ಅತಿ ಹೆಚ್ಚಾಗಿ ಮನತಟ್ಟಿ ತಮ್ಮ ಜೀವನಸಂಗಾತಿಯಾಗಲು ಅರ್ಹರು ಎಂಬ ಭಾವನೆ ನಿಧಾನವಾಗಿ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಇದನ್ನು ದೃಢೀಕರಿಸಿಕೊಳ್ಳಲು ಅವರು ತಮ್ಮ ಸಂಗಾತಿಗಳನ್ನು ಹಲವು ಪರೀಕ್ಷೆಗಳಿಗೆ ಒಡ್ಡುತ್ತಾರೆ.

ವಿಶೇಷವಾಗಿ ಯುವತಿಯರು ತಮ್ಮ ಜೀವನಸಂಗಾತಿಯಾಗುವವರ ಬಗ್ಗೆ ಹೆಚ್ಚು ಕಾಳಜಿವಹಿಸುವವರಾಗಿದ್ದಾರೆ. ಆದರೂ ಯಾವುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲದಿರುವುದರಿಂದ ಅವರ ನಡವಳಿಕೆ ಕೊಂಚ ವಿಚಿತ್ರವೇ ಆಗಿರುತ್ತದೆ.

ತಮ್ಮ ಸಂಭಾವ್ಯ ಬಾಳಸಂಗಾತಿ ಎಂಬ ಭಾವನೆಯಲ್ಲಿ ಹತ್ತಿರಾಗುವವರನ್ನು ಬಾಯ್ ಫ್ರೆಂಡ್ ಎಂದು ಕರೆಯುವ ಯುವತಿಯರ ನಡವಳಿಕೆ ಕೆಲವೊಮ್ಮೆ ಈ ಬಾಯ್ ಫ್ರೆಂಡ್ ಯುವಕರಿಗೆ ಚಿಟ್ಟು ಹಿಡಿಸುತ್ತದೆ. ವಿಪರೀತವಾಗಿ, ಹೊತ್ತುಗೊತ್ತಿಲ್ಲದ ವೇಳೆಯಲ್ಲಿ ಕರೆ ಮಾಡುವುದು, ತನಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಬಯಸುವುದು, ತನಗೆ ಹೇಳದೇ ಯಾವುದೇ ಕೆಲಸ ಮಾಡಬಾರದೆಂದು ಬಯಸುವುದು ಮೊದಲಾದವು ಯುವಕರಿಗೆ ಕಿರಿಕಿರಿ ತರಿಸುತ್ತದೆ.

What To Do When Girlfriend Irritates You

ಆದರೆ ಇದಕ್ಕೆ ಸ್ಪಷ್ಟ ಕಾರಣಗಳಿವೆ. ಹದಿಹರೆಯದಲ್ಲಿ ಯುವತಿಯರಲ್ಲಿ ಆಗುವ ಹಲವು ಬದಲಾವಣೆಗಳು, ಅವರು ಯೋಚಿಸುವ ರೀತಿ, ಮನೆಯಲ್ಲಿ ಇರುವ ಒತ್ತಡ ಮೊದಲಾದ ಹತ್ತು ಹಲವು ಕಾರಣಗಳಿಂದ ಇವರ ನಡವಳಿಕೆಯಲ್ಲಿ ಬದಲಾವಣೆಗಳಾಗುತ್ತವೆ. ಹದಿಹರೆಯ ದಾಟಿದ ಬಳಿಕ ಪ್ರಭುದ್ದತೆ ಇದನ್ನು ಕ್ರಮೇಣ ಕಡಿಮೆಯಾಗುತ್ತದಾದರೂ ಈಗ ಈ ನಡವಳಿಕೆ ಒಂದು ಉಪಟಳದಂತೆಯೇ ತೋರುತ್ತದೆ.

ಇವುಗಳ ಹಿಂದಿನ ಕಾರಣವನ್ನು ಕೊಂಚ ತಾಳ್ಮೆವಹಿಸಿ ಕಂಡುಕೊಂಡರೆ ಅವರ ನಡವಳಿಕೆ ಏಕೆ ಹೀಗಿದೆ ಎಂದು ಗೊತ್ತಾಗುತ್ತದೆ. ನಿಮ್ಮ ಪ್ರಿಯತಮೆಯ ನಡವಳಿಕೆಯೂ ಇಂತಹದ್ದೇ ರೀತಿಯದ್ದಾಗಿದ್ದರೆ ಅವರನ್ನು ಅರ್ಥ ಮಾಡಿಕೊಳ್ಳಲು ಈ ಕೆಳಗಿನ ಮಾಹಿತಿ ನಿಮಗೆ ನೆರವು ನೀಡಬಲ್ಲುದು. ಹುಡುಗಿಯರೇ ಹೀಗೆ, ಪ್ರಶಂಸೆಯ ಮಾತಿಗೆಯೇ ಕಾಯುತ್ತಿರುತ್ತಾರೆ!

ಆಕೆಯ ನಡವಳಿಕೆಯನ್ನು ಕೊಂಚ ಗಮನಿಸಿ
ಒಂದು ವೇಳೆ ಆಕೆಯ ನಡವಳಿಕೆ ನಿಮಗೆ ಕಿರಿಕಿರಿ ತರುತ್ತಿದೆ ಎಂದೆನ್ನಿಸಿದರೆ ಆಕೆ ಏಕಾಗಿ ಹೀಗೆ ಮಾಡುತ್ತಿರಬಹುದು ಎಂದು ಕೊಂಚ ತಾಳ್ಮೆಯಿಂದ ಅವಲೋಕಿಸಿ. ಇದಕ್ಕಾಗಿ ಆಕೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಯಾವುದೇ ಹೆಣ್ಣನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ನಿಮಗೆ ಕಿರಿಕಿರಿ ಎನಿಸುವ ಆಕೆಯ ನಡವಳಿಕೆ ಏಕೆ ಹೀಗಿದೆ ಎಂದು ಆಕೆಯ ದೃಷ್ಟಿಯಲ್ಲಿ ನೋಡಲು ಪ್ರಯತ್ನಿಸಿ. ನಿಮಗೆ ಉತ್ತರ ಸುಲಭವಾಗಿ ಕಂಡುಬರುವುದು. ಉದಾಹರಣೆಗೆ ನೀವು ಬೇರೊಬ್ಬ ಹೆಣ್ಣಿನೊಂದಿಗೆ ಮಾತನಾಡುತ್ತಿದ್ದಾಗ ಆಕೆಯ ಫೋನ್ ಬಂದರೆ ನಿಮಗೆ ಕಿರಿಕಿರಿಯಾಗುತ್ತದೆ.


ಇದಕ್ಕೆ ಕಾರಣ, ಯಾವುದೇ ಹೆಣ್ಣಿಗೆ ತನ್ನ ಪ್ರಿಯತಮ ಇನ್ನೋರ್ವ ಹೆಣ್ಣಿನೊಂದಿಗೆ ಕಾರ್ಯನಿಮಿತ್ತವಾಗಿ ಮಾತನಾಡುತ್ತಿದ್ದರೂ ಅದು ದೂರದಿಂದ ಆಕೆಗೆ ಲಲ್ಲೆ ಹೊಡೆಯುತ್ತಿರುವಂತೆಯೇ ತೋರುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಆ ಕ್ಷಣದಲ್ಲಿ ಕರೆ ಸ್ವೀಕರಿಸಲಾಗದಿದ್ದರೂ, ಸಾಧ್ಯವಾದ ಮರುಕ್ಷಣ ಮರುಕರೆ ಮಾಡಿ ವಿಚಾರಿಸುವುದು ಮತ್ತು ಹಿಂದಿನ ಕ್ಷಣದಲ್ಲಿ ಯಾರೊಂದಿಗಿದ್ದಿರಿ ಎಂಬ ಬಗ್ಗೆ ಸತ್ಯ ಹೇಳುವುದು.

ಆಕೆ ನಿಮ್ಮ ಬಗ್ಗೆ ಹೆಚ್ಚಿನ ಸ್ವಾರ್ಥಿಯಾಗಿದ್ದಾರೆಂದು ಅನ್ನಿಸುತ್ತಿದೆಯೇ ಗಮನಿಸಿ
ಹೆಚ್ಚಿನ ಯುವತಿಯರು ತಮ್ಮ ಬಾಯ್ ಫ್ರೆಂಡ್‌ಗಳಿಂದ ಅತಿ ಹೆಚ್ಚಿನ ಗಮನವನ್ನು ಬಯಸುತ್ತಾರೆ. ಇಡಿಯ ದಿನ ತನಗೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದೂ, ತನ್ನನ್ನಲ್ಲದೇ ಬೇರಾರನ್ನೂ ಕಣ್ಣೆತ್ತಿ ನೋಡಲೂಬಾರದು, ಮಾತನಾಡಲೂಬಾರದು ಎಂಬ ವೈಖರಿಯನ್ನು ಪ್ರಕಟಿಸುತ್ತಾರೆ. ಇದು ಹದಿಹರೆಯದಲ್ಲಿ ಯುವತಿ ತನ್ನ ಜೀವನಸಂಗಾತಿಯಾಗುವವರ ಬಗ್ಗೆ ಹೊಂದಿರುವ ಕಾಳಜಿಯ ಒಂದು ರೂಪವಾಗಿದೆ. ಕೆಲವರು ಈ ಭರದಲ್ಲಿ ತಪ್ಪು ಪದಗಳನ್ನು ಉಪಯೋಗಿಸಿ (ಹೆಚ್ಚಿನ ಸಂದರ್ಭದಲ್ಲಿ ತನಗೆ ಅರಿವಿಲ್ಲದೇ) ಈಗ ತಾನೇ ಚಿಗುರುತ್ತಿದ್ದ ಸಂಬಂಧಗಳನ್ನು ಚಿವುಟುತ್ತಾರೆ.
ಇದಕ್ಕೆ ಪರಿಹಾರವೆಂದರೆ ನನ್ನ ಪ್ರಥಮ ಆದ್ಯತೆ ನೀನೇ ಎಂದು ಮನದಟ್ಟು ಮಾಡಿಸುವುದು.


ಉದಾಹರಣೆಗೆ ಯಾವುದಾದರೂ ವಿಷಯವನ್ನು ಹಂಚಿಕೊಳ್ಳಬೇಕೆನಿಸಿದಾಗ ಅದು ನಿಮ್ಮ ಪ್ರಿಯತಮೆಗೆ ಮೊದಲು ತಿಳಿಸಿ ಈ ವಿಷಯವನ್ನು ತಿಳಿಸುತ್ತಿರುವುದು ಮೊತ್ತ ಮೊದಲಾಗಿ ನಿನಗೇ ಎಂದು ತಿಳಿಸಿ. ಒಂದು ವೇಳೆ ಆಕೆ ಇದರಿಂದ ಸಂತುಷ್ಟಿಗೊಂಡು ಇನ್ನೂ ಹೆಚ್ಚು ಕೆದಕಲು ಹೋಗದಿದ್ದರೆ ಹೆಚ್ಚಿನ ಚಿಂತೆಗೆ ಕಾರಣವಿಲ್ಲ. ಇದು ಹದಿಹರೆಯದಲ್ಲಿ ಅತಿ ಸಾಮಾನ್ಯವಾದ ನಡವಳಿಕೆಯಾಗಿದೆ.

ಆಕೆಯ ಉದ್ದೇಶವೇನೆಂದು ಗಮನಿಸಿ
ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗಮನಿಸಬಹುದು, ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ಕಂಡುಕೊಳ್ಳಲಾಗದು ಎಂದು ಒಂದು ಸುಭಾಷಿತ ತಿಳಿಸುತ್ತದೆ. ನಿಮ್ಮ ಪ್ರಿಯತಮೆಯ ಕಿರಿಕಿರಿಯ ಹಿಂದೆ ಏನು ಉದ್ದೇಶವಿರಬಹುದು ಎಂದು ಸ್ಥೂಲವಾಗಿ ಗಮನಿಸಿ. ಹೆಚ್ಚಿನ ಸಂದರ್ಭದಲ್ಲಿ ಆಕೆ ನಿಮ್ಮನ್ನು ತನ್ನ ಜೀವನಸಂಗಾತಿಯಾಗಲು ಆಯ್ಕೆ ಮಾಡಿಕೊಂಡಿದ್ದು ಇದನ್ನು ಹೇಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರಬಹುದು. ಅಥವಾ ನಿಮ್ಮಲ್ಲಿರುವ ಯಾವುದಾದರೊಂದು ಕಲೆ ಆಕೆಯ ಕೆಲಸಕ್ಕೆ ಅಗತ್ಯವಾಗಿದ್ದು ಪ್ರೇಮದ ನಾಟಕದ ಮೂಲಕ ಅದನ್ನು ಪಡೆಯಲು ಆ ಬಳಿಕ ನಿಮ್ಮನ್ನು ತ್ಯಜಿಸಲೂ ಹವಣಿಸುತ್ತಿರಬಹುದು. ನಿಮ್ಮ ಕೆಲವು ನಡವಳಿಕೆ ಆಕೆಗೆ ಅಸಹ್ಯವಾಗಿದ್ದು ಇದನ್ನು ಸರಿಪಡಿಸಲು ಆಕೆ ಕೆಲವು ತೀಕ್ಷ್ಣವಾದ ಪದಗಳನ್ನೂ ಉಪಯೋಗಿಸಬಹುದು. ದಾಂಪತ್ಯ ಸರಿಗಮದಲ್ಲಿ ಅಪಸ್ವರ ಏಳದಂತೆ ಜಾಗ್ರತೆ ವಹಿಸಿ

ಆದರೆ ಇದರ ಹಿಂದೆ ಆಕೆಯ ಉದ್ದೇಶವೇನಿರಬಹುದು ಎಂಬುದನ್ನು ಕಂಡುಕೊಳ್ಳುವುದು ಕೊಂಚ ಕಷ್ಟ, ಆದರೆ ಅಸಾಧ್ಯವಲ್ಲ. ಆಕೆ ನಿಮ್ಮಿಂದ ಯಾವ ವಿಷಯದಲ್ಲಿ ಸಹಾಯ ಪಡೆದುಕೊಳ್ಳುತ್ತಿದ್ದಾರೋ, ಅದನ್ನು ಒಂದು ಹಂತದಲ್ಲಿ ನಿಲ್ಲಿಸಿಬಿಡಿ, ನಂತರ ಆಕೆಯ ನಡವಳಿಕೆಯನ್ನು ಗಮನಿಸಿ. ಒಂದು ವೇಳೆ ಆಕೆ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಈ ಸಹಾಯ ನಿಂತಿದ್ದರೂ ಆಕೆಯ ನಡವಳಿಕೆಯಲ್ಲಿ ಬದಲಾವಣೆಯಾಗುವುದಿಲ್ಲ.
ಒಂದು ವೇಳೆ ಈ ಸಹಾಯವೇ ಆಕೆಯ ನಿಜವಾದ ಅಗತ್ಯವಾಗಿದ್ದಲ್ಲಿ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬರಬಹುದು. (ಇನ್ನೂ ಯಾಕೆ ಈ ಸಹಾಯ ಕಳಿಸಲಿಲ್ಲ ಎಂದು ಹಲವು ಬಾರಿ ಕರೆ ಮಾಡುವುದು ಇತ್ಯಾದಿ) ಈ ಸಂದರ್ಭದಲ್ಲಿ ನಿಮ್ಮ ತೀರ್ಮಾನವನ್ನು ಬದಲಿಸುವುದು ಉತ್ತಮ.

ಆಕೆಯೊಂದಿಗೆ ಸ್ಪಷ್ಟವಾಗಿ ಮಾತನಾಡಿ
ಒಂದು ವೇಳೆ ಈ ಕಿರಿಕಿರಿಗೆ ಯಾವುದೇ ಕಾರಣ ಗೊತ್ತಾಗದೇ ಇದ್ದಲ್ಲಿ ಇದಕ್ಕೆ ಉತ್ತಮವಾದ ಪರಿಹಾರವೆಂದರೆ ಸ್ಪಷ್ಟವಾಗಿ ಮತ್ತು ನೇರವಾಗಿ ಮಾತನಾಡುವುದು. ಆಕೆಯ ನಡವಳಿಕೆಯಿಂದ ತಮಗೆ ಕಿರಿಕಿರಿಯಾಗುತ್ತಿದೆ ಮತ್ತು ಇದರ ಉದ್ದೇಶವೇನು ಎಂದು ಅತಿ ನಯವಾಗಿ, ತಾಳ್ಮೆಯಿಂದ ವಿಚಾರಿಸಿ. ಇದಕ್ಕೆ ಆಕೆಯಿಂದ ಸಿಗುವ ಉತ್ತರವೇನು ಎಂದು ಕಂಡುಕೊಳ್ಳಿ.

ಒಂದು ವೇಳೆ ಆಕೆ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ ಈ ಸಂದರ್ಭದಲ್ಲಿ ಆಕೆ ಹೇಳಿಯೇ ಹೇಳುತ್ತಾರೆ. ಬದಲಿಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಿಮ್ಮಿಬ್ಬರ ನಡುವ ಅನಾವಶ್ಯಕವಾಗಿ ಹತ್ತು ಜನರ ಹೆಸರು ತೆಗೆದು ಇನ್ನೂ ಹತ್ತು ಸಂದರ್ಭಗಳನ್ನು ಉಲ್ಲೇಖಿಸಿ ಇದಕ್ಕಾಗಿ ಹಾಗೆ ಮಾಡಬೇಕಾಯ್ತು, ಹೀಗೆ ಮಾಡಬೇಕಾಗಿ ಬಂತು ಎಂಬ ಉದ್ದ ಮಾತುಗಳು ಆಕೆಯಿಂದ ಉತ್ತರವಾಗಿ ಬಂದರೆ ನಿಮ್ಮ ತೀರ್ಮಾನವನ್ನು ಬದಲಿಸುವುದು ಉಚಿತ. ಏಕೆಂದರೆ ಆಕೆ ನಿಮ್ಮ ಬಗ್ಗೆ ಅಷ್ಟೊಂದು ದೃಢನಿಲುವು ತಳೆದಿಲ್ಲ, ಅಥವಾ ನಿಮ್ಮಂತೆಯೇ ಇನ್ನೊಬ್ಬರೊಂದಿಗೂ ಇದೇ ರೀತಿಯ ವ್ಯವಹಾರವನ್ನಿಟ್ಟುಕೊಂಡು ಇಬ್ಬರಲ್ಲಿ (ಅಥವಾ ಇನ್ನೂ ಹೆಚ್ಚಿನವರಲ್ಲಿ) ಅತ್ಯುತ್ತಮರು ಯಾರು ಎಂಬ ಸ್ವಯಂವರವನ್ನು ತಾನೇ ಹಮ್ಮಿಕೊಳ್ಳುತ್ತಿದ್ದಿರಬಹುದು.

English summary

What To Do When Girlfriend Irritates You

All girls are not alike and so they behave differently. Some of them do irritate their boyfriends and the reasons could vary. Well, in your case, if your girl is irritating you with too many calls or texts then don't panic Some girls do that during the initial phase of the relationship and gradually change a bit later. Now, let us discuss about this a bit. Relationship Tips: When Your Girlfriend Irritates You..
Story first published: Sunday, July 26, 2015, 11:58 [IST]
X
Desktop Bottom Promotion